Skip to main content

Posts

Showing posts from September, 2020

ಕಾಗೋಡು ಹೋರಾಟದ ರೂವಾರಿ ನನ್ನ ಗುರು ಗಣಪತಿಯಪ್ಪರು ಅವರ ಆರನೇ ಪುಣ್ಯ ತಿಥಿಯಂದೇ ಕನಸಿನಲ್ಲಿ ಬಂದಿದ್ದರು

#ಕಾಗೋಡು_ಹೋರಾಟದ_ರೂವಾರಿ #ಹೆಚ್_ಗಣಪತಿಯಪ್ಪ_ನೆನಪು       ನಾನು ಗುರು ಅಂತ ಕರೆದಿದ್ದು ಇವರೊಬ್ಬರಿಗೆ ಅದಕ್ಕೆ ಹಲವು ಕಾರಣ ಇದೆ, ನಿನ್ನೆ ರಾತ್ರಿ ಕನಸಿನಲ್ಲಿ ಗಣಪತಿಯಪ್ಪನವರು ಅವರ ಶಿಸ್ತಿನ ವಸ್ತ್ರ ಅಲಂಕರಿಸಿ ಬಂದಿದ್ದರು.   ಬಿಳಿ ಜುಬ್ಬಾ ಕಚ್ಚೆ ಪಂಜೆ ಮೇಲೆ ಕ್ಯಾಮೆಲ್ ಕಲರ್ ನ ವೇಸ್ಟ್ ಕೋಟ್ ಬಗಲ ಚೀಲದೊಂದಿಗೆ ಬಂದಿದ್ದರು.   ಅವರು ಇಹ ಲೋಕ ತ್ಯಜಿಸಿದ ನಂತರ ಯಾವತ್ತೂ ಕನಸಿಗೆ ಬಂದಿರಲಿಲ್ಲ.    ಗೂಗಲ್ ನಲ್ಲಿ ಅವರ ಬಗ್ಗೆಯ ಮಾಹಿತಿಗಾಗಿ ಕ್ಷಿಕ್ ಮಾಡಿದರೆ ಮೊದಲಿಗೆ ಬಂತು ದಿ ಹಿಂದೂ ಪತ್ರಿಕೆಯ ಅವರ ಇಹ ಲೋಕ ತ್ಯಜಿಸಿದ ವರದಿ.    ಕಾಕತಾಳಿಯ / ಆರನೇ ಇಂದ್ರಿಯಾ/ಸುಪ್ತ ಮನಸ್ಸಿನ ಪುನರ್ ಜ್ಞಾಪಕ ಹೀಗೆ ಯಾವುದೋ 2014 ಸೆಪ್ಟೆಂಬರ್ 30 ರಂದು ಅವರು ವಿದಿವಶರಾದ ದಿನ.    ಇವತ್ತು #ಕಾಗೋಡು_ಹೋರಾಟದ_ರೂವಾರಿ_ಗಣಪತಿಯಪ್ಪರ_ಪುಣ್ಯತಿಥಿ.    ಅವರ ಹೋರಾಟವನ್ನೆ ಜನ ಮರೆತು ಬಿಟ್ಟ ಕಾಲದಲ್ಲಿ ಅವರ ಆತ್ಮಚರಿತ್ರೆ ಸಾಹಿತಿ ಕೋಣಂದೂರು ವೆಂಕಟಪ್ಪ ಗೌಡರಿಂದ ಬರಿಸಿದ್ದು, ಅದಕ್ಕೆ ದಾಖಲೆ ಹುಡುಕಾಟ, ಪುಸ್ತಕ ಮುದ್ರಣಕ್ಕೆ ಹಣಕ್ಕಾಗಿ ಪ್ರಯತ್ನ, ಪುಸ್ತಕ ಮುದ್ರಿಸದಂತೆ ಬಾಹ್ಯ ಒತ್ತಡ, ಬಿಡುಗಡೆ ಮಾಡದಂತೆ ಕಾಯ೯ಕ್ರಮ ಹಾಳು ಮಾಡುವ ಪ್ರಯತ್ನ, ಕೆಟ್ಟ ವಿಮಶೆ೯ ಬರೆದ ವಿಮರ್ಶಕರು,ಕಾಗೋಡಿನಲ್ಲಿ ಲೋಹಿಯಾ ಆ ಕಾಲದಲ್ಲಿ ಕಾಗೋಡಿನ ವೀರ ಹೋರಾಟಗಾರರನ್ನ ಉದ್ದೇಶಿಸಿ ಬಾಷಣ ಮಾಡಿದ ಅರಳಿಕಟ್ಟೆಯಿಂದ  ಕಡಿದಾಳಿನ ಕಡಿದಾಳು ಮಂಜಪ್ಪರ ಸಮಾದಿವರೆಗ

