#ಹಳ್ಳಿಯಲ್ಲಿ_ವೃದ್ದಾಪ್ಯವನ್ನು_ಸುಂದರವಾಗಿಸಿಕೊಂಡ_ಇನ್ನೋಂದು_ದಂಪತಿಗಳ_ಪರಿಚಯ.
#ನಿಸರಾಣಿ_ನಾರಾಯಣಮೂರ್ತಿ_ದಂಪತಿಗಳು.
#ನಾವೆಲ್ಲ_ಪರಸ್ಪರ_ಗೆಳೆಯಾರಾಗಲು_ವೇದಿಕೆ_facebook.
#ವೃದ್ದಾಪ್ಯದೆಡೆಗೆ_ಸಾಗುವ_ನಮಗೂ_ಇವರ_ಜೀವನ_ಶೈಲಿ_ಮಾರ್ಗದರ್ಶಕವಾಗಿದೆ.
ಮಲೆನಾಡು ವೃದ್ದಾಶ್ರಮ ಆಗುತ್ತಿರುವುದು ಸುಳ್ಳಲ್ಲ ಪ್ರತಿ ಕುಟುಂಬದ ಯುವ ಸದಸ್ಯರು ಉದ್ಯೋಗಕ್ಕಾಗಿ ನಗರಗಳಿಗೆ ಹಾಗೂ ವಿದೇಶಗಳಿಗೆ ಹೋಗಿ ನೆಲೆಸಿದ್ದಾರೆ.
ವೃದ್ಧ ತಂದೆ ತಾಯಿ ಇಬ್ಬರನ್ನೂ ಮಕ್ಕಳು ತಮ್ಮ ಜೊತೆ ನೆಲೆಸಲು ಕರೆದರೂ ತಾವು ಹುಟ್ಟಿ ಬೆಳೆದ ಮನೆ-ಕೃಷಿ ಭೂಮಿ - ಜಾನುವಾರು-ನಾಯಿ - ಬೆಕ್ಕು ಮತ್ತು ಒಡಹುಟ್ಟಿದವರನ್ನು ಗೆಳೆಯರನ್ನು ತೊರೆದು ಹೋಗಲು ಸಾಧ್ಯವಿಲ್ಲ ಎಂದು ತೀರ್ಮಾನಿಸಿ ಹಳ್ಳಿಯಲ್ಲೇ ಉಳಿದಿದ್ದಾರೆ.
ಹಾಗಂತ ಅವರೆಲ್ಲರೂ ನಿರಾಶರಾಗಿದ್ದಾರೆ ಅಥವ ಹತಾಶರಾಗಿದ್ದಾರೆ ಅಂತ ಭಾವಿಸ ಬೇಕಾಗಿಲ್ಲದಂತೆ ಅವರು ಅವರ ಜೀವನ ಶೈಲಿ ಬದಲಿಸಿಕೊಂಡು ವೃದ್ದಾಪ್ಯದಲ್ಲೂ ಸಂತೋಷವಾಗಿದ್ದಾರೆ.
ಮಕ್ಕಳು ತಮ್ಮ ದುಡಿಮೆಯಿಂದ ಶ್ರೀಮಂತರಾಗಿದ್ದಾರೆ, ಅವರು ಹಳ್ಳಿ ಬಿಟ್ಟು ಬರದ ತಂದೆ ತಾಯಿಗಳಿಗೆ ಎಲ್ಲಾ ಸೌಲಭ್ಯಗಳನ್ನು ಒದಗಿಸಿದ್ದಾರೆ, ಇಂಟರ್ನೆಟ್ ಸಂಪರ್ಕ, ಸಿಸಿ ಕ್ಯಾಮೆರಾ, ತಂದೆ ತಾಯಿ ಓಡಾಡಲು ಹೊಸ ಕಾರು, ಅವರ ರಕ್ಷಣೆಗಾಗಿ ಉತ್ತಮ ತಳಿ ನಾಯಿ, ಆಳು ಕಾಳು ವ್ಯವಸ್ಥೆ ಮಾಡಿ ಅಪ್ಪ ಅಮ್ಮನಿಗೆ ಬಂದುಗಳ ಮನೆಯ ಕಾರ್ಯಕ್ಕೆ ಹೋಗಿ ಬರಲು, ಪ್ರವಾಸ ಮಾಡಲು ಹಣಕಾಸು ಇತ್ಯಾದಿ ವ್ಯವಸ್ಥೆ ಮಾಡುತ್ತಾರೆ.
ಮೇಲೆ ಹೇಳಿದ ಎಲ್ಲದಕ್ಕೂ ವಿರುದ್ದವಾಗಿ ನಡೆಯುವ ಮಕ್ಕಳು ಕಡಿಮೆ ಇಲ್ಲ ಆದರೆ ಇದನ್ನೆಲ್ಲ ಹೇಳಿಕೊಳ್ಳದೇ ತಮ್ಮ ಕೃಷಿ ಮೂಲದ ಆದಾಯವನ್ನೆ ಹಿತ-ಮಿತವಾಗಿ ಬಳಸಿಕೊಂಡು ಜೀವನ ಮಾಡುತ್ತಾ ಇರುವವರು ನೂರಾರು ಜನ ಇದ್ದಾರೆ.
