Blog number 932. ಗೆಳೆಯ ಹಾವೇರಿ ಜಿಲ್ಲಾ ಪಂಚಾಯತ್ ನ ಮಾಜಿ ಅಧ್ಯಕ್ಷ, ಭಾರತೀಯ ಸೈನ್ಯದಲ್ಲಿ ಸೇವೆ ಸಲ್ಲಿಸಿದ ರೈತರ ಒಡನಾಡಿ ರಾಜೇಂದ್ರ ಹಾವೇರಣ್ಣ ವಿಧಾನಸಭಾ ಸದಸ್ಯರಾಗಲಿ ಎಂದು ಹಾರೈಸಿದೆ.
#ಜಿಲ್ಲಾ_ಬಿಜೆಪಿ_ಉಪಾದ್ಯಕ್ಷರು
#ಕುರುಬ_ಸಮಾಜದ_ಯುವ_ಮುಂದಾಳು
#ಗೆಳೆಯ_ರಾಜೇಂದ್ರಹಾವೇರಣ್ಣನವರು_ನನ್ನ_ಅತಿಥಿ
#ಮುಂದಿನ_ವರ್ಷ_ಇವರು_ವಿಧಾನಸಭೆಗೆ_ಪ್ರವೇಶಿಸಲಿ_ಎಂದು_ಹಾರೈಸುತ್ತೇನೆ.
ರಾಜೇಂದ್ರ ಹಾವೇರಣ್ಣನವರು 2013ರಲ್ಲಿ ಹಾವೇರಿ ಜಿಲ್ಲೆಯ ಜಿಲ್ಲಾ ಪಂಚಾಯತ್ ಅಧ್ಯಕ್ಷರು, ಈಗಲೂ ಹಾಲಿ ಜಿಲ್ಲಾ ಪಂಚಾಯತ್ ಸದಸ್ಯರಾಗಿದ್ದಾರೆ ಮತ್ತು ಹಾವೇರಿ ಜಿಲ್ಲಾ ಬಿಜೆಪಿ ಉಪಾದ್ಯಕ್ಷರು.
ಇವರ ಕ್ಷೇತ್ರದಲ್ಲಿಯೇ ಕಾಗಿನೆಲೆ ಕನಕದಾಸರ ಹುಟ್ಟೂರು ಬಾಡಾ ಮತ್ತು ಕನಕದಾಸರ ಸಮಾದಿ ಸ್ಮಾರಕಗಳು ಇದೆ, ಕುರುಬ ಸಮಾಜ ಪರಿಶಿಷ್ಟ ಪಂಗಡದ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದವರು.
ಸ್ವಾಮೀಜಿಗಳ ಆಪ್ತ ವಲಯದವರು ಈಗಿನ ಇನ್ನೊಂದು ಅವದಿಗೆ ಜಿಲ್ಲಾ ಪಂಚಾಯತ್ ಅಧ್ಯಕ್ಷರಾಗುವ ಅಥವ ಸರ್ಕಾರದ ನಿಗಮ ಮಂಡಳಿ ಅಧ್ಯಕ್ಷರಾಗುತ್ತಾರೆ ಅಂತ ಹಾವೇರಿಯ ರಾಜಕೀಯ ವಲಯದಲ್ಲಿ ಸುದ್ದಿ ಇದೆ.
ರಾಜೇಂದ್ರ ಹಾವೇರಣ್ಣನವರು ಭಾರತೀಯ ಸೇನೆಯಲ್ಲಿ ಕಾಶ್ಮೀರದಲ್ಲಿ ಸೇವೆ ಸಲ್ಲಿಸಿದ ವೀರ ಯೋದರು ಕೂಡ.
ಇವರು ತುಂಬಾ ಕಷ್ಟದಲ್ಲಿ ಮೇಲೆ ಬಂದವರು ಒಟ್ಟು ಕುಟುಂಬದಲ್ಲಿ 15 ಎಕರೆ ಜಮೀನು ಮತ್ತು ಒಂದು ಬೋರ್ ವೆಲ್ ನೀರಿದ್ದರೂ ಇಡೀ ಕುಟುಂಬ ಕೃಷಿಯಲ್ಲಿ ನಿರಾಸಕ್ತಿ ತೋರಿದ್ದರಿಂದ ಎಲ್ಲರೂ ಇವರಿಗೆ ಸೇನೆಯಲ್ಲಿ ಬರುವ ಸಂಬಳ ನಿರೀಕ್ಷಿಸುವಂತಾದ ಕಾಲವಾಗಿತ್ತು ಇದರಿಂದ ಹೊರಬರಲು ಸೇನೆಯಿಂದ ಸ್ವಯ೦ ನಿವೃತ್ತಿ ಪಡೆದು ಕೃಷಿಯಲ್ಲಿ ತೊಡಗಿ ನಂತರ ಬೀಜ ಉತ್ಪಾದನಾ ಸಂಸ್ಥೆಯಲ್ಲಿ ದಾಖಲೆ ಮಾಡಿ ಕೈ ತುಂಬಾ ಹಣ ಮತ್ತು ದೇಶ-ವಿದೇಶ ಪ್ರವಾಸಗಳೂ ಮಾಡಿದವರು.
