Skip to main content

Posts

Showing posts from March, 2022

ಭಾಗ -1.ಪಿ.ಪುಟ್ಟಯ್ಯ ಪ್ರಕೃತಿ ಮುದ್ರಣಾಲಯದ ಪುಟ್ಟಯ್ಯ ಎಂದೇ ಪ್ರಸಿದ್ಧರಾಗಿರುವ ಹಿರಿಯ ಸಮಾಜವಾದಿ ಮಾಜಿ ಲೋಕದಳದ ರಾಜ್ಯ ಅಧ್ಯಕ್ಷರಾಗಿದ್ದ ಪೆರ್ಡೂರು ಪುಟ್ಟಯ್ಯ ಮಲ್ನಾಡಳ್ಳಿಯ ರಾಘವೇಂದ್ರ ಸ್ವಾಮಿಗಳ ಆಪ್ತರಾಗಿದ್ದವರು, ಕಿರಿಯ ಸ್ವಾಮಿಗಳಾಗಲು ಅವರ ಆಹ್ವಾನ ನಯವಾಗಿ ನಿರಾಕರಿಸಿದವರು.

#ಪಿ_ಪುಟ್ಟಯ್ಯ #ಒಂದು_ಕಾಲದಲ್ಲಿ_ಇವರ_ಪ್ರಕೃತಿ_ಮುದ್ರಣಾಲಯ_ಅನುಭವ_ಮಂಟಪದಂತೆ_ಆಗಿತ್ತು. #ಶಿವಮೊಗ್ಗ_ಜಿಲ್ಲೆಯ_ಹಿರಿಯ_ಸಮಾಜವಾದಿಗಳು. #ಮಣಿಪಾಲ್_ಸಮೀಪದ_ಪೆರ್ಡೂರಿಂದ_ಸಾಗರಕ್ಕೆ_1946ರಲ್ಲಿ_ಬಂದವರು #ಮಲ್ನಾಡಳ್ಳಿ_ಮುಂದಿನ_ಸ್ವಾಮಿಗಳು_ಎಂದೆ_ಜನರ_ಬಾವನೆಯಲ್ಲಿದ್ದವರು. #ಸಾಗರ_ಪಟ್ಟಣ_1946ರಿಂದ_1960ರ_ತನಕ_ಹೇಗಿತ್ತು.                               #ಭಾಗ_1     ಪಿ. ಪುಟ್ಟಯ್ಯನವರು ಅಂದರೆ ಪೆರ್ಡೂರು ಪುಟ್ಟಯ್ಯ ಇವರು ಶಾಂತವೇರಿ ಗೋಪಾಲಗೌಡರಿಂದ ಇವತ್ತಿನ ಕಿಮ್ಮನೆ - ಸ್ವಾಮಿ ರಾವ್ ತನಕ ರಾಜಕಾರಣಿಗಳಿಗೆ ಮತ್ತು ಶಿವಮೊಗ್ಗ ಜಿಲ್ಲಾ ಇತಿಹಾಸಕ್ತರಾದ ಪತ್ರಕರ್ತರು ಮತ್ತು ಸಾಹಿತಿಗಳಿಗೆ ಚಿರಪರಿಚಿತರು.   ಪ್ರದಾನಿಗಳಾಗಿದ್ದ ಚೌದುರಿ ಚರಣ್ ಸಿಂಗ್ ರ ಲೋಕದಳ ಪಕ್ಷದ  ಕರ್ನಾಟಕ ರಾಜ್ಯದ  ರಾಜ್ಯಾದ್ಯಕ್ಷರು ಆಗಿದ್ದರು.   ಈಗಿನ ತಲೆಮಾರಿನವರಿಗೆ ಇವರ ಪರಿಚಯ ಕಡಿಮೆ ಯಾಕೆಂದರೆ ಪುಟ್ಟಯ್ಯನವರು ನಿವೃತ್ತ ಮತ್ತು ಒಂದು ರೀತಿಯ ವಾನಪ್ರಸ್ಥ ಆಶ್ರಮದಲ್ಲಿದ್ದಾರೆ.   ಈಗ ಇವರಿಗೆ 84 ವರ್ಷದ ವಯೋಮಾನ.  ಒಂದು ಕಾಲದಲ್ಲಿ ಶಿವಮೊಗ್ಗದ ನೆಹರೂ ರಸ್ತೆಯ ಎರಡನೇ ತಿರುವಿನ ಪ್ರಕೃತಿ ಮುದ್ರಣಾಲಯ ಎಂದರೆ ಜಿಲ್ಲೆಯ ಹೋರಾಟಗಾರರು, ವಿಚಾರವಂತರು, ಸಾಹಿತಿಗಳು, ಶಾಸಕರು ಮತ್ತು ಸಂಸದರು ಸೇರುತ್ತಿದ್ದ ಅನುಭವ ಮಂಟಪ ಇದರ ಮಾಲಿಕರು ಬ್ರಹ್ಮಚಾರಿ ಪುಟ್ಟಯ್ಯನವರು.   ಯಾರಿಂದಲೂ ಒಂದು ಪೈಸೆಯ ಋಣದಲ್ಲಿ ಇರದ ತಮ್ಮದೇ ದುಡಿಮೆಯ ಸ್ವಂತ ಜೇಬಿನ ಹ

ಹೆಗ್ಗೋಡಿನ ಕಾಕಲ್ ಸಹೋದರರ ಕಾಕಲ್ -TSS ಸಂಯೋಜಿತ ಸೂಪರ್ ಮಾರ್ಕೆಟ್.

