Skip to main content

Posts

Showing posts with the label Very famous writer Srikanta kudige enquired my pet rottweiler Shambhu ram.

Blog number 1709. ನನ್ನ ಪ್ರೀತಿಯ ಶಂಭೂರಾಮನ ಬಗ್ಗೆ ವಿಚಾರಿಸಿದ ಖ್ಯಾತ ಸಾಹಿತಿ ಶ್ರೀಕಂಠ ಕೂಡಿಗೆ .

#ಜ್ಞಾನದ_ಭಂಡಾರವಾಗಿರುವ_ಶ್ರೀಕಂಠ_ಕೂಡಿಗೆ_ಅವರ_ಬೆಳಗಿನ_ಪೋನು. #ಅವರಿಗಾಗಿ_ನನ್ನ_ಪ್ರೀತಿಯ_ಶಂಭೂರಾಮನ_ಸೌತೆಕಾಯಿ_ಸಮರ್ಪಣೆಯ_ಇವತ್ತಿನ_ವಿಡಿಯೋ. #ರಾಟ್_ವೀಲರ್_ನಿನ್ನೆ_ಕೊಡಗಿನಲ್ಲಿ_ಮನೆಗೆ_ಬಂದ_ಆರೋಗ್ಯ_ಕಾಯ೯ಕತೆ೯_ಮೇಲೆ_ದಾಳಿ. https://youtu.be/peEskYb3Vl0     ಬೆಳಿಗ್ಗೆ ಏಳಕ್ಕೆ ಫೋನ್ ಬಂತು "ವಾಕಿಂಗ್ ಮಾಡ್ತಾ ಇದೀರಾ ?"...    ಹೌದು ಸಾರ್ ನಿಮ್ಮ ಆರೋಗ್ಯ ಹೇಗಿದೆ ಅಂದೆ.   "ಆರಾಮಾಗಿದೀನಿ ನಿನ್ನೆ ಬೆಳಿಗ್ಗೆ ಪುಟ್ಟಯ್ಯ ಹೊಸ ಬಾಡಿಗೆ ಮನೆಯಲ್ಲಿದಾರೆ ಒಂದೂವರೆ ಕಿ.ಮಿ ದೂರ ಅಲ್ಲಿಗೆ ವಾಕಿಂಗ್ ನಲ್ಲಿ ಹೋಗಿ ಮಾತಾಡಿಸಿ ಬಂದೆ ನಿಮ್ಮ ಜೊತೆ ರಾಟ್ ವೀಲರ್ ನಾಯಿ ಜೊತೆಗೆ ಇದೆಯಾ? " ಅಂದರು.    ಆ ಸಮಯದಲ್ಲೆ ನಾನು ಯೋಚಿಸುತ್ತಾ ಇದ್ದದ್ದು ನಿನ್ನೆ ಕೊಡಗಿನಲ್ಲಿ ರಾಟ್ ವೀಲರ್ ಸಾಕು ನಾಯಿ ಆರೋಗ್ಯ ಕಾಯ೯ಕರ್ತೆಗೆ ಕಚ್ಚಿದ ಸಾಮಾಜಿಕ ಜಾಲ ತಾಣದ ಸುದ್ದಿ.  ಪೋನ್ ಮಾಡಿದವರು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನವರಾದ ಅನೇಕ ಪದವಿ, ಪಿ ಹೆಚ್ ಡಿ - ನೂರಾರು ಪ್ರಶಸ್ತಿ, ಅನೇಕ ಅಕಾಡಮಿಗಳ ನಿರ್ದೇಶಕರಾಗಿ, ರಾಜ್ಯ ಸರ್ಕಾರದ ಪುಸ್ತಕ ಪ್ರಾಧಿಕಾರದ ಅದ್ಯಕ್ಷರೂ ಆಗಿದ್ದ, ಚಿನ್ನದ ಪದಕ ವಿಜೇತರು, ಸುಂದರವಾದ ಕನ್ನಡ ಅಕ್ಷರ ಬರೆಯುವ ಶ್ರೀಕಂಠ ಕೂಡಿಗೆ ಅವರು.     ಅವರಿಗಾಗಿ ನನ್ನ ಪ್ರೀತಿಯ ಶಂಭೂರಾಮನಿಗೆ ನಿತ್ಯ ಬೆಳಗಿನ ಸೌತೆಕಾಯಿ ಸಮರ್ಪಣೆ ...