Skip to main content

4241.ಬೀಗರ_ಊಟ#ಮಾಂಸಹಾರಿಗಳ_ಸಂಪ್ರದಾಯ_ಹೇಗಿರಬೇಕು?#ಈಗ_ಹೇಗಿದೆ!...

ಬೀಗರ_ಊಟ
#ಮಾಂಸಹಾರಿಗಳ_ಸಂಪ್ರದಾಯ_ಹೇಗಿರಬೇಕು?
#ಈಗ_ಹೇಗಿದೆ!...

 ಮಲೆನಾಡಿನಲ್ಲಿ ಶ್ರೀಮಂತರ ಮನೆಯ ಬೀಗರ ಬಾಡೂಟದ ದಾಮ್ ದೂಮ್ ಆಚರಣೆ  ಇತ್ತೀಚಿನ ದಿನಗಳಲ್ಲಿ ಮಧ್ಯಮ ಮತ್ತು ಬಡ ಕುಟುಂಬಗಳೂ ಅನುಕರಿಸಲು ಪ್ರಾರಂಬಿಸಿದೆ.

  ಬೀಗರ ಊಟ,ಬಾಡೂಟಕ್ಕೆ ವಿರೋದವಿಲ್ಲ ಆದರೆ ಪದ್ಧತಿಗೆ ಅನುಸಾರವಾಗಿ ಮದುವೆ ದಿನ ವದು ವರರ ಗೃಹ ಪ್ರವೇಶದ ದಿನ ಬೇಡ ಅಂತ ಕೆಲವರು ಹೇಳುತ್ತಾರೆ.

   ಇನ್ನು ಕೆಲವರು ಶ್ರೀಮಂತರನ್ನ ಅನುಕರಿಸಲು ಹೋಗಿ ಮಧ್ಯಮ ಮತ್ತು ಬಡ ಕುಟುಂಬಗಳು ಸಂಕಷ್ಟಕ್ಕೆ ಈಡಾಗುವ ಈ ಅನಿಷ್ಟ ಪದ್ದತಿಗೆ ನಿಶೇದ ಹೇರಲೇ ಬೇಕು ಎನ್ನುತ್ತಾರೆ.

   ಇದರಿಂದಾಗಿ ಒಂದು ಕಡೆ ಆರ್ಥಿಕ ಸಂಕಷ್ಟ ಇನ್ನೊಂದು ಕಡೆ ನೂತನ ವದು ವರರ ಗೃಹ ಪ್ರವೇಶದ ದಾರ್ಮಿಕ ವಿಧಿಗಳು ಕಡಿಮೆ ಪ್ರಾಮುಖ್ಯತೆ ಪಡೆದಿದೆ.

  ಶಿವಮೊಗ್ಗ ಜಿಲ್ಲೆಯ #ಶಿಕಾರಿಪುರ ತಾಲ್ಲೂಕಿನ #ಹರಗಿ ಎಂಬ ಗ್ರಾಮದಲ್ಲಿ ಗ್ರಾಮದ ಮುಖಂಡರು ಇಂತಹ ಬಾಡೂಟದ ಬೀಗರ ಊಟಕ್ಕೆ #ನಿಶೇದ ಹೇರಿದ್ದಾರೆ ಮತ್ತು ಗ್ರಾಮದ ತೀರ್ಮಾನ ಮೀರಿದರೆ ಒಂದು ಲಕ್ಷ ರೂಪಾಯಿ ದಂಡ ವಿದಿಸುವುದಾಗಿ ತೀರ್ಮಾನ ಕೈಗೊಳ್ಳಲಾಗಿದೆ.

  ಈ ತೀರ್ಮಾನ ಮಲೆನಾಡಿನಾದ್ಯಂತ ವಿಶೇಷ ಗಮನ ಸೆಳೆದಿದೆ ಹೊಸ ಆಚರಣೆ ಆಗಿ ಆರ್ಥಿಕವಾಗಿ ಮತ್ತು  ಅನೇಕ ಸಮಸ್ಯೆಗೆ ಕಾರಣ ಆಗಿರುವ ಈ ದುಬಾರಿ ಬಾಡೂಟದ ಬೀಗರ ಊಟದ ವಿರುದ್ಧ ಅನೇಕ ಯುವಕರು ತಮ್ಮ ಧ್ವನಿ ಎತ್ತಿದ್ದಾರೆ.