#ಹೆಗ್ಗೋಡಿನ_ಕಾಕಲ್_TSS_ಅತ್ಯುತ್ತಮ_ಸೂಪರ್_ಬಜಾರ್. #ಪಸ್ಟ್_ಕ್ವಾಲಿಟಿ_ಕಡಿಮೆ_ದರದಲ್ಲಿ_ಮಾರಟ  #ಕೃಷಿ_ಆದಾರಿತ_ಕುಟುಂಬಗಳ_ಬೇಡಿಕೆಯ_ಎಲ್ಲಾ_ವಸ್ತುಗಳು_ಇಲ್ಲಿ_ಲಭ್ಯ. #ಹೆಗ್ಗೋಡಿನ_ಕಾಕಲ್_ಸಹೋದರರು_ಗ್ರಾಮೀಣ_ಪ್ರದೇಶದ_ಸ್ವಯಂಉದ್ಯೋಗಿಗಳಿಗೆ_ರೋಲ್_ಮಾಡಲ್    ಸಿರ್ಸಿಯ ಪ್ರತಿಷ್ಠಿತ ತೋಟಗಾರಿಕಾ ಕೋ ಆಪರೇಟಿವ್ ಸೇಲ್ಸ್ ಸರ್ವಿಸ್ ಜನರ ಬಾಯಲ್ಲಿ TSS ಇದು ಅತ್ಯಂತ ಯಶಸ್ವಿ ಮತ್ತು ಬಳಕೆದಾರರ ನಂಬಿಕೆಯ ಬ್ರಾಂಡೆಡ್ ಸಂಸ್ಥೆ ಈ ಸಂಸ್ಥೆಯೊಡನೆ ಹೆಗ್ಗೋಡಿನ ಕಾಕಲ್ ಉಪ್ಪಿನಕಾಯಿ, ಕಾಕಲ್ ಪೆಟ್ರೋಲ್ ಬಂಕ್ ಮುಂತಾದ ಉದ್ಯಮಗಳನ್ನು ಗ್ರಾಮೀಣ ಪ್ರದೇಶದಲ್ಲಿ ಯಶಸ್ವಿಯಾಗಿ ನಡೆಸುತ್ತಿರುವ ಕಾಕಲ್ ಸಹೋದರರ ಸಂಸ್ಥೆ ಹೆಗ್ಗೋಡಿನಲ್ಲಿ #ಕಾಕಲ್_TSS ಪ್ರಾ೦ಚೈಸಿ ಸೂಪರ್ ಮಾರ್ಕೆಟ್ ಕಳೆದ ವರ್ಷ ಪ್ರಾರಂಬಿಸಿದ್ದರು.   ಅಲ್ಲಿಗೆ ಹೋದವರು ಅಲ್ಲಿನ ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆ, ಅದೇ ಅವರಣದಲ್ಲಿರುವ ಪೆಟ್ರೋಲ್ ಪಂಪ್, ಇವರದೇ ಕಾಕಲ್ ಸಂಸ್ಥೆಯ ಉಪ್ಪಿನಕಾಯಿ ಜೊತೆಗೆ ಈಗ ಆಗಿರುವ TSS ಸೂಪರ್ ಮಾರ್ಕೆಟ್ ತುಂಬಾ ಚೆನ್ನಾಗಿದೆ, ಪ್ರಶಾ೦ತ ವಾತಾವರಣದಲ್ಲಿದೆ ಅಂತೆಲ್ಲ ರೀವೀವ್ ಕೇಳಿದ್ದೆ ಆದರೆ ಅಲ್ಲಿಗೆ ಹೋಗಲಾಗಿರಲಿಲ್ಲ.    ಇವತ್ತು ಮಾರ್ಚ್ ಕೊನೆಯಲ್ಲಿ ಬೀಮನಕೋಣೆಯ ಪಿಎಲ್ ಡಿ ಬ್ಯಾಂಕಿಗೆ ಹೋಗುವ ಕೆಲಸ ಇತ್ತು ಅಲ್ಲಿಂದ ಕಾಕಲ್ ನವರ ಈ TSS ಸಂಯೋಜಿತ ಸೂಪರ್ ಮಾರ್ಕೆಟ್ ಗೆ ಹೋಗುವ ತೀರ್ಮಾನ ಮನೆಯಿಂದಲೇ ಮಾಡಿದ್ದೆ.   ಇಲ್ಲಿ ಏನಿದ

ಕಟ್ಟರ್ ಜಾತಿ ಸಂಪ್ರದಾಯದ ಸಮಾಜದಲ್ಲಿ ಜಾತ್ಯಾತೀತವಾದ ಅನಾಥ ಮಗುವಿನ ಜಾತಿ ಯಾವುದು? ಅನಾಥ ಮಗು ನನ್ನ ತಂದೆಯನ್ನು ಸಂರಕ್ಷಿಸಿದ್ದು ಕ್ಷೌರಿಕ ಜಾತಿಯ ನಲ್ಲಪ್ಪನವರು ಸಾಕಿದ್ದು ಮೀನುಗಾರ ಜಾತಿಯ ಅಬ್ಬಕ್ಕ ಮತ್ತು ವಿಶ್ವಕರ್ಮ ಜಾತಿಯ ಸುಬ್ಬಣ್ಣಾಚಾರ್ ದಂಪತಿಗಳು, ಇದು ನನ್ನ ಹುಟ್ಟಿನ ಇತಿಹಾಸ.

