Skip to main content

Posts

Showing posts with the label 56th Birth day and my life time memories recall

ಹುಟ್ಟಿದ್ದು ಮಂಗಳವಾರ (9-2-1965)ನಾಳೆ 56ನೇ ಹುಟ್ಟು ಹಬ್ಬ ಕೂಡ ಮಂಗಳವಾರ (9-2-2021) ಗಳಿಸಿದ್ದೇನು ಉಳಿಸಿದ್ದೇನು?

#ಮ೦ಗಳವಾರ_9ನೇ_ತಾರೀಖು_ಫೆಬ್ರುವರಿ_1965_ಹುಟ್ಟಿದ್ದು #ನಾಳೆ_ಮಂಗಳವಾರ_9_ಪೆಬ್ರುವರಿ_2021     ಅಂದರೆ ನನಗೆ ನನ್ನ ಜೀವಿತದ 56 ವರ್ಷ ಕಳೆದು 57ನೇ ವರ್ಷದ ಕಡೆ ಸಾಗಲು ಪ್ರಾರಂಭ ಆದಂತೆ.    ನಾನು ಹೋದಲ್ಲಿ ಜೀವನ ಬಂತೋ ಅಥವ ಜೀವನ ಕರೆದುಕೊಂಡು ಹೋದ ಮಾಗ೯ದಲ್ಲಿ ನಾನು ಹೋದೆನಾ? ಅಂತ ನೋಡಿದರೆ ನನ್ನ ಪ್ರಯತ್ನಗಳು ವಿಪಲವಾಗಿ,ಅದು ಹೋದಲ್ಲಿ ತಕರಾರು ಇಲ್ಲದೆ ನಾನು ಹೋದದ್ದರಿಂದ ಸಪಲತೆ ದೊರೆಯಿತೆನ್ನಿಸುತ್ತದೆ.    ಯಾವುದೂ ಅಂತ್ಯವೂ ಅಲ್ಲ ಆರಂಭವೂ ಅಲ್ಲ ರೂಪಾಂತರ ಮಾತ್ರ ಎಂಬಂತೆ ಅನೇಕ ಉದರ ನಿಮಿತ ಉದ್ಯೋಗಗಳನ್ನು ಮಾಡಿ ಅಪಾರ ಅನುಭವದ ಕಣಜಗಳನ್ನು ಕಟ್ಟಿದ್ದಾಯಿತು, ಮಿತ್ರ ದ್ರೋಹದ ಫಲ ಕೂಡ ಸ್ವೀಕರಿಸಾಯಿತು ಇದು ಎಲ್ಲರ ಜೀವನದಲ್ಲೂ ನಡೆಯುವಂತದ್ದೇ.    ನಮ್ಮ ಆತ್ಮೀಯ ಖಾಸಾ ವೈದ್ಯರಾದ ಶಿವಮೊಗ್ಗದ ರಾಜ್ ಕುಮಾರ್ ಡಯಾಗ್ನೋಸಿಸ್ ನ #ಡಾಕ್ಟರ್_ಪ್ರೀತಂ ಕೇಳುತ್ತಿದ್ದರು ನೀವು ಏನೇನೆಲ್ಲ ಉದ್ಯೋಗ ಮಾಡಿದ್ದಿರಿ ಅಂತ ಈಗ 56 ವರ್ಷ ಪೂರೈಸಿದಾಗ ಅದೂ ನೆನಪು ಮಾಡಿಕೊಂಡು ಇಲ್ಲಿ ಬರೆದಿದ್ದೇನೆ.   1. ವಜಿ೯ನಿಯಾ ತಂಬಾಕು ಬೆಳೆಯಲು ನಮ್ಮದೇ ನರ್ಸರಿಯಲ್ಲಿ ತಂಬಾಕು ಸಸಿ ನಾನೇ ನಿತ್ಯ ನೀರು ಹಾಕಿ ಬೆಳೆಸಿದ್ದು ನಂತರ ತಂಬಾಕು ಎಲೆ ಬ್ಯಾರನ್ ನಲ್ಲಿ ಹದ ಮಾಡಿ ಗ್ರೇಡ್ ಮಾಡುವ ಕೆಲಸ. 2. ಸಣ್ಣ ದಿನಸಿ ಅಂಗಡಿ . 3. ಆ ಕಾಲದಲ್ಲಿ ಸಾಗರದಲ್ಲಿ ಮಾಕ್೯-4 ...