#ಆನಂದಪುರಂನಲ್ಲಿ_ವಿದ್ಯಾಬ್ಯಾಸ_ಮಾಡಿವರು.
#ಸಾಗರದ_ಮುನ್ಸಿಪ್_ಹೈಸ್ಕೂಲಿನಲ್ಲಿ_ನನ್ನ_ಗುರುಗಳು.
#ಪ್ರತಿದಿನ_ಇಷ್ಟತ್ತು_ಕಿಲೋಮೀಟರ್_ನಡೆದು_ಪ್ರೌಢಶಿಕ್ಷಣ_ಪಡೆದವರು.
#ಪ್ರಾಮಾಣಿಕ_ಪ್ರಯತ್ನಕ್ಕೆ_ಫಲಸಿದ್ದಿ_ಎ೦ದು_ಸಾದಿಸಿ_ತೋರಿಸಿದವರು.
#ಯಾರ_ಬೆಂಬಲ_ಇಲ್ಲದೆ_ಗಾಡ್_ಪಾದರ್_ಇಲ್ಲದೆಯೂ_ಸಾದಿಸಿದವರು
#ಜಿಲ್ಲಾ_ಸಹಕಾರಿ_ಸಂಸ್ಥೆ_ರಿಜಿಸ್ಟ್ರಾರ್_ಆಗಿದ್ದರು
#ವಿದಾನ_ಸೌದದಲ್ಲಿ_ಮಂತ್ರಾಲಯದಲ್ಲಿ_ವಿಶೇಷ_ಕರ್ತವ್ಯ_ಅಧಿಕಾರಿ_ಆಗಿದ್ದರು.
#ಅವರ_ಜೀವನ_ಶಿಸ್ತು_ಬದ್ದ
. 1978ರಲ್ಲಿ ನನ್ನನ್ನು ಸಾಗರದ ಮುನ್ಸಿಪಲ್ ಹೈಸ್ಕೂಲ್ ಗೆ 8ನೇ ತರಗತಿ ಇಂಗ್ಲೀಷ್ ಮೀಡಿಯಂ ಗೆ ನನ್ನ ತಂದೆ ಸೇರಿಸಿದ್ದರು, ಅಲ್ಲಿದ್ದ ಮ್ಯಾನೇಜರ್ ನಮ್ಮೂರ ಸಮೀಪದ ನಂದಿಗದ ಗುಂಡಪ್ಪನವರು (ಸಾಗರದ ಗೋಪಾಲರ ದೊಡ್ಡಪ್ಪ) ಬಿಟ್ಟರೆ ಬೇರಾರು ಗೊತ್ತಿರಲಿಲ್ಲ.
7 ನೇ ತರಗತಿ ತನಕ ಇಂಗ್ಲೀಷ್ ಮೀಡಿಯಂ ಓದಿದವರು 8ನೇ ತರಗತಿಗೆ ಇಲ್ಲಿಗೆ ಮತ್ತು ಅನುಕೂಲಸ್ಥರು ಪ್ರಭಾವಿಗಳು ಖಾಸಾಗಿ ಶಾಲೆ ಆದ ಶಿವಲಿಂಗಪ್ಪ ಹೈಸ್ಕೂಲ್ ಗೆ ಸೇರಿಸುತ್ತಿದ್ದರು.
ನಮ್ಮ ಊರಿನ ಹೈಸ್ಕೂಲ್ ಶಿಕ್ಷಕರು ನಮ್ಮ ತಂದೆಗೆ ಸಾಗರದ ಮುನ್ಸಿಪಲ್ ಹೈಸ್ಕೂಲ್ ಸೇರಿಸಲು ಸಲಹೆ ನೀಡಿ ಅವರ ಮಗನನ್ನ ಈ ಖಾಸಾಗಿ ಶಾಲೆಗೆ ಸೇರಿಸಿದ್ದರ ಉದ್ದೇಶ ಅನೇಕ ವರ್ಷದ ನಂತರ ಗೊತ್ತಾಯಿತು.