              (ನನ್ನ ಅಜ್ಜಿ ಅಬ್ಬಕ್ಕ, ತಂದೆ ಕೃಷ್ಣಪ್ಪ ಮತ್ತು ತಾಯಿ ಸರಸಮ್ಮ)            ಅವತ್ತು ಜನಿಸಿದ ಅನಾಥ ಮಗು ಬಿದಿರು ಮಟ್ಟಿಯ ನೆರಳಲ್ಲಿ ಹಸಿವಿನಿಂದಲೋ ಅಥವ ಜನಿಸಿ ತಾಯಿಯ ಬೆಚ್ಚನೆಯ ಅಪ್ಪುಗೆ ಇಲ್ಲದೆಯೋ ಅಳುತ್ತಿತ್ತು ಅಕಸ್ಮಾತ್ ಆ ಮಣ್ಣು ದಾರಿಯಲ್ಲಿ ನಡೆದು ಬಂದ ಕ್ಷೌರಿಕ ವೃತ್ತಿಯ ಆನಂದಪುರಂನ ಆ ಕಾಲದ ಡೇರ್ ಡೆವಿಲ್ ನಲ್ಲಪ್ಪನವರನ್ನು ದೇವರೇ ಕಳಿಸಿರಬೇಕು.     ಯಾರೋ ಅಕ್ರಮ ಸಂಬಂದದ ಕೂಸನ್ನು ಲೋಕ ನಿಂದನೆ ನಿವಾರಿಸಿಕೊಳ್ಳಲು ಅನಾಥವಾಗಿಸಿ ಹೋದ ಗಂಡು ಮಗುವನ್ನು ನಲ್ಲಪ್ಪ ಎತ್ತಿ ಮುದ್ದಿಸಿ ಈ ಮಗುವಿಗೆ ಪುನರ್ಜೀವನ ಸೃಷ್ಟಿಸುವ ಸಂಕಲ್ಪಕ್ಕೆ ನೆನಪಾಗಿದ್ದೆ ಕರಾವಳಿಯಿಂದ ಹೊಟ್ಟೆಪಾಡಿಗಾಗಿ ಘಟ್ಟಕ್ಕೆ ಬಂದು ನಂತರ ಇಲ್ಲಿನ ಖಾಯಂ ನಿವಾಸಿ ಆಗಿ ಸ್ಥಳಿಯರ ಭತ್ತ ಒನಕೆಯಿಂದ ಒರಳಲಿ ಕುಟ್ಟಿಸಿ ಅಕ್ಕಿ ಮಾಡಿ, ಹೊಟ್ಟು ಕೇರಿಸಿ, ಮರದಲ್ಲಿ ನೆಲ್ಲು ಬೇರ್ಪಡಿಸಿ, ಸಾಣಿಗೆಯಲ್ಲಿ ಸಾಣಿಸಿ ನುಚ್ಚು ಬೇರೆ ಮಾಡಿಸಿ ಕೊಡುತ್ತಿದ್ದ ದೇಶಿ ಅಕ್ಕಿ ಗಿರಣಿಯಂತೆ ಕಾರ್ಯ ನಿರ್ವಹಿಸಿ ಹೊಟ್ಟೆ ಹೊರೆದುಕೊಳ್ಳುತ್ತಿದ್ದ ಅಬ್ಬಕ್ಕ.  (1929 ರಲ್ಲಿ ಮೈಸೂರು ಸರ್ಕಾರದ ತೂಕ ಮತ್ತು ಅಳತೆ ಇಲಾಖೆ ಮೊಹರಾಗಿರುವು ಒಂದು ಸೇರು ನಮ್ಮಜ್ಜಿಯ ಅಕ್ಕಿ ವ್ಯಾಪಾರದಲ್ಲಿ ಬಳಕೆಯಲ್ಲಿತ್ತು)   ಸಾರ್ವಜನಿಕರಲ್ಲಿ ಕಟುಕನಂತೆ, ನ್ಯಾಯಕ್ಕಾಗಿ ಎಂತವರನ್ನು ಎದುರು ಹಾಕಿಕೊಳ್ಳುತ್ತಿದ್ದ ನಲ್ಲಪ್ಪನವರಿಗೆ ಈ ಮಗು ಅಲ್ಲೇ ಇದ್ದರೆ ಇರುವೆ,

ಸೊರಬದಲ್ಲಿ ಬಂಗಾರಪ್ಪ ಮತ್ತು ಸಾಗರದಲ್ಲಿ ಕಾಗೋಡು ಗೆಲ್ಲಲಿ ಎಂಬ ಆಹಮದ್ ಅಲೀ ಖಾನ್ ಸಾಹೇಬರ ಚುನಾವಣಾ ತಂತ್ರಗಾರಿಕೆ ತಡೆದ ಮತ ವಿಭಜನೆ

