ಕೊಲ್ಲಾಪುರಿ_ಚಪ್ಪಲಿ_ಬ್ರಾಂಡ್_ಆಗಿದ್ದು_ಹೇಗೆ?...
ಕೊಲ್ಲಾಪುರಿ ಚಪ್ಪಲಿ ಕೇವಲ ಒಂದು ಸ್ಥಳೀಯ ಪಾದರಕ್ಷೆಯಾಗಿ ಉಳಿಯದೆ, ಜಾಗತಿಕ ಮಟ್ಟದಲ್ಲಿ ಗುರುತಿಸಲ್ಪಡುವ ಬ್ರಾಂಡ್ ಆಗಿ ಬೆಳೆದುಬಂದ ಹಾದಿ ಆಸಕ್ತಿದಾಯಕವಾಗಿದೆ.
#ಛತ್ರಪತಿ_ಶಾಹು_ಮಹಾರಾಜರ_ಪ್ರೋತ್ಸಾಹ.
13ನೇ ಶತಮಾನದಿಂದಲೇ ಈ ಪಾದರಕ್ಷೆಗಳ ತಯಾರಿಕೆ ಚಾಲ್ತಿಯಲ್ಲಿದ್ದರೂ 20ನೇ ಶತಮಾನದ ಆರಂಭದಲ್ಲಿ ಕೊಲ್ಲಾಪುರದ ರಾಜ ಛತ್ರಪತಿ ಶಾಹು ಮಹಾರಾಜರು ಈ ಕಲೆಗೆ ದೊಡ್ಡ ಆಶ್ರಯ ನೀಡಿದರು.
ಅವರು ಚಮ್ಮಾರ/ಸಮಗಾರ ಸಮುದಾಯದ ಕುಶಲಕರ್ಮಿಗಳಿಗೆ ಆರ್ಥಿಕ ನೆರವು ನೀಡಿ, ನೂರಾರು ಕಾರ್ಯಾಗಾರಗಳನ್ನು ತೆರೆಯಲು ಉತ್ತೇಜನ ನೀಡಿದರು ಜೊತೆಗೆ ಸ್ವತಃ ಈ ಚಪ್ಪಲಿಗಳನ್ನು ಧರಿಸಿ ಗೌರವ ತಂದುಕೊಟ್ಟರು.
ಶೇಕಡಾ 100 ನೈಸರ್ಗಿಕ ಚರ್ಮ: ಯಾವುದೇ ರಾಸಾಯನಿಕಗಳನ್ನು ಬಳಸದೆ, ಜಾಲಿ ಮರದ ತೊಗಟೆ ಮತ್ತು ನೈಸರ್ಗಿಕ ತೈಲಗಳಿಂದ ಚರ್ಮವನ್ನು ಹದಮಾಡಲಾಗುತ್ತದೆ.
ಇವುಗಳನ್ನು ತಯಾರಿಸಲು ಯಾವುದೇ ಮೊಳೆ ಅಥವಾ ಲೋಹದ ತಂತಿಗಳನ್ನು ಬಳಸುವುದಿಲ್ಲ ಪೂರ್ಣವಾಗಿ ನೈಸರ್ಗಿಕ ಚರ್ಮದ ದಾರಗಳಿಂದಲೇ ಕೈಯಿಂದ ಹೊಲೆಯಲಾಗುತ್ತದೆ.
ಬಿಸಿಲಿನಲ್ಲಿ ಪಾದಗಳನ್ನು ತಂಪಾಗಿರಿಸುವ ಗುಣ ಮತ್ತು ವರ್ಷಗಳ ಕಾಲ ಬಾಳಿಕೆ ಬರುವ ಗಟ್ಟಿಮುಟ್ಟಾದ ವಿನ್ಯಾಸ ಇವುಗಳ ಹೆಗ್ಗಳಿಕೆ.
ಮುಂಬೈನ ಪ್ರಸಿದ್ಧ ವ್ಯಾಪಾರಿಗಳು ಕೊಲ್ಲಾಪುರದಿಂದ ಇವುಗಳನ್ನು ದೊಡ್ಡ ಮಟ್ಟದಲ್ಲಿ ಖರೀದಿಸಿ ಮಾರಾಟ ಮಾಡಲು ಶುರುಮಾಡಿದರು.