  ಇದು ಮುಂದಿನ ದಿನಗಳಲ್ಲಿ ಸರಳ ವಿವಾಹಕ್ಕೆ ಪ್ರೇರಣೆ ಮಾಡುವ ಆಂದೋಲನ ಆಗಲಿದೆಯಾ? ಗೊತ್ತಿಲ್ಲ... ಕಾದು ನೋಡ ಬೇಕು.

   ಮಲೆನಾಡಿನ ರಾಷ್ಟ್ರ ಕವಿ ಕುವೆಂಪು ಅವರ ಸರಳ ವಿವಾಹಕ್ಕಾಗಿ #ಮಂತ್ರ_ಮಾಂಗಲ್ಯ ಪದ್ಧತಿ ಜಾರಿಗೆ ತಂದಿದ್ದು ಇಲ್ಲಿ ಸ್ಮರಿಸ ಬಹುದು.

  ಸ್ವತಃ ಅವರ ಪುತ್ರ #ಪೂರ್ಣಚಂದ್ರತೇಜಸ್ವಿ ಮದುವೆ ಕೂಡ ಮಂತ್ರ ಮಾಂಗಲ್ಯದ ವಿದಿ ವಿಧಾನದಲ್ಲಿ ನೆರವೇರಿಸಿ ನಾಡಿಗೆ ಮಾದರಿ ಆಗಿದ್ದಾರೆ.

   ಶ್ರೀಮಂತರು, ಊರಿಗೆ ದೊಡ್ಡವರು ಮತ್ತು ಜನಪ್ರತಿನಿದಿಗಳೂ ತಮ್ಮ ಕುಟುಂಬದಲ್ಲಿ ಸರಳ ವಿವಾಹ ಮಾಡಿ ತಮ್ಮ ಊರು ಪರಿಸರದಲ್ಲಿನ ಜನ ಸಾಮಾನ್ಯರಿಗೆ ಪ್ರೇರಣೆ ಆಗಬಹುದು.

 #ಬೀಗರ_ಔತಣ_ಹೀಗಿತ್ತು
ಶೂದ್ರ ಹಾಗೂ ಇತರೆ ಮಾಂಸಾಹಾರಿ ಸಮುದಾಯಗಳಲ್ಲಿ ಮದುವೆಯ ನಂತರ  ‘ಬಾಡೂಟ’ ಅಥವಾ ‘ಬೀಗರ ಔತಣ’ ಮಾಡುವ ರೂಢಿಯಿದ್ದರೂ, ಮಧು ಮಕ್ಕಳು ಮೊದಲ ಬಾರಿಗೆ ಗಂಡನ ಮನೆ ಪ್ರವೇಶಿಸುವ ಗೃಹಪ್ರವೇಶದ ದಿನದಂದು ಮಾಂಸಾಹಾರವನ್ನು ಕಟ್ಟುನಿಟ್ಟಾಗಿ ನಿಷೇಧಿಸಿ, ಕೇವಲ ಶುದ್ಧ ಸಸ್ಯಾಹಾರವನ್ನಷ್ಟೇ ಬಡಿಸುವ ಸಂಪ್ರದಾಯವಿದೆ.

 ​ಈ ಆಚರಣೆಯ ಹಿಂದೆ ಹಲವಾರು ಧಾರ್ಮಿಕ, ಆಧ್ಯಾತ್ಮಿಕ ಹಾಗೂ ಸಾಂಸ್ಕೃತಿಕ ನಂಬಿಕೆಗಳಿವೆ.

