Skip to main content

Blog number 1821. ಶರಾವತಿ ಮುಳುಗಡೆಯ ಎದರು ತೀರದ ಕರೂರು ಹೋಬಳಿಯ ಪಡುವಾರಳ್ಳಿ ಪಾಂಡವರಲ್ಲಿ ಒಬ್ಬರಾದ ಪೇಟೆ ತಿಮ್ಮಣ್ಣರ ಆತ್ಮ ಚರಿತ್ರೆ ಅಪ್ಪಯ್ಯ ಓದಿದೆ.

#ಜಿ_ಟಿ_ಸತ್ಯನಾರಾಯಣರ_ಅಪ್ಪಯ್ಯ_ಕೃತಿ_ಓದಿದೆ.

#ಇದು_ಇವರ_ತಂದೆ_ತಿಮ್ಮಪ್ಪರ_ಆತ್ಮಚರಿತ್ರೆ

#ಪೇಟೆ_ತಿಮ್ಮಣ್ಣ_ನನ್ನ_ಹಿರಿಯ_ಮಿತ್ರರು

#ತಿಮ್ಮಣ್ಣ_ನಿಷ್ಟೂರವಾದಿ_ಬಡವರ_ನ್ಯಾಯದ_ಪರ_ಪಕ್ಷಪಾತಿ

#ತಂದೆಯ_ಬಗ್ಗೆ_ಮಗ_ಪ್ರಕಟಿಸಿದ_ಪುಸ್ತಕ_ಓದುವ_ಕುತೂಹಲ_ಇತ್ತು.

#ಮುನ್ನುರಾಐವತ್ತು_ರೂಪಾಯಿ_ಪಾವತಿ_ಮಾಡಿ_ಪುಸ್ತಕ_ತರಿಸಿ_ಕೊಂಡೆ.

     ಸಾಗರ ತಾಲ್ಲೂಕಿನ ಕರೂರು ಭಾರಂಗಿ ಎಂಬ ಎರಡು ಹೋಬಳಿ ಶರಾವತಿ ನದಿಯ ಆಣೆಕಟ್ಟಿನಿಂದ ರಸ್ತೆ ಸಂಪರ್ಕ ಕಳೆದು ಕೊಂಡ ಮುಳುಗಡೆ ಪ್ರದೇಶಗಳು ಇಲ್ಲಿನ ಜನ ತಾಲ್ಲೂಕು ಕೇಂದ್ರ ಸಾಗರ ಪೇಟೆಗೆ ಬೆಳಿಗ್ಗೆ ಮೊದಲ ಲಾಂಚಿನಲ್ಲಿ ಬಂದರೆ ಮಧ್ಯಾಹ್ನದ ಒಳಗೆ ಕೆಲಸ ಮುಗಿಸಿ ಕೊನೆಯ ಲಾಂಚಿನಲ್ಲಿ ಶರಾವತಿ ನದಿ ದಾಟಿ ಅಲ್ಲಿಂದ ಸೂರ್ಯಸ್ತದ ಒಳಗೆ ನಡೆದು ತುಮರಿ ಪೇಟೆ ಸೇರಬೇಕು ಅಲ್ಲಿಂದ ದೂರ ದೂರದ ಅವರ ಹಳ್ಳಿ ಸೇರಲು ಮಧ್ಯರಾತ್ರಿ ಆಗುತ್ತಿದ್ದ ಕಾಲ.
   ಹತ್ತಿರದ ಪೋಲಿಸ್ ಠಾಣೆ ಕಾರ್ಗಲ್ ಸುಮಾರು 70 ಕಿಲೋ ಮೀಟರ್ 2015 ರ ತನಕ ಈ ಭಾಗದಲ್ಲಿ ಕಾನೂನು ಸುವ್ಯವಸ್ಥೆ ಸಾಗರ ಪೇಟೆಯ ಕೆಲವೇ ಕೆಲವು ಜನರ ಕೈ ಬೆರಳ ತುದಿಯಲ್ಲಿತ್ತು.