ವಿಜಯ್ ಮಲ್ಯ ಸಾಗರಕ್ಕೆ ಬಂದಿದ್ದು ಒ೦ದು ನೆನಪು

#ವಿಜಯ್_ಮಲ್ಯ_ಸಾಗರಕ್ಕೆ_ಬಂದಿದ್ದು    2004 ರಲ್ಲಿ ನಡೆದ ವಿದಾನ ಸಭಾ ಚುನಾವಣೆಯಲ್ಲಿ ನಾನು ವಿಜಯ ಮಲ್ಯರ ಜನತಾ ಪಕ್ಷದ ಅಭ್ಯಥಿ೯, ಲೋಕಸಭಾ ಅಭ್ಯಥಿ೯ ಆಗಿ ಚಲನ ಚಿತ್ರ ನಟ ದೊಡ್ಡಣ್ಣ.   ಸಾಗರ ತಾಲ್ಲೂಕಿಗೆ ವಿಜಯ್ ಮಲ್ಯರು ಟಿಪ್ಪು ಸುಲ್ತಾನರ ಖಡ್ಗದೊಂದಿಗೆ ಬಂದಿದ್ದರು ಅವರ ಎರೆಡು ಹೆಲಿಕಾಪ್ಟ್ ರ್ ಇಂದಿರಾ ಗಾಂಧಿ ಮಹಿಳಾ ಪದವಿ ಕಾಲೇಜ್ ಅವರಣದಲ್ಲಿ ಲ್ಯಾಂಡಿಂಗ್ ವ್ಯವಸ್ಥೆ ಮಾಡಿತ್ತು ಅಲ್ಲಿಂದ ಮುಖ್ಯ ರಸ್ತೆಯಲ್ಲಿ ಮೆರವಣಿಗೆಯಲ್ಲಿ ಸಾಗಿ ಬಂದು ಗಣಪತಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಜಾಮಿಯಾ ಮಸೀದಿಯಲ್ಲಿ ಪ್ರಾಥ೯ನೆ ಸಲ್ಲಿಸಿ ಸಾಗರದ ಗಾಂಧೀ ಮೈದಾನದಲ್ಲಿ ಸಭೆ ನಡೆಸಿದ ಪೋಟೋ FB ನೆನಪಿಸಿದೆ.   ಸಭೆ ನಂತರ ಅವರನ್ನ ಉಳ್ಳೂರು ಸಮೀಪದ ಚಿತ್ರಟ್ಟೆ ಮಠದ ಲಿಂಗರಾಜರ ಸಹೋದರರ ಕಾರಿನಲ್ಲಿ ಹೆಲಿಕಾಪ್ಟ್ ರ್ ಇಳಿದ ಜಾಗಕ್ಕೆ ಮರಳಿದ್ದು ನೆನಪು.    ಆಗ ಸಾಗರ ತಾಲ್ಲೂಕ್ ಜನತಾ ಪಕ್ಷದ ಅಧ್ಯಕ್ಷರಾಗಿದ್ದ ಖ್ಯಾತ ವಕೀಲ ಎಂ.ಎಸ್.ಗೌಡರು ಮತ್ತು ಜಿಲ್ಲಾ ಮುಖಂಡರಾಗಿದ್ದ ಯುವ ವಕೀಲ ಬೋಜ್ ರಾಜ್ ಚುನಾವಣಾ ಪ್ರಚಾರದಲ್ಲಿ ಮುಂಚೂಣಿಯಲ್ಲಿದ್ದರು.    ಈ ಚುನಾವಣೆಯಲ್ಲಿ ಕಾಂಗ್ರೇಸ್ ನಿಂದ ಕಾಗೋಡು, ಬಿಜೆಪಿಯ ಗೋಪಾಲಕೃಷ್ಣರಿಂದ ಪರಾಭವಗೊಂಡಿದ್ದು ಇತಿಹಾಸ

ಜನ ಮಾನಸದಿಂದ ಮರೆತು ಹೋಗುತ್ತಿರುವ ಸಸ್ಯ ಜನ್ಯ ಉಪ್ಪಾಗೆ ತುಪ್ಪಾಗೆ ಈಗ ವೇಗನ್ಸ್ ಗಳಿಂದ ಬಹುಬೇಡಿಕೆ ಬರುತ್ತಿದೆ.