#ಲಕ್ಷ್ಮೀ_ಪ್ರವೇಶದ_ಪಾವಿತ್ರ್ಯತೆ.
  ಹೊಸದಾಗಿ ಮದುವೆಯಾಗಿ ಮನೆಗೆ ಬರುವ ಮಧುಮಗಳನ್ನು ‘ಮನೆ ಬೆಳಗುವ ಮಹಾಲಕ್ಷ್ಮಿ’ ಎಂದೇ ಭಾವಿಸಲಾಗುತ್ತದೆ.

  ಲಕ್ಷ್ಮಿಯ ಆಗಮನಕ್ಕೆ ಮನೆ ಶುದ್ಧ, ಮಂಗಳಕರ ಹಾಗೂ ಸಾತ್ವಿಕವಾಗಿರಬೇಕು ಎಂಬ ನಂಬಿಕೆಯಿದೆ.

   ಮನೆಯ ಹೊಸ್ತಿಲ ಮೇಲೆ ಅಕ್ಕಿ ತುಂಬಿದ ಸೇರನ್ನು ಮೊದಲ ಬಾರಿಗೆ ಬರುವ ಗೃಹಲಕ್ಷ್ಮೀ ತನ್ನ ಕಾಲಿನಿಂದ ತಳ್ಳಿ, ಮನೆಯವರು ಮಂಗಳಾರತಿ ಎತ್ತಿ ಆಕೆಯನ್ನು ಒಳಗೆ ಬರಮಾಡಿಕೊಳ್ಳಲಾಗುತ್ತದೆ.

 ಲಕ್ಷ್ಮಿಯ ಸ್ವಾಗತವಿರುವ ಜಾಗದಲ್ಲಿ ಹಿಂಸೆ ಅಥವಾ ರಕ್ತದ ಲೇಪವಿರಬಾರದು ಎಂಬ ಕಾರಣಕ್ಕೆ ಅಂದು ಮಾಂಸವನ್ನು ಮನೆಗೆ ತರುವುದಿಲ್ಲ.

  ಆದಿನ ​ಮನೆಯ ಕುಲದೇವರು ಮತ್ತು ಪಿತೃಗಳ ಪೂಜೆಗೆ ಮೀಸಲು,ಗೃಹಪ್ರವೇಶವಾದ ತಕ್ಷಣ ನವದಂಪತಿಗಳು ಮನೆಯ ದೇವರ ಕೋಣೆಯಲ್ಲಿ ಕುಲದೇವರಿಗೆ ಪೂಜೆ ಸಲ್ಲಿಸಬೇಕು, ಹೊಸ್ತಿಲು ಪೂಜೆ ಮಾಡಬೇಕು ಹಾಗೂ ಮನೆಯ ಪಿತೃಗಳ (ಹಿರಿಯರ) ಆಶೀರ್ವಾದ ಪಡೆಯಬೇಕು.

 ಹಿಂದೂ ಆಚರಣೆಗಳಲ್ಲಿ ದೇವರ ಮತ್ತು ಪಿತೃಗಳ ಕಾರ್ಯ ನಡೆಯುವ ದಿನ ಮನೆಯಲ್ಲಿ ಸಂಪೂರ್ಣ ‘ಮಡಿ’ ಹಾಗೂ ಸಾತ್ವಿಕ ವಾತಾವರಣವಿರಬೇಕಾದ್ದು ಕಡ್ಡಾಯ.

ಆಯುರ್ವೇದ ಮತ್ತು ಶಾಸ್ತ್ರಗಳ ಪ್ರಕಾರ ಮಾಂಸಾಹಾರವು ‘ತಾಮಸಿಕ’ ಹಾಗೂ ‘ರಾಜಸಿಕ’ ಗುಣವನ್ನು ಹೆಚ್ಚಿಸುತ್ತದೆ. 

