Skip to main content

Blog number 1834.. ಐದು ವರ್ಷ ಪೂರೈಸಿದ ನನ್ನ ವಿಷ್ಣು ಸಹಸ್ರನಾಮ ಪಠಣಕ್ಕೆ ನನ್ನ ಗುರು ಹಿರಿಯರ ಅನುಗ್ರಹ ಆಶ್ರೀವಾದ ಕಾರಣ.

#ಈ_ಆದ್ಯಾತ್ಮಿಕ_ಅಭ್ಯಾಸಕ್ಕೆ_ಇವತ್ತಿಗೆ_5_ವರ್ಷ.

#ನಿರಂತರ_ಒಂದು_ದಿನವೂ_ತಪ್ಪದೇ_ಪಠಣ_ಮಾಡಿದೆ.

#ವಿಷ್ಣು_ಸಹಸ್ರನಾಮ.

   ದಿನಾಂಕ 23- ನವೆಂಬರ್ -2018ರಿಂದ ವಿಷ್ಣು ಸಹಸ್ರನಾಮ  ನಿತ್ಯ ಪಠಣ ಮಾಡುವ ಸಂಕಲ್ಪ ಮಾಡಿ ಪ್ರಾರಂಬಿಸಿದ್ದೆ.
  ಈ ಪುಸ್ತಿಕೆ ತಂದು ಕೊಟ್ಟವರು ಖ್ಯಾತ ಜ್ಯೋತಿಷಿಗಳಾದ ಡಾ.ಎನ್.ಎಸ್. ವಿಶ್ವಪತಿ ಶಾಸ್ತ್ರೀಗಳು ಇದನ್ನು ಮುದ್ರಿಸಿದವರು ಬೆಂಗಳೂರಿನ ಡಾ.ರಾಜಕುಮಾರ್ ರಸ್ತೆಯ ಪ್ರಖ್ಯಾತ ಮುದ್ರಣ ಸಂಸ್ಥೆ ಅಭಿಮಾನಿ ಪ್ರಕಾಶನದ ವೆಂಕಟೇಶ್ ಅವರು.
  ಪ್ರಾರಂಭದಲ್ಲಿ ಉಚ್ಚರಿಸಲು ಹೆಚ್ಚು ಶ್ರಮ ಪಡಬೇಕಾಯಿತು (ಸಂಸ್ಕೃತ ಉಚ್ಚಾರಣೆ) ಇದಕ್ಕೆ ಪತ್ನಿ ಗುರುವಾಗಿ ತಿದ್ದಿದ್ದರಿಂದ ಉಚ್ಚಾರಣೆ ಸರಿ ಆಯಿತು.
    ಮಹಾ ಭಾರತ ಯುದ್ಧ ಕಾಲದಲ್ಲಿ ಮರಣ ಶಯ್ಯೆಯಲ್ಲಿದ್ದ ಬೀಷ್ಮರಿಗೆ ಯುದಿಷ್ಟರ ಕೇಳಿದ ಆರು ಪ್ರಶ್ನೆಗಳು ...
1. ಈ ಲೋಕದಲ್ಲಿ ಅದ್ವಿತಿಯನಾದ ದೇವರು ಯಾರು ?
2. ಇಡೀ ಲೋಕ ಯಾವ ದೇವನಾಮವನ್ನು ಏಕ ರೂಪವಾಗಿ ಪಾರಾಯಣ ಮಾಡುತ್ತದೆ?
3. ಶುಭವನ್ನು ಹೊಂದಲು ಯಾವ ದೇವರನ್ನು ಅಚಿ೯ಸಬೇಕು?
4. ಶ್ರೇಷ್ಠ ಧರ್ಮ ಯಾವುದು?
5, ಸರ್ವೋನ್ನತ ಸಿದ್ಧಿಗೆ ಯಾವ ಮಂತ್ರ ಮೂಲ ?
6. ಯಾವ ಮಂತ್ರವನ್ನು ಜಪಿಸುತ್ತಾ ಮಾನವನು ಜನ್ಮ ಸಂಸಾರ ಬಂಧನದಿಂದ ಮುಕ್ತನಾಗುತ್ತಾನೆ?.
