Blog number 2133. ಭಾಗ - 3.ಮಾಜಿ ಶಾಸಕರಾದ ಬಿ. ಸ್ವಾಮಿ ರಾವ್ ಅವರೊಡನೆ ಮಾತುಕತೆ, ಸಾಕ್ಷರತಾ ಆಂದೋಲನ 90ರ ದಶಕದಲ್ಲಿ ಯಶಸ್ವಿಗೊಳಿಸಿದ ನೆನಪುಗಳು.
#ಭಾಗ_3. #ಹೊಸನಗರ_ವಿಧಾನಸಭಾ_ಕ್ಷೇತ್ರದ_ಮಾಜಿ_ಶಾಸಕರಾದ #ಬಿ_ಸ್ವಾಮಿರಾವ್_ಅವರೊಡನೆ_ಮಾತುಕತೆ #ಅವರ_ಕ್ಷೇತ್ರದಲ್ಲಿ_ಸಾಕ್ಷರತಾ_ಆಂದೋಲನದ_ಯಶಸ್ಸಿನ_ನೆನಪುಗಳು. https://youtu.be/Y-l93xJcxJc?feature=shared ಶಿವಮೊಗ್ಗ ಜಿಲ್ಲೆಯ ಹೊಸನಗರ ವಿಧಾನ ಸಭಾ ಕ್ಷೇತ್ರದ ಮಾಜಿ ಶಾಸಕರಾದ ಬಿ. ಸ್ವಾಮಿ ರಾವ್ ರಾಜ್ಯದ ಶಾಸಕರಲ್ಲೇ ವಿಭಿನ್ನ ನಡೆ ನುಡಿಯವರು, 2009 ರಿಂದ ಹೊಸನಗರ ವಿಧಾನ ಸಭಾ ಕ್ಷೇತ್ರವನ್ನು ಸಾಗರ - ತೀರ್ಥಹಳ್ಳಿ ಮತ್ತು ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದಲ್ಲಿ ಹರಿದು ಹಂಚಿದ್ದಾರೆ. 94 ನೇ ಹುಟ್ಟುಹಬ್ಬದ ಸಂಭ್ರಮ ಮಾಜಿ ಶಾಸಕರ ಅಭಿಮಾನಿಗಳಲ್ಲಿ ಈ ಸಂದರ್ಭದಲ್ಲೇ ಅವರ ಜೀವನ ವೃತ್ತಾಂತದ ಪುಸ್ತಕ #ನಾನು_ಹೇಳುವುದೆಲ್ಲ_ಸತ್ಯ ಬಿಡುಗಡೆ ಆಗಿದೆ. ಅವರ 94ರ ವಯಸ್ಸಿನಲ್ಲಿ ಅವರ ಜೀವನ ವೃತ್ತಾಂತ ಪ್ರಸ್ತಕ ಅವರೇ ನನ್ನ ಕಛೇರಿಗೆ ಬಂದು ಅವರ ಸ್ಪಯಾಕ್ಷರದ ಸಹಿ ನಮೂದಿಸಿ ನನಗೆ ನೀಡಿದ್ದು ಅವರಿಗೆ ನನ್ನ ಮೇಲಿನ ಪ್ರೀತಿಯ ದ್ಯೋತಕವಾಗಿದೆ ಇದಕ್ಕಾಗಿ ನಾನು ಅವರಿಗೆ ಅಭಾರಿ. ಈ ಸಂದರ್ಭದಲ್ಲಿನ ಅವರೊಡನೆ ಮಾತುಕಥೆಯ ಸಂದರ್ಶನಗಳನ್ನು ಮಾಡಿದ್ದೇನೆ ಅದರ 3 ನೇ ಭಾಗ ಇದು, ಸಾಕ್ಷರತಾ ಆಂದೋಲನ ಅವರ ಕ್ಷೇತ್ರದಲ್ಲಿ ಯಶಸ್ವಿ ಆಗಿ ನೆರವೇರಿಸಿದ ಆ ದಿನಗಳನ್ನ ಅವರು ನೆನಪು ಮಾಡಿಕೊಂಡರು. ಈಗ ನಮ್ಮ ಹೆಬ್ಬೆಟ್ಟಿನ ಅಚ್ಚು ರೇಷನ್ ಕಾರ್ಡ್, ಆಸ್ತಿ ನೊಂದ...