Blog number 945. ಆಗಸ್ಟ್ 23 ಆಪ್ತ ಸಿಬ್ಬಂದಿ ಪಶ್ಚಿಮ ಬಂಗಾಳದ ಪುರೋಲಿಯದ ಕೌಷಿಕ್ ಹುಟ್ಟು ಹಬ್ಬದ ಆಚರಣೆಯಲ್ಲಿ ಮರೆತು ಹೋದ ನನ್ನ 33 ನೇ ವರ್ಷದ ವೈವಾಹಿಕ ಜೀವನದ ವಾರ್ಷಿಕೋತ್ಸವ
#ಏನೋ_ಮರೆತೆ_ಅನ್ನುವಾಗ_ನನ್ನ_ಆಪ್ತ_ಸಿಬ್ಬಂದಿ_ಕೌಷಿಕ್_ಹುಟ್ಟು_ಹಬ್ಬದ_ಸಿಹಿ_ನೀಡಿದರು.
#ನಾನು_ಇವರ_ಹುಟ್ಟು_ಹಬ್ಬಕ್ಕಾಗಿ_ಎಲ್ಲಾ_ಸಿಬ್ಬಂದಿಗೆ_ಕೀರು_ಮಾಡಿ_ಬಡಿಸಲು_ಹೇಳಿದೆ.
#ರಾತ್ರಿ_ನೆನಪಾಯಿತು_ಆಗಸ್ಟ್_23_ನನ್ನ_33ನೇ_ವೈವಾಹಿಕ_ವರ್ಷ_ಅಂತ.
ನಾವ್ಯಾರು ಹುಟ್ಟಿದ ಹಬ್ಬ, ಮ್ಯಾರೇಜ್ ಆನಿವರ್ಸರಿ ಆಚರಿಸುವುದಿಲ್ಲವಾದರು ಆ ದಿನದ ನೆನಪು ಕೆಲವೊಮ್ಮೆ ಆದೀತು ಅಥವ ಎಷ್ಟೋ ದಿನದ ನಂತರವೋ ನೆನಪಾಗುತ್ತದೆ ಆಗ ಎಷ್ಟು ವರ್ಷ ಆಯಿತೆಂಬ ಲೆಖ್ಖ ಹಾಕುವುದಷ್ಟೆ.
ನಿನ್ನೆ ಆಗಸ್ಟ್ 23 ಈ ದಿನ ಏನೋ ಮರೆತೆ ಅನ್ನಿಸುತ್ತಿದ್ದಾಗಲೇ ನನ್ನ ಆಪ್ತ ಸಿಬ್ಬಂದಿ ಪಶ್ಚಿಮ ಬಂಗಾಳದ ಪುರೋಲಿಯದ ಕೌಷಿಕ್ ತನ್ನ ಹುಟ್ಟುಹಬ್ಬ ಅಂತ ಸಿಹಿ ನೀಡಿದರು ಅವರಿಗೆ ಶುಭ ಹಾರೈಸಿದೆ, ಎಲ್ಲಾ ಸಿಬ್ಬಂದಿಗೂ ಕೀರು ಮಾಡಿ ಬಡಿಸಿದರು ಜೊತೆಗೆ ಹುಟ್ಟುಹಬ್ಬ ಆಚರಿಸುವ ಕೌಷಿಕ್ ತಂದ ಚಂಪಾಕಲಿ ಸೇರಿತ್ತು.
ಕೌಷಿಕ್ ಹುಟ್ಟುಹಬ್ಬವೇ ನಿನ್ನೆಯ ವಿಶೇಷ ಆಯಿತು ಇದರ ಮದ್ಯೆ ಬ್ಯಾಂಕ್ ವ್ಯವಸ್ಥಾಪಕರು ಮತ್ತು ಬೇರೆ ಬೇರೆ ಜನರು ಬಂದಿದ್ದರಿಂದ ನಾನು ಬ್ಯುಸಿ ಆದೆ, ಸಂಜೆ ಕೌಷಿಕ್ ಗೆ ಎರೆಡು ಪ್ಯಾಂಟ್ ಹುಟ್ಟುಹಬ್ಬದ ಉಡುಗರೆ ಆಗಿ ನೀಡಿದೆ.
ಆದರೂ ಏನೋ ಮರೆತಂತೆ ಅಷ್ಟರಲ್ಲಿ ನನ್ನ ಮುಂದಿನ ಕನಸಿನ ಯೋಜನೆಗೆ ಟ್ರೇಡ್ ನೇಮ್ & ಟ್ರೇಡ್ ಮಾರ್ಕ್ ರಿಜಿಸ್ಟ್ರೇಷನ್ ಕೆಲಸ ಬಾಕಿ ಉಳಿದಿತ್ತು ಕಾರಣ ನನಗೆ ಬೇಕಾದ ಹೆಸರು ಸಿಗುತ್ತಿರಲಿಲ್ಲ ನಿನ್ನೆ ನಮ್ಮ ಕನ್ಸಲ್ಟೆಂಟ್ ಪೋನು ಮಾಡಿ ನನ್ನ ಹೆಸರು ಆಯ್ಕೆ ಆದ ಶುಭಸುದ್ದಿ ತಿಳಿಸುತ್ತಿದ್ದಂತೆ ಅದನ್ನು ರಿಜಿಸ್ಟರ್ ಮಾಡುವ ಕೆಲಸ ಮಾಡಿದೆ.
