Blog number 941. ನನಗೆ ಕಡೆಗೋಲು ಕೃಷ್ಣನ ಪಂಚಲೋಹದ ವಿಗ್ರಹ ನೀಡಿದ ಪ್ರದೀಪ್ ಕುಮಾರ್ ಕಲ್ಕೂರರು ಪ್ರತಿ ವರ್ಷ ಮಂಗಳೂರಿನಲ್ಲಿನ ಕದ್ರಿ ದೇವಸ್ಥಾನದಲ್ಲಿ ನಡೆಸುವ ಕೃಷ್ಣ ವೇಷ ಸ್ಪರ್ದೆ ತುಂಬಾ ಪ್ರಸಿದ್ಧಿ ಪಡೆದಿದೆ.
#ಮ೦ಗಳೂರಿನ_ಪ್ರದೀಪ್_ಕುಮಾರ್_ಕಲ್ಕೂರರು_ನೀಡಿದ_ಕಡಗೋಲು_ಕೃಷ್ಣ_ಪಂಚಲೋಹ_ವಿಗ್ರಹ
#ಮ೦ಗಳೂರಿನ_ಕದ್ರಿ_ದೇವಸ್ತಾನದಲ್ಲಿ_ಇವರ_ಪ್ರತಿಷ್ಠಾನ_ನಡೆಸುವ_ಕೃಷ್ಣವೇಷ_ಸ್ಪರ್ದೆ_ಪ್ರಖ್ಯಾತ
#ಪಂಜಾಬಿನ_ಜಲಂದರ್_ಲ್ಲಿ_ನಡೆಯುವ_ಕೃಷ್ಣ_ಜನ್ಮಾಷ್ಟಮಿ_ಅತ್ಯಂತ_ವೈಭವದ್ದು.
ಕೃಷ್ಣ ನನ್ನ ಅತ್ಯಂತ ಪ್ರೀತಿಯ ದೇವರು, ನಮ್ಮ ತಂದೆ ಹೆಸರು, ಭಾವನ ಹೆಸರು ಅಷ್ಟೇಕೆ ನನ್ನ ಮಗನ ಹೆಸರೂ ಕೃಷ್ಣ , ಉಡುಪಿ ಕೃಷ್ಣನು ಒಲಿದ ಕನಕದಾಸರ ಭಕ್ತನೂ ನಾನು, ಕನಕದಾಸರ ಹುಟ್ಟಿದ ಸ್ಥಳ, ಅವರ ಕೋಟೆ, ಅವರು ನೆಟ್ಟಿದ ಅರಳಿ ಮರ, ಅವರು ಬಳಸಿದ ಶಂಖ, ಮರದ ಬಿಕ್ಷಾಪಾತ್ರೆ ಮತ್ತು ಅವರ ಸಮಾದಿಯನ್ನು ಸಂದರ್ಶಿಸಿದ್ದೇನೆ.
ಪಂಜಾಬಿನ ಜಲಂದರ್ ಪಟ್ಟಣದಲ್ಲಿ ನಾನು ನೋಡಿದ ಜನ್ಮಾಷ್ಟಮಿಯಷ್ಟು ದೊಡ್ಡ ವೈಭವ ನಾನು ಬೇರೆಲ್ಲೂ ನೋಡಿಲ್ಲ, ಆ ದಿನ ಜಲಂದರ್ ನ ಮುಖ್ಯ ರಸ್ತೆಯಲ್ಲಿ ಸಾಗುವ ಬೃಹತ್ ಮೆರವಣಿಗೆಯಿಂದ ರಸ್ತೆ ದಾಟಲು ಗಂಟೆಗಟ್ಟಲೆ ಕಾಯಬೇಕು, ಅತಿ ಹೆಚ್ಚು ಸರ್ದಾರ್ಜಿಗಳು ಈ ಮೆರವಣಿಗೆಯಲ್ಲಿ ಭಾಗವಹಿಸುವುದು ನಾನು ಕಣ್ಣಾರೆ ನೋಡಿದ್ದೇನೆ.
ನಾನು ಪ್ರತಿ ದಿನ ಪೂಜಿಸುವ ಪಂಚಲೋಹದ ಕಡೆಗೋಲು ಕೃಷ್ಣ ವಿಗ್ರಹ ನೀಡಿದವರು ಮಂಗಳೂರಿನ ಪ್ರದೀಪ್ ಕುಮಾರ್ ಕಲ್ಕೂರರು, ಕಾಸರಗೋಡಿನಲ್ಲಿ ನಡೆದ ದಾಸ ಸಾಹಿತ್ಯದ ಒ0ದು ಸಭೆಯಲ್ಲಿ ಕಾಸರಗೋಡಿನ ಕನ್ನಡ ಸಂಘಟನೆಯ ಶಿವರಾಂ ಕಾಸರಗೋಡು ನನ್ನನ್ನು ಆಗಿನ ದ.ಕ.ಜಿಲ್ಲೆಯ ಸಾಹಿತ್ಯ ಪರಿಷತ್ ಅಧ್ಯಕ್ಷರ ಜೊತೆ ವೇದಿಕೆಯಲ್ಲಿ ಕುಳ್ಳಿರಿಸಿದಾಗ ಪ್ರದೀಪ್ ಕುಮಾರ್ ಕಲ್ಕೂರರು ನನಗೆ ನೀಡಿದ ನೆನಪಿನ ಕಾಣಿಕೆ ಇದು.
ಪ್ರದೀಪ್ ಕುಮಾರ್ ಕಲ್ಕೂರರು ಮಂಗಳೂರಿನ ಪ್ರತಿಷ್ಠಿತ ಜಾಹಿರಾತು ಸಂಸ್ಥೆ ಮುಖ್ಯಸ್ಥರು, ಇವರ ಕಲ್ಕೂರ್ ಪ್ರಕಾಶನದಿಂದ ಕನ್ನಡ ಮತ್ತು ತುಳು ಭಾಷೆಯ ಅನೇಕ ಯಕ್ಷಗಾನ ಪುಸ್ತಕ ಪ್ರಕಟಿಸಿದ್ದಾರೆ.
ಇವರ ನೇತೃತ್ವದಲ್ಲಿ ಇವರ ಕಲ್ಕೂರ್ ಪ್ರತಿಷ್ಟಾನದಿಂದ ಪ್ರತಿ ವರ್ಷ ಕೃಷ್ಣ ಜನ್ಮಾಷ್ಟಮಿಗೆ ಮಂಗಳೂರಿನ ಕದ್ರಿ ದೇವಾಲಯದಲ್ಲಿ ಇವರು ನಡೆಸುವ ಮಕ್ಕಳ ಕೃಷ್ಣ ವೇಷ ಸ್ಪರ್ದೆ ತುಂಬಾ ಪ್ರಸಿದ್ದಿ ಪಡೆದಿದೆ ಇವತ್ತು ಮಂಗಳೂರಲ್ಲಿ ಇವರ ಪ್ರತಿಷ್ಟಾನದ ಕಾಯ೯ಕ್ರಮ ತುಂಬಾ ಅದ್ದೂರಿಯಾಗಿ ನಡೆದ ವರದಿಗಳು ಇದೆ.
ಪ್ರತಿ ವರ್ಷ ಕೃಷ್ಣಾಷ್ಟಮಿಯಂದು ಪ್ರದೀಪ್ ಕುಮಾರ್ ಕಲ್ಕೂರರು ಈ ರೀತಿ ನೆನಪಾಗುತ್ತಾರೆ
Comments
Post a Comment