https://youtu.be/FVHRkjyFOYQ?feature=shared
#ಶಿಕಾರಿಪುರದ_ನೆಲವಾಗಿಲಿನ_ನಾಗೇಂದ್ರಪ್ಪ
#ಜನ_ಇವರನ್ನು_ಡ್ರೈವರ್_ನಾಗೇಂದ್ರಪ್ಪ_ಮೆಕ್ಯಾನಿಕ್_ನಾಗೇಂದ್ರಪ್ಪ_ಅಂತಲೂ_ಕರೆಯುತ್ತಾರೆ.
#ನಾನೂ_ಇವರೂ_ಹಾಸನ_ಮೈಸೂರು_ಮಂಡ್ಯ_ಕೊಡಗು_ಜಿಲ್ಲೆಗಳಲ್ಲಿ_ಅನೇಕ_ದಿನ_ತಿರುಗಾಡಿದ್ದೆವು
#ನಿಸ್ವಾರ್ಥಿ_ಪರೋಪಕಾರಿ_ಅನ್ಯಾಯದ_ವಿರುದ್ದ_ಸಿಡಿದೇಳುವ_ಇವರು_ಕಲಾವಿದರೂ_ಹೌದು.
80 ರ ದಶಕದಲ್ಲಿ ನಮ್ಮ ಊರಲ್ಲಿ ರೈಸ್ ಮಿಲ್ ಮೆಕ್ಯಾನಿಕ್ ಆಗಿ ಬಂದ ಶಿಕಾರಿಪುರ ತಾಲ್ಲೂಕಿನ ನೆಲವಾಗಿಲಿನ ನಾಗೇಂದ್ರಪ್ಪ ಈಗ ನಮ್ಮ ಊರಿನ ನಿವಾಸಿಗಳು.
ಇವರು ರೈಸ್ ಮಿಲ್ ಮೆಕ್ಯಾನಿಕ್ ಮಾತ್ರವಲ್ಲ ಅತ್ಯುತ್ತಮ ಡ್ರೈವರ್ ಕೂಡ ಅನೇಕ ವರ್ಷ ಶಿವಮೊಗ್ಗದ ಜಯಪ್ರಕಾಶ್ ಶೆಣೈ ಅವರ ವಿಜಯಾ ಮೋಟಾರ್ಸ್ ಸಂಸ್ಥೆಯ ನಂಬಿಕಸ್ತ ಮತ್ತು ಯಶಸ್ವೀ ಡ್ರೈವರ್ ಆಗಿದ್ದರು, ಆನಂದಪುರಂನ ರೈತ ಬಂದು ಗ್ರಾಮೋದ್ಯೋಗದ ಸುಬ್ಬಣ್ಣ ನಾಯಕರಿಗೂ ಆಪ್ತರಾಗಿದ್ದರು.
ಕನ್ನಡ ಸಾಹಿತ್ಯದ ಓದು, ಹಾಡುವುದು, ಭಜನೆ, ನಾಟಕಗಳಲ್ಲಿ ಅಭಿನಯಿಸುವುದು ಇವರ ಹವ್ಯಾಸ.
ಧಾರ್ಮಿಕ-ಸಾಂಸ್ಕೃತಿಕ ಮತ್ತು ಸಾಮಾಜಿಕ ಕಾರ್ಯಕ್ರಮದಲ್ಲಿ ಇವರು ಶ್ರದ್ದಾ ಭಕ್ತಿಯಿಂದ ಭಾಗವಹಿಸುತ್ತಾರೆ.
ಶಿಕಾರಿಪುರದ ಒಂದು ಕಾಲದ ಪ್ರಖ್ಯಾತ ಅಕ್ಕಿ ಉದ್ಯಮಿ ಸಾಲೇಶ್ವರ ರೈಸ್ ಮಿಲ್ಲಿನ ಮಾಲಿಕರಾದ ಮಲ್ಲಪ್ಪನವರು ಇವರ ತಂದೆಯ ತಮ್ಮ (ಇವರಿಗೆ ಚಿಕ್ಕಪ್ಪ).
ಇವರ ಯೌವನ ಕಾಲದಲ್ಲಿ ವಿಲೇಜ್ ಪಂಚಾಯತ್ ಚುನಾವಣೆಯಲ್ಲಿ ಇವರ ತಂದೆಯ ವಿರೋದದ ಮದ್ಯೆಯೂ ಸ್ಪರ್ಧೆ ಮಾಡಿದ್ದರಿಂದ ಇವರ ಕುಟುಂಬದಲ್ಲಿ ವ್ಯಾಜ್ಯಗಳಿಗೆ ಕಾರಣವಾಗಿ ಇವರು ಇವರ ಆಸ್ತಿ ಮನೆ ಕೃಷಿ ಜಮೀನು ತ್ಯಜಿಸಿ ಬಂದ ಸ್ವಾಭಿಮಾನಿ.
