#ಭಾಗ_1. https://youtu.be/sXs_jc79lng #ಕಾರ್ತಿಕಾದಿತ್ಯಬೆಳಗೋಡು_ಕೆಂಜಳಿಲು_ಪ್ರಕಾಶನ_ಮೂಡಿಗೆರೆ #ಚಿಕ್ಕಮಗಳೂರು_ಜಿಲ್ಲೆಯಿಂದ_ಮೂಡಿಬಂದ_ಉದಯೋನ್ಮುಖ_ಸಾಹಿತಿ #ರಾಜೇಶ್ವರಿತೇಜಸ್ವಿ_ಇವರ_ಪುಸ್ತಕ_ಮೆಚ್ಚಿ_ಪ್ರೋತ್ಸಾಹಿಸಿದ್ದರು. #ಪೇಸ್_ಬುಕ್_ಜಗತ್ತಿನಲ್ಲಿ_ಸಿಕ್ಕ_ಮಿತಬಾಷಿ_ಗೆಳೆಯ #ಇವರ_ನಾಲ್ಕು_ಪುಸ್ತಕಗಳು_ಪ್ರಸಿದ್ದಿ_ಪಡೆದಿದೆ #ಕಾಡುಹಾದಿಯಜಾಡುಹತ್ತಿ_ಕಾಟೀಹರದತೀರ_ಪ್ಯಾರಾಸ್ಯೆಟ್_ನಾನುನೀವುಜೊತೆಗಿ೦ದಷ್ಟು #ಶನಿವಾರ_ನನ್ನ_ಕಛೇರಿಯಲ್ಲಿ_ಕುಶಲೋಪರಿ ಮೊನ್ನೆ ಶನಿವಾರ ದಿನಾಂಕ 18- ಪೆಬ್ರುವರಿ-2023ರ ಮಧ್ಯಾಹ್ನ ಚಿಕ್ಕಮಗಳೂರಿನ ಉದಯೋನ್ಮುಖ ಸಾಹಿತಿ ಕಾರ್ತಿಕಾದಿತ್ಯ ಬೆಳಗೋಡು ಅವರು ಪೋನಾಯಿಸಿ ನನ್ನ ಲಾಡ್ಜ್ ಎದುರಿನಿಂದ ಸಿಗಂದೂರು ಹೋಗುವ ದಾರಿಯಲ್ಲಿರುವುದಾಗಿ ತಿಳಿಸಿದಾಗ ಅವರನ್ನು ಆಹ್ವಾನಿಸಿದೆ. ಈಗಾಗಲೇ ಇವರು ಬರೆದು ಪ್ರಕಟಿಸಿರುವ ನಾಲ್ಕು ಪುಸ್ತಕಗಳು "ನಾನು ನೀವು ಜೊತೆಗೊಂದಿಷ್ಟು" -"ಕಾಡು ಹಾದಿಯ ಜಾಡು ಹತ್ತಿ" - "ಕಾಟೇಹರದ ತಿರುವು" - "ಪ್ಯಾರಾ ಸೈಟ್" ಪುಸ್ತಕ ಇವರ ಕೆಂಜಳಿಲು ಪ್ರಕಾಶನದಿಂದ ಕಾನ್ ಕ್ಲೇವ್ ಪಬ್ಲಿಷರ್ ರಿಂದ ಪ್ರಕಟಗೊಂಡು ರಾಜ್ಯದಾದ್ಯಂತ ಸಾಹಿತ್ಯ ಆಸಕ್ತರ ಮನ ಸೆಳೆದಿದೆ. ಕೃಷಿ- UPVC ಗ್ಲಾಸ್ ವಿಂಡೋ ಉದ್ಯಮ - ಬರವಣಿಗೆ - ಶಾಲೆಗಳಲ್ಲಿ ಪರಿಸರ ಜಾಗೃತಿ ಅಭಿಯಾನ - ಪರಿಸರ ವಿಕೋಪಗ...