Skip to main content

Blog number 950. ಸರ್ವರಿಗೂ 2022ರ ಗೌರಿ-ಗಣೇಶ ಚತುರ್ಥಿ ಹಬ್ಬದ ಶುಭಾಶಯಗಳು, ಜಾತಿ ಆಚರಣೆ ಮನೆಯ ಒಳಗಿರಲಿ ಪ್ರೀತಿ ಎಲ್ಲರ ಮೇಲಿರಲಿ, ದಯೆಯೇ ಧರ್ಮದ ಮೂಲ ಮತ್ತು ದೇವರು ಸನ್ಮಾರ್ಗ ತೋರಿಸುತ್ತಾರೆಂಬ ನಂಬಿಕೆ ನಮ್ಮೆಲ್ಲರದ್ದು ಆಗಿರಲಿ.

#ಗೌರಿ_ಗಣೇಶ_ಚತುರ್ಥಿ_ಶುಭಾಷಯಗಳು.

#ವರ_ಸಿದ್ದಿ_ಅನುಗ್ರಹಿಸು_ವರಸಿದ್ದಿ_ವಿನಾಯಕ

#ವಿಘ್ನಗಳ_ನಿವಾರಿಸು_ವಿನಾಯಕ.

#GOD_SHOWS_GOODWAYS.