1988 ರಲ್ಲಿ ನಮ್ಮ ಮಿನಿ ಬಿನ್ನಿ ಮಿಲ್ ನಿಂದ ದೊಡ್ಡ ಪ್ರಮಾಣದ 6 ನೇ ನಂಬರ್ ದಾಂಡೇಕರ್ ರೈಸ್ ಮಿಲ್ ಗೆ ಬದಲಾಗಲು ಹೊಸ ರೈಸ್ ಮಿಲ್ ಕಟ್ಟಡ ಕಟ್ಟಲು ಪ್ರಾರಂಬಿಸಿದಾಗ ನಾನು ಮತ್ತು ಈ ನಾಗೇಂದ್ರಪ್ಪ ಅನೇಕ ದಿನಗಳನ್ನು ಸೆಕೆಂಡ್ ಹ್ಯಾಂಡ್ 6ನೇ ನಂಬರ್ ದಾಂಡೇಕರ್ ರೈಸ್ ಮಿಲ್ ಹುಡುಕಾಡಲು ಕಳೆದಿದ್ದೆವು.
ಆಗ ನನ್ನ ಯಜ್ಡಿ ಕ್ಲಾಸಿಕ್ - ಡಿ ಬೈಕ್ ನಲ್ಲಿ ಮತ್ತು ಬಸ್ಸಿನಲ್ಲಿ, ಟ್ಯಾಕ್ಸಿಯಲ್ಲಿ ಚಿಕ್ಕಮಗಳೂರು, ಹಾಸನ, ಕೊಡಗು, ಮಂಡ್ಯ, ಮೈಸೂರು ಜಿಲ್ಲೆಗಳಲ್ಲಿ ಹುಡುಕಾಟ ಮಾಡಿ ಅಂತಿಮವಾಗಿ ಶ್ರೀರಂಗ ಪಟ್ಟಣ ಸಮೀಪದ ನಗುವನಹಳ್ಳಿಯ ಚಾಮರಾಜ ಗೌಡರ ಅಕ್ಕಿ ಗಿರಣಿ ಖರೀದಿಸಿ ತಂದಿದ್ದೆವು.
ಮೈಸೂರಿನ ರೈಸ್ ಮಿಲ್ ಮೆಕ್ಯಾನಿಕ್ ಹಫೀಜುಲ್ಲಾ ಸಾಹೇಬರು ಮತ್ತು ರಾಮಕೃಷ್ಣ ನಮಗೆ ಸಲಹೆ ಸಹಕಾರ ನೀಡಿದ್ದನ್ನು ಯಾವತ್ತೂ ನಾನು ಮರೆಯಲಾರೆ, ಈ ಸಂದರ್ಭದಲ್ಲಿ ಜೊತೆಗಿದ್ದ ನಾಗೇಂದ್ರಪ್ಪರ ಸಾಂಗತ್ಯದಲ್ಲಿ ಸತ್ಸಂಗವೂ ದೊರೆತಿತ್ತು.
ಈಗ ತಮ್ಮ 70ರ ಸಮೀಪದ ವಯಸ್ಸಿನಲ್ಲೂ ಸ್ವತಃ ದುಡಿದು ತಿನ್ನುವ ಬದುಕು ಮಾಡಲೇ ಬೇಕೆಂಬ ಶಫಥ ಇವರದ್ದು, ರೈತ ಬಂದು ಸುಬ್ಬಣ್ಣ ನಾಯಕರ ಬೆಳ್ತಂಗಡಿಯ ಶಿವಪುರದಲ್ಲಿ ಇದ್ದವರು ಅಲ್ಲಿ ಸುಬ್ಬಣ್ಣ ನಾಯಕರ ಪತ್ನಿ ಮತ್ತು ಮಕ್ಕಳು ಇವರಿಗೆ ಕೆಲಸ ಕೊಡಬೇಡಿ ಇವರಿಗೆ ಸಂಬಳ ಕೊಡಿ ಸುಬ್ಬಣ್ಣ ನಾಯಕರ ಆತ್ಮೀಯರು ಇವರು ಅಂದಾಗ ಮುಜುಗರದಿಂದ ಕೆಲಸ ಮಾಡದೇ ಸಂಬಳ ಪಡೆಯುವ ಮನಸ್ಸಿಲ್ಲದೆ ಅಲ್ಲಿ ಕೆಲಸ ಬಿಟ್ಟು ಹೆಬ್ರಿಯ ಶಿವಪುರದ ರಾಮ ಭಟ್ಟರ ಸಂಸ್ಥೆಯಲ್ಲಿ ಸೇರಿದ್ದಾಗಿ ನಿನ್ನೆ ಸಂಜೆ (26- ನವೆಂಬರ್ -2023) ಮೈಸೂರುಪಾಕ್ ತಂದು ಕೊಟ್ಟಾಗ ತಿಳಿಸಿದರು.
ನಮ್ಮ ಊರಿನ ವರಸಿದ್ಧಿ ವಿನಾಯಕ ದೇವಸ್ಥಾನದ ಪಾರುಪತ್ತೆದಾರರೂ ಆಗಿದ್ದಾರೆ.
ಮುಂದಿನ ವರ್ಷ 2024ರ ಫೆಬ್ರುವರಿ 13ರ ಮ೦ಗಳವಾರ ನಮ್ಮ ಊರಿನ ಶ್ರೀವರಸಿದ್ಧಿ ವಿನಾಯಕ ದೇವರ ರಥೋತ್ಸವ ಜಾತ್ರೆಗೆ ಒಂದು ವಾರ ಮೊದಲೇ ಬರುವುದಾಗಿ ತಿಳಿಸಿ ಹೋಗಿದ್ದಾರೆ.
Comments
Post a Comment