Blog number 1993. ಭಾರತ ದೇಶದ ಪ್ರಖ್ಯಾತ ಜೈನ ಮುನಿಗಳಾದ ರಾಷ್ಟ್ರ ಸಂತ ಜಂಗಲ್ ವಾಲೆ ಬಾಬಾ ನಮ್ಮ ಶ್ರೀ ಕೃಷ್ಣಸರಸ ಕನ್ವೆನ್ಷನ್ ಹಾಲ್ ನಲ್ಲಿ 2015 ರಲ್ಲಿ ತಂಗಿದ್ದರು ಅವರ ಸತ್ಸಂಗ ನನ್ನ ಸೌಭಾಗ್ಯ
#ನಮ್ಮ_ಕೃಷ್ಣಸರಸ_ಕನ್ವೆನ್ಷನ್_ಹಾಲ್_ನಲ್ಲಿ_ಜಂಗಲ್_ವಾಲೆ_ಬಾಬ_ತಂಗಿದ್ದರು #ಅವರನ್ನು_ಪತ್ರಿಕೆಗಾಗಿ_ಸಂದರ್ಶಿಸಿದ್ದೆ #ಸಲ್ಲೇಖನ_ವೃತ_ಸ್ವೀಕರಿಸಿ_ಜಿನೈಕ್ಯರಾದರು #ರಾಷ್ಟಸಂತ_108ಮುನಿ_ಶ್ರೀಚಿನ್ಮಯಸಾಗರ_ಮಹಾರಾಜರು #ಇಂತಹ_ಸತ್ಪುರುಷರ_ಸತ್ಯಂಗ_ನನಗೆ_ಸದಾ_ಸಿಗುವುದು_ನನಗೆ_ಆಶ್ಚಯ೯ #ನನ್ನ_ಮತಾ_ಪಿತೃಗಳ_ಗುರು_ಹಿರಿಯರ_ಪುಣ್ಯದ_ಫಲ_ಇರಬಹುದು ನಿನ್ನೆ ಶ್ರೀ ಪ್ರಮುಖ ಸಾಗರ ಜೈನ ಮುನಿಗಳು ನಮ್ಮ ಶ್ರೀಕೃಷ್ಣ ಸರಸ ಕನ್ವೆನ್ಷನ್ ಹಾಲ್ ನಲ್ಲಿ ತಂಗಿದ್ದ ಬಗ್ಗೆ ಬರೆದಿದ್ದೆ ಇವತ್ತು ಇಡೀ ಭಾರತ ದೇಶದಲ್ಲೇ ಪ್ರಖ್ಯಾತರಾಗಿದ್ದ ಜಂಗಲ್ ವಾಲೆ ಬಾಬ ಅವರು ನಮ್ಮಲ್ಲಿ ತಂಗಿದ್ದ ಲೇಖನ ಇಲ್ಲಿದೆ. ಇಡೀ ಭಾರತ ದೇಶದಲ್ಲಿ ಜಂಗಲ್ ವಾಲೆ ಬಾಬ ಅಂತ ಚಿರಪರಿಚಿತರಾದ ಜೈನ ಮುನಿ ರಾಷ್ಟ್ರ ಸಂತ 108 ಮುನಿ ಶ್ರೀ ಚಿನ್ಮಯ ಸಾಗರ ಮಹರಾಜರು ನಮ್ಮಲ್ಲಿ ತ0ಗಿದ್ದರು ಮತ್ತು ಅವರನ್ನ ಶಿವಮೊಗ್ಗದ ಶೃ೦ಗೇಶ್ ರ ಜನ ಹೋರಾಟ ಪತ್ರಿಕೆಗೆ ಸಂದಶ೯ನ ಮಾಡಿದ್ದೆ ಅಂದರೆ ಅವರನ್ನ ಬಲ್ಲವರು ನಂಬುವುದಿಲ್ಲ. ಯಾಕೆಂದರೆ ಅವರು ಆಚರಿಸುವ ಚಾತುಮಾ೯ಸಕ್ಕೆ ಅನೇಕ ರಾಜ್ಯದ ಮುಖ್ಯಮಂತ್ರಿಗಳು, ಕೇಂದ್ರ ಸಕಾ೯ರದ ಮಂತ್ರಿಗಳು, ಉನ್ನತ ಹುದ್ದೆಯ ಅಧಿಕಾರಿಗಳು ಅವರನ್ನ ಹುಡುಕಿಕೊಂಡು ಬರುತ್ತಾರೆ. ರಾಜೀವ್ ಗಾ೦ದಿ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮನ್ಮೋಹನ್ ಸಿಂಗ್, ಮೋದಿ ಇವರೆಲ್ಲ ಇವರಿಗೆ ನೇರ ಸಂಪಕ೯ ಇರುವ...