Skip to main content

Blog number 931. ಪ್ರಸಿದ್ದ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಮಾರಿಕಾಂಬೆಗೆ ಬಣ್ಣ ಮಾಡುವುದು ಶಕುಂತಳಾ ಗುಡಿಗಾರ್ ಎಂಬ ಮಹಿಳೆ, ಸರ್ಪಸುತ್ತು ಕಾಯಿಲೆಗೆ ಆಸ್ಥಳದಲ್ಲಿ ಗರುಡ ಬಿಡಿಸಿ ಕಟ್ಟು ಚಿಕಿತ್ಸೆ ಮಾಡುವ ಇವರ ಕುಟುಂಬದ ವೈದ್ಯ ಪದ್ದತಿಯಲ್ಲೂ ಇವರು ಪ್ರಸಿದ್ದರು.

#ಗುಡಿಗಾರರೆಂಬ_ಶ್ರೀಗಂದದ_ಕೆತ್ತನೆಗಾರರು.

#ಜಡೆ_ಊರಿಂದ_ಕುರುಬರಲಿ೦ಗಣ್ಣ_ಮತ್ತು_ಪುತ್ತೂರಾಯರು_ಸಾಗರಕ್ಕೆ_ಕರೆತಂದ_ಅಣ್ಣಪ್ಪಗುಡಿಗಾರ_ಕುಟುಂಬ

#ಶ್ರೀಗಂದವೇ_ಇಲ್ಲದ_ಈ_ಕಾಲದಲ್ಲಿ_ತಮ್ಮ_ಕುಲಕಸಬು_ಬಿಡುತ್ತಿರುವ_ಗುಡಿಗಾರರು

#ಇಪ್ಪತ್ತೈದು_ವರ್ಷದ_ಹಿಂದೆ_ಅಣ್ಣಪ್ಪಗುಡಿಗಾರರ_ಮಗ_ದೇವಿಪ್ರಸಾದಗುಡಿಗಾರರ_ಬಗ್ಗೆ_ಪತ್ರಿಕೆಗಳಲ್ಲಿ_ಲೇಖನ_ಬರೆದಿದ್ದೆ

#ದೇವಿಪ್ರಸಾದಗುಡಿಗಾರರ_ಮರಣ_ನಂತರ_ಕುಟುಂಬದ_ಹೊಣೆ_ಹೊತ್ತ_ಅವರ_ಸಹೋದರಿ_ಶಕುಂತಲಾಗುಡಿಗಾರ್

#ಪ್ರಸಿದ್ಧ_ಸಾಗರದ_ಮಾರಿಕಾಂಬೆ_ಜಾತ್ರೆಯಲ್ಲಿ_ದೇವರ_ವಿಗ್ರಹಕ್ಕೆ_ಬಣ್ಣ_ಮಾಡುವ_ಶಕುಂತಲಾಗುಡಿಗಾರ್_ಎಂಬ_ಸಾಹಿಸಿ.

