Skip to main content

Posts

Showing posts with the label Heggodu Kakal-TSS Super Market

ಹೆಗ್ಗೋಡಿನ ಕಾಕಲ್ ಸಹೋದರರ ಕಾಕಲ್ -TSS ಸಂಯೋಜಿತ ಸೂಪರ್ ಮಾರ್ಕೆಟ್.

#ಹೆಗ್ಗೋಡಿನ_ಕಾಕಲ್_TSS_ಅತ್ಯುತ್ತಮ_ಸೂಪರ್_ಬಜಾರ್. #ಪಸ್ಟ್_ಕ್ವಾಲಿಟಿ_ಕಡಿಮೆ_ದರದಲ್ಲಿ_ಮಾರಟ  #ಕೃಷಿ_ಆದಾರಿತ_ಕುಟುಂಬಗಳ_ಬೇಡಿಕೆಯ_ಎಲ್ಲಾ_ವಸ್ತುಗಳು_ಇಲ್ಲಿ_ಲಭ್ಯ. #ಹೆಗ್ಗೋಡಿನ_ಕಾಕಲ್_ಸಹೋದರರು_ಗ್ರಾಮೀಣ_ಪ್ರದೇಶದ_ಸ್ವಯಂಉದ್ಯೋಗಿಗಳಿಗೆ_ರೋಲ್_ಮಾಡಲ್    ಸಿರ್ಸಿಯ ಪ್ರತಿಷ್ಠಿತ ತೋಟಗಾರಿಕಾ ಕೋ ಆಪರೇಟಿವ್ ಸೇಲ್ಸ್ ಸರ್ವಿಸ್ ಜನರ ಬಾಯಲ್ಲಿ TSS ಇದು ಅತ್ಯಂತ ಯಶಸ್ವಿ ಮತ್ತು ಬಳಕೆದಾರರ ನಂಬಿಕೆಯ ಬ್ರಾಂಡೆಡ್ ಸಂಸ್ಥೆ ಈ ಸಂಸ್ಥೆಯೊಡನೆ ಹೆಗ್ಗೋಡಿನ ಕಾಕಲ್ ಉಪ್ಪಿನಕಾಯಿ, ಕಾಕಲ್ ಪೆಟ್ರೋಲ್ ಬಂಕ್ ಮುಂತಾದ ಉದ್ಯಮಗಳನ್ನು ಗ್ರಾಮೀಣ ಪ್ರದೇಶದಲ್ಲಿ ಯಶಸ್ವಿಯಾಗಿ ನಡೆಸುತ್ತಿರುವ ಕಾಕಲ್ ಸಹೋದರರ ಸಂಸ್ಥೆ ಹೆಗ್ಗೋಡಿನಲ್ಲಿ #ಕಾಕಲ್_TSS ಪ್ರಾ೦ಚೈಸಿ ಸೂಪರ್ ಮಾರ್ಕೆಟ್ ಕಳೆದ ವರ್ಷ ಪ್ರಾರಂಬಿಸಿದ್ದರು.   ಅಲ್ಲಿಗೆ ಹೋದವರು ಅಲ್ಲಿನ ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆ, ಅದೇ ಅವರಣದಲ್ಲಿರುವ ಪೆಟ್ರೋಲ್ ಪಂಪ್, ಇವರದೇ ಕಾಕಲ್ ಸಂಸ್ಥೆಯ ಉಪ್ಪಿನಕಾಯಿ ಜೊತೆಗೆ ಈಗ ಆಗಿರುವ TSS ಸೂಪರ್ ಮಾರ್ಕೆಟ್ ತುಂಬಾ ಚೆನ್ನಾಗಿದೆ, ಪ್ರಶಾ೦ತ ವಾತಾವರಣದಲ್ಲಿದೆ ಅಂತೆಲ್ಲ ರೀವೀವ್ ಕೇಳಿದ್ದೆ ಆದರೆ ಅಲ್ಲಿಗೆ ಹೋಗಲಾಗಿರಲಿಲ್ಲ.    ಇವತ್ತು ಮಾರ್ಚ್ ಕೊನೆಯಲ್ಲಿ ಬೀಮನಕೋಣೆಯ ಪಿಎಲ್ ಡಿ ಬ್ಯಾಂಕಿಗೆ ಹೋಗುವ ಕೆಲಸ ಇತ್ತು ಅಲ್ಲಿಂದ ಕಾಕಲ್ ನವರ ಈ TSS ಸಂಯೋಜಿತ ಸೂಪರ್ ಮಾರ್ಕೆಟ್ ಗೆ ಹೋಗುವ ತೀರ್ಮಾನ ಮನೆ...