Blog number 1654.. ಅವಸಾನದ ಅಂಚಿನ ಭಾರತೀಯ ರಣಹದ್ದುಗಳು ಇದಕ್ಕೆ ಕಾರಣವಾದ ಪಶು ಔಷದಿಯಲ್ಲಿ ಬಳಕೆಯ ನೋವು ನಿವಾರಕ ಡಿಕ್ಲೋಪೆನಾಕ್,
#ರಣ_ಹದ್ದುಗಳು_ಎಲ್ಲಿ_ಹೋದವು #ಬೃಹತ್_ಗಾತ್ರದ_ಬೋಳು_ಕುತ್ತಿಗೆಯ_ರಣಹದ್ದುಗಳು #ಹಳ್ಳಿಯಲ್ಲಿ_ಸತ್ತ_ಪ್ರಾಣಿಗಳ_ಊರ_ಹೊರಗೆ_ಎಸೆಯುತ್ತಿದ್ದರು. #ಒಂದೆರೆಡು_ದಿನದಲ್ಲಿ_ಅವಶೇಷಗಳೂ_ಕಣ್ಮರೆ_ಮಾಡುತ್ತಿದ್ದ_ರಣಹದ್ದು #ರಣಹದ್ದು_ಶಿಕಾರಿಮಾಡುತ್ತಿದ್ದ_ಮೂಕ #ಸತ್ತ_ದನದ_ಪಿತ್ತಕೋಶದಲ್ಲಿ_ಸಿಗುತ್ತಿದ್ದ_ಗೋರೋಚನಕ್ಕೆ_ಬಾರಿ_ಬೆಲೆ_ಇತ್ತು_ಆಗ. 1960 - 70 ರ ದಶಕದಲ್ಲಿ ನಮ್ಮ ಹಳ್ಳಿಯ ಜನ ಸಂಖ್ಯೆ ಹೆಚ್ಚೆಂದರೆ ನೂರಿನ್ನೂರು ಮತ್ತು ಮನೆ ಸಂಖ್ಯೆ 20 ಇತ್ತು ನಮ್ಮ ಊರು ಶಿವಮೊಗ್ಗ ಮತ್ತು ಸಾಗರ ಮಾರ್ಗದ ಬಿ ಹೆಚ್ (ಬೆಂಗಳೂರು ಹೊನ್ನಾವರ) ರಸ್ತೆಯಲ್ಲಿದೆ. ಪ್ರತಿ ವರ್ಷ ಹಕ್ಕಿ ಪಿಕ್ಕಿ ಜನರು ಆಗ ಅವರನ್ನು ಮೇಲು ಶಿಕಾರಿಯವರು ಅಂತ ಕರೆಯುತ್ತಿದ್ದರು ಅವರು ವರ್ಷದಲ್ಲಿ ಬೇರೆ ಬೇರೆ ಗುಂಪಿನಲ್ಲಿ ಕೆಲವು ತಿಂಗಳು ಈಗಿನ ಮಸೀದಿ ಇರುವ ಜಾಗದಲ್ಲಿ ದೊಡ್ಡ ಬಸರಿ ಮರದ ಕೆಳಗೆ ಕ್ಯಾಂಪ್ ಹಾಕುತ್ತಿದ್ದರು. ಪ್ರತಿ ಕ್ಯಾಂಪ್ ಬಂದಾಗಲೂ ಅವರನ್ನ ನೋಡಲು ನಾವೆಲ್ಲ ಹೋಗುತ್ತಿದ್ದೆವು ಅಲ್ಲಿ ಅವರ ಹರಕಲು ಬಟ್ಟೆಯ ಟೆಂಟ್, ಚಾಟರ್ ಬಿಲ್ಲು, ಹಕ್ಕಿ -ಕಾಡು ಕೋಳಿ ಹಿಡಿಯುವ ಬಲೆ, ಶಿಕಾರಿಗೆ ಮತ್ತು ಊರಿಂದ ಊರಿಗೆ ಅವರ ಸಾಗಾಣಿಕೆ ಮಾಡಲು ಎತ್ತು ಇತ್ಯಾದಿ ಇರುತ್ತಿತ್ತು. ಇವರೆಲ್ಲ ಸುಯೋ೯ದಯಕ್ಕೆ ಮೊದಲೇ ಕಾಡಿಗೆ ಶಿಕಾರಿಗೆ ಹೋಗಿ ಬಿಡುತ್ತಿದ್ದರು ಕ್ಯಾಂಪಿನಲ್ಲಿ ಮಕ್ಕಳು ಮತ್ತು ವಯಸ್ಸಾದವರು ಮಾತ್ರ ಇರ...