Skip to main content

Posts

Showing posts with the label Haratalu Halappa MLA of sagar visited YADEHALLI Varasiddi vinayaka Swami temple

Blog number 1206. ಸಾಗರ ವಿಧಾನಸಭಾ ಸದಸ್ಯರಾದ ಹರತಾಳು ಹಾಲಪ್ಪನವರು ನಮ್ಮ ಊರಿನ ಶ್ರೀ ವರಸಿದ್ಧಿ ವಿನಾಯಕ ದೇವಸ್ಥಾನದ ರಥೋತ್ಸವಕ್ಕೆ ಆಗಮಿಸಿದ್ದರು ಅವರನ್ನು ದೇವಾಲಯದ ಜಾತ್ರಾ ಸಮಿತಿವತಿಯಿಂದ ಸನ್ಮಾನಿಸಲಾಯಿತು,ಅವರು ದೇವಾಲಯದ ರಥಬೀದಿಯ ಕಾಂಕ್ರೀಟ್ ರಸ್ತೆ ನಿರ್ಮಿಸಿ ಕೊಟ್ಟಿದ್ದಾರೆ.

#ಶಾಸಕರಾದ_ಹರತಾಳುಹಾಲಪ್ಪನವರು #ನಮ್ಮ_ಊರಿನ_ವರಸಿದ್ಧಿವಿನಾಯಕ_ದೇವರ_ಜಾತ್ರೆಯಲ್ಲಿ #ದೇವಾಲಯದ_ಎದುರಿಗೆ_ಕಾಂಕ್ರೀಟ್_ರಸ್ತೆ_ಮಾಡಿಸಿದ್ದಾರೆ #ಅನೇಕ_ಹಿಂದಿನ_ಸಂದರ್ಭಗಳ_ನೆನಪಿಸಿಕೊಂಡರು.    2018ರ ವಿಧಾನಸಭಾ ಚುನಾವಣೆಯ ದಿನಗಳ ಒಂದು ರಾತ್ರಿ ಹರತಾಳು ಹಾಲಪ್ಪನವರು ನನ್ನ ಹಳೇ ಕಛೇರಿಗೆ ಬಂದಿದ್ದರು, ನಂತರ ನನ್ನ ಮಗಳ ಮದುವೆಗೆ ಬಂದು ಶುಭ ಹಾರೈಸಿದಾಗ ನನಗೆ ಆಶ್ಚಯ೯ ಕೂಡ ಯಾಕೆಂದರೆ ವಿವಾಹ ಆಮಂತ್ರಣ ಮುದ್ದಾಂ ನೀಡಲಾಗದೆ ಅಂಚೆ ಮುಖಾಂತರ ಕಳಿಸಿದರೂ ಅವರೂ ಆಗಮಿಸಿದ್ದರು.   ನಂತರದ ಬೇಟಿ ಮೊನ್ನೆ ನಮ್ಮ ಊರಿನ ಶ್ರೀ ವರಸಿದ್ದಿ ವಿನಾಯಕ ದೇವರ ರಥೋತ್ಸವದ ದಿನ (25- ಜನವರಿ -20 23ರ ಬುಧವಾರ) ಒಳ ಬರುತ್ತಲೇ "ಅರುಣ್ ಪ್ರಸಾದ್ ನಮ್ಮ ಹಳೆಯ ಗೆಳೆಯರು" ಅನ್ನುತ್ತಾ ಅವರು ಪದವಿ ಓದುವಾಗ ಸಾಗರದ ಸೊರಬ ರಸ್ತೆಯ ಹಳೆಯ ಯುನೈಟೆಡ್‌ ಟ್ರೇಡಿಂಗ್ ಕಂಪನಿ ಎದುರಿಗಿದ್ದ ಬಿಸಿಎಂ ಕಾಲೇಜು ಹಾಸ್ಟೆಲ್ ನಲ್ಲಿದ್ದಾಗ ನಾನು ಅದೇ ಕಟ್ಟಡದಲ್ಲಿದ್ದ ಮೆಟ್ರಿಕ್ ಹಾಸ್ಟೆಲ್ ನಲ್ಲಿ ಎಸ್ ಎಸ್ ಎಲ್ ಸಿ ಅದನ್ನು ನೆನಪು ಮಾಡಿಕೊಂಡರು.   ವಿದ್ಯಾರ್ಥಿ ಜೀವನದಲ್ಲೂ ಹಾಲಪ್ಪ ಮಾತುಗಾರರು, ಕವಿಗಳ ಪದ್ಯಗಳನ್ನು ಉಲ್ಲೇಖಿಸಿ ರಸವತ್ತಾಗಿ ಮಾತಾಡುತ್ತಾ ನೆರೆದವರೆಲ್ಲರನ್ನು ನಗಿಸುತ್ತಿದ್ದರು ಅದೇ ರೀತಿ ವಿದ್ಯಾರ್ಥಿ ಸಂಘಟನೆಯಲ್ಲೂ ಮುಂದಿದ್ದರು.    ರೈಲಿನ ಪ್ರಯಾಣದಲ್ಲಿ ಹೆಚ್ಚಾಗಿ ಪುಸ್ತಕ ಓದು...