#ಉಪ್ಪಾಗೆ_ತುಪ್ಪ_ಸಿಕ್ಕಿತು.       ಇದು ಸಸ್ಯಹಾರಿ ತುಪ್ಪಾ ಸಾಮಾನ್ಯವಾಗಿ ಪಶು ಸಂಗೋಪನಾ ತುಪ್ಪ ಮಾತ್ರ ಉತ್ಪಾದನೆ ಮತ್ತು ಮಾರಾಟಕ್ಕೆ ಸಿಗುತ್ತೆ.   ಪಶ್ಚಿಮ ಘಟ್ಟದಲ್ಲಿ ಹೆಚ್ಚಾಗಿರುವ ಉಪ್ಪಾಗೆ ಮರದ ಹಣ್ಣಿನ ಬೀಜ ಜಜ್ಜಿ ನೀರಲ್ಲಿ ಬೇಯಿಸಿದಾಗ ಅದರ ಕೊಬ್ಬು ಹೊರ ಬರುತ್ತೆ ಅದನ್ನು ತೆಗೆದು ಪುನಃ ಕುದಿಸಿ ಅದರಲ್ಲಿನ ನೀರು ಆವಿ ಆಗಿಸಿದರೆ ಉಳಿಯುವುದೇ ಉಪ್ಪಾಗೆ ತುಪ್ಪ.    ವಿದೇಶಿ ಮಿತ್ರ ವೇಗನ್ (ಪ್ರಾಣಿ ಜನ್ಯ ಯಾವುದೇ ಹಾಲು, ತುಪ್ಪ ಮತ್ತು ಮಾ೦ಸ ಜೀವಮಾನದಲ್ಲಿ ಬಳಸದವರು) ಅವರಿಗಾಗಿ ಈ ಸಸ್ಯಜನ್ಯ ತುಪ್ಪಕ್ಕೆ ಹುಡುಕಾಟ ಮಾಡಿದಾಗಲೇ ಗೊತ್ತಾಗಿದ್ದು ಇದು ಈಗ ಜನ ಬಳಕೆ ಮರೆತ ಪದಾಥ೯ ಅಂತ.     ಕೈ ಬೆರಳೆಣೆಕೆ ಜನ ಮನೆ ಉಪಯೋಗಕ್ಕೆ ಮಾತ್ರ ತಯಾರಿಸಿ ಕೊಳ್ಳುತ್ತಾರೆ.   ಇದರ ರುಚಿ ಸುವಾಸನೆ ಅದ್ಬುತ ಕೂಡ ಹಾಗಾಗಿ ಮೂರು ತಿಂಗಳ ಹಿಂದೆ "ಆತ್ಮ ನಿಬ೯ರ ಸ್ವದೇಶಿ" ಎಂಬ FB ಗುಂಪಿನಲ್ಲಿ ಉಪ್ಪಾಗೆ ತುಪ್ಪಾ ಸಿಗುತ್ತಾ? ಅಂತ ಪ್ರಶ್ನೆ ಪೋಸ್ಟ್ ಮಾಡಿದ್ದೆ ಅದಕ್ಕೆ ಬಂದ ಪ್ರತಿಕ್ರಿಯೆ ಹಾಗೆಂದರೇನು ಅಂತ ಪ್ರಶ್ನೆಗಳ ಸುರಿಮಳೆ.    ಅದರಲ್ಲಿ ಸಿಸಿ೯ಯ ವೀಣಾ ಹೆಗ್ಗಡೆ ಎಂಬ ಸಹೋದರಿ ಈ ಸಾಹಸಕ್ಕೆ ಒಪ್ಪಿ ಸ್ವತಃ ಉಪ್ಪಾಗೆ ತುಪ್ಪಾ ತಯಾರಿಸಿ ಕಳಿಸಿದ್ದರು ಅದು ಉತ್ಕೃಷ್ಟ ದಜೆ೯ಯ ದು ಈಗ ಎರಡನೇ ಬಾರಿ ಅವರಿಂದ ಖರೀದಿಸಿದ್ದೇನೆ ಕಿಲೋಗೆ 800 + ಕೋರಿಯರ್ ವೆಚ್ಚ ಪ್ರತ್ಯೇಕ.   ಈ ತುಪ್ಪಾ ಬೇಕಾದವರು ಅವರನ್ನ ಸಂ

