#ಇಂದಿರಾಗಾಂಧಿ ಉಕ್ಕಿನ ಮಹಿಳೆ ಇಂದಿರಾಗೆ ಕಲ್ಲೆಸೆದ ಶಿವಮೊಗ್ಗದ ಕಹಿ ಘಟನೆಗೆ 47ವರ್ಷ. ಇವತ್ತು ಇಂದಿರಾ 107ನೇ ಹುಟ್ಟುಹಬ್ಬ ಮುಚ್ಚಿಟ್ಟ ಕಾಂಗ್ರೇಸ್ ಇತಿಹಾಸದ ಪುಟ. #IndiraGandhi #RahulGandhi #RahulGandhinews #shivamogga #ShivamoggaNews #congressgovernment #congress2024 ಇವತ್ತು ದೇಶದ ಉಕ್ಕಿನ ಮಹಿಳೆ ಮೊದಲ ಮಹಿಳಾ ಪ್ರಧಾನಿ ಇಂದಿರಾರ 107ನೇ ಹುಟ್ಟುಹಬ್ಬ. 19- ನವೆಂಬರ್ -1917 ಇಂದಿರಾರ ಜನ್ಮ ದಿನ ಅವತ್ತು ಇಂದಿರಾ ಗಾಂಧಿ ಅವರ 60ನೇ ಹುಟ್ಟುಹಬ್ಬಕ್ಕೆ 20 ದಿನ ಬಾಕಿ ಇತ್ತು, ಅದಕ್ಕೂ ಮೊದಲು ಅಂದರೆ ದಿನಾಂಕ 30 ಅಕ್ಟೋಬರ್ 1977ರಂದು ಶಿವಮೊಗ್ಗದಲ್ಲಿ ಕಾಂಗ್ರೇಸ್ ಪಕ್ಷ ಬಹಿರಂಗ ಸಭೆಯೊಂದನ್ನು ಹಮ್ಮಿಕೊಂಡಿತ್ತು ಈ ಸಭೆಯನ್ನು ಉದ್ದೇಶಿಸಿ ಶ್ರೀಮತಿ ಇಂದಿರಾ ಗಾಂಧಿ ಮಾತಾಡುವವರಿದ್ದರು. ಈ ಸಭೆ ಮುಗಿದ ನಂತರ ತೀರ್ಥಹಳ್ಳಿ ಮಾರ್ಗವಾಗಿ ಶೃಂಗೇರಿ ಮೂಲಕ ಅವರು ಮಂಗಳೂರು ತಲುಪುವ ಕಾರ್ಯಕ್ರಮದ TP ನಿರ್ಧಾರವಾಗಿತ್ತು. ಆ ದಿನ ಶಿವಮೊಗ್ಗದಲ್ಲಿ ಇಂದಿರಾ ಗಾಂಧಿ ನೋಡಲು ಜಿಲ್ಲೆಯ ಮೂಲೆ ಮೂಲೆಯಿಂದ ಸಹಸ್ರಾರು ಜನ ಸ್ವಯಂ ಪ್ರೇರಣೆಯಿಂದ ಬಂದಿದ್ದರು, ಇಂದಿರಾ ಗಾಂಧಿ ಈ ಯಶಸ್ವಿ ಸಭೆ ನಡೆಸಿ ತೀರ್ಥಹಳ್ಳಿಗೆ ನಿರ್ಗಮಿಸುವ ಮಾರ್ಗದಲ್ಲಿ ಇಂದಿರಾರ ಕಾರಿಗೆ ಕಲ್ಲು ಹೊಡೆಯುವ ಹೇಯ ಕೃತ್ಯಕ್ಕೆ ತಯಾರಿ ಒ0ದು ರಹಸ್ಯವಾಗಿ ನಡೆದಿತ್ತು. ಶಿವಮೊಗ್ಗ ತೀರ್ಥಹಳ...