Blog number 1267. ಸಾಕುಪ್ರಾಣಿಯಾಗಿ ಬಿಳಿ ಇಲಿ ಸಾಕುವ ವಿಚಾರ ಅನೇಕರಿಗೆ ತಿಳಿದಿಲ್ಲ, ಬಿಳಿ ಇಲಿ ಸಾಕಿದರೆ ಬೇರೆ ಇಲಿ ಬರುವುದಿಲ್ಲ, ವೈಟ್ ಮೌಸ್ ಎನ್ನುವ ಬುದ್ಧಿವಂತ ಇಲಿಗಳು ಮಾಲಿಕರ ಜೊತೆ ಬೇಗ ಹೊಂದಿಕೊಳ್ಳುತ್ತದೆ, ಬೆಂಗಳೂರು ಮೈಸೂರಿನಲ್ಲಿ ಬಿಳಿ ಇಲಿ ಸಾಕುವವರಿದ್ದಾರೆ.
#ಬಿಳಿ_ಇಲಿ_ಮನೆಗಳಲ್ಲಿ_ಸಾಕುಪ್ರಾಣಿಯಾಗಿ_ಸಾಕುತ್ತಾರೆಂಬುದು_ಬಹಳ_ಜನರಿಗೆ_ಗೊತ್ತಿಲ್ಲ. #ಮೈಸೂರು_ಬೆಂಗಳೂರಲ್ಲಿ_ಮಾತ್ರವಲ್ಲ_ವಿಶ್ವದಾದ್ಯಂತ_ಇಲಿ_ಸಾಕುಪ್ರಾಣಿ. #ಈ_ಬಗ್ಗೆ_ಬಹಳ_ಹಿಂದೆ_ಬರೆದ_ಲೇಖನ_ಕಳೆದು_ಹೋಗಿದೆ. #ಇವತ್ತು_ಆಕೃತಿಕನ್ನಡದಲ್ಲಿ_ಇವತ್ತಿನ_ಲೇಖನ_ಇಲಿ_ಪ್ರಬೇದದ_ಬಗ್ಗೆ_ಓದಿ_ನೆನಪಾಯಿತು. #ಬಿಳಿ_ಇಲಿ_ಸಾಕಿದರೆ_ಬೇರೆ_ಇಲಿ_ಬರುವುದಿಲ್ಲ. ಇವತ್ತು ಶಾಲಿನಿ ಹೂಲಿ ಪ್ರದೀಪರ #ಆಕೃತಿ_ಕನ್ನಡದಲ್ಲಿ ಒಂದು ಇಲಿಗಳ ಪ್ರಬೇದದ ಬಗ್ಗೆ #ಶಕುಂತಲಾಶ್ರೀಧರ್ ಅವರ ಅನುಭವದ ಕಥನ ಪ್ರಕಟವಾಗಿತ್ತು ಅದನ್ನು ಓದಿದಾಗಲೇ ಸುಮಾರು 20 ವರ್ಷದ ಹಿಂದೆ ರೈಲಿನ ಸಹ ಪ್ರಯಾಣಿಕರಿಂದ ತಿಳಿದ ಬಿಳಿ ಇಲಿ ಸಾಕು ಪ್ರಾಣಿಯ ವೃತ್ತಾಂತ ನೆನಪಾಯಿತು. 2010ರಲ್ಲಿ ನನ್ನ ಲ್ಯಾಪ್ ಟಾಪ್ ನಲ್ಲಿ ಪೇಸ್ ಬುಕ್ ನಲ್ಲಿ ಬರೆದ ಲೇಖನ ಹುಡುಕಿದೆ ಆದರೆ ಸಿಗಲಿಲ್ಲ ಆಗ ಬ್ಲಾಗ್ ಇರಲಿಲ್ಲ. ಒಮ್ಮೆ ಬೆಂಗಳೂರಿಂದ ರೈಲಿನಲ್ಲಿ ಬರುವಾಗ ಪರಿಚಯವಾದ ಮೈಸೂರಿನ ಸಹ ಪ್ರಯಾಣಿಕರು ತುಮಕೂರಿನ ಮಗಳ ಮನೆಗೆ ಪ್ರಯಾಣಿಸುತ್ತಿದ್ದರು, ತಮ್ಮ ಜೊತೆ ಒಯ್ಯುತ್ತಿದ್ದ ಎರೆಡು ಬಿಳಿ ಇಲಿಗೆ ಕಾಳುಗಳನ್ನು ಕೊಡುವುದು ನೋಡಿ ಆಶ್ಚರ್ಯದಿಂದ ಕೇಳಿದಾಗಲೇ ಗೊತ್ತಾಗಿದ್ದು ಅದು ಅವರು ಸಾಕುತ್ತಿರುವ ಸಾಕು ಪ್ರಾಣಿ ಬಿಳಿ ಇಲಿಗಳು. ಅವರ ಪತ್ನಿ ಇಹಲೋಕ ತ್ಯಜಿಸಿದ್ದರಿಂದ ಒಂಟಿ ಜೀವನ ಅವರದ್ದು ಮಗಳ ಮನೆಗೆ ಹೋಗುವಾಗ...