#ಸಪ೯ಸುತ್ತು_ಕಾಯಿಲೆಗೆ_ಬಣ್ಣದಿಂದ_ಗರುಡ_ಬಿಡಿಸಿ_ಕಟ್ಟು_ಮಾಡುವ_ಇವರ_ವಂಶಪಾರಂಪರ್ಯ_ಚಿಕಿತ್ಸೆ

   ಶಿವಮೊಗ್ಗ ಜಿಲ್ಲೆಯ ಸಾಗರ, ಸೊರಬ ಮತ್ತು ಉತ್ತರ ಕನ್ನಡ ಜಿಲ್ಲೆಯ ಕುಮುಟಾದಲ್ಲಿ ಒಂದು ಕಾಲದಲ್ಲಿ ಶ್ರೀಗಂದದ ಮರದ ವಿಗ್ರಹಗಳ ಕೆತ್ತನೆಗಾರರಿಗೆ ಕೈ ತುಂಬಾ ಕೆಲಸ ಅವರು ಕೆತ್ತಿದ ವಿಗ್ರಹಗಳಿಗೆ ದೇಶ ವಿದೇಶಗಳಲ್ಲಿ ಭಾರೀ ಬೇಡಿಕೆ.
  ಸುವಾಸನೆಯ ಶ್ರೀಗಂದದ ಬಗ್ಗೆ ಗಾದೆಯೂ ಇದೆ "ಸಗಣಿಯವನ ಕೈಯಲ್ಲಿ ಗುದ್ದಾಡುವುದಕ್ಕಿಂತ ಗಂದದವನ ಕೈಯಲ್ಲಿ ಗುದ್ದಾಡುವುದು ಲೇಸು" ಅಂತ ಇದರ ಗೂಡಾರ್ಥ ಏನೇ ಇರಲಿ ಇದು ಶ್ರೀಗಂಧದ ಶ್ರೇಷ್ಟತೆ ಹೇಳುತ್ತದೆ.
   ಆದರೆ ಈಗ ಶ್ರೀಗಂದ ವಿರಳ, ಅರಣ್ಯದಲ್ಲಿನ ಶ್ರೀಗಂದ ಇಲ್ಲವೇ ಇಲ್ಲ, ಸರ್ಕಾರದಲ್ಲಿ ಕೂಡ ಬೇಕಾದಷ್ಟು ಶ್ರೀಗಂದದ ದಾಸ್ತಾನು ಇಲ್ಲ, ಶ್ರೀಗಂದದ ಇವತ್ತಿನ ಸರ್ಕಾರಿ ಬೆಲೆ ಹತ್ತು ಸಾವಿರ ದಾಟಿದೆ.
  ಸುಮಾರು 25 ವರ್ಷದ ಹಿಂದೆ ದೇವಿಪ್ರಸಾದ ಗುಡಿಗಾರ ಎಂಬ ಪ್ರಖ್ಯಾತ ಕಲಾವಿದರ ಬಗ್ಗೆ ಪತ್ರಿಕೆಗಳಿಗೆ ಚಿತ್ರ ಸುದ್ದಿ ಬರೆದಿದ್ದೆ ಇವರು ಜಡೆ ಅಣ್ಣಪ್ಪ ಗುಡಿಗಾರರ ಪುತ್ರ.
   ನಿನ್ನೆ ಇವರ ತಂಗಿ ಶಕುಂತಲಾ ಗುಡಿಗಾರ್ ಬಂದಿದ್ದರು ಅವರು ತನ್ನಣ್ಣ ಕ್ಯಾನ್ಸರ್ ನಿಂದ ಮೃತ ಪಟ್ಟಿದ್ದರಿಂದ ಇಡೀ ಕುಟುಂಬ ಸಂಕಷ್ಟಕ್ಕೆ ಈಡಾದ ಬಗ್ಗೆ ತಮ್ಮ ದುಃಖ ವ್ಯಕ್ತಪಡಿಸಿದರು ಈಗ ಅಣ್ಣನ ಮಗ ಕಾರ್ತಿಕ್ ಗುಡಿಗಾರ್ ಪ್ರವರ್ದಮಾನಕ್ಕೆ ಬರುತ್ತಿದ್ದು ಮರ ಮತ್ತು ಶಿಲ್ಪದಲ್ಲಿ ಕೆತ್ತನೆ ಮಾಡುತ್ತಿರುವ ಬಗ್ಗೆಯೂ ತಿಳಿಸಿದರು.