ಹಳ್ಳಿಯಲ್ಲಿ ಮಾತೃ ಬಾಷೆ ಕನ್ನಡ ಮಾದ್ಯಮದಲ್ಲಿ ಓದಿ ಶಾಲೆಗೆ ಪ್ರಥಮರಾಗುತ್ತಿದ್ದ ನನಗೆ ಸಾಗರದ 8ನೇ ತರಗತಿ ಒಂದು ರೀತಿ ಉಸಿರುಕಟ್ಟಿಸುತ್ತಿತ್ತು, ಇಂಗ್ಲೀಷ್ ಮಾಧ್ಯಮದಲ್ಲೇ ಒಂದನೇ ತರಗತಿಯಿಂದ ಓದಿ ಬಂದವರ ನಡುವೆ 5 ನೇ ತರಗತಿಯಿಂದ ಮಾತ್ರ ಒಂದು ವಿಷಯ ಇಂಗ್ಲೀಷ್ ಕಲಿಯಲು ಪ್ರಾರ೦ಬಿಸಿ 8 ನೇ ತರಗತಿಗೆ ದಿಡೀರ್ ಇಂಗ್ಲೀಷ್ ಮಾಧ್ಯಮಕ್ಕೆ ಬಂದಿದ್ದು ನನಗೆ ಕೀಳರಮಿ ಉಂಟು ಮಾಡಿತ್ತು.
ಮನೆಯ ಆರ್ಥಿಕ ಪರಿಸ್ಥಿತಿ ಸರಿ ಇಲ್ಲದ ಆ ಪರಿಸ್ಥಿತಿಯಲ್ಲಿ ನನ್ನದು ಅಂಗಿ ಚಡ್ಡಿ ಮತ್ತು ಹವಾಯಿ ಚಪ್ಪಲಿ ಅನೇಕರ ಗೇಲಿಗೂ ಕಾರಣ ಆಗುತ್ತಿತ್ತು.
ಆ ಸಂದಭ೯ದಲ್ಲಿ ಹೊಸದಾಗಿ 8ನೇ ತರಗತಿಗೆ ಸೇರಿದವರಿಗೆ ಒಂದು ಸಿಡಿಲಿನಂತ ಸುದ್ದಿ ಬಂತು, NCC ಉಸ್ತುವಾರಿ ನೋಡುವ DKR ಅಂತ ತುಂಬಾ ಶಿಸ್ತಿನ ಮಾಸ್ಟರ್ ಬರುತ್ತಾರೆ NCC ಗೆ ಸೆಲೆಕ್ಟ್ ಮಾಡುತ್ತಾರೆ ಬಾನುವಾರ ಬೇರೆಯವರಿಗೆ ರಜಾ ಇದ್ದರೆ NCC ಅವರಿಗೆ ಮಾತ್ರ ರಜಾ ಇಲ್ಲ DKR ಮಿಲ್ಟ್ರಿಯಂತೆ ಟ್ರೈನಿಂಗ್ ಕೊಡ್ತಾರೆ ಅಂತ.
ಆ ದಿನ ಬಂತು DKR ಬಂದವರೆ ದ್ಯೆಹಿಕವಾಗಿ ಗಟ್ಟಿ ಇದ್ದವರನ್ನ ಆಯ್ಕೆ ಮಾಡಿ ಅವರ NCC ಕಛೇರಿಗೆ ಕರೆದುಕೊಂಡು ಹೋದರು.
ನನಗೆ ಜೀವ ಬಾಯಿಗೆ ಬಂದಿತ್ತು ಮೊದಲ ಕಾರಣ ಪ್ರತಿ ದಿನ ಸಾಗರಕ್ಕೆ ಆನಂದಪುರದಿಂದ ರೈಲಿನಲ್ಲಿ ಸಾಗರಕ್ಕೆ ಪಾಸ್ ಮೂಲಕ ಪ್ರಯಾಣಿಸುತ್ತಿದ್ದ ನಮಗೆ ಬಾನುವಾರ ಪಾಸ್ ಇರಲಿಲ್ಲ ಮತ್ತು ಪೂಣ೯ ಹಣ ಕೊಟ್ಟು ಪ್ರಯಾಣಿಸುವ ಅಥಿ೯ಕ ಸಬಲತೆ ಮನೇಲಿ ಇರಲಿಲ್ಲ.