ಬೆಸ್ತರ ರಾಣಿ ಚಂಪಕಾ ವಿಮಷೆ೯ -13

#ಸೋಮೇಶ್ವರ್    ನಾನು ಸಾಗರದ ಸಂಜಯ್ ಮೆಮೋರಿಯಲ್ ಪಾಲಿಟೆಕ್ನಿಕ್ ಗೆ ಡಿಪ್ಲೋಮೋಗೆ ಹೋಗುವಾಗ ಸೋಮೆಶ್ವರ್ ಸಾಗರದ ಎಲ್.ಬಿ. ಕಾಲೇಜಿಗೆ ಬರುತ್ತಿದ್ದರು ನಮಗಿಬ್ಬರಿಗೂ ಸಮಾನ ಸ್ನೇಹ ಬಂದ ಉಂಟು ಮಾಡಿದವರು ನಂಜವಳ್ಳಿ ಮಲ್ಲಿಕಾರ್ಜುನ ಗೌಡರು.   ಆಗಲೇ ಸೋಮೇಶ್ವರ ಬರೆದ ಕಥೆಗಳು ಪ್ರಜಾವಾಣಿ, ಸುದಾಗಳಲ್ಲಿ ಪ್ರಕಟ ಆಗುತ್ತಿತ್ತು ಇವರ ತಂದೆ ಕೂಡ ಕೆಳದಿ ಮಠದಲ್ಲಿ ಸಲಹೆಗಾರರಾಗಿ ಸಹಕರಿಸಿದವರು.    ಸೋಮೇಶ್ವರ್ ಈಗ ಬೆಂಗಳೂರಲ್ಲಿ ಯಶಸ್ವಿ ಉದ್ದಿಮೆದಾರರಾಗಿದ್ದಾರೆ ನನ್ನ ಮೊದಲ ಇತಿಹಾಸ ಆದರಿತ ಕಾಲ್ಪನಿಕ ಕಾದಂಬರಿ ಓದಿ ಅಭಿಪ್ರಾಯ ದಾಖಲಿಸಿದ್ದಾರೆ. #ಸೋಮೇಶ್ವರರ ವಿಮಷೆ೯ . ಸಾಧಾರಣ ಮಾನವನಲ್ಲಿರುವ ಅರಿವುರಹಿತತೆ ಎನ್ನುವುದು ಶೇಕಡಾ ೯೦% ರಷ್ಟು ಎನ್ನುವುದನ್ನು ಬದುಕು ಕ್ರಮೇಣ ಅರ್ಥವಾಗಿಸುತ್ತಾ ಹೋದಂತೆ, ವೈಯುಕ್ತಿಕವಾಗಿ, ಯಾವುದೇ ಮನುಷ್ಯರ, ರಾಜರ, ಅಧಿಕಾರಸ್ತರ, ರಾಜಕಾರಣಿಗಳ ಪೂರ್ವೇತಿಹಾಸ (ಚರಿತ್ರೆ), ನನ್ನ ಆಸಕ್ತಿಯ ವಿಷಯವಾಗಿ ಉಳಿದಿಲ್ಲ. ತರಾಸುರವರ ಚಿತ್ರದುರ್ಗದ ಕುರಿತಾದ ಕೃತಿಗಳು, ಕೆ.ವಿ.ಅಯ್ಯರ್ ಅವರ ಶಾಂತಲೆಯನ್ನು ಸಹಾ ಅವುಗಳ ರೋಚಕ ಶೈಲಿಗಾಗಿಯೇ ಓದಿದವನು ನಾನು!!  ಆದರೆ.... ಪ್ರಿಯ ಅರುಣ್ ಪ್ರಸಾದ್, ಸಾಗರದ ಕಾಲೇಜಿನ ದಿನಗಳಿಂದ ನನಗೆ ಪರಿಚಿತರೂ ಗೆಳೆಯರೂ ಆದ ನೀವು, ಅಂದಿನಿಂದಲೂ ತುಂಬಾ ವಿಶೇಷ ಹಾಗೂ ಆಸಕ್ತಿದಾಯಕ ವ್ಯಕ್ತಿತ್ವವುಳ್ಳವರು.  ಹಾಗಾಗಿ ಮತ್ತು ನಿಮ್ಮ ಹೋರಾಟಗಳು, ಸಾಹಿ

