Blog number 928. ಮಲೆನಾಡಿನ ಕಾಡಿನಲ್ಲಿ ವಿವಿದ ಅಣಬೆಗಳ ಕಾಲ, ಅಣಬೆ ಪ್ರಿಯರ ಊಟದ ತಟ್ಟೆಯಲ್ಲಿ ವೈವಿಧ್ಯಮಯ ಅಣಬೆ ಖಾದ್ಯಗಳ ಸರಣಿ .
#ಪಶ್ಚಿಮಘಟ್ಟದಲ್ಲಿ_ಹಣ್ಣುಗಳ_ಕಾಲ_ಮುಗಿದು_ಕಳಲೆ_ಮರಕೆಸದ_ನಂತರ_ಅಣಬೆ_ಹುಡುಕಾಟ
#ಇವತ್ತು_ನಮ್ಮ_ರಬ್ಬರ್_ಟ್ಯಾಪರ್_ಆದರ್ಶ_ಮತ್ತು_ಸ್ನೇಕ್_ಪ್ರಬಾಕರ್_ಕಳಿಸಿದ_ಅಣಬೆಗಳು.
ಬೇಸಿಗೆಯಲ್ಲಿ ಆಲೇಮನೆ ಕಬ್ಬಿನ ಹಾಲು, ಬೆಲ್ಲದ ಸವಿಯ ಜೊತೆ ಉಪ್ಪಿನಕಾಯಿ ಮಿಡಿ ಹುಡುಕುತ್ತಾ ಹುಡುಕುತ್ತಾ ಮಾವಿನ ಹಣ್ಣಿನ ಕಾಲ, ಜೊತೆಗೆ ಹಲಸಿನ ಹಬ್ಬ ಇವೆಲ್ಲದರ ಮಧ್ಯ ಮುಂಗಾರು ಶುರು ಆಗುವಾಗ ನಾಲಿಗೆ ಬಯಸುವ ಕಳಲೆ, ಮರ ಕೆಸುವಿನ ಎಲೆಯ ಪತ್ರೋಡೆ ಇದೆಲ್ಲ ಬೇಸರ ಅನ್ನಿಸುವಾಗಲೇ ಬಿರು ಮಳೆಯ ಮಧ್ಯಕಾಲ ಮುಗಿಯುವಾಗ ಬಿಸಿಲು ಮಳೆ ಕಣ್ಣಾ ಮುಚ್ಚಲೆ ಜೊತೆ ಜೊತೆಯಲ್ಲಿ ಗುಡುಗುಗಳ ಶಬ್ದ ಬಂದಾಗಲೇ ಎಲ್ಲರಿಗೂ ಅಣಬೆ ಬೇಕು ತಿನ್ನಲೇಬೇಕು ಅನ್ನುವ ತವಕ ಪ್ರಾರಂಭ.
ಈಗ ಹಳ್ಳಿಗಳಲ್ಲೂ ಪಾರಂ ಅಣಬೆ ವರ್ಷ ಪೂರ್ತಿ ಸಿಗುವುದರಿಂದ ಮೊದಲಿನಂತೆ ಅಣಬೆಗೆ ಹಪಾಹಪಿ ಇಲ್ಲವಾದರೂ ಕಾಡಿನ ಜವಾರಿ ಅಣಬೆಯ ರುಚಿ ವಿಬಿನ್ನವಾದ್ದರಿಂದ ಬೇಡಿಕೆ ಜಾಸ್ತಿ ಇದೆ.
ಮೇಲ್ಪರ್ಗದಲ್ಲಿ ಅಣಬೆ ಬಳಕೆ ನಿಷೇದವಿದೆ, ನಮ್ಮ ಬಾಗದ ಬ್ರಾಹ್ಮಣರು, ಲಿಂಗಾಯಿತರು ಮತ್ತು ಜೈನರು ಆ ಕಾರಣದಿಂದ ಅಣಬೆ ಸೇವಿಸುವುದಿಲ್ಲ ಹಾಗಾಗಿ ಇದು ಮಾಂಸಹಾರಿಗಳಿಗೆ ಹೆಚ್ಚು ಮೀಸಲು.
ನಮ್ಮ ರಬ್ಬರ್ ತೋಟದ ಟ್ಯಾಪರ್ ಕಿರಿಯ ಮಿತ್ರ ಆದರ್ಶ ಪೋನ್ ಮಾಡಿ ತಮ್ಮ ಜಮೀನಿನಲ್ಲಿ ಅಣಬೆ ಹುಟ್ಟಿದೆ ಬೇಕಾ ಅಂದಾಗ ನಾನು ಹೇಳಿದ್ದು "ಅಣಬೆ ಮತ್ತು ಗಿಣ್ಣಕ್ಕೆ ಅನುಮತಿ ಯಾವತ್ತೂ ಕೇಳದೆ ತಂದು ಬಿಡಬೇಕು" ಅಂತ ಹೇಳಿ ಪೋನಿಟ್ಟು ಸ್ಟಲ್ಪ ಹೊತ್ತಲ್ಲೇ ಸ್ನೇಕ್ ಪ್ರಬಾಕರ್ ಕೂಡ ಪ್ರತಿ ವರ್ಷದಂತೆ ಅಣಬೆ ಕಳಿಸಿದ್ದೇನೆ ಅಂದರು.
ಇನ್ನೇನು ನಮ್ಮಲ್ಲಿ ಕಾಡು ಅಣಬೆಯ ಹಬ್ಬವೇ ಆಯಿತು ಜೊತೆಗೆ ಅಕ್ಕಿ ರೊಟ್ಟಿ ಇನ್ನೊಂದು ತಿಂಗಳು ಮಲೆನಾಡಿನಲ್ಲಿ ವಿವಿದ ಅಣಬೆಗಳು ಬೆಳೆಯಲಿದೆ ಅಣಬೆ ಪ್ರಿಯರ ಊಟದ ತಟ್ಟೆಯಲ್ಲಿ ಬಗೆ ಬಗೆಯ ಅಣಬೆ ಖಾದ್ಯಗಳ ಸರಣಿಯ ರಸದೌತಣ!!...
Comments
Post a Comment