#ಹಳ್ಳಿಯಲ್ಲಿ_ವೃದ್ದಾಪ್ಯವನ್ನು_ಸುಖಮಯವಾಗಿಸಿ_ಜೀವನ_ಸಾಗಿಸುವುದು_ಹೇಗೆ?
#ನನಗೆ_ಗೊತ್ತಿಲ್ಲ_ಆದರೆ_ಅಂತಹ_ದಂಪತಿಗಳನ್ನು_ತಮಗೆ_ಪರಿಚಯಿಸ_ಬೇಕೆನ್ನಿಸಿತು.
#ತಾಳಗುಪ್ಪ_ಸಮೀಪದ_ದಿಂಡಿನಕಾರು_ವಾಸಿ_ಡಿ_ಎಸ್_ರಾಮಚಂದ್ರ_ಮತ್ತು_ಅವರ_ಪತ್ನಿ_ಶ್ರೀಮತಿ_ರತ್ನಮ್ಮ
#ಮೊನ್ನೆ_ನನ್ನ_ಅತಿಥಿಗಳು.
ಮೊನ್ನೆ ಮಧ್ಯಾಹ್ನ ನನ್ನ ಕಛೇರಿ ಒಳಗೆ ಬಂದು " ನಾನು ನಿಮ್ಮ ಪೇಸ್ ಬುಕ್ ಫ್ರೆಂಡ್ " ಅಂದಾಗ ನನಗೆ ಅವರ ಮುಖ ಪರಿಚಯ ಇದೆ ಅನ್ನಿಸಿದರೂ ಇಂತವರೇ ಅಂತ ಹೇಳಲು ಸಾಧ್ಯವಾಗಲಿಲ್ಲ.
ಅವರು ಸಾಗರ ತಾಲೂಕಿನ ತಾಳಗುಪ್ಪ ಹೋಬಳಿಯ ದಿಂಡಿನಕಾರು ವಾಸಿಗಳಾದ ಡಿ.ಎಸ್.ರಾಮಚಂದ್ರ ಮತ್ತು ಅವರ ಪತ್ನಿ ಶ್ರೀಮತಿ ರತ್ನಮ್ಮ ದಂಪತಿಗಳು.
ಕೋಣಂದೂರಿನ ನಾಟಿ ವೈದ್ಯರಲ್ಲಿ ಔಷಧಿ ತರಲು ಹೋದವರು ವಾಪಾಸು ಬರುವಾಗ ನಮ್ಮ #ಮಲ್ಲಿಕಾ_ವೆಜ್ ನಲ್ಲಿ ಮಧ್ಯಾಹ್ನದ ಊಟ ಮಾಡಿ ನಾನು ಆಫೀಸಿನಲ್ಲಿ ಇರುವುದು ತಿಳಿದು ಬಂದರು.
ಡಿ.ಎಸ್.ರಾಮಚಂದ್ರರ ವಯಸ್ಸು 79 ಈ ವಯಸ್ಸಿನಲ್ಲಿ ಕಳೆದ ವರ್ಷ ಹೆಗ್ಗೋಡಿನಲ್ಲಿ ನಡೆದ ಛಾಯ ಚಿತ್ರ ಗ್ರಹಣದ ಶಿಭಿರದಲ್ಲಿ ಅತ್ಯುತ್ಸಾಹದಿಂದ ಭಾಗವಹಿಸಿ ಈ ಶಿಬಿರದ ಜೊತೆಗಾರರೊಂದಿಗೆ ಸೂರ್ಯಾಸ್ತದ ನಂತರದಲ್ಲಿ ನಮ್ಮ ಊರಿನಲ್ಲಿರುವ ಕೆಳದಿ ಅರಸರ ಸ್ಮಾರಕ #ಚಂಪಕ_ಸರಸ್ಸು ಚಿತ್ರಿಕರಣಕ್ಕೆ ಬಂದವರು ಅಂದರೆ ಅರ್ಥವಾದೀತು ಇವರ ಜೀವನೋತ್ಸಾಹ.