   ಗೌರಿ ಗಣೇಶ ಹಬ್ಬದ ಶುಭಾಶಯಗಳು ಎಲ್ಲರಿಗೂ ಹಾರೈಸುತ್ತೇನೆ, ನನ್ನ ಪೂರ್ವಜರ ಪುಣ್ಯದಿಂದ 16 ವರ್ಷದ ಹಿಂದೆ ನಮ್ಮ ಊರಲ್ಲಿ ಶ್ರೀವರಸಿದ್ಧಿ ವಿನಾಯಕ ದೇವರ ದೇವಸ್ಥಾನ ನಿರ್ಮಿಸಿ ಊರಿಗೆ ಸಮರ್ಪಿಸುವ ಪುಣ್ಯದ ಕೆಲಸ ನನಗೆ ದೇವರೇ ದಯಪಾಲಿಸಿದ್ದು.
  ನಿಮಾ೯ಣದ ವಾಸ್ತು, ಕೃಷ್ಣ ಶಿಲಾ ವರಸಿದ್ಧಿವಿನಾಯಕ ದೇವರ ಶಿಲ್ಪ ಕೋಲಾರದ ಶಿವಾರಪಟ್ಟಣದ ರಾಷ್ಟ್ರ ಪ್ರಶಸ್ತಿ ವಿಜೇತ ಶಿಲ್ಪಿಯಿಂದ ಮಾಡಿಸಿ, ನಮ್ಮ ಹಳ್ಳಿಯಲ್ಲಿ ಪ್ರತಿಷ್ಟಾಪಿಸಿ, ದೇವಾಲಯದ ಉದ್ಘಾಟನ ದಿನ ಕಾಗೋಡು ಹೋರಾಟದ ನೇತಾರ ಗಣಪತಿಯಪ್ಪ ದಂಪತಿ ಮತ್ತು ನಮ್ಮ ಊರ ಹಿರಿಯ ಗನ್ನಿಸಾಹೇಬರಿಂದ ದೇವಾಲಯದ ಗೋಪುರದ ಕಲಶಕ್ಕೆ ಕಲಶಾಭಿಷೇಕ ಮಾಡಿಸಿ ಇವತ್ತಿನವರೆಗೆ ನಿರ್ವಿಘ್ನವಾಗಿ ಭಕ್ತಿಯಿಂದ ಭಕ್ತರು ಪೂಜಿಸುವಂತ ನಮ್ಮ ಹಳ್ಳಿಯ ಶ್ರೀವರ ಸಿದ್ಧಿ ವಿನಾಯಕ ದೇವಸ್ಥಾನದ ನೇತೃತ್ವವಹಿಸಿದ್ದ ಬೆಂಗಳೂರಿನ ವಿಜಯನಗರದ ಪ್ರಖ್ಯಾತ ಜೋತಿಷಿ ಡಾ.ಎನ್.ಎಸ್.ವಿಶ್ವಪತಿ ಶಾಸ್ತ್ರೀಗಳಿಗೆ ಯಾವತ್ತೂ ಸ್ಮರಿಸುತ್ತಾ ಅವರ ಆಶ್ರೀವಾದ ಬೇಡುತ್ತೇನೆ ಈಗ ಅಮೇರಿಕಾದಲ್ಲಿ ಪುತ್ರನ ಮನೆ ಗೃಹ ಪ್ರವೇಶಕ್ಕೆ ದಂಪತಿಗಳು ಹೋಗಿದ್ದಾರೆ.
   ದೇವಾಲಯದ ಕಲಶ ನೀಡಿದವರು ತ್ಯಾಗರ್ತಿಯ ಇನಾಂದಾರರಾಗಿದ್ದ ಗುರುಮೂರ್ತಿರಾಯರ ಪತ್ನಿ, ಶ್ರೀದರ ಸ್ವಾಮಿಗಳ ಭಕ್ತರು ಇವರುಗಳು.
   ಪ್ರತಿ ಸಂಕಷ್ಟಹರ ಚತುರ್ಥಿ ಮತ್ತು ಆ ದಿನ ಚಂದ್ರದರ್ಶನದ ನಂತರ ಅನ್ನ ಪ್ರಸಾದ, ಪ್ರತಿ ವರ್ಷ ಬ್ರಹ್ಮ ರಥೋತ್ಸವ ಜಾತ್ರೆಗಳು ಭಕ್ತಿ ಪೂರ್ವಕವಾಗಿ ನಡೆಯುತ್ತಿದೆ.
    ಇದು ಆನಂದಪುರಂ ಹೋಬಳಿಯಲ್ಲಿ ನಿರ್ಮಾಣವಾದ ಮೊದಲ ಗಣಪತಿ ದೇವಸ್ಥಾನ, ಕೋಟೆ ಇರುವಲ್ಲಿ ಆಂಜನೇಯ, ದೇವಿ ಮತ್ತು ಗಣಪತಿ ದೇವಸ್ಥಾನ ಇರಲೇ ಬೇಕಂತೆ ಆದರೆ ಕೆಳದಿ ಅರಸರ ಕೋಟೆ ಇರುವ ಆನಂದಪುರಂನಲ್ಲಿ ಗಣಪತಿ ದೇವಸ್ಥಾನ ಇರಲೇ ಇಲ್ಲ ಕಾರಣ ಅದು ಇದೇ ಸ್ಥಳದಲ್ಲಿ ಕಾರಣಾ೦ತರದಿಂದ ಅವಸಾನ ಹೊಂದಿತ್ತು ಎನ್ನುತ್ತಾರೆ.
  ಶ್ರೀವರ ಸಿದ್ಧಿ ವಿನಾಯಕ ನನಗೆ ಮತ್ತು ನನ್ನ ಕುಟುಂಬಕ್ಕೆ ಸದ್ಬುದ್ಧಿ - ಸಮೃದ್ದಿ - ಆರೋಗ್ಯ ಭರಪೂರವಾಗಿ ನೀಡಿದ್ದಾನೆ ಮುಂದಿನ ದಿನಗಳಲ್ಲೂ ಅನುಗ್ರಹಿಸಲಿ ಮತ್ತು ಸಿದ್ದಿ ವಿನಾಯಕನ ಆರಾದಿಸುವ ಎಲ್ಲರಿಗೂ ಅನುಗ್ರಹಿಸಲಿ ಎಂದು ಪ್ರಾರ್ಥಿಸುತ್ತೇನೆ.

  #ದೇವನೊಬ್ಬ_ನಾಮಹಲವು

  #ದಯೆಯೆ_ದರ್ಮದ_ಮೂಲ
  
  #ಜಾತಿ_ಮನೆಯ_ಒಳಗಿರಲಿ_ಪ್ರೀತಿ_ಎಲ್ಲರ_ಮೇಲಿರಲಿ
   #ದೇವರು_ಸನ್ಮಾರ್ಗ_ತೋರುತ್ತಾನೆ_ಎನ್ನುವ_ನಂಬಿಕೆ_ನಮ್ಮೆಲ್ಲರದ್ದೂ_ಆಗಿರಲಿ

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...