Blog number 935. ದೇಶದ ಸ್ವಾತಂತ್ರ್ಯ ಮಹೋತ್ಸವದ ಬೆಳ್ಳಿಹಬ್ಬ, ಸುವಣ೯ ಮಹೋತ್ಸವ ಮತ್ತು ಈಗಿನ ಅಮೃತ ಮಹೋತ್ಸವದಲ್ಲಿ ನಾನು ಭಾಗಿಯಾದೆ ಎಂಬ ಹೆಮ್ಮೆ ಹಾಗೂ ಕಟ್ಟುನಿಟ್ಟಿನ ದ್ವಜ ಸಂಹಿತೆ ತಿದ್ದುಪಡಿಗೆ ನ್ಯಾಯಾಲಯದಲ್ಲಿ ಹೋರಾಟ ಮಾಡಿದ ಖ್ಯಾತ ಉದ್ದಿಮೆದಾರ ನವೀನ್ ಜಿಂದಾಲ್ ಗೆ ದೇಶವಾಸಿಗಳ ಸಲಾಂ .
#ಇದಕ್ಕಾಗಿ_ನ್ಯಾಯಾಲಯದಲ್ಲಿ_ಸುದೀರ್ಘ_ಹೋರಾಟ_ಮಾಡಿದ_ಉದ್ಯಮಿ_ನವೀನ್_ಜಿಂದಾಲ್
#ಸರ್ವೋಚ್ಚ_ನ್ಯಾಯಾಲಯದ_ಆದೇಶದಂತೆ_ದ್ವಜ_ಸಂಹಿತೆ_ಮಾರ್ಪಾಡು.
#ಹಗಲು_ರಾತ್ರಿ_ತ್ರಿವರ್ಣಧ್ವಜ_ಹಾರಿಸಬಹುದು
#ಯ೦ತ್ರದಲ್ಲಿ_ತಯಾರಿಸಿದ_ಪಾಲಿಯೆಸ್ಟರ್_ಉಣ್ಣೆ_ಬಟ್ಟೆಯ_ದ್ವಜ_ಬಳಸಬಹುದು
#ದ್ವಜಕ್ಕೆ_ಅಗೌರವ_ಮಾಡಿದರೆ_ಮೂರು_ವರ್ಷ_ಜೈಲು_ದಂಡ_ಬದಲಾಗಿಲ್ಲ_ಎಚ್ಚರ.
#ಸ್ವಾತಂತ್ರದ_ಬೆಳ್ಳಿಹಬ್ಬ_ಸುವರ್ಣಮಹೋತ್ಸವ_ಅಮೃತಮಹೋತ್ಸವಕ್ಕೂ_ನಾನು_ಸಾಕ್ಷಿ_ಆದ_ಹೆಮ್ಮೆ_ನನ್ನದು
ಗ್ರಾಮ ಪಂಚಾಯತ್, ಅಂಚೆ ಇಲಾಖೆ, ಬಿಜೆಪಿ ಪಕ್ಷ, ಕಾಂಗ್ರೇಸ್ ಪಕ್ಷಗಳು ತ್ರಿವರ್ಣ ಧ್ವಜಗಳನ್ನು ನಿಗದಿತ ಬೆಲೆಯಲ್ಲಿ ಮತ್ತು ರಾಜಕೀಯ ಪಕ್ಷಗಳು ಉಚಿತವಾಗಿ 75 ನೇ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಪ್ರತಿ ಮನೆ ಮನೆಗಳಲ್ಲಿ ದ್ವಜ ಹಾರಿಸಲು ಅನುವು ಮಾಡುತ್ತಿದೆ.
ನಮ್ಮ ಮನೆಗೂ ಬೆಳಿಗ್ಗೆ ಒಂದು ದ್ವಜ ಉಚಿತವಾಗಿ ಕಾಂಗ್ರೇಸ್ ಪಕ್ಷದ ಮಾಜಿ ಸದಸ್ಯರಾದ ಅಮೀರ್ ಸಾಹೇಬರ ಮಗ ತಂದು ಕೊಟ್ಟಿದ್ದಾಗಿ ನಮ್ಮ ಸಿಬ್ಬಂದಿ ಕಣ್ಣೂರಿನ ನಾಗರಾಜ್ ತಿಳಿಸಿ ಅದನ್ನು ಮನೆ ಎದರು ಹಾರಿಸಲಾಗಿದೆ, ನಮ್ಮ ಹಳ್ಳಿಯ ಎಲ್ಲಾ ಮನೆಗಳ ಎದರೂ ರಾಷ್ಟ್ರ ಧ್ವಜ ಸಾಲಾಗಿ ಹಾರುತ್ತಿದೆ.