  ಹೊಸ ಜೀವನ ಆರಂಭಿಸುವ ದಿನ, ಆ ಕ್ಷಣದ ಪರಿಸರವು ಸಾತ್ವಿಕ, ಶಾಂತ ಹಾಗೂ ಪವಿತ್ರ ಆಲೋಚನೆಗಳಿಂದ ಕೂಡಿರಲಿ ಎಂಬ ಉದ್ದೇಶದಿಂದ ಸಿಹಿ (ಪಾಯಸ, ಹೋಳಿಗೆ), ಬೇಳೆ ಸಾರು, ತುಪ್ಪ ಹಾಗೂ ಅನ್ನವನ್ನು ಒಳಗೊಂಡ ಹಬ್ಬದೂಟವನ್ನೇ ಮಾಡಲಾಗುತ್ತದೆ.

 ಮಾಂಸ ತರುವುದು, ಕಡಿಯುವುದು ಮತ್ತು ಅಡುಗೆ ಮಾಡುವುದನ್ನು ‘ರಕ್ತ ಸಂಬಂಧಿತ’ ಅಥವಾ ಅಶುಚಿತ್ವದ ಕೆಲಸವೆಂದು ಪರಿಗಣಿಸಲಾಗುತ್ತದೆ.

  ಪವಿತ್ರ ಕಂಕಣ ಧರಿಸಿರುವ ಮಧುಮಕ್ಕಳ ಮೊದಲ ದಿನದ ಗೃಹಪ್ರವೇಶದಲ್ಲಿ ಇಂತಹ ಅಶೌಚ ಇರಬಾರದೆಂಬ ನಿಯಮವಿದೆ.

​‘ಕಂಕಣ ಬಿಚ್ಚಿದ’ ನಂತರವೇ ಬೀಗರ ಕಡೆಯವರಿಗೆ ಬಾಡೂಟದ ನೀಡುವ ಪದ್ಧತಿ ಇದೆ.

  ಮದುವೆಯ ಸಂದರ್ಭದಲ್ಲಿ ವಧು-ವರರ ಕೈಗೆ ಕಟ್ಟಿದ ‘#ಕಂಕಣ’ (ರಕ್ಷಾಸೂತ್ರ) ಅವರ ಮೈಮೇಲೆ ಇರುವವರೆಗೂ ಅವರು ಪೂರ್ಣ ಮಡಿಯಲ್ಲಿದ್ದಾರೆ ಎಂದರ್ಥ.

  ಗೃಹಪ್ರವೇಶ ಮುಗಿದು, ಕುಲದೇವರ ಪೂಜೆ ನೆರವೇರಿ, ಶಾಸ್ತ್ರೋಕ್ತವಾಗಿ ಕಂಕಣ ಬಿಚ್ಚಿದ ಮರುದಿನವೇ ಮಾಂಸಾಹಾರಕ್ಕೆ ಅನುಮತಿ ಸಿಗುವುದು.

 ಅದಕ್ಕಾಗಿಯೇ ಗೃಹಪ್ರವೇಶದ ಮರುದಿನ ಅಥವಾ ನಂತರದ ದಿನಗಳಲ್ಲಿ ಬಂಧು-ಬಾಂಧವರನ್ನೆಲ್ಲ ಕರೆದು  ‘ಬೀಗರ ಬಾಡೂಟ’ವನ್ನು ಸಂಭ್ರಮದಿಂದ ಆಯೋಜಿಸುತ್ತಾರೆ.

  ​ಹೀಗಾಗಿ ಗೃಹಪ್ರವೇಶದ ದಿನದಂದು ಸಂಪೂರ್ಣ ಸಸ್ಯಾಹಾರ ಮಾಡುವುದು ಧಾರ್ಮಿಕ ಶುಚಿತ್ವ ಮತ್ತು ಲಕ್ಷ್ಮೀ ಸ್ವರೂಪದ ನವವಧುವನ್ನು ಸಾತ್ವಿಕವಾಗಿ ಬರಮಾಡಿಕೊಳ್ಳುವ ಗೌರವದ ಸಂಕೇತವಾಗಿದೆ.

#ನಾಳೆಯ_ಲೇಖನ 
ಬೀಗರ ಔತಣ ಕೂಟಕ್ಕೆ ಯಾರಿಗೆ ಆಹ್ವಾನ ಇರುತ್ತದೆ ....

#bhigaru #baduta #marriege #reception #nonveg

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...