#ಚುನಾವಣೆಯಲ್ಲಿ_ಕೆಲವು_ವಿಚಾರ_ತೆಗೆದುಕೊಳ್ಳುವ_ತಿರುವು. #ಸಾಗರ_ವಿದಾನಸಭಾ_ಕ್ಷೇತ್ರದಲ್ಲಿ_ಬಂಗಾರಪ್ಪ_ಸೋಲಿಸಲು_ಕಾಗೋಡು_ಗೆಲ್ಲಲು_ಕಾರಣವಾದ_ವಿಚಾರ #ಬಂಗಾರಪ್ಪರ_ಮತ_ವಿಭಜನೆ_ವಿಪಲವಾದ_ಖಾನ್_ಸಾಹೇಬರ_ತಂತ್ರ. ನಿನ್ನೆ ನಾಡಿನ ಖ್ಯಾತ ಅಂಕಣಗಾರರು ಪತ್ರಕರ್ತರೂ ಆದ ನಮ್ಮ ಸಾಗರದವರೆ ಆದ #ಆರ್_ಟಿ_ವಿಠಲಮೂರ್ತಿ ಬರೆದ  ಬಾಗಲಕೋಟೆಯಲ್ಲಿ ರಾಮಕೃಷ್ಣ ಹೆಗಡೆ ಸಿದ್ದುನ್ಯಾಮಗೌಡರ ಎದರು ಸೋಲಲು ಕಾರಣವಾದ "ನಮ್ಮ ನೀರು ಕುಡಿಯದವರಿಗೆ ನಮ್ಮ ಓಟು ಯಾಕೆ " ಎಂಬ ಡಯಲಾಗು ಕಾರಣವಾದದ್ದು ಬರೆದಿದ್ದರು ಇದು ನಡೆದ ಸಂದರ್ಭ ಪ್ರಚಾರ ಸಭೆಯಲ್ಲಿ ಗಂಟಲು ನೋವಿಂದ ಬಳಲುತ್ತಿದ್ದ ಹೆಗಡೆ ಯವರು ನೀರಿಗಾಗಿ ಕೈ ಸನ್ನೆ ಮಾಡಿದಾಗ ಸ್ಥಳಿಯ ಕಾರ್ಯಕರ್ತ ತಂದ ತಣ್ಣನೆ ನೀರು ನಿರಾಕರಿಸಿ ತನ್ನ ಆಪ್ತನಿಂದ ಬಿಸಿ ನೀರು ಪಡೆದು ಕುಡಿದದ್ದು ಇಷ್ಟೆಲ್ಲ ಅವಾಂತರಕ್ಕೆ ಕಾರಣ ಆಯಿತು ಅಂತ ಇದನ್ನು ಓದಿದಾಗ ಸಾಗರ ವಿದಾನ ಸಭಾ ಕ್ಷೇತ್ರದಲ್ಲಿ ಕಾಗೋಡು ಮತ್ತು ಬಂಗಾರಪ್ಪ ಪರಸ್ಪರ ಸ್ಪರ್ದಿಸಿದಾಗ ಖಾನ್ ಸಾಹೇಬರ ಚಾಣಕ್ಯದಿಂದ ಮತ ವಿಭಜನೆಯ ಬಂಗಾರಪ್ಪರ ಯೋಜನೆ ಕಾರ್ಯಗತ ಆಗದೆ ಕಾಗೋಡು ಗೆದ್ದ ಸಂದರ್ಭ ನೆನಪಾಗಿ ಇಲ್ಲಿ ಬರೆಯುವಂತಾಯಿತು.   #ಕಾಗೋಡು_ಬಂಗಾರಪ್ಪರ_ನೇರ_ಸ್ಪರ್ಧೆ   ಒಮ್ಮೆ ಬಂಗಾರಪ್ಪ ಸೊರಬ ಮತ್ತು ಸಾಗರ ಎರೆಡೂ ಕ್ಷೇತ್ರದಿಂದ ಸ್ಪರ್ಧೆ ಮಾಡಿದಾಗ ಸಾಗರ ವಿದಾನ ಸಭಾ ಕ್ಷೇತ್ರದ ಕಾಂಗ್ರೇಸ್ ಅಭ್ಯರ್ಥಿ ಕಾಗೋಡು ಸೋಲುತ್ತಾರೆಂಬ ಭಯ ಉಂಟಾಗಿತ್ತು.

ವಿಮಾನ ನಿಲ್ದಾಣಗಳ ರನ್ ವೇ ಬಣ್ಣ ತಯಾರಿಸುವ ಪೂನಾದ ಅಂತರಾಷ್ಟ್ರೀಯ ಶ್ರೀಮಂತ ಉದ್ಯಮಿಯ ನಡೆದು ಹೋಗುವ ಹವ್ಯಾಸ, ಒಂದು ರಾತ್ರಿ ನನ್ನ ಅತಿಥಿ ಮುಂದಿನದ್ದು ಓದಿ

