Skip to main content

Posts

Showing posts with the label My childhood memories slept in unfinished open well

Blog number 1194. ಬಾಲ್ಯದಲ್ಲಿ ಬಾವಿಗೆ ಬಿದ್ದು ಬದುಕಿದ್ದು ಮರೆಯಲಾರದ ಅನುಭವ

#ಬಾಲ್ಯದಲ್ಲಿ_ನಾನು_ಬಾವಿಯಲ್ಲಿ_ಬಿದ್ದಿದ್ದೆ #ಪ್ರಜ್ಞೆ_ಬಂದ_ಮೇಲೆ_ಅತ್ತೂ_ಕರೆದರೂ_ಯಾರೂ_ಬರಲಿಲ್ಲ #ನನ್ನಮ್ಮ_ಕಾಣೆಯಾದ_ಮಗನ_ಹುಡುಕಿ_ಬಂದಾಗ_ಬಾವಿಯಿಂದ_ಮೇಲೆತ್ತಿದರು. #ನಮ್ಮೂರ_ಸಮೀಪದ_ತಾವರೇಹಳ್ಳಿಯ_ಗೋಡೆಕೃಷ್ಣಣ್ಣರ_ಮನೆ_ಬಾವಿ  #ಸತ್ಯನಾರಾಯಣ_ಕಥೆಯ_ಆಹ್ವಾನದಲ್ಲಿ_ಹೋಗಿದ್ದು #ಕಿಟ್ಟಾಜೋಯಿಸರು_ಸತ್ಯನಾರಾಯಣ_ಕಥೆ_ಪೂರ್ತಿ_ಹೇಳಿ_ಸಪಾದಭಕ್ಷ್ಯ_ಪ್ರಸಾದ_ವಿತರಣೆ_ತನಕ_ಬಾವಿಯಲ್ಲಿದ್ದೆ.      ಬಹುಶಃ 1968-69ರಲ್ಲಿ ನನಗೆ ಮೂರರಿಂದ ನಾಲ್ಕು ವರ್ಷ ಇರುವಾಗ ನಮ್ಮ ಊರಿನ ಸಮೀಪದ ತಾವರೇಹಳ್ಳಿಯ ನಮ್ಮಜ್ಜಿಯ ಸಂಬಂದಿ ಗೋಡೆ ಕೃಷ್ಣಣ್ಣರ ಮನೆಯಲ್ಲಿ ಸತ್ಯನಾರಾಯಣ ವೃತ ಕಾಯ೯ಕ್ರಮದ ಆಹ್ವಾನ ನೀಡಿದ್ದರಿಂದ ನನ್ನ ತಾಯಿ ನನ್ನನ್ನು ಅಲ್ಲಿಗೆ ಕರೆದೊಯ್ದಿದ್ದರು.     ತಾವರೇಹಳ್ಳಿ ಗೋಡೆ ಕೃಷ್ಣಣ್ಣರ ಮಗ ನಾಗರಾಜ ಈಗಿಲ್ಲ ಇವರ ಮಗ ರಾಘವೇಂದ್ರ ಈಗ ಆನಂದಪುರಂನಲ್ಲಿ ಖ್ಯಾತ ಪೋಟೋಗ್ರಾಪರ್ ಆಗಿದ್ದಾರೆ.    ಅವರ ಮನೆಯಲ್ಲಿ ಅವತ್ತಿನ ಸತ್ಯನಾರಾಯಣ ಕಥೆ ನಡೆಸಿಕೊಡುವ ಅರ್ಚಕರು ಆನಂದಪುರಂನ ಕಿಟ್ಟಾ ಜೋಯಿಸರು.    ಅವರು ಸ್ವಲ್ಪ ತಡವಾಗಿ ಬಂದು ಪೂಜೆ ಪ್ರಾರಂಬಿಸಿ ಕಥೆ ಹೇಳಲು ಪ್ರಾರಂಬಿಸಿದಾಗ ಹಿರಿಯರೆಲ್ಲ ಭಕ್ತಿ ಪರವಶೆಯಿಂದ ಸತ್ಯನಾರಾಯಣ ಕಥೆ ಕೇಳುತ್ತಾ ತಲ್ಲೀನರಾಗಿದ್ದಾಗ ನನ್ನದೇ ವಯೋಮಾನದ ಮಕ್ಕಳೆಲ್ಲ ಮನೆ ಎದುರಿನ ಗದ್ದೆ ಬಯಲಲ್ಲಿ ಆಡುತ್ತಾ ತಿರುಗ...