4232.ಡಿಜಿಟಲ್_ಮಾದ್ಯಮಕ್ಕೆ_ರಾಜ್ಯಪ್ರಶಸ್ತಿ.#ಕರ್ನಾಟಕ_ಟೂರಿಸಂ#ಡಿಜಿಟಲ್_ಕ್ರಿಯೇಟರ್_ಅವಾರ್ಡ್ಸ್’#ಡಾಕ್ಟರ್_ನಂದಿನಿಆಕರ್ಷ_ಅವರಿಗೆ_ಅಭಿನಂದನೆಗಳು.
ಡಿಜಿಟಲ್_ಮಾದ್ಯಮಕ್ಕೆ_ರಾಜ್ಯಪ್ರಶಸ್ತಿ.
#ಕರ್ನಾಟಕ_ಟೂರಿಸಂ
#ಡಿಜಿಟಲ್_ಕ್ರಿಯೇಟರ್_ಅವಾರ್ಡ್ಸ್’
#ಡಾಕ್ಟರ್_ನಂದಿನಿಆಕರ್ಷ_ಅವರಿಗೆ_ಅಭಿನಂದನೆಗಳು.
ಕುಖ್ಯಾತ ವೀರಪ್ಪನ್ ಹತ್ಯೆ ನಂತರ ಅವರ ಸಹಚರರ ಬಗ್ಗೆ, ವೀರಪ್ಪನ್ ನಿಂದ ನೊಂದವರ ಬಗ್ಗೆ ಡಿಜಿಟಲ್ ಮಾಧ್ಯಮ ಪ್ರಥಮವಾಗಿ ಮಾಡಿದ ಸೀರಿಯಲ್ ಗಳು ಅತ್ಯಂತ ಜನಪ್ರಿಯ ಆಯಿತು, ಇವರಿಂದ ಪ್ರೇರಣೆ ಪಡೆದ ಅನೇಕ ಡಿಜಿಟಲ್ ಕ್ರಿಯೇಟರ್ ಗಳು ಈ ಬಗ್ಗೆ ಹೆಚ್ಚು ಬೆಳಕು ಚೆಲ್ಲಿದರು.
ನಮ್ಮ #ಶಿವಮೊಗ್ಗ ಜಿಲ್ಲೆಯ ಇತಿಹಾಸ #ಕೆಳದಿ ಸಂಸ್ಥಾನ, #ಗೇರುಸೊಪ್ಪೆ ಸಂಸ್ಥಾನ, #ಕದಂಬರ ಸಂಸ್ಥಾನ, #ಈಸೂರು ಸ್ವಾತಂತ್ರ್ಯ ಹೋರಾಟ, #ಖಂಡೇರಾವ್ ಮ್ಯೂಸಿಯಂ, #ತಾಳಗುಂದದ ಕನ್ನಡ ಶಾಸನ, #ಕುವೆಂಪು ಬಗ್ಗೆ, #ನೀನಾಸಂ ಬಗ್ಗೆ, ಶಿವಮೊಗ್ಗದ #ಸಿಂಹದಾಮ ಮತ್ತು #ಸಕ್ಕರೆಬೈಲು_ಆನೆ_ಕ್ಯಾಂಪ್ ಬಗ್ಗೆ ಇವರು ಮಾಡಿದ ಸೀರಿಯಲ್ ಗಳು ಅತ್ಯಂತ ಜನಪ್ರಿಯ ಆಯಿತು.
ಈ ಸಂದರ್ಭದಲ್ಲಿ ಇವರಿಗೆ ನಾನು ಮತ್ತು ನಮ್ಮ ಸಂಸ್ಥೆ ಅತಿಥೇಯರಾಗಿದ್ದೆವು ಈ ಸಂದರ್ಭದಲ್ಲಿಯೇ ನಮ್ಮ #ಮಲ್ಲಿಕಾ_ವೆಜ್ ನ #ಗಿಣ್ಣ ( ಮಾರ್ಚ್ 2024) ಶ್ರೀಮತಿ ನಂದಿನಿ ಮತ್ತು ಆಕರ್ಷ ದಂಪತಿಗಳಿಂದ ಲಾಂಚ್ ಮಾಡಿಸಿದ್ದೆವು ಅವರು ನಮ್ಮ ಗಿಣ್ಣದ ರಾಯಬಾರಿಗಳು.
