ರಾಷ್ಟ್ರೀಯ ಹೆದ್ದಾರಿ ಮತ್ತು ರಾಜ್ಯ ಹೆದ್ದಾರಿಯ ಊರಲ್ಲಿ ನಡೆಯುವ ಮಾರಿಕಾಂಬಾ ಜಾತ್ರೆಯಿಂದ ರೋಡ್ ಬ್ಲಾಕ್ ಆಗದಂತೆ ತಡೆಯಲು ವಿಶೇಷ ಕ್ರಮದ ಅಗತ್ಯವಿದೆ.
#ಸುಮಾರು_ನಾಲ್ಕು_ಗಂಟೆ_ರಾಷ್ರೀಯ_ಹೆದ್ದಾರಿ_ಬಂದ್_ಆಗಿತ್ತು.
#ರಾಷ್ಟ್ರೀಯ_ಮತ್ತು_ರಾಜ್ಯ_ಹೆದ್ದಾರಿಯ_ಉರಿನಲ್ಲಿ_ಮಾರಿಜಾತ್ರೆ_ಆಗುವಲ್ಲಿ_ಈ_ಸಮಸ್ಯೆ.
#ಜಾತ್ರಾ_ಸಮಿತಿ_ಸ್ಥಳಿಯ_ಪೋಲಿಸರ_ಸಹಕಾರದಲ್ಲಿ_ಮುಂಜಾಗೃತೆ_ವಹಿಸಬೇಕು.
ಈ ವಿಡಿಯೋ ಇವತ್ತಿಗೆ ಎರೆಡು ವರ್ಷದ ಹಿಂದಿನದ್ದು ಅವತ್ತು ಪ್ರತಿ ಮೂರು ವರ್ಷಕ್ಕೊಮ್ಮೆ ನಡೆಯುವ ಆನಂದಪುರಂನ ಮಾರಿಕಾಂಬಾ ಜಾತ್ರೆಯ ರಾತ್ರಿ (11- ಮಾರ್ಚ್ -2020)ಯದ್ದು.
ಆನಂದಪುರಂ ಇತಿಹಾಸದಲ್ಲೇ ಅತ್ಯಂತ ಅದ್ದೂರಿ ಜಾತ್ರೆ ಅದು, ಮಾಂಸಹಾರಿಗಳೆಲ್ಲರ ಮನೆಯಲ್ಲಿ ಕುರಿ ಮಾಂಸದ ಬೋಜನಕ್ಕೆ ಆಹ್ವಾನ ಪಡೆದವರೆಲ್ಲ ಆನಂದಪುರಂಗೆ ಸೇರುವ ಶಿಕಾರಿಪುರದಿಂದ ಬರುವ ಹೆದ್ದಾರಿ, ಹೊಸನಗರದಿಂದ ಆನಂದಪುರಂ ಮಾರ್ಗ, ರಿಪ್ಪನ್ ಪೇಟೆಯಿಂದ ಆನಂದಪುರಂ ಮಾರ್ಗ, ಸಾಗರದಿಂದ ಆನಂದಪುರಂ, ಶಿವಮೊಗ್ಗದಿಂದ ಆನಂದಪುರಂ ಮಾರ್ಗ ಹೀಗೆ ಎಲ್ಲಾ ಮಾರ್ಗಗಳಲ್ಲಿ ಜನ ತಮ್ಮ ತಮ್ಮ ದ್ವಿಚಕ್ರ ಮತ್ತು ಕಾರುಗಳಲ್ಲಿ ಒಂದೇ ಸಾರಿ ಬಂದು ಸೇರಿದ್ದರಿಂದ ಎಲ್ಲಾ ಮಾರ್ಗಗಳಲ್ಲಿ ನಾಲ್ಕು ಕಿಲೋ ಮೀಟರ್ ವ್ಯಾಪ್ತಿಯಲ್ಲಿ ರೋಡ್ ಬ್ಲಾಕ್ ಆಗಿತ್ತು.
