Blog number 1832. ಉಡುಪಿಯ ಕಲ್ಪರಸ ರೈತ ಉತ್ಪಾದಕ ಕಂಪನಿಯ ತೆಂಗಿನ ಬೆಳೆಯ ಮೌಲ್ಯವರ್ಧನೆ ಮತ್ತು ಈ ಸಂಸ್ಥೆಯ ಆರೋಗ್ಯಕರ ಉತ್ಪಾದನೆಗಳಾದ ನೀರಾ ಮತ್ತು ನೀರಾದ ಬೆಲ್ಲ.
https://youtu.be/z0LG3BMnHe8?feature=shared
#ಒರಿಜನಲ್_ನೀರಾ_ಬೆಲ್ಲಕ್ಕೆ_ಹುಡುಕುತ್ತಿದ್ದೆ.
#ಉಡುಪಿ_ಕಲ್ಪರಸ_ರೈತ_ಉತ್ಪಾದಕ_ಕಂಪನಿ_ತಯಾರಿಸಿ_ಮಾರಾಟ_ಮಾಡುತ್ತಿದೆ.
#ನೀರಾದಿಂದ_ತಯಾರಿಸಿದ_ಈ_ಬೆಲ್ಲದ_ದರ_ಕೇಜಿಗೆ_ಒಂದು_ಸಾವಿರ.
#ಕಲ್ಪರಸ_ಲೀಟರಿಗೆ_250_ರೂಪಾಯಿ
#ಮದುಮೇಹಿಗಳೂ_ಕುಡಿಯಬಹುದು.
ಕರಾವಳಿಯಲ್ಲಿ ಒ0ದು ಕಾಲದಲ್ಲಿ ಓಲೆ ಬೆಲ್ಲ / ತಾಳೆ ಬೆಲ್ಲ ಎಂದು ಕರೆಯುವ ಹನಿ ಬಂಡದ ಮರದಿಂದ ತೆಗೆದ ನೀರಾದಿಂದ ಬೆಲ್ಲ ತಯಾರಿಸಿ ಅದನ್ನು ಚಕ್ರಾಕಾರವಾಗಿರುವ ಅಚ್ಚಿನಲ್ಲಿ ಹಾಕಿ ಅದರ ಅಂಚೆಗೆ ತಾಳೆಗರಿ ಸುತ್ತಿ ನಂತರ ಹತ್ತಾರು ಓಲೆ ಬೆಲ್ಲದ ಚಕ್ರಗಳನ್ನು ಈ ಮರದ ಒಣ ಎಲೆಗಳಿಂದ ಮಾಡಿದ ಕೊಟ್ಟಿಯ ಪಟ್ಟಣದಲ್ಲಿ ಪ್ಯಾಕ್ ಮಾಡಿ ಮಾರಾಟ ಮಾಡುತ್ತಿದ್ದರು.
ನಂತರ ಈ ಕಾಯಕ ಮಾಡುವವರು ಕಡಿಮೆ ಆದರು, ಮಾರಾಟ ಕೂಡ ಕಡಿಮೆ ಆದ್ದರಿಂದ ಈ ಬೆಲ್ಲ ತಯಾರಿಯೂ ಕಡಿಮೆ ಆಯಿತು ಈ ಜಾಗದಲ್ಲಿ ಕಬ್ಬಿನ ಆಲೆಮನೆ ಬೆಲ್ಲಕ್ಕೇ ಓಲೆ ಬೆಲ್ಲದ ಸಿಂಗಾರದ ಪ್ಯಾಕಿಂಗ್ ಮಾಡಿ ಮಾರಾಟ ಮಾಡುವ ಕೌಶಲ್ಯದ ವ್ಯಾಪಾರದಿಂದ ಅನೇಕರು ಮೋಸ ಹೋದಂತೆ ನಾನೂ ಕೂಡ ಖರೀದಿ ಮಾಡಿ ನಂತರ ಬೇಸರ ಪಟ್ಟಿದ್ದೆ.