   ಆಗೆಲ್ಲ ಕೊನೆ ಲಾಂಚಿನಲ್ಲಿ ಸಾಗರದಿಂದ ಜಯಂತ್ ಈ ಕಡೆ ಬಂದರಂತೆ, ದಮ೯ಪ್ಪ ಬಂದರಂತೆ, ಕಾಗೋಡು ಅಣ್ಣಜಿ ಬಂದರಂತೆ ಅನ್ನುವ ಮಾತುಗಳು, ಕಾಗೋಡು ಕಾರ್ಗಲ್ ಕೋಗಾರಿಂದ ಬಂದರಂತೆ ... ಭಟ್ಟರ ಮನೆಗೆ ಹೋದರಂತೆ .... ಜೈನರ ಮನೆಯಲ್ಲಿ ಊಟ ಅಂತೆ ಇಂತಹ ಸುದ್ದಿಗಳನ್ನ ಈ ಭಾಗದ ಜನರು ದಶಕಗಳ ಕಾಲ ರಸವತ್ತಾಗಿ ಮಾತಾಡುತ್ತಿದ್ದರು.
   ಸರ್ಕಾರದ ಯೋಜನೆಗಳು ಅನೂಷ್ಟಾನವಾಗದೇ ಬಿಲ್ ಆಗುವ ಬಗ್ಗೆ, ತಮಗೆ ನ್ಯಾಯ ಸಿಗದ ಬಗ್ಗೆ ಈ ಭಾಗದವರು ಅಸಹಾಯಕರು, ಈ ಭಾಗದ ಕೆಲ ಮುಖಂಡರಿಗೆ ಸಾಗರದ ಶಾಂತಾ ಲಾಡ್ಜ್ - ಲಕ್ಷ್ಮಿ ಲಾಡ್ಜ್ ನಲ್ಲಿ ಆದರಾತಿಥ್ಯ ಸಿಗುತ್ತಿತ್ತು.
  ಅನ್ಯಾಯ ವಿರೋದಿಸಿ ಕೆಲವರು ಜನಪರ ಯುವ ಹೋರಾಟಗಾರರು ಎದ್ದು ಬಂದರೂ ಅವರನ್ನು ಪಳಗಿಸಿ ತಮ್ಮ ಮತ ಬ್ಯಾಂಕ್ ಆಗಿಸುವ ಚಾಕಚಕ್ಯತೆ ರಾಜಕೀಯ ಪಕ್ಷಗಳಿಗೆ ಮತ್ತು ಅದರ ಮುಖಂಡರಿಗೆ ಇತ್ತು.
  ಈ ಭಾಗದ ತುಮರಿ ಸೇತುವೆಗಾಗಿ ನಾನು ಸಾಗರ ತಾಲೂಕಿನಾದ್ಯಂತ 13 ದಿನ ಪಾದಯಾತ್ರೆ ಮಾಡಿದ್ದೆ, ಈ ಭಾಗದಲ್ಲಿ ಕಾಮಗಾರಿಗಳ ಭ್ರಷ್ಟಾಚಾರ ವಿರೋಧಿಸಿ ಹೋರಾಟಗಳನ್ನು ಮಾಡಿದ್ದೆ, ಕೊನೆಯದಾಗಿ ತುಮರಿ ಗ್ರಾ.ಪಂ. ಸದಸ್ಯ ರಾಜಣ್ಣ ಜೈನ್ ಪರವಾಗಿ ನಡೆದ ಹೋರಾಟ ನನ್ನದು.
   ಈ ಎಲ್ಲಾ ಹೋರಾಟದಲ್ಲಿ ಭಾಗವಹಿಸಿ ಬೆಂಬಲಿಸಿದ ಸಜ್ಜನರಲ್ಲಿ ತಿಮ್ಮಣ್ಣ ಪ್ರಮುಖರು.