ಇದರ ಮಧ್ಯ ಸಿಕ್ಕಿಬಿದ್ದ ಅಂಬ್ಯೂಲೆನ್ಸ್ ಮತ್ತೆ ಚಲಿಸಲು ನಾಲ್ಕು ಗಂಟೆ ಕಾಯಬೇಕಾಯಿತು ಇದರ ಮಧ್ಯ ಬೋಜನ ಕೂಟದ ಅವಸರದಿಂದ ಅಲ್ಲಲ್ಲೇ ವಾಹನ ಬಿಟ್ಟು ಕಾಲ್ನಡಿಗೆಯಲ್ಲಿ ಹೋಗಬೇಕಾದ ಪರಿಸ್ಥಿತಿ.
ಇಂತಹ ಪರಿಸ್ಥಿತಿ ನಿರೀಕ್ಷಿಸಿರದ ಪೋಲಿಸರು ಮತ್ತು ಜಾತ್ರಾ ಸಮಿತಿ ಹತಾಷರಾಗಿ ಕೈ ಚೆಲ್ಲಿದ್ದರು, ಕೆಲ ಉತ್ಸಾಹಿ ಯುವಕರ ತಂಡ ವಿಶೇಷವಾಗಿ ಯಡೇಹಳ್ಳಿಯ ಸಮಾಜ ಸೇವಕ #ಜಿಯಾವುಲ್ಲಾ ಮತ್ತು ಗೆಳೆಯರು ಸತತ ಪ್ರಯತ್ನ ಪಟ್ಟರು ರಾತ್ರಿ 11 ರ ನಂತರ (ಸುಮಾರು 4 ಗಂಟೆ ಕಾಲ ) ರೋಡ್ ಬ್ಲಾಕ್ ಸರಿಪಡಿಸಲು ಸಾಧ್ಯವಾಯಿತು.
ಈ ಘಟನೆ ನಮ್ಮ ಊರಿನ ಇತಿಹಾಸದಲ್ಲೇ ಪ್ರಥಮ, ಇದರ ನೆನಪು ಬಹಳ ಕಾಲ ಉಳಿಯದಂತೆ ಈ ಘಟನೆಯ ಮರುದಿನವೇ ಜಾತ್ರೆಯನ್ನು ಕರೋನಾ ಸಾಂಕ್ರಮಿಕ ರೋಗದ ಕಾರಣದಿಂದ ರದ್ದಾಯಿತು, ನಂತರ ಜನತಾ ಕಪ್ಯೂ೯, ಲಾಕ್ ಡೌನ್ ಇತ್ಯಾದಿಗಳಿಂದ ಮರೆತು ಹೋಯಿತು.
ಕಳೆದ ತಿಂಗಳು ಸಾಗರ ಪಟ್ಟಣದ ಸಮೀಪದ ಕುಗ್ವೆಯಲ್ಲಿ ಮಾರಿ ಜಾತ್ರೆಯಲ್ಲಿ ಇದೇ ರೀತಿ ಸಾಗರ ತಾಳಗುಪ್ಪ ರಾಷ್ಟ್ರೀಯ ಹೆದ್ದಾರಿ ಬ್ಲಾಕ್ ಆಗಿತ್ತು.
ಸದ್ಯದಲ್ಲೇ ಅನೇಕ ಊರಲ್ಲಿ ಮಾರಿಕಾಂಭಾ ಜಾತ್ರೆಗಳು ನಡೆಯುಲಿದೆ, ಕೊರಾನಾ ಮಿತಿಗಳು ಯಾವುದೂ ಇಲ್ಲ ಆದ್ದರಿಂದ ಸಂಬಂದ ಪಟ್ಟ ಜಾತ್ರಾ ಸಮಿತಿ, ತಾಲ್ಲೂಕು ಆಡಳಿತ ಸುಗಮ ಸಂಚಾರಕ್ಕಾಗಿ ಪೋಲಿಸರ ಜೊತೆ ಕೈ ಜೋಡಿಸಿ ರೋಡ್ ಬ್ಲಾಕ್ ಆಗದಂತೆ ಮುಂಜಾಗೃತೆ ವಹಿಸಬೇಕು.
Comments
Post a Comment