ಶತಮಾನಗಳ_ಹಿಂದಿನ_ಶಾಸನಗಳಲ್ಲಿ_ಅಡಿಕೆ. ಸಾವಿರ ವರ್ಷಗಳ ಹಿಂದೆ ಅಡಿಕೆ ಪ್ರಮುಖ ಬೆಳೆ ಆಗಿತ್ತು ಮತ್ತು ಅಡಿಕೆಗೆ ತೆರಿಗೆ - ಸುಂಕಗಳನ್ನ ವಿದಿಸಲಾಗಿತ್ತೆಂಬ ಶಾಸನಗಳು ಅಡಿಕೆ ಬಗ್ಗೆ ಹೆಚ್ಚಿನ ಬೆಳಕು ಚೆಲ್ಲಿದೆ. ಹತ್ತನೆ ಶತಮಾನದಲ್ಲಿ ಈಗಿನ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ಕಪ್ಪನಹಳ್ಳಿ ಮತ್ತು ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನ ನ್ಯಾಮತಿಯ ಅಡಿಕೆಗೆ ಹೆಚ್ಚು ಬೇಡಿಕೆ ಇತ್ತು. ಮತ್ತು ಹನ್ನೆರಡನೆ ಶತಮಾನದಲ್ಲಿ ಶಾಸನಗಳಲ್ಲಿ ಅಡಿಕೆ ಉಲ್ಲೇಖಗಳ ಸಂಗ್ರಹಿಸಿ ಬರೆದಿದ್ದಾರೆ ಶಿವಮೊಗ್ಗ ಜಿಲ್ಲೆಯ ಇತಿಹಾಸ ಸಂಶೋದಕರಾದ ರಮೇಶ್ ಹಿರೇಜಂಬೂರ್. ಇತ್ತೀಚಿಗೆ ನಮ್ಮ ಊರಿನ ಸಮೀಪದ ಇರುವಕ್ಕಿಯ ನೂತನ ಶಿವಪ್ಪ ನಾಯಕ ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿಗಳು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಅಡಿಕೆಗೆ ದೇಶದಾದ್ಯಂತ ಬೇಡಿಕೆ ಇರುವುದು ಅಂಕಿಅಂಶಗಳ ಮಾಹಿತಿ ಪ್ರಕಾರ ಸಂಗ್ರಹಿಸಿದ್ದಾರೆ ಇದು ಪತ್ರಿಕೆಗಳಲ್ಲಿ ದೊಡ್ಡ ಸುದ್ದಿ ಆಗಿದೆ. ಶಿರಾಳಕೊಪ್ಪದ ರಮೇಶ್ ಹಿರೇಜಂಬೂರ್ ನಮ್ಮ ಜಿಲ್ಲೆಯ ಇತಿಹಾಸ ಸಂಶೋದಕರು ಅವರು ಕದಂಬರ ತಾಳಗುಂದದ ಶಾಸನಗಳ ಸಂಶೋದನೆಗಾಗಿ ಹೆಚ್ಚು ಶ್ರಮಪಟ್ಟಿದ್ದಾರೆ. ಅವರು 10ನೇ ಶತಮಾನದಲ್ಲಿ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ಕಪ್ಪನಳ್ಳಿ ಊರಿನ ಅಡಿಕೆ ಮತ್ತು ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲ್ಲೂಕ...