Skip to main content

Posts

Showing posts with the label Sringesh Name is Remarkable in Karnataka journalism

#ಶೃ೦ಗೇಶ್ ರಾಜ್ಯ ಮತ್ತು ಜಿಲ್ಲೆಯ ಪತ್ರಿಕೋದ್ಯಮದಲ್ಲಿ ಅಚ್ಚಳಿಯದ ಹೆಸರು#

#ಶೃ೦ಗೇಶ್ ಸಂಪಾದಕತ್ವದ ಜನ ಹೋರಾಟಕ್ಕೆ ಇವತ್ತಿಗೆ 15 ನೇ ವಾಷಿ೯ಕೋತ್ಸವ #      ಶೃ೦ಗೇಶ್ ಶಿವಮೊಗ್ಗ ಪತ್ರಿಕೋದ್ಯಮದಲ್ಲಿ ಒಂದು ಹೊಸ ಆಯಮ ತಂದವರು.     ಶೃ೦ಗೇಶ್ ಪರಿಚಯ ನಾನು ಶಿವಮೊಗ್ಗ ಜಿಲ್ಲಾ ಪಂಚಾಯತ್ ಸದಸ್ಯನಾಗಿದ್ದಾಗಿ೦ದ ಪ್ರಾರಂಭವಾದದ್ದು ಇಲ್ಲಿ ತನಕ ಮುಂದುವರಿದು ಕೊಂಡು ಬಂದಿದೆ.      ಅವರು ಶಿವಮೊಗ್ಗದ ಕ್ರಾಂತಿ ದೀಪ ಪತ್ರಿಕೆಯಲ್ಲಿ ವರದಿಗಾರರಾಗಿದ್ದಾಗ ಅವರ ಮೇಲಿನ ಹಲ್ಲೆ ಆದಾಗ ಅವರನ್ನೆಲ್ಲ ನಂಜಪ್ಪ ಆಸ್ಪತ್ರೆಗೆ ಸೇರಿಸಿದ್ದಾರೆಂದಾಗ ನಾವೆಲ್ಲ ಜಿಲ್ಲಾ ಪಂಚಾಯತ್ ಕಚೇರಿಯಿಂದ ಅಲ್ಲಿಗೆ ಹೋಗಿದ್ದೆವು.        ಮರುದಿನ ನಡೆದ ಪ್ರತಿಭಟನಾ ಮೆರವಣಿಗೆ ಮತ್ತು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆಯಲ್ಲಿ ಬಾಗಿಯಾದ ನೆನಪು ಹಸಿರಾಗಿದೆ.       ರವಿ ಬೆಳೆಗೆರೆ ಸಾರಥ್ಯದ ಹಾಯ್ ಬೆಂಗಳೂರಲ್ಲಿ ಇವರ ತನಿಖಾ ವರದಿಗಳು ಓದಲು ರೋಮಾಂಚನ ಉಂಟು ಮಾಡುತ್ತಿತ್ತು, ಇಂತಹ ವರದಿಗಳಿಂದ ಇವರಿಗೆ ರೋವಿಂಗ್ ರಿಪೋಟ೯ರ್ ಎಂಬ ಬಿರುದನ್ನ ರವಿ ಬೆಳೆಗೆರೆಯವರೆ ನೀಡಿದ್ದಾರೆ.       ನಮ್ಮ ನಾಡು ಪತ್ರಿಕೆಯ ಸಂಪಾದಕರಾಗಿ ಜಿಲ್ಲೆಯ ಪತ್ರಿಕೋದ್ಯಮದಲ್ಲಿ ಹೊಸತನ ತಂದವರು ಕಾಲಾ೦ತರದಲ್ಲಿ ತಮ್ಮ ಸ್ವಂತ ಪತ್ರಿಕೆ ಜನ ಹೋರಾಟ ಪ್ರಾರ೦ಬಿಸಿ 15ನೇ ವಷ೯ಕ್ಕೆ ಕಾಲಿಟ್ಟಿದ್ದಾರೆ.     ಅನೇಕ ಜನಪರ ಹೋರ...