   ಆ ಕಾಲದಲ್ಲಿ ತುಮರಿಯ ಕೆಲವೇ ಕೆಲವು ಡೇರ್ ಡೆವಿಲ್ಸ್ ಗಳಲ್ಲಿ ಪೇಟೆ ತಿಮ್ಮಣ್ಣ ಒಬ್ಬರು 1985 ರಿಂದ ನನಗೆ ಈ ಭಾಗದ ಪರಿಚಯ, ತುಮರಿಯ ರವಿ ಮೇಸ್ತ್ರಿ, ತುಮರಿ ಪ್ರಾರಂಬದಲ್ಲಿ ಬಲ ಭಾಗದಲ್ಲಿದ್ದ ಬಂದೂಕು ದುರಸ್ತಿ ಮಾಡುತ್ತಿದ್ದ ಸಾಹೇಬರು ಇವರೆಲ್ಲ ಪಡುವಾರಳ್ಳಿ ಪಾಂಡವರಿದ್ದ ಹಾಗೆ ಇವರಿಂದ ಬಡ ಕೂಲಿ ಕಾರ್ಮಿಕರಿಗೆ ರಕ್ಷಣೆ ಇತ್ತು.
   ಪೇಟೆ ತಿಮ್ಮಣ್ಣ ನನ್ನ ಎಲ್ಲಾ ಜನ ಪರ ಹೋರಾಟಗಳಲ್ಲಿ ಸಭೆಗಳಲ್ಲಿ ನೇರವಾಗಿ ಭಾಗವಹಿಸುವ ಧೈರ್ಯವಂತರು ಆದರೆ ಈ ಭಾಗದ ಅನೇಕರು ಅಂತ ಸಂದಭ೯ದಲ್ಲಿ ಭಯದಿಂದ  ನಾಪತ್ತೆ ಆಗಿರುತ್ತಿದ್ದರು.
   ಈಗ ತಿಮ್ಮಣ್ಣನ ವಯಸ್ಸು 80, ತಮ್ಮ ಯಜಮಾನಿಕೆ ಮಗ ಸತ್ಯನಾರಾಯಣನಿಗೆ ಹಸ್ತಾಂತರ ಮಾಡುವ ಸಮಯ ಈ ಸಂದರ್ಭದಲ್ಲಿ ವಿದ್ಯೆ- ರಾಜಕಾರಣ- ಪತ್ರಿಕೋದ್ಯಮ ಕಲಿತ ಮಗ ಜಿ.ಟಿ. ಸತ್ಯನಾರಾಯಣ್ ತಂದೆಯ ನೆನಪುಗಳನ್ನು ಅಕ್ಷರವಾಗಿಸಿ ತಿಮ್ಮಣ್ಣರ ಚಿರಸ್ಥಾಯಿಯಾಗಿ ಮಾಡುವ ಅವರ ಜೀವನ ವೃತ್ತಾಂತವನ್ನು ಪುಸ್ತಕ ಮಾಡಿದ್ದಾರೆ ಈ ಪುಸ್ತಕಕ್ಕೆ ಸತ್ಯನಾರಾಯಣ್ ತಾನು ಮೊದಲು ಉಚ್ಚರಿಸಿದ #ಅಪ್ಪಯ್ಯ ಎಂಬ ಪದವನ್ನೇ ಇಟ್ಟಿದ್ದಾರೆ.
  ಮಗ ಸತ್ಯನಾರಾಯಣ್ ಅಪ್ಪಯ್ಯ ಕೃತಿಯಲ್ಲಿ 41 ಅಧ್ಯಾಯದಲ್ಲಿ ಮತ್ತು ಪೋಟೋ ಗ್ಯಾಲರಿಯಲ್ಲಿ ತಿಮ್ಮಣ್ಣರನ್ನು ವಿಶಿಷ್ಟ ರೀತಿಯಲ್ಲಿ ದಾಖಲಿಸಿದ್ದಾರೆ.