ಇವರ ಪತ್ನಿ ಶ್ರೀಮತಿ ರತ್ನಮ್ಮ ಕೂಡ ಪತಿಯಂತೆ ಅತ್ಯುತ್ಸಾಹದಿಂದ ವೃದ್ಧಾಪ್ಯ ಸುಖಮಯಗೋಳಿಸಿಕೊಳ್ಳುವುದರಲ್ಲಿ ಪತಿಗೆ ಸಾಥ್ ನೀಡಿದ್ದಾರೆ.
ಇವರು ತಾಳಗುಪ್ಪದ ಒಂದು ಕಾಲದ ಸುಪ್ರಸಿದ್ದ ಹೋಟೆಲ್ ಕೃಷ್ಣಾ ಕೆಫೆ ಮಾಲಿಕರು ಮಗಳು, ಇವರಿಗೆ ಹೋಟೆಲ್ ಉದ್ಯಮವನ್ನು ನೋಡಿದ ಮತ್ತು ಅದರಲ್ಲಿನ ಕಷ್ಟ ಸುಖದ ಅರಿವಿರುವವರು.
ನಮ್ಮ ಮಲ್ಲಿಕಾ ವೆಜ್ ನ ಮಧ್ಯಾಹ್ನದ ದಕ್ಷಿಣ ಭಾರತೀಯ ಥಾಲಿ ಈ ದಂಪತಿಗಳಿಗೆ ಇಷ್ಟವಾಯಿತಂತೆ, ನಮ್ಮ ಮಲ್ಲಿಕಾ ವೆಜ್ ಥಾಲಿಯಲ್ಲಿ ಉಪ್ಪು - ಉಪ್ಪಿನಕಾಯಿ - ಕೋಸಂಬರಿ - ಹಪ್ಪಳ- ಪಲ್ಯ - ಸಾಗು-ಸಿಹಿ- ಚಪಾತಿ- ಅನ್ನ- ತಿಳಿಸಾರು - ಹುಳಿ - ಎಮ್ಮೆ ಹಾಲಿನ ಮೊಸರು - ಮಜ್ಜಿಗೆ ಮತ್ತು ಫಿಲ್ಟರ್ ನೀರು ಇರುತ್ತದೆ.
ಟೇಸ್ಟಿಂಗ್ ಪೌಡರ್ - ಆರ್ಟಿಪಿಸಿಯಲ್ ಕಲರ್ ಬಳಸುವುದಿಲ್ಲ- ಪ್ರತಿ ದಿನ ಬೆಳಿಗ್ಗೆ ಹೊಚ್ಚಹೊಸ ಹೊಸ ಎಣ್ಣೆಯಿಂದ ನಮ್ಮ ರೆಸ್ಟೋರೆಂಟ್ ಅಡುಗೆ ಪ್ರಾರಂಭವಾಗುತ್ತದೆ.
ಈ ದಂಪತಿಗಳ ಮಕ್ಕಳು ವಿದೇಶಗಳಲ್ಲಿದ್ದಾರೆ, ಇವರು ಸಿಂಗಾಪುರದ ಪ್ರವಾಸ ಮಾಡಿದ್ದಾರೆ, ಬೇರೆ ದೇಶಗಳಿಗೆ ಹೋಗಲು ಇವರಿಗೆ ಅವರು ಕರೆದರೂ ಇವರಿಗೆ ಇಷ್ಟವಿಲ್ಲ ಇವರಿಗೆ ಇವರ ಹುಟ್ಟೂರೇ ಇಷ್ಟವೆಂದರು.
58 ವರ್ಷ ದಾಟಿ 59ನೇ ವರ್ಷಕ್ಕೆ ಮುಂದಿನ ವರ್ಷ ಪಾದಾರ್ಪಣ ಮಾಡಲಿರುವ ನನಗೆ ಈ ದಂಪತಿಗಳು ಆದರ್ಶಪ್ರಾಯರಾಗಿದ್ದಾರೆ.
Comments
Post a Comment