ಈಗ ಕರಾವಳಿಯಲ್ಲಿ ವೈಜ್ಞಾನಿಕ ಮಾದರಿಯಲ್ಲಿ ಸರ್ಕಾರದ ಲೈಸೆನ್ಸ್ ಪಡೆದು ಕಲ್ಪರಸ (ನೀರಾ) ಸಂಸ್ಕರಣೆ ಮಾಡಿ ಮಾರಾಟ ಮಾಡುವ ರೈತ ಉತ್ಪಾದಕ ಕಂಪನಿ ಯಶಸ್ವಿಯಾಗಿ ಅನೇಕ ಕಡೆ ತನ್ನ ಮಾರಾಟ ಮಳಿಗೆಗಳನ್ನು ತೆರೆದಿದೆ.
ಈ ಮೊದಲು ಕುಂದಾಪುರ ಹೋದವರಿಂದ ಕಲ್ಪ ರಸ ತರಿಸುತ್ತಿದ್ದೆ, ಇನ್ನೂರ ಐವತ್ತು ರೂಪಾಯಿಗೆ ಒಂದು ಲೀಟರ್ ನಂತೆ ಮಾರಾಟ ಮಾಡುತ್ತಾರೆ ಇದನ್ನು ಪ್ರಿಜ್ ಲ್ಲಿಟ್ಟು ಬೇಸಿಗೆಯಲ್ಲಿ ಕುಡಿಯಲು ತುಂಬಾ ಚೆನ್ನಾಗಿರುತ್ತದೆ ಇದನ್ನು ಮದುಮೇಹಿಗಳು ಕುಡಿಯಬಹುದೆಂದು ಬಾಟಲ್ ಮೇಲೆ ನಮೂದಿಸಿದ್ದಾರೆ.
ನಿನ್ನೆ ಕಲ್ಪ ರಸದ ಜೊತೆ ಈ ಸಂಸ್ಥೆ ತಯಾರಿಸಿದ ನೀರಾ ಬೆಲ್ಲ ಕೂಡ ಕುಂದಾಪುರದಿಂದ ನಮ್ಮ ಅಣ್ಣ ತಂದುಕೊಟ್ಟಿದ್ದಾರೆ ಈ ಬೆಲ್ಲದ ಬೆಲೆ ಕಿಲೋಗೆ ಒಂದು ಸಾವಿರ!! .... ನೀರಾದ ಬೆಲ್ಲ ತಯಾರಿ ವೆಚ್ಚ ಹೆಚ್ಚು ಆದ್ದರಿಂದ ಈ ಬೆಲೆ ಇದೆ, ರುಚಿ ಆರೋಮಾ ಆ ಕಾಲದ ಓಲೆ ಬೆಲ್ಲದ ನೆನಪು ತರಿಸಿತು.
ಸಂಪ್ರದಾಯಿಕ ಚಕ್ರಾಕಾರದ ರೂಪದಲ್ಲಿ ಈ ಬೆಲ್ಲ ಇಲ್ಲ, ಈಗಿನ ಆಧುನಿಕ ಚಾಕಲೇಟ್ ತುಂಬಿರುವಂತ ಡಬ್ಬಗಳಲ್ಲಿ ಬೆಲ್ಲದ ತುಣುಕುಗಳ ತುಂಬಿ ಮಾರಾಟ ಮಾಡುತ್ತಿದ್ದಾರೆ.
ಏನೇ ಆಗಲಿ ನೀರಾದ ಒರಿಜಿನಲ್ ಬೆಲ್ಲ ಪುನಃ ಮಾರುಕಟ್ಟೆಯಲ್ಲಿ ಸಿಗುತ್ತಿರುವುದು ಸಂತೋಷದ ಸುದ್ದಿ ಮತ್ತು ಕಲ್ಪ ರಸ ರೈತ ಉತ್ಪಾದಕ ಕಂಪನಿಯ ಈ ತೆಂಗು ಮೌಲ್ಯವರ್ಧನೆಯ ಉದ್ಯಮದಿಂದ ತೆಂಗು ಬೆಳೆಗಾರರಿಗೆ ಇದರಿಂದ ಹೆಚ್ಚಿನ ಲಾಭ ಪಡೆಯಲು ಕಾರಣವಾಗಿದೆ.
Comments
Post a Comment