   ಅವರಿಗೆ ಅವರಣ್ಣನ ಬಗ್ಗೆ ನಾನು ಬರೆದ ಲೇಖನ ಇವತ್ತಿಗೂ ಅವರಿಗೆ ಅವರಣ್ಣನ ಸಾದನೆ ಹೇಳುವ ಏಕೈಕ ನೆನಪಿನ ಸಾದನವಾಗಿದೆ ಅಂದರು.
   ತಂದೆ ನಂತರ ಅಣ್ಣ ಮೃತರಾದಾಗ ಅಣ್ಣನ ಪತ್ನಿಗೆ ಚಿಕ್ಕ ಚಿಕ್ಕ ಮಕ್ಕಳು, ವಯಸ್ಸಾದ ತಾಯಿ, ವಿವಾಹ ಆಗದ ಇವರಿಬ್ಬರು ಸಹೋದರಿಯರು ತಮ್ಮ ಭವಿಷ್ಯ ಅಷ್ಟು ಮಾತ್ರ ಅಲ್ಲ ಇವರ ನಿತ್ಯದ ಹೊಟ್ಟೆಪಾಡಿಗೂ ಕಟಂಕವಾದಾಗ ಈ ಹೆಣ್ಣು ಮಗಳು ಅನಿವಾರ್ಯವಾಗಿ ಹೊಟ್ಟೆಪಾಡಿಗಾಗಿ ತನ್ನ ತಂದೆ ಮತ್ತು ಅಣ್ಣ ಮಾಡುತ್ತಿದ್ದ ಮಾರಿಕಾಂಬಾ ದೇವಿಗೆ ಬಣ್ಣ ಮಾಡುವ ಕೆಲಸ, ಬಾಸಿಂಗ, ಚೌತಿ ಹಬ್ಬಕ್ಕೆ ಗಣಪತಿ ಮಾಡುವುದು ಮತ್ತು ಜೊತೆಗೆ ಸರ್ಪಸುತ್ತು ಕಾಯಿಲೆಗೆ ಇವರ ಕುಟುಂಬದಲ್ಲಿ ಬಂದ ಚಿಕಿತ್ಸೆ ಮುಂದುವರಿಸಿದರು. ಇದರಿಂದ ಇಲ್ಲಿಯವರೆಗೆ ಕುಟುಂಬದ ರಥ ಎಳೆದು ತಂದಿದ್ದಾರೆ ಈಗ ಅಣ್ಣನ ಮಗನ ದುಡಿಮೆಯಿಂದ ಕಷ್ಟದ ದಿನಗಳಿಂದ ಹೊರಬಂದರೂ ಕಲಾವಿದರ ಕುಟುಂಬಗಳ ಕಷ್ಟ ಪರಿಹಾರ ಆಗುವುದೇ ಇಲ್ಲ.
   ಸಾಗರದ ಐತಿಹಾಸಿಕ ಮಾರಿಕಾಂಬಾ ಜಾತ್ರೆ ಜಗತ್ ಪ್ರಸಿದ್ದವಾಗಿದೆ ಈ ಜಾತ್ರೆಯ ಬೃಹತ್ ಮರದ ಮಾರಿಕಾಂಬಾ ಮೂರ್ತಿಗೆ ಪ್ರತಿ ಜಾತ್ರೆಯಲ್ಲಿ ಈ ಹೆಣ್ಣು ಮಗಳೇ ಬಣ್ಣದ ಕೆಲಸ ಮಾಡುತ್ತಾರೆಂದರೆ ನಿಜಕ್ಕೂ ಆಶ್ಚಯ೯ವೇ ಸರಿ.
   ಸಾಗರದ ಮಾರಿಕಾಂಬಾ ದೇವಿ ಮಾತ್ರ ಅಲ್ಲ ನಮ್ಮ ಊರಿನ ಆನಂದಪುರಂ -ಮೆಳವರಿಗೆ - ಕೆಳದಿ-ಬೇಳೂರು - ಬರೂರು - ತ್ಯಾಗರ್ಥಿ - ಗೌತಮಪುರ - ಹಿರಿಯರಕ ದುರ್ಗಮ್ಮ - ಹಾನಗಲ್ ಧ್ಯಾಮಮ್ಮ - ಚಾಮೇನಳ್ಳಿ - ಕುಂಸಿ - ಕುಗ್ವೆ - ಚೋರಡಿ-ಚಂದ್ರಗುತ್ತಿ - ಹರೀಶಿ ಚನ್ನಪಟ್ಟಣ ಹೀಗೆ ಅನೇಕ ಊರುಗಳ ದೇವಿ ವಿಗ್ರಹಗಳು ಈ ಹೆಣ್ಣು ಮಗಳ ಕೈಯಲ್ಲಿ ಸುಂದರ ಆಕರ್ಷಕ ಬಣ್ಣವಾಗುತ್ತದೆ.
