Skip to main content

Posts

Showing posts with the label Jonas Salk invented polio vaccine

Blog number 1192. ಜಗತ್ತನ್ನು ಪೋಲಿಯೋ ಮುಕ್ತ ಮಾಡಿದ ಪೋಲಿಯೋ ಲಸಿಕೆ ಸಂಶೋದಿಸಿದ ಜೋನಾಸ್‌ ಸಾಲ್ಕ್.

ಈ ಭೂಮಿಯ ಮೇಲಿನ ಕೊಟ್ಯಂತರ ಮಕ್ಕಳ ಪಾಲಿಗೆ ದೇವರ ರೂಪದಲ್ಲಿ ಬಂದು ಫೋಲಿಯೋ ಹನಿಗಳನ್ನು ಕೊಡುಗೆಯಾಗಿ ಕೊಟ್ಟು ಹೋದ ಮಹಾನುಭಾವ ಜೋನಾಸ್ ಸಾಲ್ಕ್.🌿 1950ರ ದಶಕದಲ್ಲಿ ಅಣು ಬಾಂಬ್ ನಷ್ಟೇ ವಿನಾಶಕಾರಿ ಎಂಬ ಅಪಖ್ಯಾತಿ ಗಳಿಸಿದ್ದ  ಫೋಲಿಯೋ ರೋಗಕ್ಕೆ ಚುಚ್ಚು ಮದ್ದು ಕಂಡು ಹಿಡಿದಿದ್ದು ಇವರ ವಿದ್ಯೆ-ಬುದ್ದಿವಂತಿಕೆಗೆ ಸಾಕ್ಷಿಯಾದರೆ, ತಾವು ಕಂಡು ಹಿಡಿದ ಈ ಚುಚ್ಚು ಮದ್ದಿಗೆ ಪೇಟೆಂಟ್ ಪಡೆಯದೇ ಯಾರಾದರು, ಯಾವ ದೇಶವಾದರೂ ಪುಕ್ಕಟೆಯಾಗಿ ಈ ಔಷಧಿಯನ್ನು ಬಳಸಿಕೊಳ್ಳಿ, ಇದಕ್ಕೆ ನನ್ನ ಅನುಮತಿ ಬೇಕಿಲ್ಲ  ಎಂದದ್ಡು ಅವರಲ್ಲಿದ್ದ ಮಾನವೀಯತೆಗೆ ಸಾಕ್ಷಿ. ಭಾನುವಾರ ಪೊಲೀಯೋ ಲಸಿಕೆ ದಿನ.. ನಮ್ಮ ಸರಕಾರಗಳು, ನಮ್ಮ ಜನನಾಯಕರು ಈ ಪೊಲೀಯೋ ಲಸಿಕೆ ಕಾರ್ಯಕ್ರಮದ ಪೋಸ್ಟರ್ ಗಳಲ್ಲಿ ಸಿನಿಮಾ ನಟರ ಪಕ್ಕ ಇವರಿಗೂ ಒಂದು ಅಂಗುಲ ಜಾಗ ನೀಡುವುದೇ ನಾವು ಅವರಿಗೆ ಸಲ್ಲಿಸಬಹುದಾದ ದೊಡ್ಡ ಗೌರವ. "ನೂರಾರು ಕೋಟಿ ಸಂಪಾದಿಸಬಹುದಾಗಿದ್ದ ಈ ಲಸಿಕೆಗೆ ನೀವು ಏಕೆ ಪೇಟೆಂಟ್ ಪಡೆಯಲಿಲ್ಲ?" ಎಂದು ಯಾರೋ ಕೇಳಿದ ಪ್ರಶ್ನೆಗೆ ಜೋನಾಸ್ ರವರ ಉತ್ತರ ಹೀಗಿತ್ತಂತೆ.. “Well, the people. There is no patent. Could you patent the sun?”