Skip to main content

Posts

Showing posts with the label Western ghats forest Mushroom harvesting time

Blog number 928. ಮಲೆನಾಡಿನ ಕಾಡಿನಲ್ಲಿ ವಿವಿದ ಅಣಬೆಗಳ ಕಾಲ, ಅಣಬೆ ಪ್ರಿಯರ ಊಟದ ತಟ್ಟೆಯಲ್ಲಿ ವೈವಿಧ್ಯಮಯ ಅಣಬೆ ಖಾದ್ಯಗಳ ಸರಣಿ .

#ಮು೦ಗಾರ_ಮದ್ಯದಲ್ಲಿ_ಮಷ್ರೂಮ್_ಕಾಲ. #ಪಶ್ಚಿಮಘಟ್ಟದಲ್ಲಿ_ಹಣ್ಣುಗಳ_ಕಾಲ_ಮುಗಿದು_ಕಳಲೆ_ಮರಕೆಸದ_ನಂತರ_ಅಣಬೆ_ಹುಡುಕಾಟ #ಇವತ್ತು_ನಮ್ಮ_ರಬ್ಬರ್_ಟ್ಯಾಪರ್_ಆದರ್ಶ_ಮತ್ತು_ಸ್ನೇಕ್_ಪ್ರಬಾಕರ್_ಕಳಿಸಿದ_ಅಣಬೆಗಳು.    ಬೇಸಿಗೆಯಲ್ಲಿ ಆಲೇಮನೆ ಕಬ್ಬಿನ ಹಾಲು, ಬೆಲ್ಲದ ಸವಿಯ ಜೊತೆ ಉಪ್ಪಿನಕಾಯಿ ಮಿಡಿ ಹುಡುಕುತ್ತಾ ಹುಡುಕುತ್ತಾ ಮಾವಿನ ಹಣ್ಣಿನ ಕಾಲ, ಜೊತೆಗೆ ಹಲಸಿನ ಹಬ್ಬ ಇವೆಲ್ಲದರ ಮಧ್ಯ ಮುಂಗಾರು ಶುರು ಆಗುವಾಗ ನಾಲಿಗೆ ಬಯಸುವ ಕಳಲೆ, ಮರ ಕೆಸುವಿನ ಎಲೆಯ ಪತ್ರೋಡೆ ಇದೆಲ್ಲ ಬೇಸರ ಅನ್ನಿಸುವಾಗಲೇ ಬಿರು ಮಳೆಯ ಮಧ್ಯಕಾಲ ಮುಗಿಯುವಾಗ ಬಿಸಿಲು ಮಳೆ ಕಣ್ಣಾ ಮುಚ್ಚಲೆ ಜೊತೆ ಜೊತೆಯಲ್ಲಿ ಗುಡುಗುಗಳ ಶಬ್ದ ಬಂದಾಗಲೇ ಎಲ್ಲರಿಗೂ ಅಣಬೆ ಬೇಕು ತಿನ್ನಲೇಬೇಕು ಅನ್ನುವ ತವಕ ಪ್ರಾರಂಭ.   ವರ್ಷ ವರ್ಷ ಅಣಬೆ ಹುಟ್ಟುವ ಜಾಗದಲ್ಲಿ ಬೆಳ್ಳಂಬೆಳಗೆ ಹೋಗಿ ಕಾಯುವ ಕೆಲವರಿಗೆ ನಿರಾಸೆ ಆದರೆ ಕೆಲವರಿಗೆ ಬಂಪರ್ ಬಹುಮಾನ.   ಈಗ ಹಳ್ಳಿಗಳಲ್ಲೂ ಪಾರಂ ಅಣಬೆ ವರ್ಷ ಪೂರ್ತಿ ಸಿಗುವುದರಿಂದ ಮೊದಲಿನಂತೆ ಅಣಬೆಗೆ ಹಪಾಹಪಿ ಇಲ್ಲವಾದರೂ ಕಾಡಿನ ಜವಾರಿ ಅಣಬೆಯ ರುಚಿ ವಿಬಿನ್ನವಾದ್ದರಿಂದ ಬೇಡಿಕೆ ಜಾಸ್ತಿ ಇದೆ.   ಮೇಲ್ಪರ್ಗದಲ್ಲಿ ಅಣಬೆ ಬಳಕೆ ನಿಷೇದವಿದೆ, ನಮ್ಮ ಬಾಗದ ಬ್ರಾಹ್ಮಣರು, ಲಿಂಗಾಯಿತರು ಮತ್ತು ಜೈನರು ಆ ಕಾರಣದಿಂದ ಅಣಬೆ ಸೇವಿಸುವುದಿಲ್ಲ ಹಾಗಾಗಿ ಇದು ಮಾಂಸಹಾರಿಗಳಿಗೆ ಹೆಚ್ಚು ಮೀಸಲು.     ...