  ಅನ್ನದೇವರ ಮುಂದೆ ಮೊದಲ ಅಧ್ಯಾಯದಿಂದ ಪ್ರಾರಂಭ ಮಾಡಿ ಕೊನೆಯ ಅಧ್ಯಾಯ ಮೊದಲ ಪುಟಕ್ಕೂ ಕೊನೆಯ ಪುಟಕ್ಕೂ ವರೆಗೆ ತಿಮ್ಮಣ್ಣರ ಅಜ್ಜ ಮಾಸ್ತಿ ನಾಯ್ಕರ ಸಿರಿವಂತಿಕೆ, ಕದಿರು ಆರಿಸುವಾಗ ಕೆನ್ನೆಗೆ ಏಟು, ಪೀರ್ ಸಾಬರ ಗಂಜಿ, ಮಾವ ಕೃಷ್ಣ ಪೂಜಾರಿ 43 ದಿನದ ಸೆರೆವಾಸ ಮುಕ್ತಿ, ಮುಳುಗಿದ ಮಡೆನೂರಿನ ಕಥೆ, ಲಿಂಗನಮಕ್ಕಿ ಲಾಂಚ್ ಬಂದಿತು, ಉರಳುಗಲ್ಲು ಹೋರಾಟ, ತುಮರಿ ಸೇತುವೆ ಶಂಕುಸ್ಥಾಪನೆ, ಮುಳುಗಿದ ದೋಣಿ ದುರಂತ, ಹಳೆಯ ಪೋಲಿಸ್ ಠಾಣೆ, ಅಡಿಕೆ ತೋಟಕ್ಕೆ ಮಹೂರ್ತ, ಮಗ ಪ್ರಜ್ಞೆ ತಪ್ಪಿದಾಗ ಹೊಳೆ ಬಾಗಿಲ ತನಕ ಹೊತ್ತು ನಡೆದ ಈ ಭಾಗದ ಸಾರಿಗೆ ಕಥೆ ವ್ಯಥೆ, ಬೀಡಿ ಕಥೆ, 58 ನೇ ದಾಂಪತ್ಯ ವರ್ಷ, ಆಲೇಮನೆ, ಸಾಕು ನಾಯಿ ಹಂಡ ಇಲಿ ಪಾಷಣ ತಿಂದು ಇಹ ಲೋಕ ತ್ಯಜಿಸಿದ್ದು, ದಲಿತ ಚೌಡಜ್ಜನ ಜೊತೆ ಸಹಪಂಕ್ತಿ, ದಲಿತರ ದೇವಸ್ಥಾನ ಪ್ರವೇಶ, ಪುಟ್ಟೇಗೌಡರ ಜಮೀನು ಖರೀದಿಸಿದ ಗೇಣಿದಾರ, ಪ್ಯಾಟೆ ತಿಮ್ಮ ಮೊಸ ಮಾಡಲಿಲ್ಲ, ಉಪ್ಪಾರ ನಾರಾಯಣನ ಜಾತಿ ಬಹಿಷ್ಕಾರ ಅಂತ್ಯ ಸಂಸ್ಕಾರ, ಅಮ್ಮನ ಲೋಕದಲ್ಲಿ, ಧರ್ಮಸ್ಥಳ ದೇವರಾಣೆ, ಸೊನಗಾರ ಬೆತ್ತಮ್ಮನ ಕಳೆದು ಹೋದ ಗಂಟು, ಶಾಲೆಯಲ್ಲಿ ಮಾಂಸಹಾರ, ಮೂರು ಕೈ ನಾರಾಯಣಯ್ಯರ ಹೋಟೆಲ್ ಚಕ್ಕುಲಿ, ಏಕ ವಚನದಲ್ಲಿ ಏನೋ ತಿಮ್ಮ ಎನ್ನುವ ಮೇಲ್ಜಾತಿಯ ಹಾಲುಗಲ್ಲದ ಮಕ್ಕಳು, ಭಟ್ಟರ ಚಪ್ಪಲಿಯಲ್ಲಿ ಹೊಡೆದಾಟ, MPM ಬೆಂಕಿ, SSLC ಪೇಲ್, ಹೊಳೆಬಾಗಿಲು ಗೇಟ್ ಟಿಕೇಟ್ ಪ್ರಕರಣ, ನಾಗಾರಾದನೆ, ದರ್ಶನದ ಪಾತ್ರಿಗಳು, ಹೆಣ್ಣು ಮಕ್ಕಳ ವಿವಾಹ, ಕ್ರೈಸ್ತ ಪಾದ್ರಿ ಪ್ರಶ್ನೆ, ಹಾಲ್ಕೆರೆ ಭಟ್ಟರ ಬೆಲ್ಲ ಖರೀದಿ ಪ್ರಸಂಗ, ಸಾವುಗಳ ನಡುವೆ, ಅನಾಥ ಎಮ್ಮೆ ಕರು, ಪತ್ನಿಯ ಮನೆಯವರ ಹೊಡೆದಾಟ, ಎರೆಡೂ ಮುಳುಗಡೆ ನೋಡಿದ ತಿಮ್ಮಣ್ಣ, ನೀರಲ್ಲಿ ಮುಳುಗಡೆ ಆಗದ ಜಮೀನು ಕೆ.