ಆದರೂ ಏನೋ ಮರೆತನಲ್ಲ ಅಂತ ಮನಸ್ಸಲ್ಲಿ, ಮನೆಗೆ ಹೋದಾಗ ನೆನಪಾಯಿತು ಇವತ್ತು ನಾನು ವಿವಾಹ ಆಗಿ 33 ವಷ೯ ಆಯಿತು ಅಂತ!!.
ಶಿವಮೊಗ್ಗದ ಕೋಟೆ ಆಂಜನೇಯ ದೇವಾಲಯದಲ್ಲಿ ಮಹೂರ್ತ ಇಲ್ಲದ ವೇಳೆ ಅನಿವಾರ್ಯವಾಗಿ ತಾಳಿ ಕಟ್ಟಿದ್ದು, ಪುರೋಹಿತರು ವಿಶ್ವ ಹಿಂದೂ ಪರಿಷತ್ ನ ರಾಜ್ಯ ಸಂತ ಸಮಾವೇಶದ ಸಂಚಾಲಕರಾದ ಶ್ರೀ ನರಸಿಂಹ ಮೂರ್ತಿ ಅಯ್ಯ೦ಗಾರರು https://arunprasadhombuja.blogspot.com/search?q=%E0%B2%A8%E0%B2%A8%E0%B3%8D%E0%B2%A8+%E0%B2%B5%E0%B2%BF%E0%B2%B5%E0%B2%BE%E0%B2%B9
ಕಷ್ಟ ಸುಖ ಅಂತ ನಾವು ಬಾವಿಸುವ ಹಗಲು ರಾತ್ರಿಯ ದೀಘ೯ 33 ವರ್ಷದ 12045(ಹನ್ನೆರೆಡು ಸಾವಿರದ ನಲವತ್ತ್ಯೆದು ದಿನ) ದಿನಗಳು ಕಳೆದು ಹೋಗಿದೆ, ವೃದ್ದಾಪ್ಯದ ಅಂಚು ತಲುಪಾಯಿತು, ಒಂದು ಸಮಾದಾನ ಇಷ್ಟು ವರ್ಷದಲ್ಲಿ ಸಂಸಾರದಲ್ಲಿ ಕೋಪಾ ತಾಪಗಳಿದ್ದರು ಹೆಂಡತಿಗೆ ಹೊಡೆಯಲಿಲ್ಲ, ನನ್ನ ದಾಂಪತ್ಯ ಜೀವನದಲ್ಲಿ ನನ್ನದು ಕಟ್ಟುನಿಟ್ಟಿನ ಏಕ ಪತ್ನಿ ವೃತಸ್ಥ ಆಗಿ ಉಳಿದಿರುವುದು.
ವೃದ್ದಾಪ್ಯದ ವಾನಪ್ರಸ್ತಾಶ್ರಮಕ್ಕೆ ತಯಾರಾಗಬೇಕು ಈಗಾಗಲೇ ರಾತ್ರಿ ಊಟ ತ್ಯಜಿಸಿದ್ದೇನೆ, ನನ್ನದೆ ಕೆಲ ಚೌಕಟ್ಟು ಜೀವನಕ್ಕೆ ಹಾಕಿಕೊಂಡಿದ್ದೇನೆ, ತಿರುಗಾಟಗಳೆಲ್ಲ ಕಡಿಮೆ ಮಾಡಿದ್ದೇನೆ, ನನ್ನ ತಲೆ ಕ್ಷೌರ ಎರೆಡು ವರ್ಷದಿಂದ ನಾನೇ ಮಾಡಿಕೊಳ್ಳುವುದು ಕಲಿತೆ, ಟೀವಿ ಚಾನಲ್ ವೀಕ್ಷಣೆ 2015 ರಿಂದ ಇಲ್ಲ, ಈಗ ಎರೆಡು ತಿಂಗಳಿಂದ ವೃತ್ತ ಪತ್ರಿಕೆ ತರಿಸುವುದಿಲ್ಲ,ಮಾತೂ ಕಡಿಮೆ ಆಗಿದೆ ಹೀಗೆ ಸಾಗಿದೆ ನನ್ನ ಸಂತೃಪ್ತ ಜೀವನ
Comments
Post a Comment