Skip to main content

Posts

Showing posts with the label First Prime minister of india Javaharlal Nehru visited Anandapuram.

ಭಾಗ - 57, ಆನಂದಪುರಂ ಇತಿಹಾಸ, ದೇಶದ ಮೊದಲ ಪ್ರದಾನಿ ಜವಾಹರಲಾಲ್ ರ ಆನಂದಪುರಂ ಬೇಟಿ, ಜೊತೆಗೆ ಪುತ್ರಿ ಇಂದಿರಾಗಾಂಧಿ, ಅಯ್ಯಂಗಾರ್ ಕುಟು೦ಬದ ಸಾರಥ್ಯ ಮತ್ತು ರಾಜ ಪ್ರತಿನಿದಿಗಳಾಗಿದ್ದ ಕಾಗೋಡಿನ ಕೆ.ಜಿ.ಒಡೆಯರ್ ನೇತೃತ್ವ.

#ಭಾಗ_57.  #ಆನಂದಪುರಂ_ಇತಿಹಾಸ #ಆನಂದಪುರಂಗೆ_ಪ್ರದಾನಿ_ನೆಹರೂ. #ಮಗಳು_ಇಂದಿರಾ_ಜೊತೆ_ಜೋಗ್_ಜಲಪಾತ_ಪ್ರವಾಸ. #ಆನಂದಪುರಂ_ಪ್ರೌಡಶಾಲೆ_ಎದರು_ಗಿಡ_ನೆಡುತ್ತಾರೆ.    ಸ್ವಾತಂತ್ರ್ಯ ನಂತರ ದೇಶದ ಪ್ರದಾನ ಮಂತ್ರಿ ಜವಾಹರಲಾಲ್ ನೆಹರೂರವರು ಜೋಗ ಜಲಪಾತ ವೀಕ್ಷಿಸಲು ಬರುವ ಕಾರ್ಯಕ್ರಮ ನಿಗದಿ ಅಗುತ್ತದೆ.     ಶಿವಮೊಗ್ಗ ಮಾರ್ಗವಾಗಿ ಆನಂದಪುರಂ ಮೇಲೆ ಜೋಗ್ ಫಾಲ್ಸ್ ಗೆ ಹೋಗುವುದರಿಂದ ಆನಂದಪುರಂ ನಲ್ಲಿ ಪ್ರದಾನ ಮಂತ್ರಿಗಳು ಒಂದು ಬೇಟಿ ಮಾಡುವ ಕಾರ್ಯಕ್ರಮ ನಿಗದಿ ಮಾಡಿಸಲು ಜಮೀನ್ದಾರ್ ರಾಮಕೃಷ್ಣ ಅಯ್ಯಂಗಾರರು ಮತ್ತು ಅವರ ಪುತ್ರರಾದ ವೆಂಕಟಾಚಲ ಅಯ್ಯಂಗಾರ್ ಮತ್ತು ಬದರಿನಾರಾಯಣಯ್ಯಂಗಾರ್ ಯಶಸ್ವಿ ಆದ ಮತ್ತು ಐತಿಹಾಸಿಕ ಘಟನೆಗೆ ಕಾರಣರಾದ ಘಟನೆ ನಿಜಕ್ಕೂ ರೋಚಕ ಮತ್ತು ರೋಮಾಂಚನದ ವಿಷಯವಾಗಿತ್ತು ಆ ಕಾಲದಲ್ಲಿ.     ಆಗಿನ್ನು ದೇಶದ ಮೊದಲ ಚುನಾವಣೆ ಆಗಿರುವುದಿಲ್ಲ ರಾಜ ಪ್ರತಿನಿದಿಗಳಾಗಿ ಕಾಗೋಡಿನ ಕೆ.ಜೆ. ಒಡೆಯರ್ ನೇಮಕ ಆಗಿರುತ್ತಾರೆ.    ಅಯ್ಯಂಗಾರ್ ಕುಟುಂಬದ ಆತ್ಮೀಯರಾದ ಕೆ.ಜಿ. ಒಡೆಯರ್ (ಶಿವಮೊಗ್ಗ ಲೋಕಸಭಾ ಪ್ರಥಮ ಸದಸ್ಯರಾಗಿ ನಂತರ ಚುನಾವಣೆಯಲ್ಲಿ ಗೆಲ್ಲುತ್ತಾರೆ) ಪ್ರದಾನಿ ನೆಹರೂರವರ ಆನಂದಪುರಂ ಬೇಟಿ ನಿಗದಿಗೊಳಿಸುತ್ತಾರೆ.   ಆನಂದಪುರಂ ಪ್ರೌಡ ಶಾಲೆ ಎದುರಿಗೆ ಇಕ್ಕೆಲದಲ್ಲಿ ಮೈಸೂರು ಮಹಾರಾಜರ ಆ ಕಾಲದಲ್ಲಿ ಮೈಸೂ...