https://youtu.be/9Z6numwvMjY?feature=shared
#ಪಾರಿವಾಳದ_ಪ್ರಸೂತಿ_ಗೃಹ
#ನೆಲ_ಲಾಡ್ಜ್_ಕಿಟಕಿ_ಚಜ್ಜಾ
#ಮೇಲ್ಚಾವಣೆ_ಗೋಡ್ರೇಜ್_ಕಂಪನಿ_ಎಸಿ
#ಬಾಣಂತಿ_ಮ೦ಚ_ತಯಾರಾಗಿದೆ
#ಹಾಸಿಗೆ_ಕೆಲಸ_ಪ್ರಗತಿಯಲ್ಲಿದೆ.
ಇದನ್ನು ನಾನು ಗಮನಿಸಲಿಲ್ಲ ಆದರೆ ನಮ್ಮ ಶಂಭೂರಾಮನಿಗೆ ಗೊತ್ತಾಗಿ ಹೋಯ್ತು, ತನ್ನ ವ್ಯಾಪ್ತಿಯಲ್ಲಿ ತನ್ನ ಅನುಮತಿ ಇಲ್ಲದೆ ಪ್ರಸೂತಿ ಗೃಹ ನಿರ್ಮಾಣಕ್ಕೆ ಅವನ ವಿರೋದವೂ ವ್ಯಕ್ತ ಮಾಡಿದ ಆದರೆ ಪಾರಿವಾಳ ದಂಪತಿಗೆ ಇವನು ನಗಣ್ಯ ಹತ್ತು ಅಡಿ ಎತ್ತರದಲ್ಲಿ ಈ ಮನೆ ಇದೆ.
ಬಿಸಿಲು-ಮಳೆ-ಚಳಿ-ಗಾಳಿಗಳಿಂದ ರಕ್ಷಣೆ ಹೊಂದಿರುವ ಗೂಡು ಆಗ ಬೇಕು ಅಲ್ಲಿ ಮೆತ್ತನೆಯ ಹೂವಿನ ಹಾಸಿಗೆ ಇರಬೇಕು ಅದರ ಮೇಲೆ ತನ್ನ ಜೀವದ ಮೊಟ್ಟೆ ಇಟ್ಟು ಕಾವು ಕೊಟ್ಟು ಮೊಟ್ಟೆ ಒಡೆದು ಬರುವ ಮರಿಗಳಿಗಾಗಿ ಕಾಯಬೇಕು.
ನಂತರ ಶಿಶುಗಳಿಗೆ ಬಾಯಿ ತುತ್ತು ತಂದು ಪಾಲನೆ ಮಾಡಿ ಅವುಗಳ ರೆಕ್ಕೆ ಬಲಿತು ಹಾರಲು ಕಲಿಸಿ ಅವು ಗೂಡಿನಿಂದ ಹಾರಿದ ಮೇಲೆ ಈ ಪಾರಿವಾಳ ದಂಪತಿಗಳ ವಂಶೋದ್ದಾರದ ಕರ್ತವ್ಯ ಪೂರ್ಣ.
ಇದರ ಮಧ್ಯ ಪುರುಷ ಪಾರಿವಾಳ ರಾತ್ರಿ ಹಗಲು ಶತೃಗಳಿಂದ, ಮೊಟ್ಟೆ ಕಳ್ಳರಿಂದ, ವಿಶೇಷವಾಗಿ ಮಾರ್ಜಾಲ ವಂಶದವರಿಂದ ತನ್ನ ಸಂತಾನ ಕಾಪಾಡಿಕೊಳ್ಳುವುದು ದೊಡ್ಡ ಕಷ್ಟದ ಕೆಲಸ.
ಈಗೆಲ್ಲ ಬಾಣಂತಿ ಹಾಸಿಗೆಗೆ ಆಧುನಿಕತೆಯ ಸ್ಪರ್ಷ ಬಂದಿದೆ, ಪ್ಲಾಸ್ಟಿಕ್ ದಾರ, ಪ್ಲಾಸ್ಟಿಕ್ ಕೊಟ್ಟೆ ಇತ್ಯಾದಿ ಬಳಕೆ ಆಗುತ್ತಿದೆ.
Comments
Post a Comment