#ದೇಶದ_ಮೊದಲ_ರೈತ_ಹೋರಾಟ #ಆಗಸ್ಟ್_23_1830ರಂದು #ಶಿವಮೊಗ್ಗ_ಜಿಲ್ಲೆಯ_ಸಾಗರ_ತಾಲೂಕಿನ_ಆನಂದಪುರಂ_ಹೋಬಳಿಯ #ತ್ಯಾಗರ್ತಿ_ಸಮೀಪದ_ಹೊಸಂತೆಯಲ್ಲಿ_ನಡೆದ_ಬೂದಿಬಸಪ್ಪನಾಯಕರ_ರೈತ_ಸಮಾವೇಶ. #ಈ_ವರ್ಷಕ್ಕೆ_195ನೇ_ವರ್ಷ_ಆಚರಣೆ. #Keladikings #Hosante #Tyagarthi #Anandapuram #Sagar #Shivamogga #Raithahorata #Budibasappa 23 ಆಗಸ್ಟ್ 1830ರಲ್ಲಿ ಮೈಸೂರು ಅರಸರ ಜನವಿರೋದಿ ಭೂಕಂದಾಯವಾಗಿದ್ದ ಸುಂಕದ ವಿರುದ್ದ ಆನಂದಪುರಂ ಹೋಬಳಿಯಲ್ಲಿ ನಡೆದ ಬೃಹತ್ ರೈತ ಸಮಾವೇಶಕ್ಕೆ 195ನೇ ವರ್ಷಾಚಾರಣೆ. ಆನಂದಪುರಂ ಹೋಬಳಿಯ ಹೊಸಂತೆ ಊರಿನಲ್ಲಿ ಬೃಹತ್ ರೈತ ಸಮಾವೇಶವನ್ನು ಬೂದಿ ಬಸಪ್ಪ ನಾಯಕರು ಹಮ್ಮಿಕೊಳ್ಳುತ್ತಾರೆ. ಈ ಐತಿಹಾಸಿಕ ರೈತ ಸಮಾವೇಶಕ್ಕೆ ಸಾವಿರಾರು ರೈತರುಗಳು ತಮ್ಮ ನೂರಾರು ಎತ್ತಿನಗಾಡಿಗಳಲ್ಲಿ ಬಂದು ಭಾಗವಹಿಸುತ್ತಾರೆ. ದೂರ ದೂರದ ಊರಿನ ಪ್ರತಿನಿಧಿಗಳೂ ಸೇರುತ್ತಾರೆ. #ಹೊಸಂತೆಯ ಈ ರೈತ ಹೋರಾಟದ ಸಮಾವೇಶದ ಕಿಚ್ಚು ದಿನದಿಂದ ದಿನಕ್ಕೆ ಬೃಹದಾಕಾರ ತಾಳಿ ಮೈಸೂರು ಮಹಾರಾಜರಾದ #ಮುಮ್ಮಡಿ_ಕೃಷ್ಣರಾಜ_ಒಡೆಯರ್ ತಮ್ಮ ರಾಜ್ಯ 4ನೇ ಆಂಗ್ಲೋ ಮೈಸೂರು ಯುದ್ದದಿಂದ ಪರೋಕ್ಷವಾಗಿ ಮೈಸೂರು ಆಡಳಿತ ನಡೆಸುತ್ತಿದ್ದ ಬ್ರಿಟೀಷರಿಗೆ ಬಿಟ್ಟುಕೊಡುವಂತಾಗುತ್ತದೆ (9 ಅಕ್ಟೋಬರ್ 1831) ಮುಂದಿನ 50 ವರ್ಷ ಮೈಸೂರು ಆಡಳಿತ ಬ...