ಬೆಸ್ತರ ರಾಣಿ ಚಂಪಕಾ ವಿಮಶೆ೯ - 12

#ಪ್ರೀತಂ_ಡಾಕ್ಟರ್_ಚ೦ಪಕ_ಸರಸ್ಸು_ಬೇಟಿ    ಶಿವಮೊಗ್ಗದ ಜನಾನುರಾಗಿ ವೈದ್ಯರಾದ ಡಾ.ಪ್ರೀತಂ ನನ್ನ ಕಾದಂಬರಿ ಓದಿ ಪ್ರೇರಿತರಾಗಿ ನಿನ್ನೆ ಆನಂದಪುರದ ಚಂಪಕ ರಾಣಿ ಸ್ಮಾರಕ #ಚಂಪಕ_ಸರಸ್ಸು ವಿಗೆ ಸಂಸಾರ ಸಮೇತ ಪಿಕ್ ನಿಕ್ ಮಾಡಿದ್ದಾರೆ.    ಡಾ. ಪ್ರೀತಂ ಎಷ್ಟೆಲ್ಲ ಕ್ರಿಯಾಶೀಲರಂತ ಹೇಳಲೇ ಬೇಕು ಶಿವಮೊಗ್ಗದ ದುಗಿ೯ಗುಡಿಯ ರಾಜ್ ಕುಮಾರ್ ಡಯಾಗ್ನಸ್ಟಿಕ್ ಎಂಬ ನಸಿ೯೦ಗ್ ಹೊಂ ನಡೆಸುತ್ತಾರೆ, ಶಿವಮೊಗ್ಗಕ್ಕೆ ಪ್ರಸಿದ್ಧ ಡಯಾಬಿಟಿಕ್ ತಜ್ಞರು.   ಅಧಿಕೃತ ರಾಜ್ಯ ಮಟ್ಟದ ಕ್ರಿಕೆಟ್ ಅಂಪೈರಿಂಗ್ ಅಹ೯ತೆ ಪಡೆದಿದ್ದಾರೆ, ಸ್ವತಃ ಕ್ರಿಕೆಟ್, ಷಟಲ್ ಬ್ಯಾಡ್ಮಿಂಟನ್, ಬೈಕ್ ಮತ್ತು ಕಾರ್ ರ್ಯಾಲಿ, ದೇಶ ವಿದೇಶ ಪ್ರಯಾಣ ಇವರ ವಿಶೇಷ ಕಾಯ೯ಚಟುವಟಿಕೆ .    ಇದರ ಜೊತೆ ಜೊತೆಯಾಗಿ ಓದು ಬರಹ ಕೂಡ, ಇಷ್ಟೆಲ್ಲ ಬಿಡುವಿಲ್ಲದ ವೈದ್ಯರು ನನ್ನ ಕಾದಂಬರಿ ಓದಿ ಅದರ ಕೇಂದ್ರವಾದ ಚಂಚಕ ಸರಸ್ಸು ಸಂದಶಿ೯ಸಿದ್ದಾರೆಂದರೆ ಅವರಲ್ಲಿ ಸಂಶೋಧನಾ ಮನೋಬಾವ ಕೂಡ ಇದೆ.    ಧನ್ಯವಾದಗಳು ಡಾಕ್ಟರ್ ಪ್ರೀತಂ ಸಾರ್  ಇವರು ಈ ಬಗ್ಗೆ ಬರೆದ FB ಸಾಲುಗಳನ್ನ ನೋಡಿ      Champaka sarassu. This is a monument built in the memory of ರಾಣಿ ಚ೦ಪಕ by ರಾಜಾ ವೆ೦ಕಟಪ್ಪ ನಾಯಕ ,  some 400 years back ,,after reading the wonderful  novel by Arun Prasad about the same was eager to vi