ಕರ್ನಾಟಕ ಸರ್ಕಾರದ #ಪ್ರವಾಸೋದ್ಯಮ ಇಲಾಖೆಯು ಈ ವರ್ಷದಿಂದ ಪ್ರಾರಂಬಿಸಿರುವ Karnataka Tourisum Award - Karnataka Best Video Creator Influencer -2026 ಪ್ರಶಸ್ತಿ ರಾಜ್ಯದ ಪ್ರಖ್ಯಾತ ಡಿಜಿಟಲ್ ಮಾಧ್ಯಮಕ್ಕೆ ನೀಡಿದೆ.
ಈ ಪ್ರಶಸ್ತಿಯನ್ನ ಸಂಸ್ಥೆಯ ಪಾಲುದಾರರಾದ ಡಾ. ನಂದಿನಿಆಕರ್ಷ ಸ್ವೀಕರಿಸಿದ್ದಾರೆ ಅವರಿಗೆ ಅಭಿನಂದಿಸುತ್ತೇನೆ.
ಕರ್ನಾಟಕದ ಪ್ರವಾಸ, ಇತಿಹಾಸ, ವ್ಯಕ್ತಿ, ವಸ್ತು, ಸ್ಥಳದ ಬಗ್ಗೆ ವಿಶೇಷವಾಗಿ, ವಿಭಿನ್ನವಾಗಿ ಕಾರ್ಯಕ್ರಮಗಳನ್ನು ಕನ್ನಡಿಗರಿಗೆ ನೀಡುವ #ಡಿಜಿಟಲ್_ಮಾಧ್ಯಮಕ್ಕೆ ಕೋಟೆಗೂ ಮಿಕ್ಕಿ ವಿಕ್ಷಕರಿದ್ದಾರೆ.
ಕರ್ನಾಟಕ ಪ್ರವಾಸೋದ್ಯಮ ಇಲಾಖೆಯು ರಾಜ್ಯದ ಪ್ರವಾಸಿ ತಾಣಗಳು, ಸಂಸ್ಕೃತಿ, ಇತಿಹಾಸ ಮತ್ತು ಆಹಾರ ವೈವಿಧ್ಯತೆಯನ್ನು ಡಿಜಿಟಲ್ ಮಾಧ್ಯಮಗಳ ಮೂಲಕ ಪ್ರಚಾರ ಮಾಡುವ ಸಾಮಾಜಿಕ ಮಾಧ್ಯಮ ಕಂಟೆಂಟ್ ಕ್ರಿಯೇಟರ್‌ಗಳು ಹಾಗೂ ಇನ್‌ಫ್ಲುಯೆನ್ಸರ್‌ಗಳನ್ನು ಪ್ರೋತ್ಸಾಹಿಸಲು ‘#ಕರ್ನಾಟಕ_ಟೂರಿಸಂ_ಡಿಜಿಟಲ್_ಕ್ರಿಯೇಟರ್_ಅವಾರ್ಡ್ಸ್’ (Karnataka Tourism Digital Creator Awards) ಅನ್ನು ಈ ವರ್ಷದಿಂದ ಆರಂಭಿಸಿದೆ.
ಈ ಪ್ರಶಸ್ತಿಯ ಮುಖ್ಯ ಉದ್ದೇಶ
ಕರ್ನಾಟಕದ ಪ್ರಸಿದ್ಧ ಹಾಗೂ ಅಷ್ಟಾಗಿ ಬೆಳಕಿಗೆ ಬಾರದ (off-beat) ಪ್ರವಾಸಿ ತಾಣಗಳನ್ನು ಜಾಗತಿಕ ಮಟ್ಟದಲ್ಲಿ ಪರಿಚಯಿಸುವುದು.
