ಕರ್ಮಯೋಗಿ_ಶ್ರೀಕೃಷ್ಣನ_ಜನ್ಮದಿನ.
ಬದುಕಿಗೆ_ಬೆಳಕಾಗಲಿ_ಗೀತೆಯ_ಸಂದೇಶ.
ದ್ವಾಪರಯುಗದಲ್ಲಿ ಅಧರ್ಮ ಅಳಿಸಿ, ಧರ್ಮವನ್ನು ರಕ್ಷಿಸಲು ಕಾರಾಗೃಹದಲ್ಲಿ ಜನಿಸಿದ ದೇವಕಿನಂದನ, ಯಶೋದೆಯ ಮುದ್ದು ಕಂದ ಶ್ರೀಕೃಷ್ಣನ ಜನ್ಮದಿನವೇ ಈ ಪವಿತ್ರ 'ಕೃಷ್ಣ ಜನ್ಮಾಷ್ಟಮಿ.
ಜ್ಯೋತಿಷ್ಯ ಹಾಗೂ ಪೌರಾಣಿಕ ಕಾಲಗಣನೆಯ ಪ್ರಕಾರ ಶ್ರೀಕೃಷ್ಣನ ಜನನ ಕ್ರಿ.ಪೂ. 3228 ಎಂದು ಪರಿಗಣಿಸಿದರೆ 2026ನೇ ಇಸವಿಯಲ್ಲಿ ಇವತ್ತು ಆಚರಿಸಲಾಗುತ್ತಿರುವುದು ಶ್ರೀಕೃಷ್ಣನ 5253ನೇ ಜನ್ಮಾಷ್ಟಮಿ.
ಹಿಂದೂ ಪುರಾಣ ಮತ್ತು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಶ್ರೀಕೃಷ್ಣನು ಶ್ರಾವಣ ಮಾಸದ ಕೃಷ್ಣ ಪಕ್ಷದ ಅಷ್ಟಮಿ ತಿಥಿಯಂದು ಮಧ್ಯರಾತ್ರಿ 12:00 ಗಂಟೆಗೆ (ನಿಶೀಥ ಕಾಲದಲ್ಲಿ) ಮಥುರೆಯ ಕಾರಾಗೃಹದಲ್ಲಿ ಜನಿಸಿದನು.
ಜ್ಯೋತಿಷ್ಯ ಲೆಕ್ಕಾಚಾರಗಳು ಮತ್ತು ಪೌರಾಣಿಕ ದಾಖಲೆಗಳನ್ನು ಆಧರಿಸಿ ಸಂಶೋಧಕರು ಹಾಗೂ ವಿದ್ವಾಂಸರು ಶ್ರೀಕೃಷ್ಣನ ನಿಖರ ಜನನ ದಿನಾಂಕವನ್ನು ಕ್ರಿ.ಪೂ. 3228 ಜುಲೈ 18 ಅಥವಾ ಜುಲೈ 21 ಎಂದು ಗುರುತಿಸಿದ್ದಾರೆ.
ಹಿಂದೂ ಪಂಚಾಂಗದ ದಿನಾಂಕ ಶ್ರಾವಣ ಮಾಸ, ಕೃಷ್ಣ ಪಕ್ಷದ ಅಷ್ಟಮಿ ತಿಥಿ (ರೋಹಿಣಿ ನಕ್ಷತ್ರ)
ಆಚರಣೆ,ಈ ದಿನವನ್ನೇ ಪ್ರತಿ ವರ್ಷ ಶ್ರೀಕೃಷ್ಣ ಜನ್ಮಾಷ್ಟಮಿ ಅಥವಾ ಗೋಕುಲಾಷ್ಟಮಿ ಎಂದು ಆಚರಿಸಲಾಗುತ್ತದೆ.
ತುಂಟಾಟದ ಬಾಲಗೋಪಾಲನಾಗಿ ಗೋಪಿಯರ ಮನಗೆದ್ದವನು, ಕೊಳಲನೂದಿ ಗೋವುಗಳ ಕಾಯ್ದವನು, ಕಾಳಿಂಗ ಮರ್ದನ ಮಾಡಿ ದುಷ್ಟರನ್ನು ಶಿಕ್ಷಿಸಿದವನು ಮತ್ತು ಕುರುಕ್ಷೇತ್ರದಲ್ಲಿ ಅರ್ಜುನನಿಗೆ ಭಗವದ್ಗೀತೆಯ ತತ್ವಬೋಧೆ ಮಾಡಿದ ಜಗದ್ಗುರು ಶ್ರೀಕೃಷ್ಣ.