ಬೆಸ್ತರ ರಾಣಿ ಚಂಪಕಾ ವಿಮಷೆ೯ -11

#ತೇಜ್_ಕುಮಾರ್_ಕೆ_ಆರ್_ಸುಳ್ಯ  ಕೃಷಿಕರು, ಬರಹಗಾರರು ಮತ್ತು ಅರಬಾಸೆ, ಕನ್ನಡ, ಇಂಗ್ಲೀಷ್, ತುಳು ಮತ್ತು ಮಲೆಯಾಳ ಬಾಷೆ ಅರಿತವರು, ಇವರು ಮುಖತಃ ಬೇಟಿ ಆಗಿಲ್ಲ ಆದರೆ ಪೇಸ್ ಪುಸ್ತಕ ಗೆಳೆಯರನ್ನಾಗಿಸಿ ನನ್ನ ಕಾದಂಬರಿ ಇವರು ಓದಿ ವಿಮಷೆ೯ ಮಾಡುವಂತೆ ಮಾಡಿದೆ, ಇವರ ಮನೆ ಸುಂದರ ಪರಿಸರದಲ್ಲಿ ಕಲಾತ್ಮಕವಾಗಿ ನಿಮ೯ಣಗೊಂಡಿರುವುದರ ಚಿತ್ರ ಲಗತ್ತಿಸಿದ್ದೇನೆ ನೋಡಿ, ಒಮ್ಮೆ ನೋಡಲೇ ಬೇಕು ಅನ್ನಿಸುತ್ತದೆ.   ತಮ್ಮ ಇತರೆ ಕಾಯ೯ಗಳ ನಡುವೆ ಓದಿ ವಿಮಷಿ೯ಸಿದ ತೇಜ್ ಕುಮಾರರಿಗೆ ಕೃತಜ್ಞತೆಗಳೊಂದಿಗೆ ಅವರ ವಿಮರ್ಷೆ ನಿಮಗಾಗಿ     #ನನ್ನ_ಮುಖ_ಪುಸ್ತಕದ_ಗೆಳೆಯ_ಅರುಣ್_ಪ್ರಸಾದ್ ರವರು ಅವರ ಮೊದಲ ಪುಸ್ತಕ "ಬೆಸ್ತರ ರಾಣಿ ಚಂಪಕಾ" ಕಳುಹಿಸಿದ್ದರು. ಓದಿ ಮುಗಿಸಿದೆ. ಒಂದು ಒಳ್ಳೆಯ ಪುಸ್ತಕ. ನಮ್ಮ ರಾಜಪರಂಪರೆಗಳಲ್ಲಿ,ಜಾನಪದ ಕತೆಗಳಲ್ಲಿ ಹೆಚ್ಚಾಗಿ ಹೆಣ್ಣು ಶೋಷಿತಳಾಗಿಯೇ ಉಳಿಯುತ್ತಾಳೆ.ಮನಸ್ಸು ಭಾರವಾಗುತ್ತದೆ. ಅಂತಹ ಕತೆಯೊಂದನ್ನ ಲೇಖಕರು ನಮಗಿತ್ತಿದ್ದಾರೆ. ಕರುನಾಡ ಇತಿಹಾಸದಲ್ಲಿ ಕೆಳದಿ ಒಂದು ವಿಶಿಷ್ಟ ರಾಜ್ಯ. ವಿಜಯನಗರದ ಸಾಮಂತರಾಗಿದ್ದು ವಿಜಯನಗರದ ಫತನದ ನಂತರ ಸ್ವತಂತ್ರ ರಾಜರಾಗಿ ಅಷ್ಟ ದಿಕ್ಕುಗಳ ಶತ್ರುಗಳನ್ನು ಮೆಟ್ಟಿ ನಿಂತು ಆಳಿದ ಕೀರ್ತಿ ಅವರದ್ದು.ಅವರಲ್ಲಿ ಪಡುಗಡಲೊಡೆಯನೆಂಬ ಬಿರುದಾಂಕಿತ ರಾಜಾ ವೆಂಕಟಪ್ಪನಾಯಕ ಕಲಾವಂತಿಕೆಯ ಬೆಸ್ತರ ಹುಡುಗಿ ಚಂಪಕಾಳಿಗೆ ಮರುಳಾಗುತ್ತಾನೆ ಮದುವೆಯಾಗುತ