ಪಿ.ಸಿಯಿ೦ದ ರೈತರಿಗೆ ಹಸ್ತಾಂತರ ಆಗಲಿ ಎಂಬ ಆಶಾಭಾವನೆ, ಮುಳುಗಡೆ ಆದ ದೇವಾಲಯ , ಪಾಳು ಬಿದ್ದ ದೇವಸ್ಥಾನ, ದಿಕ್ಕು ಕಾಣದ ಕಲಾಯಿ ಸಾಹೇಬರ ಕುಟುಂಬ, ಬಂಗಾರದ ಜಡೆಸುತ್ತಿನ ಕಥೆ, ತಿಮ್ಮಣ್ಣರ ಗೆಳೆಯರು, ದಿನಸಿ - ಬಟ್ಟೆ ಅಂಗಡಿ ಲೆಕ್ಕಾಚಾರ ಹೀಗೆ ಇಡೀ ಪುಸ್ತಕ ಕನ್ನಡ ಜಿಲ್ಲೆಯ ಘಟ್ಟಕ್ಕೆ ವಲಸೆ ಬಂದ ತಿಮ್ಮಣ್ಣರ ಬಾಲ್ಯದಿಂದ 80 ರ ವೃದ್ದಾಪ್ಯದ ವರೆಗಿನ ಆತ್ಮ ಕಥೆ ಅವರ ಮಗ ಕಂಡಿದ್ದನ್ನು ಕೇಳಿದ್ದನ್ನು ಅನುಭವಿಸಿದ್ದನ್ನು ಬರೆದಿದ್ದಾರೆ.
   ನಿಜಕ್ಕೂ ತಿಮ್ಮಣ್ಣ ಭಾಗ್ಯಶಾಲಿ ಎಷ್ಟೆಲ್ಲ ಹಣ -ಆಸ್ತಿ-ಅಧಿಕಾರ ಇದ್ದವರ ಮಕ್ಕಳುಗಳಿಗೆ ಅಪ್ಪನ ನೆನಪೇ ಇಲ್ಲದ ಈ ಕಾಲದಲ್ಲಿ ತಿಮ್ಮಣ್ಣರ ಮಗ ಸತ್ಯನಾರಾಯಣ್ ಮುಗಿಲೆತ್ತರದಲ್ಲಿ ಕಾಣುತ್ತಾರೆ.
  ಶಿವರಾಂ ಕಾರಂತರ ಚೋಮನ ದುಡಿಯಲ್ಲಿ ಕರಾವಳಿಯ ಕೃಷಿ ಕಾರ್ಮಿಕರು ಪಶ್ಚಿಮ ಘಟ್ಟಕ್ಕೆ ಹೊಟ್ಟೆ ಪಾಡಿಗೆ ಬರುವ ನೈಜ ಕಥೆ ಇದೆ ಅದರ ಮುಂದಿನ ಭಾಗವೇ ಪೇಟೆ ತಿಮ್ಮಣ್ಣನ ಜೀವನ ಚರಿತ್ರೆ #ಅಪ್ಪಯ್ಯ.
  ನಾನೂ ಕರಾವಳಿಯಿಂದ ಘಟ್ಟಕ್ಕೆ ನೂರು ವರ್ಷಗಳ ಹಿಂದೆ ಬಂದ ಕುಟುಂಬದ ಮೂರನೆ ತಲೆಮಾರಿನವನಾದ್ದರಿಂದ ಅಪ್ಪಯ್ಯ ಪುಸ್ತಕ ಆಪ್ತ ಅನ್ನಿಸಿತು.
   ಪುಸ್ತಕಕ್ಕಾಗಿ ಜಿ.ಟಿ. ಸತ್ಯನಾರಾಯಣ ಸಂಪರ್ಕ ಸಂಖ್ಯೆ 
9448018212.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂ...