ಯುವ ಕಂಟೆಂಟ್ ಕ್ರಿಯೇಟರ್‌ಗಳು, ವ್ಲಾಗರ್‌ಗಳು, ಫೋಟೋಗ್ರಾಫರ್‌ಗಳು ಮತ್ತು ಟ್ರಾವೆಲ್ ರೈಟರ್‌ಗಳನ್ನು ಅಧಿಕೃತವಾಗಿ ಗುರುತಿಸಿ ಪುರಸ್ಕರಿಸುವುದು.
ಪ್ರವಾಸೋದ್ಯಮ ಪ್ರಚಾರದಲ್ಲಿ ಸೃಜನಶೀಲ ಡಿಜಿಟಲ್ ಅಭಿಯಾನಗಳನ್ನು ಹೆಚ್ಚಿಸುವುದು.
ಅತ್ಯುತ್ತಮ ಟ್ರಾವೆಲ್ ವ್ಲಾಗರ್ (Best Travel Vlogger), ಪ್ರವಾಸಿ ಅನುಭವ ಮತ್ತು ದೃಶ್ಯ ನಿರೂಪಣೆ.
ಅತ್ಯುತ್ತಮ ಛಾಯಾಗ್ರಹಣ (Best Travel Photography): ಕರ್ನಾಟಕದ ನಿಸರ್ಗ ಮತ್ತು ಐತಿಹಾಸಿಕ ತಾಣಗಳ ಚಿತ್ರಣ.
ಸಂಸ್ಕೃತಿ ಮತ್ತು ಪರಂಪರೆ (Heritage & Culture Creator).
ದೇವಾಲಯಗಳು, ಸ್ಮಾರಕಗಳು, ಜಾನಪದ ಕಲೆಗಳನ್ನು ಬಿಂಬಿಸುವ ಕಂಟೆಂಟ್.
ಆಹಾರ ಮತ್ತು ಪಾಕಪದ್ಧತಿ (Culinary/Food Travel): ಸ್ಥಳೀಯ ಆಹಾರ ಸಂಸ್ಕೃತಿಯನ್ನು ಪರಿಚಯಿಸುವ ವಿಡಿಯೋಗಳು.
ಉದಯೋನ್ಮುಖ ಕ್ರಿಯೇಟರ್ (Emerging/Micro Creator): ಅತ್ಯುತ್ತಮ ಸೃಜನಶೀಲತೆ ಹೊಂದಿರುವ ಆರಂಭಿಕ ಹಂತದ ಕ್ರಿಯೇಟರ್‌ಗಳು.
ಕನ್ನಡ ಭಾಷಾ ಕಂಟೆಂಟ್ (Best Regional/Kannada Content), ಸ್ಥಳೀಯ ಭಾಷೆಯಲ್ಲಿ ಕರ್ನಾಟಕವನ್ನು ಪರಿಚಯಿಸುವ ವಿಶಿಷ್ಟ ನಿರೂಪಣೆ.
ಪರಿಣಿತರ ತೀರ್ಪುಗಾರರ ಸಮಿತಿ (Jury) ಪರಿಶೀಲಿಸಿ ವಿಜೇತರನ್ನು ಆಯ್ಕೆ ಮಾಡುತ್ತದೆ.
ವಿಜೇತರಿಗೆ ನಗದು ಬಹುಮಾನ, ಪ್ರಶಸ್ತಿ ಪತ್ರ, ಸ್ಮರಣಿಕೆ ನೀಡುವುದರ ಜೊತೆಗೆ ಕರ್ನಾಟಕ ಪ್ರವಾಸೋದ್ಯಮ ಇಲಾಖೆಯ ಅಧಿಕೃತ ಪ್ರಚಾರ ಅಭಿಯಾನಗಳಲ್ಲಿ (Fam Trips & Campaigns) ಭಾಗವಹಿಸುವ ಅವಕಾಶ ದೊರೆಯುತ್ತದೆ.
Comments
Post a Comment