#ಹೀಗೂ_ಉ೦ಟೆ!? #ಇದು_2018ರ_ಘಟನೆ_ಸದಾ_ನೆನಪಾಗುವುದರಿಂದ_ಇನ್ನೂ_ಒಮ್ಮೆ_ಪೋಸ್ಟ್_ಮಾಡಿದೆ #ರವೀ೦ದ್ರದತ್ತಾತ್ರೇಯಬುಚಾಕೆ_ದೇಶ_ವಿದೇಶಗಳಲ್ಲಿ #ಪಾದಯಾತ್ರೆ_ಮಾಡುವ_ಶ್ರೀಮಂತ_ಕೈಗಾರಿಕೋದ್ಯಮಿ  #ಪ್ರತ್ಯಕ್ಷ_ಕಂಡರು_ಪರಾಂಬರಿಸಿ_ನೋಡು_ಗಾದೆ_ಸುಳ್ಳಲ್ಲ   ನಿನ್ನೆ ಇವರು ಪತ್ನಿ ಮತ್ತು ಮಗನೊಂದಿಗೆ ಬಂದು ನನಗೆ ಕಾಯುತ್ತಿದ್ದರು, ಸಪ್೯ರೈಸ್ ವಿಸಿಟ್ ಮಾಡಿದ ಇವರ ಹೆಸರು ರವೀಂದ್ರ ದತ್ತಾತ್ರೆಯ ಬುಚಾಕೆ.    ನನಗೆ ಸಿಹಿ ತಿಂಡಿ, ಬೆಳ್ಳಿಯ ದೀಪದೊoದಿಗೆ ನೆನಪಿನ ಕಾಣಿಕೆ ನೀಡಿದರು, ನಾನು ಹೇಳಿದೆ " ನಾನು ನೀಡಿದ ಆತಿಥ್ಯಕ್ಕಿಂತ ಇದು ಕೆಲವು ಪಟ್ಟು ದುಬಾರಿ ಆಯಿತು ಅಂದೆ, ಅದಕ್ಕೆ ಅವರು ನಿಮ್ಮ ಪ್ರೀತಿಯ ಆತಿಥ್ಯಕ್ಕೆ ಬೆಲೆ ಕಟ್ಟಲು ಬಾರದು ಅಂದರು.   ವಾಸ್ತವ ಏನೆಂದರೆ ಕಳೆದ ವಷ೯ ಇವರು ಪೂನಾದಿಂದ ಶೃಂಗೇರಿಗೆ ಏಕಾ೦ಗಿ ಆಗಿ ನಡೆದು ಹೋಗುವಾಗ ನಮ್ಮ ಲಾಡ್ಜ್ ನಲ್ಲಿ ರೂಮು ಖಾಲಿ ಇರಲಿಲ್ಲ ಹಾಲ್ ನಲ್ಲಿ ಹಾಸಿಗೆ ಹಾಕಿ ಕೊಟ್ಟಿದ್ದೆ,ಒಂದು ರಾತ್ರಿ ತಂಗಿದ್ದರು, ಅವರ ಹಿನ್ನೆಲೆ ನಾನು ಕೇಳಲಿಲ್ಲ ಅವರು ಹೇಳಲಿಲ್ಲ ಆದರೆ ಅವರ 69ನೇ ಇಳಿವಯಸ್ಸಿನಲ್ಲಿ ಪೂನಾದಿಂದ ಶೃ೦ಗೇರಿಗೆ ಏಕಾ೦ಗಿಯಾಗಿ 780 ಕಿ.ಮಿ ನಡೆದು ಹೋಗುವ ಅವರ ಸಾಹಸಕ್ಕೆ ಅಭಿನಂದಿಸಿ ವಸತಿ, ಊಟ ಮತ್ತು ಉಪಹಾರ ಹಣ ಪಡೆಯದೆ ನೀಡಿದ್ದೆ ಮತ್ತು ಮುಂದಿನ ಪ್ರಯಾಣಕ್ಕೆ ಅಲ್ಪ ಕಾಣಿಕೆ ನೀಡಲು ಮುಂದಾದಾಗ ನಯವಾಗಿ ನಿರಾಕರಿಸಿದ್ದರು.   ನಿನ್ನೆ ಅವರ ಹಿನ್ನೆಲೆ ತಿಳಿಯಿತು ಈ ಹಿಂದೆ

ಕೆಲವು ದಶಕ ಅಕ್ಕಿ ಗಿರಣಿಗಳು ಉತ್ತುಂಗದಲ್ಲಿ ಏರಿ ಈಗ ಸಂಪೂರ್ಣ ನೆಲಕಚ್ಚಿದೆ, ಭತ್ತ ಬೆಳೆಯುವ ಪ್ರದೇಶವೂ ಕಡಿಮೆಆಗಿದೆ, ಜನ ಸಾಮಾನ್ಯರ -ರೈತರ ಅಕ್ಕಿ ಪೂರೈಕೆಗೆ ಹೊಸ ವಿಧಾನಗಳು ಬಂದಿದೆ.

