Skip to main content

Posts

Showing posts with the label K. Shivaram Memories part -3. shimoga Borewell Mafia curbed by shivaram

Blog number 1984.ಕೆ.ಶಿವರಾಂ ನೆನಪುಗಳು ಭಾಗ-3. ಶಿವಮೊಗ್ಗ ಜಿಲ್ಲಾ ಪಂಚಾಯತಿನಲ್ಲಿದ್ದ ಸರ್ಕಾರದ ಕೋಟ್ಯಾಂತರ ರೂಪಾಯಿ ಗುಳುಂ ಮಾಡುತ್ತಿದ್ದ ಬೋರ್ ವೆಲ್ ಮಾಫಿಯಾಗೆ ಗುದ್ದು ನೀಡಿದ ಶಿವರಾಂ,

#ಕೆ_ಶಿವರಾಂ_ನೆನಪುಗಳು_ಬಾಗ_3. #ಶಿವಮೊಗ್ಗ_ಜಿಲ್ಲಾ_ಪಂಚಾಯತ್_ಬೋರ್_ವೆಲ್_ಮಾಪಿಯಾಗೆ_ಬುದ್ಧಿಕಲಿಸಿದವರು #ಶಿವರಾಂ_ಕಛೇರಿಗೆ_ನುಗ್ಗಿ_ದಾಂದಲೆ_ಮಾಡಿದ_ಬೋರ್_ವೆಲ್_ಗುತ್ತಿಗೆದಾರ #ಆಗಿನ_ಮುಖ್ಯಮಂತ್ರಿ_ಜೆ_ಹೆಚ್_ಪಟೇಲರ_ಸಹೋದರರಿಂದ_ಶಿಪಾರಸ್ಸು #ಪ್ರಬಾವಿ_ಗುತ್ತಿಗೆದಾರನನ್ನ_ಬಂದಿಸಿ_ಕೇಸ್_ದಾಖಲಿಸಿದ_ದಿಟ್ಟ_ಅಧಿಕಾರಿ_ಶಿವರಾಂ #ಅದೇ_ಗುತ್ತಿಗೆದಾರರು_ಮುಂದೆ_ಶಾಸಕರು_ಮಂತ್ರಿಗಳಾದರು.   ಇದೇ ಸಂದರ್ಭದಲ್ಲಿ ನಾನು ಜಿಲ್ಲಾ ಪಂಚಾಯತ್ ನಲ್ಲಿ ಬೋರ್ವೆಲ್ ಬಾವಿ ನಿರ್ಮಾಣದ ದೊಡ್ಡ ಹಗರಣ ಬಯಲು ಮಾಡಿದ್ದೆ.  ಅದೇನೆಂದರೆ ಪ್ರತಿ ವರ್ಷ ಆರ್ಥಿಕ ವರ್ಷದ ಕೊನೆಯಲ್ಲಿ ಕೋಟ್ಯಾಂತರ ರೂಪಾಯಿ ಬೋರ್ವೆಲ್ ಹೊಡೆದಿದ್ದಾಗಿ ಬಿಲ್ ಆಗುತ್ತಿತ್ತು ಆದರೆ ವಾಸ್ತವವಾಗಿ ಅಲ್ಲಿ ಬೋರ್ ಹೊಡೆಯುತ್ತಿರಲಿಲ್ಲ, ಬೋರ್ ಪೇಲ್ ಆಯಿತು ಎಂಬ ಅಧಿಕಾರಿಗಳ ದೃಡೀಕರಣ ಇರುತ್ತಿತ್ತು.  ಅದಕ್ಕಾಗಿ ಎಲ್ಲಾ ಇಲಾಖೆಯವರು ಪಾಲುದಾರು ವಾಸ್ತವವಾಗಿ ಅಲ್ಲಿ ಬೋರ್ವೆಲ್ ಇರುತ್ತಿರಲಿಲ್ಲ ಈ ಹಗರಣ ಬಯಲು ಮಾಡಿದಾಗ ಅದು ಆ ವರ್ಷದ ಮಾರ್ಚ್ ತಿಂಗಳಾಗಿತ್ತು.     ಶಿವರಾಂ ಅವರು ತಕ್ಷಣ ಸದರಿ ಸಂಸ್ಥೆಗೆ ಹಣ ಬಿಡುಗಡೆ ಮಾಡಿದಂತೆ ತಡೆ ಹಿಡಿದರು ಇದರಿಂದ ಸಿಟ್ಟಾದ ಆಸಂಸ್ಥೆ ವ್ಯಕ್ತಿಗಳು ಆಗಿನ ಮುಖ್ಯಮಂತ್ರಿ ಜೆ ಹೆಚ್ ಪಟೇಲರ ಸಹೋದರರನ್ನು ಕರೆತಂದು ಶಿವರಾಂ ಅವರ ಛೇಂಬರ್ ನಲ್ಲಿ ಬೆದರಿಕೆ ಹಾಕಿದ್ದರು.   ಇದರಿಂದ ರೊಚ್ಚಿಗೆದ್ದ ಶಿವರಾಂ ಆ ಬೋರ್ ವ...