Skip to main content

Posts

Showing posts with the label Dandigesara Nandyanna our family friend of 5 dicade

Blog number 1686. ದಂಡಿಗೆಸರದ ನಂದ್ಯಣ್ಣ ನಮ್ಮ ಕುಟುಂಬದ ಆಪ್ತರು ಅವರು ನಮ್ಮ ತಂದೆಯ ಅತ್ಯಾಪ್ತರು ಇನ್ನು ಅವರು ನೆನಪು ಮಾತ್ರ.

#ಹುಟ್ಟು_ಅನಿಶ್ಚಿತ_ಸಾವು_ನಿಶ್ಚಿತ #ನಮ್ಮ_ಕುಟುಂಬದ_ಆಪ್ತರಾದ_ದಂಡಿಗೆಸರದ_ನಂದ್ಯಣ್ಣ_ಇನ್ನಿಲ್ಲ #ಶ್ರಮಜೀವಿ_ಅಸಾಧ್ಯ_ಕೋಪ_ಆದರೆ_ಹೃದಯವಂತರು. #ನಮ್ಮ_ತಂದೆಗೆ_ಅತ್ಯಾಪ್ತರು_ನಮ್ಮ_ಮನೆಯ_ಎಲ್ಲಾ_ಕಷ್ಟ_ಸುಖದಲ್ಲಿ_ಭಾಗಿಯಾದವರು.   ಮೊನ್ನೆ ಬುಧವಾರ ನಂದ್ಯಣ್ಣರನ್ನು ನೋಡಲು ಅವರ ಊರಾದ ಸೊರಗುಂದದ ದಂಡಿಗೆಸರಕ್ಕೆ ಹೋಗಿದ್ದೆ ಅವರಿಗೆ ಪ್ರಜ್ಞೆ ಇರಲಿಲ್ಲ ಅದರ ಹಿಂದಿನ ರಾತ್ರಿ ದೀರ್ಘ ರಾತ್ರಿವರೆಗೆ ಅವರೆಲ್ಲ ಇಲ್ಲಿಗೆ ( ಘಟ್ಟಕ್ಕೆ ) ತಂದೆ ಕಾಲದಲ್ಲಿ ಬಂದದ್ದು, ಹರತಾಳಿನಲ್ಲಿ ಮೊದಲು ನೆಲೆಸಿದ್ದು ಇತ್ಯಾದಿ ಎಲ್ಲಾ ನೆನಪು ಮಾಡಿದರಂತೆ ಜೊತೆಗೆ ನಮ್ಮ ಮನೆ ವಿಚಾರ ಕೂಡ ಪ್ರಸ್ತಾಪಿಸಿದರೆಂದು ಅವರ ಪತ್ನಿ ಗಿರಿಜಕ್ಕ ಹೇಳುವಾಗ ನನಗೆ ಹಿಂದಿನ ನೆನಪುಗಳ ಚಕ್ರ ತಿರುಗಲು ಪ್ರಾರಂಭ ಆಯಿತು.   1970 ರಲ್ಲಿ ನನಗೆ 5 ವರ್ಷ ನಮ್ಮ ತಂದೆಗೆ 34 ವರ್ಷ ನಂದ್ಯಣ್ಣರಿಗೆ 24 ವರ್ಷ ಇರಬೇಕು ಅವರು ನಮ್ಮ ತಂದೆಗೆ ಅತ್ಯಾಪ್ತ ಗೆಳೆಯರು ಆಗಲೇ ನಂದ್ಯಣ್ಣ ಯಾರಿಗೂ ಹೇಳದೆ ಒಬ್ಬರೇ ಮನೆ ಬಿಟ್ಟು ಬೊಂಬಾಯಿಗೆ ಹೋದರೆಂಬ ಸುದ್ದಿ ನಮಗೆಲ್ಲ ಕಣ್ಣೀರು ತರಿಸಿತ್ತು.    ನಂದ್ಯಣ್ಣರ ತಂದೆ ಪುಟ್ಟ ಶೇರೆಗಾರರು ಮತ್ತು ಹಾದಿಬೀಸಿನ ಮೊಯಿದೀನ್ ಸಾಹೇಬರು ನಮ್ಮ ಆನಂದಪುರಂಗೆ ಯಕ್ಷಗಾನ ಬಂದಾಗ ಖಾಯಂ ಪ್ರೇಕ್ಷಕರು, ಯಕ್ಷಗಾನ ನೋಡಿ ಬೆಳಿಗ್ಗೆ ಯಡೇಹಳ್ಳಿ ವೃತ್ತದ ನಮ್ಮ ಹುಲ್ಲಿನ ಮನೆಯ ಕಟ್ಟೆ ಮೇಲೆ ಕುಳಿತು ನಮ್ಮ ತಾಯಿ ನಮ್ಮ ಅಜ್ಜಿಯ ಆದೇಶದ ...