#ಒಂದು_ಕಾಲದ_ರೈತರ_ರೈಸ್_ಮಿಲ್_ಜಮಾನದ_ನೆನಪಾಯಿತು. #ನಮ್ಮದು_ಈ_ಉದ್ಯಮದಲ್ಲಿ_ಮೂರು_ತಲೆಮಾರಿನ_ಅನುಭವ. #ತೌಡು_ತಿನ್ನಿಸಲು_ಪಶುಗಳಿಲ್ಲ_ನುಚ್ಚು_ತಿನ್ನಿಸಲು_ಕೋಳಿ_ಸಾಕುತ್ತಿಲ್ಲ. #ಕೃಷಿ_ಕಾರ್ಮಿಕರಿಗೆ_ನಿತ್ಯ_ಒಂದು_ಸೇರು_ಅಕ್ಕಿ_ನೀಡುವ_ಕಾಲ_ಕಣ್ಮರೆ. #ಭತ್ತ_ಬೆಳೆಯುವವರೂ_ಕಡಿಮೆ_ಅಕ್ಕಿ_ಗಿರಣಿಗಳೂ_ಈಗಿಲ್ಲ ಆಗೆಲ್ಲ ರೈಸ್ ಮಿಲ್ ಮಾಡುವುದು ಸುಲಭವಲ್ಲ 10 ಕಿ ಮಿ ವ್ಯಾಪ್ತಿಯಲ್ಲಿ ಒಂದು ರೈಸ್ ಮಿಲ್ ಇದ್ದರೆ ಇನ್ನೊ೦ದು ಕೊಡುವ ಹಾಗಿರಲಿಲ್ಲ, ನಿರ್ದಿಷ್ಟ ಎಕರೆ ಪ್ರದೇಶಕ್ಕೆ ಮಾತ್ರ ಮತ್ತು ಸ್ಥಳಿಯ APMC ನಿರಾಕ್ಷೇಪಣ ಪತ್ರ APMC ಅದರ ಸಭೆಯಲ್ಲಿ ತೀಮಾ೯ನಿಸಿ ನೀಡಿದ ನಂತರ ತಹಸೀಲ್ದಾರ್, ಎಸಿಯವರಿಂದ ಕಡತ ಜಿಲ್ಲಾಧಿಕಾರಿಗೆ ಅಲ್ಲಿ ಅವರು ಶಿಪಾರಸ್ಸು ಮಾಡಿ ಬೆಂಗಳೂರಿಗೆ ಕಳಿಸಿ ಅಲ್ಲಿ ಸಂಬಂದ ಪಟ್ಟ ಆಹಾರ ಇಲಾಖೆ ಲೈಸೆನ್ಸ್ ನೀಡುತ್ತಿತ್ತು. ಆಗ ಈ ಪರಿ ಲಂಚ ಇರಲಿಲ್ಲ, ಕಾನೂನು ಪಾಲಿಸುತ್ತಿದ್ದರು, ಈಗ ಈ ರೀತಿ ಲೈಸೆನ್ಸ್ ಬೇಕಾಗಿಲ್ಲ, ಯಾರೂ ಅಕ್ಕಿ ಗಿರಣಿ ಪ್ರಾರಂಬಿಸಬಹುದು.   1910 ರಲ್ಲಿ ನಮ್ಮ ಅಜ್ಜಿ ಜನರನ್ನು ಇಟ್ಟುಕೊಂಡು ಒನಕೆಯಲ್ಲಿ ಭತ್ತ ಕುಟ್ಟಿಸಿ, ಕೇರಿಸಿ, ಸಾಣಿಸಿ ಸ್ಥಳಿಯರಿಗೆ ಅಕ್ಕಿ ಮಾಡಿಕೊಡುತ್ತಿದ್ದರಂತೆ, ನಮ್ಮ ತಂದೆ ಮಹಾರಾಷ್ಟ್ರದ ಥಾನ ಜಿಲ್ಲೆಯಿಂದ ಮಿನಿ ಅಕ್ಕಿ ಗಿರಣಿ ( ಶೆಲ್ಲರ್ & ಪಾಲಿಶರ್ ) ತರಿಸಿದ್ದರು ನಂತರ ಇದಕ್ಕೆ ನಮ್ಮ ತಂದೆ ಗೆಳೆಯರಾದ ರೈಸ್ ಮಿಲ್ ಮೆಕಾನಿಕ್ ಹಮೀದ್ ಸಾಬರು (ನಂತರ ಅವರ

ನಮ್ಮ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಘಂಟಿನಕೊಪ್ಪದಲ್ಲಿ ಮೊದಲ ಬಾರಿಗೆ ಕಾಣಿಸಿದ ಕಾಳಿಂಗ ಸರ್ಪ ಸಂರಕ್ಷಿಸಿ ಅರಣ್ಯಕ್ಕೆ ಬಿಡಲಾಗಿದೆ.

#ಸಾಗರ_ತಾಲ್ಲೂಕಿನ_ಯಡೇಹಳ್ಳಿ_ಗ್ರಾಮಪಂಚಾಯತ್_ವ್ಯಾಪ್ತಿಯ_ಘಂಟಿನಕೊಪ್ಪದಲ್ಲಿ_ಕಾಳಿಂಗ_ಸರ್ಪ. #ಅರಣ್ಯ_ಇಲಾಖೆಯವರು_ಸಾಗರದಿಂದ_ಹಾವುಸಂರಕ್ಷಕ_ಸ್ನೇಕ್_ಇಮ್ರಾನ್_ಕರೆತಂದು_ರಕ್ಷಣೆ. #ಈ_ಭಾಗದಲ್ಲಿ_ಇದೇ_ಮೊದಲ_ಕಾಳಿಂಗ_ದರ್ಶನ   ಸಾಗರ ತಾಲ್ಲೂಕಿನ ಆನಂದಪುರಂ ಹೋಬಳಿಯ ಹೆಗ್ಗೋಡು ಭಾಗದಲ್ಲಿ ಕಾಳಿಂಗ ಸರ್ಪ ಇರುವುದು ಸಹಜ ಆದರೆ ಆನಂದಪುರಂ - ಯಡೇಹಳ್ಳಿ ಗ್ರಾಮ ಪಂಚಾಯತ್ ಭಾಗದಲ್ಲಿ ಈ ವರೆಗೆ ಕಾಳಿಂಗ ಸರ್ಪ ನೋಡಿದವರಿರಲಿಲ್ಲ.   ನಿನ್ನೆ ಮಧ್ಯಾಹ್ನ ಘಂಟಿನ ಕೊಪ್ಪದ ಉತ್ಸಾಹಿ ತರುಣ ಟ್ರಾಕ್ಟರ್ ಮಾಲಿಕ #ಗಜೇಂದ್ರ ಪೋನ್ ಮಾಡಿ ತಮ್ಮ ಊರಲ್ಲಿ  ಕಾಳಿಂಗ ಸರ್ಪ ಬಂದಿದೆ ಅಂದಾಗ ಆಶ್ಚಯ೯ ಆಯಿತು.  ಊರವರ ಮನೆಯ ಹತ್ತಿರ ಬಂದದ್ದು ಜನರ ಗದ್ದಲದಿಂದ ಮರ ಹತ್ತುತ್ತಿದೆ ಅರಣ್ಯ ಇಲಾಖೆಯವರಿಗೆ ಮಾಹಿತಿ ನೀಡಿದ್ದೇವೆ ಅಂದರು.   ಆನಂದಪುರ೦ ಭಾಗದಲ್ಲಿ ಕಾಳಿಂಗ ಸರ್ಪ ಈವರೆಗೆ ಗೋಚರಿಸಿರಲಿಲ್ಲ ನಿಮ್ಮ ಊರಲ್ಲಿ ಇವತ್ತು ಬಂದಿದ್ದರೆ ಬಹುಶಃ ಇದು ಮೊದಲ ಕಾಳಿಂಗ ಸರ್ಪ ಅಂದೆ, ನನ್ನ ಖಾತ್ರಿ ಗಾಗಿ ಮರ ಏರಲು ಹವಣಿಸುವ ವಿಡಿಯೋ - ಪೋಟೋ ಕಳಿಸಿದ್ದರು.   ಸಂಜೆ ಅವರು ಕಳಿಸಿದ ಪೋಟೋ 13 ಅಡಿ ಉದ್ದದ ದೊಡ್ಡ ಕಾಳಿಂಗ ಸರ್ಪ ಇದನ್ನು ಸಾಗರದ ಸ್ನೇಕ್ ಇಮ್ರಾನ್ ಅವರು ಹಿಡಿದರೆಂದು ತಿಳಿಸಿದರು.   ಸ್ನೇಕ್ ಇಮ್ರಾನ್ ಈ ಕಾಳಿಂಗ ಸರ್ಪ ಹಿಡಿದ ವಿಡಿಯೋ ನೋಡಿದೆ, ಯಾವುದೇ ಸ್ಟಿಕ್ ಇತ್ಯಾದಿ ಬಳಸದೆ ಗೋಣಿ ಚೀಲ ಅಲುಗಾಡಿಸುತ್ತಾ ಅದರ ಗಮನ ಆಕಡೆ ಹರಿಸಿ ಈ