  ಕಳೆದ ಜಾತ್ರೆಯಲ್ಲಿ ಆನಂದಪುರಂನಲ್ಲಿ ಇವರಿಗೆ 23 ಸಾವಿರ ಇವರ ಸಂಬಾವನೆ ಆದರೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಇವರು ಪಡೆದ ಸಂಬಾವನೆ ಹತ್ತಿರ ಹತ್ತಿರ 80 ಸಾವಿರ, ಇತ್ತೀಚಿಗೆ ಪ್ರತಿ 8 ವರ್ಷಕ್ಕೊಮ್ಮೆ ನಡೆಯುವ ಕುಗ್ವೆಯ ಮಾರಿಕಾಂಬಾ ಜಾತ್ರೆಯಲ್ಲಿ ಗರಿಷ್ಟ ಒಂದೂಕಾಲು ಲಕ್ಷ ರೂಪಾಯಿ ಸಂಬಾವನೆ ಇವರಿಗೆ ಸಿಕ್ಕಿದೆ.
  ದೇವಿಯ ಬಣ್ಣದಲ್ಲೂ ಅನೇಕ ನಂಬಿಕೆ ಆಚರಣೆ ಇದೆ ತಿಂಗಳುಗಟ್ಟಲೆ ಕೆಲಸವಾಗುತ್ತದೆ ಅಂತಿಮವಾಗಿ ದೇವಿ ತವರು ಮನೆಯಿಂದ ಹೊರಡುವ ಸಮಯಕ್ಕೆ ಸ್ವಲ್ಪ ಮುಂಚೆ ಪುರೋಹಿತರು ನಿಗದಿ ಮಾಡಿದ ಸಮಯದಲ್ಲಿ ದೇವಿಗೆ ಜೀವ ಕಳೆ ನೀಡುವ ಅಂತಿಮ ಕೆಲಸ ಕುತೂಹಲಕಾರಿಯಾಗಿದೆ ಅದೇನೆಂದರೆ ಸುಮಹೂರ್ತದಲ್ಲಿ ದೇವಿ ಎದರು ಬಾಳೆ ಗೊನೆ ಕಟ್ಟುತ್ತಾರೆ, ಗುಡಿಗಾರರು ಆಗ ನೇರವಾಗಿ ದೇವಿಯ ವಿಗ್ರಹ ನೋಡುವುದಿಲ್ಲ ಕನ್ನಡಿಯಲ್ಲಿ ದೇವಿ ಪ್ರತಿಬಿಂಬ ನೋಡುತ್ತಾ ಕುರಿ ಅಥವ ಕೋಳಿಯ ರಕ್ತ ಲೇಪಿಸಿದ ಕುಂಚದಿಂದ ದೇವಿಯ ಕಣ್ಣು ಬರೆಯುತ್ತಾರೆ, ನೇರವಾಗಿ ನೋಡಿದ ಅನೇಕರು ಪ್ರಜ್ಞೆ ತಪ್ಪುತ್ತಾರೆ ಎಂಬ ಪುರಾತನ ಕಾಲದ ಭಯ ಇವರಲ್ಲಿದೆ ಈ ಕೆಲಸ ಇವರ ಅಣ್ಣನ ಮಗ ಕಾರ್ತಿಕ ಗುಡಿಗಾರ್ ರದ್ದು.
