Blog number 1838. ಜಗತ್ತು ಆವರಿಸಿರುವ ಟೊಮೋಟೋ ಕಥೆ, ಟೊಮೋಟೋ ಇಲ್ಲದೆ ಅಡುಗೆ ಮಾಡಲಾಗುವುದಿಲ್ಲ ಎಂಬ ಭ್ರಮಾಲೋಕದಲ್ಲಿ...
#ಟೋಮೊಟಾ_ಇಲ್ಲದ_ಅಡುಗೆ_ಸಾಧ್ಯವಿಲ್ಲ_ಎ೦ಬ_ಭ್ರಮೆ
#ಹದಿನಾರನೆ_ಶತಮಾನದಲ್ಲಿ_ಪೋರ್ಚುಗೀಸರಿಂದ_ಭಾರತಕ್ಕೆ
#ಐವತ್ತು_ವರ್ಷದ_ಹಿಂದೆ_ನಮ್ಮಲ್ಲಿ_ಬಳಕೆ_ಇರಲಿಲ್ಲ
#ಅಮೇರಿಕಾದಲ್ಲಿ_1835ರ_ತನಕ_ಟೊಮೋಟೋ_ವಿಷ_ಎಂಬ_ನಂಬಿಕೆ_ಆಗಿತ್ತು.
#ಅಮೇರಿಕಾ_ಕೋರ್ಟ್_1893ರಲ್ಲಿ_ಟೋಮೋಟೋ_ತರಕಾರಿ_ಎಂದು_ತೀರ್ಪು_ನೀಡಿದೆ
#ಆಗ_ಅಮೇರಿಕಾದಲ್ಲಿ_ಹಣ್ಣಿಗೆ_ತೆರಿಗೆ_ಮತ್ತು_ತರಕಾರಿಗೆ_ತೆರಿಗೆ_ಇರಲಿಲ್ಲ.
#ಹಣ್ಣು_ಮತ್ತು_ತರಕಾರಿ_ಆಗಿ_ಬಳಕೆ.
ಕೆಲವು ಬಾರಿ ಅಕಾಲಿಕ ಮಳೆಯಿಂದ ಟೋಮೋಟೋ ದಾರಣೆ ಕಿಲೋಗೆ ನೂರು ದಾಟಿದೆ, 25 ಕೆ.ಜಿಯ ಟೋಮೋಟೋ ಬಾಕ್ಸ್ 2000 ಕ್ಕೆ ರೈತರಿಂದ ಖರೀದಿ ಆಗುತ್ತದೆ ಮತ್ತೆ ಕೆಲ ಬಾರಿ ಟೋಮೋಟೋ ದಾರಣೆ ಕುಸಿದು ರೈತರು ರಸ್ತೆಗೆ ಟೋಮೋಟೋ ಸುರಿದು ಪ್ರತಿಭಟನೆ ಮಾಡುತ್ತಾರೆ ಆದರೆ ಟೋಮೋಟೋ ಬೇಡಿಕೆ ಮಾತ್ರ ಕಡಿಮೆ ಆಗುವುದಿಲ್ಲ.
50 ವರ್ಷದ ಹಿಂದೆ ನಮ್ಮ ತರಕಾರಿ ಪಟ್ಟಿಯಲ್ಲಿ ಟೋಮೋಟೋ ಇರಲಿಲ್ಲ, ಸ್ಥಳಿಯ ತರಕಾರಿ ಮಾರಾಟಗಾರರ ಬುಟ್ಟಿಯಲ್ಲೂ ಟೋಮೋಟೋ ಇರಲಿಲ್ಲ.
ತನಕ ಟೋಮೋಟೋ ಅಮೇರಿಕಾದಲ್ಲಿ ವಿಷ ಪೂರಿತ ಎಂಬ ಬಾವನೆ ಇತ್ತು, ಸ್ಪಾನಿಷ್ ರಿಂದ ಯುರೋಪಿಗೆ ಪರಿಚಯ ಆಗುತ್ತದೆ.
1887 ರಲ್ಲಿ ಅಮೇರಿಕಾದಲ್ಲಿ ಟೋಮೋಟೋ ಬಗ್ಗೆ ನಡೆದ ಒಂದು ವಿಶೇಷ ವ್ಯಾಜ್ಯ ಮತ್ತು ತೀಪು೯ ಈಗ ವಿಶ್ವದಾದ್ಯಂತ ಆಚರಣೆಗೆ ಕಾರಣ ಆಯಿತು ಅದೇನೆಂದರೆ ಟೋಮೋಟೋ ತರಕಾರಿನಾ? ಅಥವ ಹಣ್ಣೋ? ಎಂಬ ಜಿಜ್ಞಾಸೆಗೆ ಕಾರಣ ಆಗಿತ್ತು.
ಆಗ ಅಮೇರಿಕಾದಲ್ಲಿ ತರಕಾರಿಗೆ ತೆರಿಗೆ ಇರಲಿಲ್ಲ ಆದರೆ ಹಣ್ಣಿಗೆ ತೆರಿಗೆ ಇತ್ತು.
10 ಮೇ 1893 ರಲ್ಲಿ ಅಮೇರಿಕಾ ನ್ಯಾಯಾಲಯ ನೀಡಿದ ತೀರ್ಪು ಟೋಮೋಟೋ ತರಕಾರಿ ಅಂತ ಈಗ ವಿಶ್ವದಾದ್ಯಂತ ಎಲ್ಲಾ ದೇಶಗಳು ಟೋಮೋಟೋ ಹಣ್ಣನ್ನು ತರಕಾರಿ ಅಂತಲೇ ಪರಿಗಣಿಸಿದೆ.
ಟೋಮೋಟೋ ಬಳಸದೆ ಅಡುಗೆಯೇ ಸಾಧ್ಯವಿಲ್ಲ ಎಂಬ ಭಾವನೆ ಅಡುಗೆಯ ಸಿಬ್ಬಂದಿಗಳಲ್ಲಿ ಬಂದು ಬಿಟ್ಟಿದೆ.
ಭಾರತ ದೊಡ್ಡ ಪ್ರಮಾಣದಲ್ಲಿ ಟೋಮೋಟೋ ಬೆಳೆಯುತ್ತದೆ ಮತ್ತು ಬಳಸುತ್ತದೆ.
Comments
Post a Comment