Blog number 932. ಗೆಳೆಯ ಹಾವೇರಿ ಜಿಲ್ಲಾ ಪಂಚಾಯತ್ ನ ಮಾಜಿ ಅಧ್ಯಕ್ಷ, ಭಾರತೀಯ ಸೈನ್ಯದಲ್ಲಿ ಸೇವೆ ಸಲ್ಲಿಸಿದ ರೈತರ ಒಡನಾಡಿ ರಾಜೇಂದ್ರ ಹಾವೇರಣ್ಣ ವಿಧಾನಸಭಾ ಸದಸ್ಯರಾಗಲಿ ಎಂದು ಹಾರೈಸಿದೆ.
#ಹಾವೇರಿ_ಜಿಲ್ಲಾಪಂಚಾಯತ್_ಮಾಜಿ_ಅಧ್ಯಕ್ಷರು_ಹಾಲಿ_ಸದಸ್ಯರು. #ಜಿಲ್ಲಾ_ಬಿಜೆಪಿ_ಉಪಾದ್ಯಕ್ಷರು #ಕುರುಬ_ಸಮಾಜದ_ಯುವ_ಮುಂದಾಳು #ಗೆಳೆಯ_ರಾಜೇಂದ್ರಹಾವೇರಣ್ಣನವರು_ನನ್ನ_ಅತಿಥಿ #ಮುಂದಿನ_ವರ್ಷ_ಇವರು_ವಿಧಾನಸಭೆಗೆ_ಪ್ರವೇಶಿಸಲಿ_ಎಂದು_ಹಾರೈಸುತ್ತೇನೆ. ರಾಜೇಂದ್ರ ಹಾವೇರಣ್ಣನವರು 2013ರಲ್ಲಿ ಹಾವೇರಿ ಜಿಲ್ಲೆಯ ಜಿಲ್ಲಾ ಪಂಚಾಯತ್ ಅಧ್ಯಕ್ಷರು, ಈಗಲೂ ಹಾಲಿ ಜಿಲ್ಲಾ ಪಂಚಾಯತ್ ಸದಸ್ಯರಾಗಿದ್ದಾರೆ ಮತ್ತು ಹಾವೇರಿ ಜಿಲ್ಲಾ ಬಿಜೆಪಿ ಉಪಾದ್ಯಕ್ಷರು. ಇವರ ಕ್ಷೇತ್ರದಲ್ಲಿಯೇ ಕಾಗಿನೆಲೆ ಕನಕದಾಸರ ಹುಟ್ಟೂರು ಬಾಡಾ ಮತ್ತು ಕನಕದಾಸರ ಸಮಾದಿ ಸ್ಮಾರಕಗಳು ಇದೆ, ಕುರುಬ ಸಮಾಜ ಪರಿಶಿಷ್ಟ ಪಂಗಡದ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದವರು. ಸ್ವಾಮೀಜಿಗಳ ಆಪ್ತ ವಲಯದವರು ಈಗಿನ ಇನ್ನೊಂದು ಅವದಿಗೆ ಜಿಲ್ಲಾ ಪಂಚಾಯತ್ ಅಧ್ಯಕ್ಷರಾಗುವ ಅಥವ ಸರ್ಕಾರದ ನಿಗಮ ಮಂಡಳಿ ಅಧ್ಯಕ್ಷರಾಗುತ್ತಾರೆ ಅಂತ ಹಾವೇರಿಯ ರಾಜಕೀಯ ವಲಯದಲ್ಲಿ ಸುದ್ದಿ ಇದೆ. ರಾಜೇಂದ್ರ ಹಾವೇರಣ್ಣನವರು ಭಾರತೀಯ ಸೇನೆಯಲ್ಲಿ ಕಾಶ್ಮೀರದಲ್ಲಿ ಸೇವೆ ಸಲ್ಲಿಸಿದ ವೀರ ಯೋದರು ಕೂಡ. ಇವರು ತುಂಬಾ ಕಷ್ಟದಲ್ಲಿ ಮೇಲೆ ಬಂದವರು ಒಟ್ಟು ಕುಟುಂಬದಲ್ಲಿ 15 ಎಕರೆ ಜಮೀನು ಮತ್ತು ಒಂದು ಬೋರ್ ವೆಲ್ ನೀರಿದ್ದರೂ ಇಡೀ ಕುಟುಂಬ ಕೃಷಿಯಲ್ಲಿ ನಿರಾಸಕ್ತಿ ತೋರಿದ್ದರಿಂದ ಎಲ್...