Blog number 933. ಗುಣವಂತೆಯ ಭಟ್ಟರ ಹೋಟೆಲಿನ ಅವಲಕ್ಕಿ ಮೊಸರಿನ ಸುಲಭ - ಸರಳ ರೆಸಿಪಿ,ಇದರ ರುಚಿಗೆ ಸೋಲದವರೇ ಇಲ್ಲ, ಕನ್ನಡದ ವರನಟ ರಾಜ್ ಕುಮಾರರಿಗೂ ಇದು ತುಂಬಾ ಇಷ್ಟವಾಗಿತ್ತು
#ರಾಜಕುಮಾರ್_ಪಿದಾ_ಆಗಿದ್ದರು_ಇದಕ್ಕೆ
#ಸರಳ_ರೆಸಿಪಿ_ಶ್ರೀಮಂತ_ರುಚಿ_ಬೆಲೆ_ಕಟ್ಟಲಾಗದ_ಆರೋಗ್ಯ.
#ಸಾಗರದ_ಸಾಹಿತಿ_ಜಿ_ಎಸ್_ಭಟ್ಬರ_ಮ೦ಜೀಮಹಾದೇವನ_ಗಂಜೀಪುರಾಣದಲ್ಲೂ_ಉಲ್ಲೇಖ.
ಕರಾವಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಹೊನ್ನಾವರದಿಂದ ಭಟ್ಕಳ ಮಾರ್ಗದಲ್ಲಿ ಇಡಗು೦ಜಿ ಕ್ರಾಸಿಗಿಂತ ಮೊದಲು ಬಲ ಭಾಗದಲ್ಲಿ ಭಟ್ಟರ ಹೋಟೆಲ್ ಒಂದು ಇದೆ ಇದರ ಹೆಸರು ಗುರುಕೃಪಾ ಭಟ್ಟರ ಹೋಟೆಲ್, ಇಲ್ಲಿನ ವಿಶೇಷ ಖಾದ್ಯ ಅವಲಕ್ಕಿ ಮೊಸರು ಮಾತ್ರ ಜಗತ್ ಪ್ರಸಿದ್ಧ.
ಕನ್ನಡದ ವರನಟ ಡಾ.ರಾಜ್ ಕುಮಾರ್ ರವರೂ ಈ ಭಾಗದಲ್ಲಿ ಸಂಚರಿಸುವಾಗ ಈ ಹೋಟೆಲ್ ನ ಅವಲಕ್ಕಿ ಮೊಸರು ಸವಿಯದೆ ಹೋಗುತ್ತಿರಲಿಲ್ಲವಂತೆ.
ನಾನು 1986 ರಲ್ಲಿ ಈ ಹೋಟೆಲ್ ನ ಅವಲಕ್ಕಿ ಮೊಸರು ರುಚಿ ನೋಡಿದ್ದೆ ಈಗಲೂ ಈ ಬಾಗದಲ್ಲಿ ಸಾಗುವಾಗ ಈ ಅವಲಕ್ಕಿ ಮೊಸರು ಸವಿಯಲೇ ಬೇಕು.
ಈ ಅವಲಕ್ಕಿ ಮೊಸರ ರೆಸಿಪಿ ತುಂಬಾ ಸರಳ ದಪ್ಪ ಅವಲಕ್ಕಿ ನೀರಿನಲ್ಲಿ ತೊಳೆದು ನೀರು ಬಸಿದು ಅದಕ್ಕೆ ಗಟ್ಟಿ ಮೊಸರು ಸಕ್ಕರೆ ಸೇರಿಸುತ್ತಾರೆ ಅಷ್ಟೆ ಆದರೆ ಇದರ ರುಚಿ ಮಾತ್ರ ಅಮೋಘ ಇದು ಆರೋಗ್ಯಕ್ಕೆ ಒಳ್ಳೆಯದು.
ಸಾಗರದ ಸಾಹಿತಿಗಳಾದ ಜಿ.ಎಸ್.ಭಟ್ಟರು ಬರೆದ ಮಂಜೀಮಹಾದೇವನ ಗಂಜೀಪುರಾಣದಲ್ಲಿ ಈ ಭಟ್ಟರ ಹೋಟೆಲಿನಲ್ಲಿ ಲಾರಿ ಚಾಲಕ ಅವಲಕ್ಕಿ ಮೊಸರು ಅವನ ಹಣದಲ್ಲಿ ಕೊಡಿಸಿದ ಉಲ್ಲೇಖ ಇದೆ ಅಂದರೆ ಈ ಹೋಟೆಲ್ ತುಂಬಾ ಹಳೆಯದ್ದು ಮತ್ತು ಈ ಅವಲಕ್ಕಿ ಮೊಸರು ಮಾತ್ರ ಅಂದಿನಿಂದ ಇಂದಿನವರೆಗೂ ನಿರಾತಂಕವಾಗಿ ಸಾಗಿದೆ.
Comments
Post a Comment