ನನ್ನ ಪ್ರೀತಿಯ ಶಂಭುವಿಗೆ ಮೊದಲ ವರ್ಷದ ಹುಟ್ಟುಹಬ್ಬ

#ಶ೦ಭುವಿಗೆ_ಮೊದಲ_ವರ್ಷದ_ಹುಟ್ಟುಹಬ್ಬ.   ನಮ್ಮ ಶಂಭುವಿಗೆ ಇವತ್ತು ಹುಟ್ಟುಹಬ್ಬ ಅಂದರೆ ಅವನಿಗೆ ಒಂದು ವರ್ಷ, ಅನೇಕ ಆತಂಕ ಮತ್ತು ಆಪ್ತರ ಸಲಹೆ ಮೇರೆಗೆ ಬೆಂಗಳೂರಿಂದ ಒಂದು ತಿಂಗಳ ಮರಿ ತಂದು 11 ತಿಂಗಳ ಪಾಲನೆಯಲ್ಲಿ ಕುಟುಂಬದ ಸದಸ್ಯನಾಗಿ ಇಷ್ಟು ಪ್ರೀತಿಯ ಶಂಭು ಅಗುತ್ತಾನೆ ಅಂತ ನಿರೀಕ್ಷೆ ಮಾಡಿರಲಿಲ್ಲ.   ಮೈಸೂರಿನ ಅಶ್ವದಳದ ವೈದ್ಯರಾದ #ಡಾಕ್ಟರ್_ಪೂರ್ಣಾನಂದರು ರಾಟ್ ವೀಲರ್ ಪೆಟ್ ಅನಿಮಲ್ ಅಂತ ನಾನು ಹೇಳುವುದಿಲ್ಲ ಅಂದಿದ್ದರು ಅದಕ್ಕೆ ಕಾರಣ ಇದನ್ನು ಸರಿಯಾಗಿ ಟ್ರೈನಿಂಗ್ ನೀಡದಿದ್ದರೆ ಸಾಕಿದವರಿಗೆ ಸುದಾರಿಸಲು ಸಾಧ್ಯವಾಗುವುದಿಲ್ಲ ಮತ್ತು ಅನೇಕ ಅವಘಡಗಳು ಮಾಡುತ್ತದೆ.   ಇವನನ್ನು ತಾಳ್ಮೆಯಿಂದ ಸರಿಯಾದ ತರಬೇತಿ ನೀಡಿದ ನನ್ನ ಮಗನ ಶ್ರಮಕ್ಕೆ ಪ್ರತಿಫಲ ಇದು.    ಶಂಭುವಿನ ಕಾರಣದಿಂದ ನನ್ನ ವಾಕಿಂಗ್ ತಪ್ಪಿಸಿಕೊಳ್ಳಲು ಸಾದ್ಯವೇ ಇಲ್ಲ ಬೆಳಿಗ್ಗೆ ಸರಿಯಾದ ಸಮಯದಲ್ಲಿ ಕರೆಯುತ್ತಾನೆ.   ಸಣ್ಣ ಮರಿ ಆಗಿದ್ದಾಗ ಇವನಿಗೆ ಹೆದರಿಸುತ್ತಿದ್ದ ನಮ್ಮ ಬೇರೆ ನಾಯಿಗಳು ಈಗ ಇವನ ದೇಹದ ಆಕೃತಿ ಮತ್ತು ಶಕ್ತಿ ನೋಡಿ ಶರಣಾಗಿದ್ದಾರೆ.    ಚಿತ್ರದಲ್ಲಿರುವ ಹಸ್ಕಿ ಬೀಮನಿಗೆ ಐದು ತಿಂಗಳ ಪ್ರಾಯ, ನನ್ನ ಮಡಿಲಲ್ಲಿರುವ ಮಿನಿಯೇಚರ್ ಪಿ೦ಕ್ಚರ್ ಬ್ರೌನಿ (ಕೆಂಚಪ್ಪ) ಮಾತ್ರ ಇವರೆಲ್ಲರಿಗೆ ದೊಡ್ಡಣ್ಣ ಅಂದರೆ ಅವನಿಗೆ ಒಂದೂವರೆ ವರ್ಷ ಪ್ರಾಯ ಈಗ.   ಈ ಪ

