Skip to main content

Posts

Showing posts with the label Malendu farmers producers company

Blog number 2297. ಸಾಗರದಲ್ಲಿನ ಮಲೆನಾಡು ಗಿಡ್ಡ ರೈತ ಉತ್ಪಾದಕರ ಕಂಪನಿ

#ಮಲೆನಾಡು_ಗಿಡ್ಡ_ದನದ_ತುಪ್ಪ_ಸಾಗರದಲ್ಲಿ #ಬ್ರಾಸಂ_ಸಮೀಪದ_ಡಾ_ಮಂಜಪ್ಪ_ಬಿಲ್ಡಿಂಗ್ #ಈಗ_ಮಲೆನಾಡು_ಗಿಡ್ಡ_ರೈತ_ಉತ್ಪಾದಕರ_ಕಂಪನಿ #ನಾಗೇಂದ್ರಸಾಗರ್_ಮತ್ತು_ರಾಧಾಕೃಷ್ಣಬಂದಗದ್ದೆ_ಮುಖ್ಯಪ್ರವರ್ತಕರು #ಪ್ರಾಯೋಜಕರು_ಪಶುಪಾಲನ_ಮತ್ತು_ಪಶುವೈದ್ಯ_ಸೇವಾ_ಇಲಾಖೆ_ಶಿವಮೊಗ್ಗ. #pureghee #malenadugidda #organicfarming #sagara #farmerscompany    ಅವಸಾನದ ಅಂಚು ತಲುಪಿರುವ ಮಲೆನಾಡು ಗಿಡ್ಡ ಗೋವಿನ ತಳಿ ಸಂರಕ್ಷಣೆ ಮಾಡಲು ಮಲೆನಾಡು ಗಿಡ್ಡ ರೈತ ಉತ್ಪಾದಕರ ಕಂಪನಿ ಶಿವಮೊಗ್ಗ ಜಿಲ್ಲೆಯ ಸಾಗರಪೇಟೆಯಲ್ಲಿ ಕಾರ್ಯಾರಂಭ ಮಾಡಿದೆ.   ಇದಕ್ಕಾಗಿ ಪ್ರಗತಿಪರ ಗೆಳೆಯರಾದ ನಾಗೇಂದ್ರ ಸಾಗರ್ ರಾಧಾಕೃಷ್ಣ ಬಂದಗದ್ದೆ ಕಟ್ಟಿಬದ್ಧರಾಗಿದ್ದಾರೆ, ಇವರ ಒಳ್ಳೆಯ ಉದ್ದೇಶಕ್ಕಾಗಿ ಸಾಗರದ ಖ್ಯಾತ ವೈದ್ಯರಾಗಿದ್ದ ಡಾಕ್ಟರ್ ಮಂಜಪ್ಪನವರ ಪುತ್ರ ಸಂಜಯ್ ಪಾಲಿಟೆಕ್ನಿಕ್ ಅಧ್ಯಾಪಕರಾದ ರವಿಪ್ರಕಾಶ್ ಜೋಸೆಫ್ ನಗರದ ಚರ್ಚ ರಸ್ತೆಯ ತಮ್ಮ ಹಳೆ ಮನೆಯನ್ನು ನೀಡಿದ್ದಾರೆ ಇದರ ಲ್ಯಾಂಡ್ ಮಾರ್ಕ್ ಬ್ರಾಸಂ ಹತ್ತಿರ.    ಇಲ್ಲಿ ಶುದ್ಧ ಮಲೆನಾಡು ಗಿಡ್ಡದ ತುಪ್ಪದ ಜೊತೆ ಗಾಣದಿಂದ ತಯಾರಿಸಿದ ಖಾದ್ಯ ತೈಲಗಳು, ಉಪ್ಪಿನಕಾಯಿ, ಹಪ್ಪಳ, ಅರಿಶಿಣ ಪುಡಿ, ಸೀಗೆಪುಡಿ, ಗೋದಿ ಹಿಟ್ಟು,  ಜೋಳದ ಹಿಟ್ಟು, ಅಕ್ಕಿ ಹಿಟ್ಟು, ರಾಗಿ ಹಿಟ್ಟು,ದೇಸಿ ತಳಿಯ ಕೆಂಪಕ್ಕಿ, ಸೆಮಿ ಪಾಲೀಶ್ ಅಕ್ಕಿ ಇತ್ಯಾದಿ ದೊರೆಯುತ್ತದೆ.     ...