ಆರಂಭದಲ್ಲಿ ತೀರಾ ದಪ್ಪನಾಗಿದ್ದ ಚಪ್ಪಲಿಗಳನ್ನು ಕಾಲಕ್ರಮೇಣ ನವಿರಾದ, ಆಕರ್ಷಕ ಹೆಣಿಗೆ ಮತ್ತು 'ಟಿಪ್ಟಿಪ್' ಸದ್ದು ಬರುವ ಶೈಲಿಯಲ್ಲಿ ರೂಪಾಂತರಗೊಳಿಸಲಾಯಿತು.
ಇದು ನಗರವಾಸಿಗಳು ಹಾಗೂ ಗಣ್ಯರ ಮೆಚ್ಚುಗೆಗೆ ಪಾತ್ರವಾಯಿತು.
#ಗಡಿಯಾಚೆಗಿನ_ವ್ಯಾಪ್ತಿ_ಮತ್ತು_ಜಿಐ_ಟ್ಯಾಗ್.
ಕೊಲ್ಲಾಪುರ ಮಾತ್ರವಲ್ಲದೆ ಮಹಾರಾಷ್ಟ್ರದ ಸಾಂಗ್ಲಿ, ಸತಾರ, ಸೊಲ್ಲಾಪುರ ಹಾಗೂ ಕರ್ನಾಟಕದ ಬೆಳಗಾವಿ (ಅಥಣಿ, ನಿಪ್ಪಾಣಿ), ಬಾಗಲಕೋಟೆ, ವಿಜಯಪುರ ಮತ್ತು ಧಾರವಾಡ ಜಿಲ್ಲೆಗಳು ಇದರ ಪ್ರಮುಖ ಉತ್ಪಾದನಾ ಕೇಂದ್ರಗಳಾದವು.
ಇವುಗಳ ಐತಿಹಾಸಿಕತೆ ಮತ್ತು ವಿಶಿಷ್ಟತೆಯನ್ನು ಪರಿಗಣಿಸಿ, 2019ರಲ್ಲಿ ಕೊಲ್ಲಾಪುರಿ ಚಪ್ಪಲಿಗೆ ಅಧಿಕೃತವಾಗಿ 'ಭೌಗೋಳಿಕ ಮಾನ್ಯತೆ' Geographical Indication - GI Tag ಲಭಿಸಿತು
ಇದು ಈ ಚಪ್ಪಲಿಗೆ ಅಧಿಕೃತ ಜಾಗತಿಕ ಬ್ರಾಂಡ್ ಮೌಲ್ಯವನ್ನು ತಂದುಕೊಟ್ಟಿತು.
ದೇಶ-ವಿದೇಶಗಳ ಪ್ರಮುಖ ಫ್ಯಾಷನ್ ಡಿಸೈನರ್‌ಗಳು ಕೊಲ್ಲಾಪುರಿ ವಿನ್ಯಾಸವನ್ನು ತಮ್ಮ ರ್ಯಾಂಪ್ ಶೋಗಳಲ್ಲಿ ಬಳಸಲು ಪ್ರಾರಂಭಿಸಿದರು.
ಸಾಂಪ್ರದಾಯಿಕ ಕುರ್ತಾ-ಪೈಜಾಮ, ಜೀನ್ಸ್ ಮತ್ತು ಸೀರೆಗಳಿಗೂ ಒಪ್ಪುವ ದೇಸಿ ಲುಕ್‌ನಿಂದಾಗಿ ಇಂದಿಗೂ ಯುವಪೀಳಿಗೆ ಹಾಗೂ ವಿದೇಶಿ ಪ್ರವಾಸಿಗರ ಕೊಲ್ಲಾಪುರಿ ಚಪ್ಪಲಿ ನೆಚ್ಚಿನ ಬ್ರಾಂಡೆಡ್ ಪಾದರಕ್ಷೆಯಾಗಿ ಗುರುತಿಸಿಕೊಂಡಿದೆ.
#kollapur #kollapuribrandchappal #ShahuMaharaj
#Chatrapathi #branded #Chappal
Comments
Post a Comment