ಬೂದಗುಂಬಳ ಅಮೃತ ಸಮಾನ, ಇದರ ಸಿಪ್ಪೆ, ಬೀಜ, ತಿರಳು, ರಸ, ಹೂವು ಮತ್ತು ಚಿಗುರು ಆಹಾರವಾಗಿ ಬಳಕೆ, ಇದರಲ್ಲಿರುವ ಔಷದ ಗುಣ ಪರಿಣಾಮಕಾರಿ, ವರ್ಷದಲ್ಲಿ ನಾಕಾರು ಬಾರಿಯಾದರೂ ಇದರ ರಸ ಸೇವನೆ ಮಾಡಬೇಕು.

#ಬೂದುಗುಂಬಳ_ಸರ್ವ_ಶ್ರೇಷ್ಟ_ಆಹಾರ_ಔಷದಿ #ಬೂದಗುಂಬಳದ_ಚಿಗುರು_ಹೂವು_ಕಾಯಿ_ಸಿಪ್ಪೆ_ತಿರಳು_ಬೀಜ_ಎಲ್ಲವೂ_ಬಳಕೆಗೆ  #ಇದರಲ್ಲಿರುವ_ಔಷದ_ಗುಣವೂ_ಅಪರಿಮಿತ. #ಇವತ್ತು_ಕುಡಿಯಲು_ಬೂದಗುಂಬಳದ_ರಸ_ಮತ್ತು_ಹಲ್ವ_ಮಾಡಿದ್ದೆ    ನನ್ನ ಡಿಪ್ಲೋಮೋ ಸಹಪಾಠಿ ಗೆಳೆಯರೊಬ್ಬರು ಸೊಯಾ೯ಸೀಸ್ ನಿಂದ ಬಳಲುತ್ತಿದ್ದರು, ದೇಹದ ಚರ್ಮದ ಕಾಯಿಲೆ, ಇದರಿಂದ ಅವರು ಜೀವನದಲ್ಲಿ ಜಿಗುಪ್ಸೆಗೆ ಒಳಗಾಗಿದ್ದರು, ಈ ಕಾಯಿಲೆಯಿಂದ ಊರು ಬಿಟ್ಟು ಬೆಂಗಳೂರು ಸೇರಿದ್ದರು, ಬಿಸಿಲಿಗೆ ಹೊರಗಡೆ ಹೋದರೆ ಇನ್ನೂ ಹೆಚ್ಚು ಇದಕ್ಕೆ ಅವರು ಮಾಡದ ಔಷದಿ ಇಲ್ಲ, ಆದರೆ ಪರಿಣಾಮ ಶೂನ್ಯ.  ಬೆಂಗಳೂರಿನ ಚಿಕ್ಕಪೇಟೆ ಪ್ರದೇಶದಲ್ಲಿ ಅವರು ಕೆಲಸ ಮಾಡುವ ಕಂಪನಿಯ ವಸೂಲಿಗೆ ಹೋದಾಗ ಅಲ್ಲೊಂದು ಸಣ್ಣ ಆಯುರ್ವೇದ ಚಿಕಿತ್ಸಾಲಯ ನೋಡಿ ಸುಮ್ಮನೆ ಒಳ ಹೋದಾಗ ಅಲ್ಲಿ ವೈದ್ಯರೋರ್ವರು ಯಾವುದೇ ರೋಗಿ ಇಲ್ಲದೆ ವಿರಾಮವಾಗಿ ಪೇಪರ್ ಓದುತ್ತಾ ಕುಳಿತಿದ್ದವರ ಹತ್ತಿರ ತಮ್ಮ ಸಮಸ್ಯೆ ಹೇಳಿಕೊಂಡಾಗ, ಆ ವೈದ್ಯರು ಹೇಳಿದ ಪರಿಹಾರ ಪ್ರತಿ ದಿನ ಒಂದು ಲೋಟ ಬೂದಗುಂಬಳ ತುರಿದು ಹಿಂಡಿ ರಸ ಕುಡಿಯಿರಿ, ಬೇರೆ ಯಾವ ಔಷದಿಯೂ ಬೇಡ ಅಂದರಂತೆ. ಈ ವೈದ್ಯರು ಇಷ್ಟು ಸರಳವಾಗಿ ಹೇಳಿದರಲ್ಲ ಅಂತ ನನ್ನ ಗೆಳೆಯರು ನಿರ್ಲಕ್ಷ ಮಾಡಿದರಂತೆ.   ಊರಿಗೆ ಬಂದಾಗ ಪತ್ನಿ ಹತ್ತಿರ ಹೇಳಿದ್ದಾರೆ, ಇವರ ಪತ್ನಿ ದಿನಾ ಒತ್ತಾಯದಿಂದ ಬೂದಗುಂಬಳದ ನೀರು ಕುಡಿಸುತ್ತಾ ಬಂದಿದ್ದಾರೆ ಸ್ವಲ್ಪ ದಿನದ ನಂತರ ಇವರಿಗ