ಕೃಷ್ಣನ ಜೀವನ ನಮಗೆ ಕೇವಲ ಭಕ್ತಿಯನ್ನಷ್ಟೇ ಅಲ್ಲ, ಬದುಕಿನ ಪ್ರತಿಯೊಂದು ಹಂತದಲ್ಲೂ ಸಂಕಷ್ಟಗಳನ್ನು ನಗುಮುಖದಿಂದಲೇ ಹೇಗೆ ಎದುರಿಸಬೇಕೆಂಬ ಜೀವನ ಪಾಠವನ್ನು ಕಲಿಸುತ್ತದೆ.
ಫಲದ ನಿರೀಕ್ಷೆಯಿಲ್ಲದೆ ಕರ್ಮ ಮಾಡಬೇಕೆಂಬ ಆತನ ಮಾತು ಇಂದಿನ ಒತ್ತಡದ ಬದುಕಿಗೆ ದಾರಿದೀಪ.
ಮನೆಗಳ ಮುಂದೆ ಪುಟ್ಟ ಪುಟ್ಟ ಹೆಜ್ಜೆಗಳನ್ನಿಟ್ಟು ಕೃಷ್ಣನನ್ನು ಸ್ವಾಗತಿಸುವಂತೆ ನಮ್ಮ ಮನಸ್ಸುಗಳಲ್ಲಿ ಆತನ ಸದ್ಗುಣಗಳು ನೆಲೆಯಾಗಲಿ.
ಮುದ್ದು ಮುರಳೀಧರ ಎಲ್ಲರಿಗೂ ಆಯುಷ್ಯ, ಆರೋಗ್ಯ, ಸುಖ ಮತ್ತು ನೆಮ್ಮದಿಯನ್ನು ಕರುಣಿಸಲಿ.
ನಿಮಗೂ ಹಾಗೂ ನಿಮ್ಮ ಕುಟುಂಬದವರಿಗೂ ಶ್ರೀಕೃಷ್ಣ ಜನ್ಮಾಷ್ಟಮಿಯ ಹಾರ್ದಿಕ ಶುಭಾಶಯಗಳು! ....
#ಕೃಷ್ಣ_ಜನ್ಮಾಷ್ಟಮಿ
#ನನ್ನ_ನೆನಪುಗಳು....
ಕೃಷ್ಣ ನನ್ನ ಅತ್ಯಂತ ಪ್ರೀತಿಯ ದೇವರು, ನಮ್ಮ ತಂದೆ ಹೆಸರು, ನನ್ನ ಭಾವನ ಹೆಸರು ಅಷ್ಟೇಕೆ ನನ್ನ ಮಗನ ಹೆಸರೂ ಕೃಷ್ಣ.
ನಮ್ಮ ರೈಸ್ ಮಿಲ್ ಹೆಸರು ಕೃಷ್ಣಾ ರೈಸ್ ಮಿಲ್ ಆಗಿತ್ತು ಈಗಿನ ನಮ್ಮ ಕಲ್ಯಾಣ ಮಂಟಪದ ಹೆಸರು ಕೃಷ್ಣ ಸರಸ ಕನ್ವೆನ್ಷನ್ ಹಾಲ್,
ನಾನು ಉಡುಪಿ ಕೃಷ್ಣನು ಒಲಿದ ಕನಕದಾಸರ ಭಕ್ತನೂ ಹೌದು, ಕನಕದಾಸರ ಹುಟ್ಟಿದ ಸ್ಥಳ, ಅವರ ಕೋಟೆ, ಅವರು ನೆಟ್ಟಿದ ಅರಳಿ ಮರ, ಅವರು ಬಳಸಿದ ಶಂಖ, ಮರದ ಬಿಕ್ಷಾಪಾತ್ರೆ ಮತ್ತು ಅವರ ಸಮಾದಿಯನ್ನು ಕೂಡ ಸಂದರ್ಶಿಸಿದ್ದೇನೆ.
ಸಮುದ್ರದಲ್ಲಿ ಮುಳುಗಿದ ದ್ವಾರಕೆ ಸಂಶೋದಿಸಿದ S.R. ರಾವ್ ಜನಿಸಿದ್ದು ನಮ್ಮೂರು ಆನಂದಪುರಂ ನಲ್ಲಿ ಅವರನ್ನು ಬೇಟಿ ಮಾಡಿದ್ದು ಕೂಡ ನನ್ನ ಬಾಗ್ಯ.
ಪುರಿ,ದ್ವಾರಕೆ ಮತ್ತು ಮಥುರಾ ನೋಡಿ ಬರಲು ಇನ್ನೂ ಕಾಲ ಕೂಡಿ ಬರಲಿಲ್ಲ.
