Skip to main content

Posts

Showing posts with the label Karkikoppa Mahadev Very good social worker

ಜನ ಸಾಮಾನ್ಯರ ಜನನಾಯಕ ಕರ್ಕಿಕೊಪ್ಪದ ಮಹಾದೇವರ ಅಗಲಿಕೆ ಈ ಭಾಗದಲ್ಲಿಯ ಜನತೆಗೆ ವಿಷಾದ ಮತ್ತು ಮೌನಕ್ಕೆ ಕಾರಣವಾಗಿದೆ.

#ಕರ್ಕಿಕೊಪ್ಪದ_ಮಹಾದೇವ_ಜನಸಾಮಾನ್ಯರ_ಆಪತ್ಕಾಲದ_ಬಂಧು_ಆಗಿದ್ದರು. #ಕರಾವಳಿಯಿಂದ_ಉದ್ಯೋಗ_ಹುಡುಕಿ_ವಲಸೆ_ಬಂದ_ಕುಟುಂಬದವರು. #ಈ_ಸಾವು_ನ್ಯಾಯವೆ?   ಮೊನ್ನೆ ಮಾರ್ಚ್ 9 ರ ತನಕ ಎಡಜಿಗಳೆಮನೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬಡವರ, ಕೂಲಿಕಾರ್ಮಿಕರ ಆಪತ್ಕಾಲಕ್ಕೆ ಸದಾ ಸಹಾಯಕ್ಕೆ ಮುಂದಾಗುತ್ತಿದ್ದ ಕರ್ಕಿಕೊಪ್ಪದ ಮಹಾದೇವ ಸಣ್ಣವಯಸ್ಸಲ್ಲಿ ಇಹಲೋಕ ತ್ಯಜಿಸಿದ ಸುದ್ದಿ ಆ ಭಾಗದಲ್ಲಿ ಇವತ್ತಿನ ತನಕ ಜನಮಾನಸದಲ್ಲಿ ಒ0ದು ರೀತಿಯ ವಿಷಾದ ಮತ್ತು ಮೌನ ಉಂಟಾಗಿದೆ.   1993 ರಲ್ಲಿ ಸಾಗರ ತಾಲೂಕಿನ ಗ್ರಾಮ ಪಂಚಾಯತ್ ಚುನಾವಣೆಗಳು ಹೊಸ ಮುಖಗಳ ಆಯ್ಕೆಯಲ್ಲಿ ಮಹಾದೇವ ಆಯ್ಕೆ ಆಗಿ ಯಡಜಿಗಳೆಮನೆ ಅಧ್ಯಕ್ಷರಾದರು ಆಗ ನಾನು ಯಡೇಹಳ್ಳಿ ಗ್ರಾಮ ಪಂಚಾಯತ್ ನಿಂದ ಆಯ್ಕೆ ಆಗಿದ್ದೆ ನಾವೆಲ್ಲ ಸೇರಿ ಸಾಗರ ತಾಲ್ಲೂಕ್ ಗ್ರಾಮ ಪಂಚಾಯತ್ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಒಕ್ಕೂಟ ಒಂದನ್ನು ಮಾಡಿಕೊಂಡಿದ್ದೆವು.   ನಂತರ 1995ರಲ್ಲಿ ನಾನು ಜಿಲ್ಲಾ ಪಂಚಾಯತ್ ಸದಸ್ಯನಾದಾಗ ಇವರ ಭಾಗದಿಂದ ಸಜ್ಜನ ಎಂ.ಜಿ.ಕೃಷ್ಣಮೂರ್ತಿ ಜಿಲ್ಲಾ ಪಂಚಾಯತ್ ಸದಸ್ಯರಾದರು, ಮಹಾದೇವ ಮತ್ತು ಎಂ.ಜಿ. ಜೊತೆ ಜೊತೆಗೆ ಅಭಿವೃದ್ಧಿ ಕೆಲಸದಲ್ಲಿ ಮುಂದುವರಿದಾಗ ನಮ್ಮ ಸಂಬಂದ ಕೂಡ ಮುಂದುವರಿದಿತ್ತು.   ಈ ಸಂದರ್ಭದಲ್ಲಿಯೇ ಇವರ ಸಹೋದರ ಲಾರಿ ಮಾಲಿಕ ರಾಜು ಕೂಡ ಅಕಾಲ ಮೃತ್ಯುವಶವಾದಾಗ ನಾನು ಮತ್ತು ಬೀಮನೇರಿ ಶಿವಪ್ಪ ಅಂತ್ಯ ಸಂಸ್ಕಾರಕ್ಕೆ ಹೋಗಿದ್ದ ನೆನ...