ನಮ್ಮ ಹಳ್ಳಿಯಲ್ಲಿ ಮುಸ್ಲಿಂ ಮತ್ತು ಕ್ರೈಸ್ತರ ಮನೆಗಳು ಹೆಚ್ಚು ಎಲ್ಲರ ಮನೆಯ ಮೇಲೂ ತ್ರಿವರ್ಣ ಹಾರುತ್ತಿದೆ.
ಈ ರೀತಿ ಸುಲಭವಾಗಿ ರಾಷ್ಟ್ರ ದ್ವಜ ಜನರ ಕೈ ಸೇರಲು, ಹಗಲು ರಾತ್ರಿ ಮನೆ ಮನೆಗಳಲ್ಲಿ ತ್ರಿವರ್ಣ ಹಾರುವಂತಾಗಲು ಮುಖ್ಯ ಕಾರಣ ಭಾರತಿಯ ಖ್ಯಾತ ಉದ್ಯಮಿ ನವೀನ್ ಜಿಂದಾಲರು ನ್ಯಾಯಾಲಯದಲ್ಲಿ ನಡೆಸಿದ ಹೊರಾಟ.
ದೆಹಲಿ ಹೈಕೋರ್ಟ್ ತನ್ನಲ್ಲಿಗೆ ಸಲ್ಲಿಸಿದ ಮನವಿಯನ್ನು ಸವೋ೯ಚ್ಚ ನ್ಯಾಯಾಲಯಕ್ಕೆ ವರ್ಗಾಯಿಸಿತ್ತು 2002ರಲ್ಲಿ ಸವೋ೯ಚ್ಚ ನ್ಯಾಯಾಲಯ ನವೀನ್ ಜಿಂದಾಲರ ಮನವಿ ಪುರಸ್ಕರಿಸಿ ಕೇಂದ್ರ ಸರ್ಕಾರಕ್ಕೆ ತಿದ್ದುಪಡಿಗೆ ಆದೇಶಿಸಿದ್ದರಿಂದ ಕೇಂದ್ರ ಸರ್ಕಾರ ತಿದ್ದುಪಡಿ ಮಾಡಿ ಖಾಸಾಗಿ ಸ್ಥಳಗಳಲ್ಲಿ, ಖಾಸಾಗಿ ಸಂಸ್ಥೆಗಳು, ಗೃಹಗಳಲ್ಲೂ ತ್ರಿವರ್ಣ ಧ್ವಜ ಅನಾವರಣ ಮಾಡುವ ಅವಕಾಶ ನೀಡಿತ್ತು.
ಆದರೆ ನಿರ್ದಿಷ್ಟ ಖಾದಿ ಗ್ರಾಮೋದ್ಯೋಗ ಮಂಡಳಿಯು ತಯಾರಿಸಿದ ಖಾದಿ ಬಟ್ಟೆಯ ದ್ವಜ ಮಾತ್ರ ಬಳಸುವ ಹಾಗೂ ಸೂರ್ಯೋದಯದಿಂದ ಸೂರ್ಯಾಸ್ತದ ಒಳಗಿನ ಅವಧಿ ಮಾತ್ರ ಬದಲಾಗಿರಲಿಲ್ಲ.
ಡಿಸೆಂಬರ್ 2021 ರಲ್ಲಿ ಕೇಂದ್ರ ಸರ್ಕಾರ ಯಂತ್ರದಲ್ಲಿ ತಯಾರಿಸಿದ ಪಾಲಿಯೆಸ್ಟರ್ ಮತ್ತು ಉಣ್ಣೆ ದ್ವಜ ಬಳಸಲು ತಿದ್ದುಪಡಿ ತಂದು 26 ಜನವರಿ 2022 ರಿಂದ ಜಾರಿಗೆ ತಂದಿದೆ.