ಒಬ್ಬೊಬ್ಬರನ್ನೆ ಸಂದಶ೯ನ ಮಾಡಿ ಸಮವಸ್ತ್ರ ನೀಡುತ್ತಿದ್ದರು ಆಗ ನನ್ನ ಸರದಿ ಬಂತು "ಸಾರ್ ನನಗೆ NCC ಸೇರಲು ವಿನಾಯಿತಿ ನೀಡಿ " ಅಂದೆ ತಕ್ಷಣ ಬಂದೂಕಿನ ಗುಂಡಿನಂತ ಪ್ರಶ್ನೆಗಳು ಬಂದಿತು.
ಯಾವ ಕಾರಣವೂ ಅವರಿಗೆ ಸಕಾರಣ ಆಗಿಲ್ಲ ಅಂತ ಅವರ ಮುಖಭಾವ ಮತ್ತು ಪ್ರಶ್ನೆಗಳಿಂದ ನನಗೆ ವೇದ್ಯ ಆಯಿತು ನಂತರ ಯಾವ ಊರು? ಯಾರ ಮನೆ? ಎಂಬ ಪ್ರಶ್ನೆಗೆ ನನ್ನ ಉತ್ತರ ಅವರಿಗೆ ಸಮಾದಾನ ಆಯಿತು, ನನ್ನ ತಂದೆ ಅವರಿಗೆ ಹೇಗೆ ಪರಿಚಯ ಗೊತ್ತಾಗಲಿಲ್ಲ ಆದರೆ ನನ್ನನ್ನ NCC ಪಟ್ಟಿಯಿಂದ ಬಿಟ್ಟು ಕಳಿಸಿದರು.
ನಂತರ ಜಿಲ್ಲಾ ಪಂಚಾಯತ್ ಸದಸ್ಯನಾದ ಮೇಲೆ ಗೊತ್ತಾಯಿತು ಶಿವಮೊಗ್ಗ ಜಿಲ್ಲೆಯ ರಿಫ್ಪನ್ ಪೇಟೆ ಸಮೀಪದ ಕಾಳೇಶ್ವರ ಊರು ದಮ೯ಪ್ಪ ಸಾಹೇಬರ ಊರು, ಪ್ರೌಢ ಶಿಕ್ಷಣ ಆನಂದಪುರದಲ್ಲಿ ಮಾಡಿದರು ಅದಕ್ಕಾಗಿ ಆನಂದಪುರಂ ಸಮೀಪದ ಗಿಳಾಲಗುಂಡಿಯ ಅವರ ಮಾವನ ಮನೆಯಿಂದ ದಿನಾ 10 ಕಿ.ಮಿ. ನಡೆದು ಬರುತ್ತಿದ್ದರು, ಇವರ ಮಾವನವರು ನಮ್ಮ ತಂದೆಗೆ ಆಪ್ತರಾಗಿದ್ದರ೦ತೆ. ಪ್ರತಿಭಾವಂತರಾದ ಅವರು ಸಾಗರದ ಮುನ್ಸಿಪ್ ಹೈಸ್ಕೂಲ್ ಶಿಕ್ಷಕರಾಗಿದ್ದಾಗಲೇ ಕೆ.ಎ.ಎಸ್ ಮಾಡಿ ಸಹಕಾರಿ ಇಲಾಖೆಯ ಡಿಸ್ಟ್ರಿಕ್ಟ್ ರಿಜಿಸ್ಟ್ರಾರ್ ಆಗಿದ್ದಾರಂತ.