ಮೊನ್ನೆ ಬಂದಿದ್ದ ಡಿ.ಎಸ್.ರಾಮಚಂದ್ರ ದಂಪತಿಗಳ ಜೊತೆ ಕೆಲ ಸಮಯ ಕಳೆದಾಗ ಕಳೆದ ಜನವರಿ ತಿಂಗಳ ಕೊನೆಯ 31ನೇ ತಾರೀಖಿನಂದು ಅಂದರೆ ಸುಮಾರು 9 ತಿಂಗಳ ಹಿಂದೆ ಒ0ದು ಸಂಜೆ ಶಿವಮೊಗ್ಗದಲ್ಲಿ ವೈದ್ಯಕೀಯ ತಪಾಸಣೆ ಮುಗಿಸಿ ಸೊರಬ ತಾಲೂಕಿನ ನಿಸಾರಣಿಗೆ ಹಿಂದಿರುಗುವಾಗ ನಿಸರಾಣಿ ನಾರಾಯಣ ಮೂರ್ತಿ ದಂಪತಿಗಳು ನನ್ನ ಕಛೇರಿಗೆ ಬಂದಿದ್ದು ನೆನಪಾಯಿತು.
ನಾರಾಯಣ ಮೂತಿ೯ಯವರಂತೆ ಅವರ ಪತ್ನಿ ಕೂಡ ಪೇಸ್ ಬುಕ್ ಹವ್ಯಾಸಿಗಳು ಆದ್ದರಿಂದ ಇವರಿಬ್ಬರೂ ನನ್ನ ಲೇಖನ ಓದಿ ಲೈಕ್ ಕೊಡುತ್ತಾರೆ.
ಈಗ ಇವರ ವೃದ್ಧಾಪ್ಯದಲ್ಲಿ ಮಕ್ಕಳು ದೇಶ ವಿದೇಶಗಳಲ್ಲಿ ಕೆಲಸದಲ್ಲಿದ್ದಾರೆ ಇಲ್ಲಿ ಕೃಷಿ ಇತ್ಯಾದಿ ನೋಡಿ ಕೊಂಡು ಆಗಾಗ್ಗೆ ಶಿವಮೊಗ್ಗದಲ್ಲಿ ವೈದ್ಯಕೀಯ ತಪಾಸಣೆ ಮಾಡಿಸಿ ಕೊಳ್ಳುತ್ತಾ, ಹೆಚ್ಚು ಹೆಚ್ಚು ಪ್ರವಾಸ ಮಾಡುತ್ತಾ ಲವಲವಿಕೆಯಿಂದ ಈ ದಂಪತಿಗಳಿದ್ದಾರೆ.
ನಾರಾಯಣ ಮೂರ್ತಿ ಅವರೇ ಸ್ವತಃ ಡ್ರೈವಿಂಗ್ ಮಾಡುತ್ತಾರೆ ಪತಿ - ಪತ್ನಿ ಇಬ್ಬರೇ ಕಾರಿನಲ್ಲಿ ಒಡಾಡುತ್ತಾ ಸಂಜೆ ಮನೆ ಸೇರಿ ಇವರಿಗೆ ಕಾಯುವ ನಾಯಿ - ಬೆಕ್ಕು - ಜಾನುವಾರುಗಳಿಗೆ ಊಟ ನೀಡುತ್ತಾರಂತೆ.
ನಾವಿರುವ ಜಾಗವನ್ನೆ, ಪರಿಸರ-ಪರಿಸ್ಥಿತಿಯನ್ನೆ ಸ್ವರ್ಗವಾಗಿಸಿಕೊಂಡು ಬದುಕು ಸಾಗಿಸುವ ಕಲೆ ಎಲ್ಲರಿಗೂ ಸಾಧ್ಯವಿಲ್ಲ ... ಇರುವುದನ್ನು ಬಿಟ್ಟು ಇಲ್ಲದ್ದಕ್ಕೆ ಹಂಬಲಿಸುವ ಮನಸಿನ ನಾಗಾಲೋಟಕ್ಕೆ ಲಗಾಮು ಹಾಕುವುದಿಲ್ಲ ಇದರಿಂದ ಹತಾಷೆ - ನಿರಾಸೆಗಳಲ್ಲೇ ಜೀವನ ನರಕ ಮಾಡಿಕೊಂಡು ಬಿಪಿ - ಶುಗರ್ ಹೆಚ್ಚಿಸಿಕೊಂಡು ನರಳುವ ಅನೇಕ ದಂಪತಿಗಳ ಉದಾಹರಣೆ ನಮ್ಮ ಕಣ್ಣಿನೆದರು ಇದೆ.
ಅಪರೂಪದ ಈ ದಂಪತಿಗಳು ವೃದ್ಧಾಪ್ಯದಲ್ಲಿರುವವರಿಗೆ ಆದರ್ಶರಾಗಿದ್ದಾರೆ,ವೃದ್ದಾಪ್ಯದ ಹೊಸ್ತಿಲಲ್ಲಿ ಇರುವ ನಮ್ಮಂತವರಿಗೆ ವೃದ್ಧಾಪ್ಯ ಜೀವನ ಸುಖಮಯವಾಗಿ ನಡೆಸಲು ಇಂತವರ ಜೀವನ ಶೈಲಿ ಪ್ರೇರಣೆ ಕೂಡ ಆಗಿದೆ.
Comments
Post a Comment