ಪುನಃ 20 ಜುಲೈ 2022 ರಂದು ತಿದ್ದುಪಡಿ ಮಾಡಿ ಹಗಲು ರಾತ್ರಿ ಕೂಡಾ ತ್ರಿವರ್ಣ ದ್ವಜ ಹಾರಿಸಲು ಅನುಮತಿ ನೀಡಿದ್ದರಿಂದ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವಕ್ಕೆ ಹೊಸ ಹುರುಪು ಹೊಳಪು ಬಂದಿದೆ.
ಎಲ್ಲೆಡೆ ರಾಷ್ಟ್ರ ದ್ವಜ ಪ್ರದರ್ಶನ ಆಗುತ್ತಿದ್ದರು ರಾಷ್ಟ್ರ ದ್ವಜ ಸಂಹಿತೆಯಲ್ಲಿ ಇರುವ ರಾಷ್ಟ್ರ ದ್ವಜ ಅಗೌರವಕ್ಕೆ ಮೂರು ವರ್ಷ ಜೈಲು ಮತ್ತು ದಂಡ ಬದಲಾಗಿಲ್ಲ ಆದ್ದರಿಂದ ಜನತೆ ಈ ರಾಷ್ಟ್ರ ದ್ವಜಗಳ ಬಳಕೆ ನಂತರ ಎಲ್ಲೆಂದರಲ್ಲಿ ಒಗಿಯುವಂತಿಲ್ಲ, ನೆಲಕ್ಕೆ ಮತ್ತು ನೀರಿಗೆ ತಾಗಿಸುವಂತಿಲ್ಲ ಹಾಳಾದ ದ್ವಜ ಖಾಸಾಗಿಯಾಗಿ ಗೌರವಯುತವಾಗಿ ವಿಲೇವಾರಿ ಮಾಡಬಹುದಾಗಿದೆ.
ದೇಶದ ಮನೆ ಮನಗಳಲ್ಲಿ ತ್ರಿವರ್ಣ ಧ್ವಜ ಹಾರುತ್ತಿದೆ ನಾನು 3 ನೇ ತರಗತಿಯಲ್ಲಿದ್ದಾಗ ಸ್ವಾತಂತ್ರ್ಯದ ಬೆಳ್ಳಿ ಹಬ್ಬದ ಪ್ರಬಾತ್ ಪೇರಿಯಲ್ಲಿ ಭಾಗವಹಿಸಿದ್ದೆ, 1997ರಲ್ಲಿ ಸುವರ್ಣ ಸ್ವಾತಂತ್ರ್ಯೋತ್ಸವದ ಜಿಲ್ಲಾ ಪಂಚಾಯತ್ ನ ನಡು ರಾತ್ರಿಯ ಸಮಾವೇಶದಲ್ಲಿ ಮತ್ತು ಆಗ ರಾಜ್ಯದಾದ್ಯಂತ ಸುವರ್ಣ ಮಹೋತ್ಸವದ ಅಂಗವಾಗಿ ಸುಭಾಷ್ ಚಂದ್ರ ಬೋಸರ ಜೊತೆಗಾರ ಐಎನ್ಎ ರಾಮರಾವ್ ನಡೆಸಿದ ಸುವರ್ಣ ಸ್ವಾತಂತ್ರ ಜ್ಯೋತಿ ಯಾತ್ರೆ ನಮ್ಮ ಊರಿನ ಬಸ್ ಸ್ಟಾಂಡ್ ನಲ್ಲಿ ಸ್ವಾಗತಿಸಿ ಆನಂದಪುರಂ ಇತಿಹಾಸದ ಬಗ್ಗೆ ನನ್ನ ಲೇಖನ ಓದಿದ್ದೆ ರಾತ್ರಿ ನಮ್ಮ ಊರ ಪ್ರವಾಸಿ ಮಂದಿರದಲ್ಲಿ ಅವರ ತಂಡ ತಂಗಿಸಿ ಉಪಚರಿಸಿದ್ದು ನೆನಪು ಈಗ ಸ್ಟಾತಂತ್ರದ ಅಮೃತ ಮಹೋತ್ಸವದ ಅಂಗವಾಗಿ ನನ್ನ ಮನೆಯಲ್ಲಿ ತ್ರಿವರ್ಣ ಧ್ವಜ ಅನಾವರಣ ಮಾಡಿದ್ದು ಸದಾ ನೆನಪಿನಲ್ಲಿ ಉಳಿಯಲಿದೆ.
Comments
Post a Comment