  ಇದಕ್ಕೆ ಬೀಷ್ಮರ ಉತ್ತರ ಇಡೀ ಆಕಾಶ ನಕ್ಷತ್ರಗಳಿಗೆ ಒಬ್ಬನೇ ದೇವರು ಅವನೇ ವಿಷ್ಣು, ಈ ಒಬ್ಬನೇ ದೇವರಿಗೆ ಸಹಸ್ರ ನಾಮಗಳಿದೆ, ವಿಷ್ಣುವಿನ ಸಹಸ್ರ ನಾಮ ಪಠಿಸುವುದರಿಂದ ಮನುಕುಲದ ಎಲ್ಲಾ ದುಃಖಗಳು ಮುಕ್ತವಾಗುತ್ತದೆ ಎಂದು ಉತ್ತರಿಸುತ್ತಾರೆ.
  ವಿಷ್ಣು ಸಹಸ್ರನಾಮ ಪಠನ ಲಿಂಗ ಬೇದವಿಲ್ಲದೆ, ಜಾತಿ ಬೇದವಿಲ್ಲದೆ ಯಾವುದೇ ಸಮಯದಲ್ಲಿ ಮಾಡಬಹುದು.
  ಆಯುರ್ವೇದ ಶಾಸ್ತ್ರದ ಚರಕ ಸಂಹಿತೆಯಲ್ಲಿ ವಿಷ್ಣು ಸಹಸ್ರನಾಮಕ್ಕೆ ಎಲ್ಲಾ ರೋಗ ಗುಣಪಡಿಸುವ ಶಕ್ತಿ ಇರುವ ಉಲ್ಲೇಖವಿದೆ.
  ವಿಷ್ಣುಸಹಸ್ರನಾಮದ ಬಗ್ಗೆ ಆದಿ ಶಂಕರರು, ರಾಮನುಜಾಚಾರ್ಯ, ಮಧ್ವಾಚಾರ್ಯರು, ಸ್ವಾಮಿ ನಾರಾಯಣರು, ಸ್ವಾಮಿ ಶಿವಾನಂದರು, ಸ್ವಾಮಿ ಪ್ರಭುಪಾದರು ಮತ್ತಿತರರ 15 ಕ್ಕೂ ಹೆಚ್ಚಿನ ಬಾಷ್ಯಗಳಿದೆ.
   ನನ್ನ ಸಂಕಲ್ಪ ನಿರಂತರವಾಗಿ 5 ವರ್ಷ ಪೂರ್ತಿ ಒಂದು ದಿನವೂ ತಪ್ಪದೆ ಸಾಂಗವಾಗಿ ನೆರವೇರಿದ್ದು ನನಗೆ ಅತೀವ ಸಂತಸ ತಂದಿದೆ.
  ದೂರ ಪ್ರಯಾಣದಲ್ಲಿ ಕೆಲವೊಮ್ಮೆ ರಾತ್ರಿ ಮೂರು ಗಂಟೆಗೆ ಎದ್ದು ತಯಾರಾಗಿ ವಿಷ್ಣು ಸಹಸ್ರನಾಮ ಪಠಿಸಿದೆ, ಸಣ್ಣ ಅನಾರೋಗ್ಯವಿದ್ದರೂ ಸಹಸ್ರನಾಮ ಮಾತ್ರ ನಿಲ್ಲಿಸಲಿಲ್ಲ ಬಹುಶಃ ನನ್ನ ಐದು ವರ್ಷಗಳ ಅವಧಿಯಲ್ಲಿ ನಿರಂತರ ಸಹಸ್ರನಾಮ ಪಠಣ ಸಾಂಗವಾಗಿ ನೆರವೇರಲು ನನ್ನ ಗುರು ಹಿರಿಯರ ಅನುಗ್ರಹ ಮತ್ತು ಆಶ್ರೀವಾದಗಳು ಕಾರಣ ಅಂತ ಬಾವಿಸಿದ್ದೇನೆ.
   ಇದೇ ರೀತಿ ಮುಂದಿನ ದಿನಗಳಲ್ಲಿ ನಿರಂತರ ಸಹಸ್ರನಾಮ ಪಠಣ ಜೀವಿತಾವದಿ ಪೂಣ೯ ಮುಂದುವರಿಸಲು ದೇವರ ಕೃಪೆ ಇರಲಿ ಎಂದು ಪ್ರಾರ್ಥಿಸುತ್ತೇನೆ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...