 ನಂತರ ದೇವಿ ಗಂಡನ ಮನೆಗೆ ಬಂದಾಗ ಕೋರೆ ಮತ್ತು ಬೊಟ್ಟುಗಳನ್ನು ಇವರೇ ಹಚ್ಚಬೇಕು, ಸಾಗರದ ಮಾರಿಕಾಂಬೆಗೆ ಆನೆ ದಂತದ ಕೊರೆ ಮತ್ತು ಬೊಟ್ಟುಗಳು ಮಾಡಿಸಿದ್ದಾರೆ.
  ಇತ್ತೀಚೆಗೆ ಗ್ರಾಮದೇವರುಗಳು, ಬೂತಗಳ ಮುಖಗಳಿಗೆ ಆರಿದ್ರ ಮಳೆ ಹಬ್ಬದಲ್ಲಿ ಬಣ್ಣ ಮಾಡುವ ಕೆಲಸವೂ ಇವರದ್ದೆ.
  ಇವರ ಕುಟುಂಬದಲ್ಲಿ ಸರ್ಪಸುತ್ತು ಕಾಯಿಲೆಗೆ ಒ0ದು ವಿಶೇಷ ಚಿಕಿತ್ಸೆ ಪರಂಪರ ವೈದ್ಯ ಪದ್ಧತಿ ಇದೆ ಅದೇನೆಂದರೆ ಸರ್ಪ ಸುತ್ತು ಆದವರಿಗೆ ಇವರು ವಿಶೇಷ ಬಣ್ಣದಿಂದ ಕಟ್ಟುಹಾಕುತ್ತಾರೆ ಅದು ಹೇಗೆಂದರೆ ಸರ್ಪ ಸುತ್ತು ಇಡೀ ಒಂದು ಸುತ್ತು ಬಂದು ಸೇರಿದರೆ ಸರ್ಪ ಸುತ್ತಾದವರು ಬದುಕುವುದಿಲ್ಲ ಎಂಬ ನಂಬಿಕೆ ಇದೆ ಆದ್ದರಿಂದ ಇವರು ಸರ್ಪಸುತ್ತು ಸೇರದಂತೆ ಅದನ್ನು ಬಣ್ಣದಿಂದ ಕಟ್ಟುಹಾಕಿ ಗರುಡ ಚಿತ್ರ ಬಿಡಿಸುತ್ತಾರೆ ಇದರಿಂದ ಅನೇಕರು ಗುಣವಾಗಿದೆ ಎನ್ನುತ್ತಾರೆ ಆದರೆ ಈ ಗರುಡ ಚಿಕಿತ್ಸೆ ಮಾಡುವುದರಿಂದ ಚಿಕಿತ್ಸೆ ಮಾಡುವವರಿಗೆ ಸರ್ಪ ದೋಷ ಬರುತ್ತೆಂದು ಅನೇಕರು ಭಯ ಪಡುತ್ತಾರೆ ಇದನ್ನು ಈ ಹೆಣ್ಣು ಮಗಳು ಮುಂದುವರಿಸಿದ್ದಾರೆ ಇವರ ಸಂಪರ್ಕ ಸಂಖ್ಯೆ  90191 62808.
   ಸಂಕಷ್ಟದಲ್ಲಿ ಇಡೀ ಕುಟುಂಬದ ನಾವೆಯ ಚುಕ್ಕಾಣಿ ಹಿಡಿದು ದಡ ಸೇರಿಸಲು ಈ ಹೆಣ್ಣು ಮಗಳು ಮಾಡಿದ ಸಾಹಸ ಸಣ್ಣದಲ್ಲ, ಸ್ಥಳಿಯ ಸಂಘ ಸಂಸ್ಥೆಗಳು ಇವರ ಸಾಹಸಕ್ಕೆ ಗೌರವಿಸುವ ಕೆಲಸ ಮಾಡಬೇಕು ಎಂತಂತವರಿಗೆಲ್ಲ ಪ್ರಶಸ್ತಿ ಪುರಸ್ಕಾರ ನೀಡುವ ಸರ್ಕಾರ ಇವರಿಗೆ ಯಾಕೆ ಪರಿಗಣಿಸಬಾರದು?

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...