ಈಗ ಸುಮಾರು 50 ಎಕರೆಯಲ್ಲಿ ಕೃಷಿ ಮಾಡುತ್ತಾರೆ ಇವರ ಕೃಷಿ ಭೂಮಿಯಲ್ಲಿ ಹತ್ತಕ್ಕೂ ಹೆಚ್ಚು ಬೋರ್ ವೆಲ್ ಗಳಿದೆ ಜೊತೆಗೆ ರಾಜಕೀಯ ಸಮಾಜ ಸೇವೆಯಲ್ಲಿದ್ದಾರೆ.
ಒಬ್ಬ ಮಗ ಆಳ್ವಾಸ್ ನಲ್ಲಿ ಡಿಸ್ಕಸ್ ಥ್ರೋ ನಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಕ್ರೀಡಾಪಟು ಈಗ ದಾರವಾಡದ ಕಾನೂನು ವಿಶ್ವವಿದ್ಯಾಲಯದಲ್ಲಿ ಕಾನೂನು ಪದವಿ ಓದುತ್ತಿದ್ದಾರೆ, ಇನ್ನೊಬ್ಬ ಮಗ ಕೂಡ ಆಳ್ವಾಸ್ ನಲ್ಲಿ ಪದವಿ ಶಿಕ್ಷಣ ಕೊಡಿಸುತ್ತಿದ್ದಾರೆ, ಕೊನೆಯ ಪುತ್ರ ಹಾವೇರಿಯಲ್ಲಿ ಪಿಯುಸಿ ಶಿಕ್ಷಣ ವ್ಯಾಸಂಗ.
ಮೊನ್ನೆ ದಂಪತಿ ಸಮೇತ ನಮ್ಮಲ್ಲಿಗೆ ಬಂದಿದ್ದರು ಅವರಿಗೆ ಕೇಳಿದೆ "ನಿಮ್ಮ ಹಿತೈಷಿಗಳು ಪುನಃ ಜಿಲ್ಲಾ ಪಂಚಾಯತ್ ಅಧ್ಯಕ್ಷರಾಗುತ್ತಾರೆ ಅನ್ನುತ್ತಾರೆ, ಇನ್ನು ಕೆಲವರು ಜಿಲ್ಲಾ ಪಂಚಾಯತ್ ಒಮ್ಮೆ ಅಧ್ಯಕ್ಷರಾಗಿದ್ದರು ಈಗ ಅದು ಬೇಡ ನಿಗಮ ಮಂಡಳಿ ಅಧ್ಯಕ್ಷರಾಗಲಿ ಅನ್ನುತ್ತಾರೆ, ಇನ್ನೂ ಕೆಲವರು ಇದಾವುದು ಬೇಡ ಬ್ಯಾಡಗಿ ವಿದಾನ ಸಭಾ ಕ್ಷೇತ್ರದಿಂದ ಶಾಸಕರಾಗಲಿ ಅನ್ನುತ್ತಾರೆ ನಿಮ್ಮ ನಿರ್ದಾರ ಏನು?" ಅದಕ್ಕೆ ಅವರ ಉತ್ತರ, ದೇಶದ ಸೈನಿಕನಾಗಿ ಈಗ ಈ ಮಟ್ಟಕ್ಕೆ ಬರಲು ನನ್ನ ಪ್ರಯತ್ನಕ್ಕಿಂತ ನನ್ನ ವಿಧಿ ಬರಹ ಕಾರಣವಾಗಿದೆ, ಯಾವುದೂ ನಿರ್ದಾರ ಮಾಡಿಲ್ಲ ಆದರೆ ಕನಕದಾಸ ಪೀಠದ ಸ್ವಾಮೀಜಿಯವರು ಏನು ಮಾರ್ಗದರ್ಶನ ಮಾಡುತ್ತಾರೆ ಅದರಂತೆ ನಡೆಯುತ್ತೇನೆ ಅಂದರು.
ರಾಜ್ಯ ಬಿಜೆಪಿಯಲ್ಲಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಹೊಸ ಮುಖಗಳಿಗೆ ಅವಕಾಶ ನೀಡಿದರೆ ಭಾರತೀಯ ಸೈನ್ಯದಲ್ಲಿ ಸೇವೆ ಸಲ್ಲಿಸಿದ, ರೈತರ ಮದ್ಯದಲ್ಲಿ ಬೀಜೋತ್ಪನ್ನ ಉದ್ಯಮದಲ್ಲಿರುವ,ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾಗಿದ್ದ ಗೆಳೆಯ ರಾಜೇಂದ್ರ ಹಾವೇರಣ್ಣನವರಿಗೆ ಕನಕದಾಸರ ಹುಟ್ಟೂರಿನ ಕ್ಷೇತ್ರವಾದ ಬ್ಯಾಡಗಿ ವಿದಾನ ಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಅವಕಾಶ ಸಿಗಲಿ ಎಂದು ಹಾರೈಸಿದೆ.
ಹಾಗೇನಾದರು ಅವಕಾಶ ಸಿಕ್ಕರೆ, ನನಗೆ ಈ ಭಾಗದ ಹೆಚ್ಚು ಪರಿಚಯ ಇರುವುದರಿಂದ ಅತಿ ಹೆಚ್ಚು ಮತಗಳಿಂದ ಜನ ಇವರನ್ನು ಆಯ್ಕೆ ಮಾಡುವುದು ಮಾತ್ರ ಖಚಿತ.
Comments
Post a Comment