ರುದ್ರಪ್ಪಚನ್ನಬಸಪ್ಪನವರು ಬರೆದ ಇಂಗ್ಲೀಷ್ ಪುಸ್ತಕ #if_Gandhi_Returned ದೊಡ್ಡ ದೊಡ್ಡ ವಿದ್ವಾಂಸರು ಓದಿ ಅತ್ಯುತ್ತಮ ಪ್ರತಿಕ್ರಿಯೆ ನೀಡಿದ್ದಾರೆ. ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ರುದ್ರಪ್ಪನವರ ಪುಸ್ತಕಕ್ಕೆ ಸ್ವಾಗತಿಸುತ್ತಾ ಅವರ ಸಾದನೆಗೆ ಹೆಮ್ಮೆಪಡುತ್ತೇನೆ. 90ರ ದಶಕದಲ್ಲಿ ಉದಯ TVಯ ಮೊದಲ ಬ್ಯೂರೋ ಚೀಪ್ ಆಗಿದ್ದವರು ರುದ್ರಪ್ಪನವರು ಆಗ ಉದಯ TV ಕನ್ನಡದ ಮೊದಲ ಖಾಸಾಗಿ TV ಜಾನಲ್ ಆಗಿತ್ತು. ರುದ್ರಪ್ಪನವರು ಸಾಗರ ತಾಲೂಕಿನ ವಿಚಾರ ಕ್ರಾಂತಿಯ ಪಿತಾಮಹಾರಾಗಿದ್ದವರು ಸಾಗರ ತಾಲೂಕಿನಲ್ಲಿ ಅವರು ಹಚ್ಚಿದ ಜನಪರ ಹೋರಾಟದ ದೀಪ ಈಗಲೂ ಉರಿಯುತ್ತಿದೆ. ರುದ್ರಪ್ಪನವರ ಕುಟುಂಬ ಎರೆಡು ಬಾರಿ ಶರಾವತಿ ನದಿ ಮುಳುಗಡೆಯಿಂದ ಸಂತ್ರಸ್ಥರಾದವರು, ಎಲ್ಲವನ್ನೂ ಕಳೆದುಕೊಂಡ ಕುಟುಂಬ. ಒಮ್ಮೆ ಹಿರೇಬಾಸ್ಕರ ಆಣೆಕಟ್ಟಿನಿಂದ ಇನ್ನೊಂದು ಬಾರಿ ಲಿಂಗನಮಕ್ಕಿ ಆಣೆಕಟ್ಟಿನಿಂದ. #ರುದ್ರಪ್ಪನವರು ಸೊನ್ನೆಯಿಂದ ದೊಡ್ಡ ಸಾದನೆಗೈದ ಸಾದಕರು. 70 ರ ದಶಕದಲ್ಲಿ ಸಮಾಜವಾದಿ ಯುವಜನ ಸಭಾದ ಸಕ್ರಿಯ ಕಾರ್ಯಕರ್ತರು ರುದ್ರಪ್ಪನವರು. 80ರ ದಶಕದಲ್ಲಿ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನಲ್ಲಿ ಮೊಟ್ಟ ಮೊದಲ ಬಾರಿಗೆ ಬಿ. ಕೃಷ್ಣಪ್ಪನವರ ದಲಿತ ಸಂಘರ್ಷ ಸಮಿತಿ ಸಂಘಟಿಸಿದವರು. ಸಾಗರ ತಾಲೂಕಿನ ತೀ.ನಾ.ಶ್ರೀನಿವಾಸ್, ಶಿವಾನಂದ ಕುಗ್ವೆ, ಅದರಂ...