ಶ್ರೀಧರ ಸ್ವಾಮಿ ವರದಳ್ಳಿ ಪವಾಡ ಪುರುಷರು.

   ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ವರದಳ್ಳಿಯ ತಪಸ್ವಿ ಶ್ರೀಧರ ಸ್ವಾಮಿಗಳು.   ವರದಳ್ಳಿ ಶ್ರೀಧರ ಸ್ವಾಮಿಗಳ ಬಗ್ಗೆ ಕೇಳಿದ್ದು, ಓದಿದ್ದು ಮತ್ತು ಅವರ ಒಡನಾಡಿಗಳನ್ನ ಭೇಟಿ ಮಾಡಿದ್ದು ಬಿಟ್ಟರೆ ಅವರನ್ನ ಪ್ರತ್ಯಕ್ಷವಾಗಿ ನೋಡಿಲ್ಲ.     ನಾವು ಚಿಕ್ಕವರಿದ್ದಾಗ ಪ್ರಾಥಮಿಕ ಶಾಲೆಯಲ್ಲಿ ವ್ಯಾಸಂಗ ಮಾಡುವಾಗ ಆಗಿನ ಕಾಲದ ಖ್ಯಾತ ಚಲನಚಿತ್ರ ನಟ ಉದಯ ಕುಮಾರ್ ಅರಳಿ ಮರದ ಗ್ಯಾರೇಜ್ ಹತ್ತಿರ ಬಂದಿದ್ದಾರೆ ಅಂತ ಊರಿನ ಜನರೆಲ್ಲ ಗುಂಪು ಗುಂಪಾಗಿ ಓಡುತ್ತಿದ್ದರು, ನಾವು ಚಿಕ್ಕ ಮಕ್ಕಳೆಲ್ಲ ಅವರನ್ನ ಹಿಂಬಾಲಿಸಿದೆವು.       ಅಲ್ಲಿ ಒಂದು ಬಿಳಿ ಅಂಬಾಸಡರ್ ಕಾರು ನಿಂತಿದ್ದು ಅದರ ಅಡಿಯಲ್ಲಿ ಮಲಗಿ ಮೆಕ್ಯಾನಿಕ್ ದುರಸ್ತಿ ಮಾಡುತ್ತಿದ್ದರೆ ಎತ್ತರದ ಮಣ್ಣು ದಿಬ್ಬದ ಮೇಲೆ ನಮ್ಮ ನಟ ಉದಯ ಕುಮಾರ್ ಸಿಗರೇಟು ಸೇದಿ ಹೊಗೆ ಬಿಡುತ್ತಿದ್ದರು. ಯಾರೂ ಅವರ ಹತ್ತಿರ ಮಾತಾಡುವ ದೈಯ೯ ವಹಿಸಲಿಲ್ಲ ಆದರೆ ನೆರೆದ ಜನ ಮಾತಾಡಿಕೊಳ್ಳುತ್ತಿದ್ದ ಮಾತಿನ ಸಾರಾಂಶವೆಂದರೆ ವರದಳ್ಳಿಯಲ್ಲಿ ತಪಸ್ಸು ಮಾಡುತ್ತಿದ್ದ ಶ್ರೀಧರ ಸ್ವಾಮಿಗಳು ದೇಹತ್ಯಾಗ ಮಾಡಿದ್ದಾರೆ ಅದನ್ನ ಕೇಳಿ ಅವರ ಭಕ್ತ ಮತ್ತು ಶಿಷ್ಯರಾದ ಖ್ಯಾತ ಚಿತ್ರ ನಟ ಉದಯ ಕುಮಾರ್ ಬರುವಾಗ ಕಾರು ಹಾಳಾಗಿ ದುರಸ್ತಿಗಾಗಿ ನಿಂತಿದ್ದಾರೆ, ದುಃಖದಲ್ಲಿ ಇರೋದರಿಂದ ಆ ರೀತಿ ಸಿಗರೇಟು ಸೇದಿ ಬೂದಿ ಮಾಡುತ್ತಿದ್ದಾರೆ ಅವರ ಹತ್ತಿರ ಯಾರೂ ಮಾತಾಡ ಬೇಡಿ ಅಂತ ...