ಪಂಜಾಬಿನ ಜಲಂದರ್ ಪಟ್ಟಣದಲ್ಲಿ ನಾನು ನೋಡಿದ ಜನ್ಮಾಷ್ಟಮಿಯಷ್ಟು ದೊಡ್ಡ ವೈಭವ ನಾನು ಬೇರೆಲ್ಲೂ ನೋಡಿಲ್ಲ, ಆ ದಿನ ಜಲಂದರ್ ನ ಮುಖ್ಯ ರಸ್ತೆಯಲ್ಲಿ ಸಾಗುವ ಬೃಹತ್ ಮೆರವಣಿಗೆಯಿಂದ ರಸ್ತೆ ದಾಟಲು ಗಂಟೆಗಟ್ಟಲೆ ಕಾಯಬೇಕು, ಅತಿ ಹೆಚ್ಚು ಸಿಖ್ ಧರ್ಮಿಯರು ಈ ಮೆರವಣಿಗೆಯಲ್ಲಿ ಭಾಗವಹಿಸುತ್ತಾರೆ.
ನಾನು ಪ್ರತಿ ದಿನ ಪೂಜಿಸುವ ಪಂಚಲೋಹದ ಕಡೆಗೋಲು ಕೃಷ್ಣ ವಿಗ್ರಹ ನೀಡಿದವರು ಮಂಗಳೂರಿನ ಪ್ರದೀಪ್ ಕುಮಾರ್ ಕಲ್ಕೂರರು.
ಕಾಸರಗೋಡಿನಲ್ಲಿ ನಡೆದ ದಾಸ ಸಾಹಿತ್ಯದ ಒ0ದು ಸಭೆಯಲ್ಲಿ ಕಾಸರಗೋಡಿನ ಗಡಿನಾಡ ಕನ್ನಡ ಸಂಘಟನೆಯ ಶಿವರಾಂ ಕಾಸರಗೋಡು ನನ್ನನ್ನು ಆಗಿನ ದ.ಕ.ಜಿಲ್ಲೆಯ ಸಾಹಿತ್ಯ ಪರಿಷತ್ ಅಧ್ಯಕ್ಷರ ಜೊತೆ ವೇದಿಕೆಯಲ್ಲಿ ಕುಳ್ಳಿರಿಸಿದಾಗ ಪ್ರದೀಪ್ ಕುಮಾರ್ ಕಲ್ಕೂರರು ನನಗೆ ನೀಡಿದ ನೆನಪಿನ ಕಾಣಿಕೆ ಇದು.
ಪ್ರದೀಪ್ ಕುಮಾರ್ ಕಲ್ಕೂರರು ಮಂಗಳೂರಿನ ಪ್ರತಿಷ್ಠಿತ ಜಾಹಿರಾತು ಸಂಸ್ಥೆ ಮುಖ್ಯಸ್ಥರು, ಇವರ ಕಲ್ಕೂರ್ ಪ್ರಕಾಶನದಿಂದ ಕನ್ನಡ ಮತ್ತು ತುಳು ಭಾಷೆಯ ಅನೇಕ ಯಕ್ಷಗಾನ ಪುಸ್ತಕ ಪ್ರಕಟಿಸಿದ್ದಾರೆ.
ಇವರ ನೇತೃತ್ವದಲ್ಲಿ ಇವರ ಕಲ್ಕೂರ್ ಪ್ರತಿಷ್ಟಾನದಿಂದ ಪ್ರತಿ ವರ್ಷ ಕೃಷ್ಣ ಜನ್ಮಾಷ್ಟಮಿಗೆ ಮಂಗಳೂರಿನ ಕದ್ರಿ ದೇವಾಲಯದಲ್ಲಿ ಇವರು ನಡೆಸುವ ಮಕ್ಕಳ ಕೃಷ್ಣ ವೇಷ ಸ್ಪರ್ದೆ ತುಂಬಾ ಪ್ರಸಿದ್ದಿ ಪಡೆದಿದೆ.
ಇವತ್ತು ಮಂಗಳೂರಲ್ಲಿ ಇವರ ಪ್ರತಿಷ್ಟಾನದ ಕಾಯ೯ಕ್ರಮ ತುಂಬಾ ಅದ್ದೂರಿಯಾಗಿ ನಡೆದ ವರದಿಗಳು ಇದೆ.
ಪ್ರತಿ ವರ್ಷ ಕೃಷ್ಣಾಷ್ಟಮಿಯಂದು ಪ್ರದೀಪ್ ಕುಮಾರ್ ಕಲ್ಕೂರರು ಈ ರೀತಿ ನೆನಪಾಗುತ್ತಾರೆ.
ಕೃಷ್ಣ ಜನ್ಮಾಷ್ಟಮಿಯ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ.
#KrishnaJanmashtami #JanmashtamiSpecial #ShreeKrishna #HappyJanmashtami #ಕೃಷ್ಣಜನ್ಮಾಷ್ಟಮಿ #ಗೀತಾಉಪದೇಶ #FestivalOfJoy
#KrishnaJanmashtami #JanmashtamiSpecial #ShreeKrishna #HappyJanmashtami #ಕೃಷ್ಣಜನ್ಮಾಷ್ಟಮಿ #ಗೀತಾಉಪದೇಶ #FestivalOfJoy
Comments
Post a Comment