ಜಿಲ್ಲಾ ಪಂಚಾಯತ್ ಸಭೆಗೆ ಅವರು ಬರಬೇಕಾತ್ತಿತ್ತು ನಾನೇ ಅವರಲ್ಲಿ ಹೋಗಿ ಪರಿಚಯಿಸಿಕೊಂಡೆ ಅವರಿಗೂ ಅವರ ಶಿಷ್ಯ ಜಿಲ್ಲಾ ಪಂಚಾಯತ್ ಸದಸ್ಯನಾಗಿ ಶಿವಮೊಗ್ಗ ಜಿಲ್ಲಾ ಪಂಚಾಯತ್ ನ್ನ ನಡುಗಿಸುತ್ತಿದ್ದು ಸಂತೋಷ ಉಂಟು ಮಾಡಿತ್ತು.
ಮುಂದಿನ ದಿನಗಳಲ್ಲಿ ಇವರು ವಿದಾನ ಪರಿಷತ್ ಸಭಾಧ್ಯಕ್ಷರಾದ DH ಶಂಕರ ಮೂತಿ೯, ಮಂತ್ರಿ ಹರತಾಳು ಹಾಲಪ್ಪರ ವಿಶೇಷಾಧಿಕಾರಿಗಳಾಗಿ ಕಾಯ೯ನಿರ್ವಹಿಸಿದರು, ಹಿಂದಿನ ಸರ್ಕಾರದಲ್ಲಿ
ಮೀನುಗಾರಿಕೆ ಮತ್ತು ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರಾದ ಶ್ರೀನಿವಾಸ್ ಪೂಜಾರರ ವಿಶೇಷಾಧಿಕಾರಿಗಳಾಗಿ ಕತ೯ವ್ಯ ನಿರ್ವಹಿಸಿದ್ದರು.
ನಾನು ನನ್ನ ತಂದೆ ತಾಯಿ ಹೆಸರಲ್ಲಿ ಕಟ್ಟಿದ ಕಲ್ಯಾಣ ಮಂಟಪ ಉದ್ಘಾಟಿಸಲು ಆಹ್ವಾನಿಸಿದ್ದೆ ಬಂದಿದ್ದರು ಕಳೆದ ವರ್ಷ ನನ್ನ ಮಗಳ ಮದುವೆಗೆ ಆಹ್ವಾನಿಸಲು ಸಾಧ್ಯವಾಗಿರಲಿಲ್ಲ ಅಂಚೆಯಲ್ಲಿ ಆಹ್ವಾನ ಪತ್ರಿಕೆ ಕಳಿಸಿದ್ದೆ ಬರುತ್ತಾರೆಂದು ನಿರೀಕ್ಷಿಸಿಯೇ ಇರಲಿಲ್ಲ ಮಹೂತ೯ದಲ್ಲಿ ಅವರಿದ್ದರು.
ನನ್ನ ಮತ್ತು ಅವರ ಗುರು ಶಿಷ್ಯರ ಸಂಬಂದ ಎಷ್ಟೇ ಸಂಕ್ಷಿಪ್ತ ಅಂದರೂ ವಿವರಿಸುವಲ್ಲಿ ದೀಘ೯ವಾಗಿ ಆಯಿತು.
ಮೂರು ವರ್ಷಗಳ ಹಿಂದೆ ಏಕೈಕ ಪುತ್ರನ ಅಕಾಲಿಕ ಅಗಲಿಕೆ ದರ್ಮಪ್ಪ ಸಾಹೇಬರಿಗೆ ತುಂಬಲಾರದ ನೋವು ಮತ್ತು ನಷ್ಟ ಉಂಟಾಗಿದೆ, ಪುತ್ರ ಶೋಕ ನಿರಂತರ ಎಂಬಂತೆ ಇತ್ತೀಚೆಗೆ ಅವರ ಸಂಪರ್ಕ ಸಾದ್ಯವಾಗಿಲ್ಲ.
ಮೊದಲೆಲ್ಲ ಈ ಕಡೆ ಬಂದಾಗ ನಮ್ಮಲ್ಲಿ ಬಂದು ಹೋಗುತ್ತಿದ್ದರು.
Comments
Post a Comment