ಉಡುಪಿಯ ರಾಷ್ಟ್ರಕವಿ ಗೋವಿಂದ ಪೈ ಮೆಮೋರಿಯಲ್ ರೀಸಚ್೯ ಸೆಂಟರ್ ನಲ್ಲಿ ಪಿ ಹೆಚ್ ಡಿ ಮಾಗ೯ದಶ೯ಕರಾದ ಡಾ. ಜನಾದ೯ನ ಭಟ್ಟರು ಮಾಡಿರುವ ಬೆಸ್ತರ ರಾಣಿ ಚ೦ಪಕಾ ವಿಮಷೆ೯ - 10

#ನಾನೆಲ್ಲಿ_ನನ್ನ_ಚೊಚ್ಚಲ_ಕಾದಂಬರಿ_ಎಲ್ಲಿ_ಇದನ್ನು_ವಿದ್ವಾ೦ಸರು_ವಿಮಷಿ೯ಸುತ್ತಾರೆಂದರೆ  ನನಗೆ ನನ್ನನ್ನೇ ನಂಬಲಾಗುತ್ತಿಲ್ಲ?!   #ಡಾ_ಜನಾದ೯ನ_ಭಟ್ಟರು ಬರಹಗಾರರು, ವಿಮಷ೯ಕರು ಅವರ ಬಳಗ ದೊಡ್ಡದು ಉಡುಪಿಯ ರಾಷ್ಟ್ರಕವಿ ಗೋವಿಂದ ಪೈ ಮೆಮೋರಿಯಲ್ ರೀಸಚ್೯ ಸೆಂಟರ್ ನಲ್ಲಿ ಪಿ.ಹೆಚ್.ಡಿ. ಮಾಗ೯ದಶ೯ಕರಾಗಿ ದೊಡ್ಡ ಹುದ್ದೆ ನಿವ೯ಹಿಸುತ್ತಿದ್ದಾರೆ.   ಖ್ಯಾತ ಸಾಹಿತಿ ಮತ್ತು ಶಿಕ್ಷಣ ತಜ್ಞ ಅರವಿಂದ ಚೊಕ್ಕಾಡಿಯವರ ಮೊದಲ ವಿಮಶೆ೯ ಇವರಿಗೆ ಈ ಪುಸ್ತಕ ಓದಲು ಪ್ರೇರೇಪಿಸಿದೆ.    ತಮ್ಮ ಕಾಯಾ೯ಭಾರದ ಸಮಯ ಅಭಾವದಲ್ಲೂ ಸಮಯ ಹೊಂದಿಸಿ ಓದಿ ವಿಮಷೆ೯ ಮಾಡಿದ್ದು ನನಗೆ ಸಂತೋಷ ಆಗಿದೆ.   ಕುಂಬಳೆಯ ಅನಂದಪುರದ ಕೊಳದಲ್ಲಿ ರಹಸ್ಯವಾಗಿ ನಿಧಿ ಇದೆ ಎಂಬ ಬಗ್ಗೆ ಕೇಂದ್ರದ ಪ್ರಾಚ್ಯ ವಸ್ತು ಸಂಶೋಧನಾ ಇಲಾಖೆ ಸಂಶೋದನೆಗಾಗಿ 15 ಲಕ್ಷ ಹಣ ಮಂಜೂರು ಮಾಡಿದೆ ಅಂತ ಕುಂಬಳೆಯ ಅರಮನೆ ವಂಶಸ್ಥರಾದ ರಮಾಕಾಂತ ಕುಂಬಳೆ ಈ ಪುಸ್ತಕದ ಬಗ್ಗೆ ಅವರಲ್ಲಿ ಹೋಗಿ ಚಚಿ೯ಸಿದಾಗ ತಿಳಿಸಿದ್ದರು.   ಸಂಶೋದಕರಿಗೆ ಕೆಳದಿ ಇತಿಹಾಸದ ಇನ್ನೊಂದು ಆಸಕ್ತಿಕರ ವಿಷಯ ಇದೆ ಅದೇನೆಂದರೆ ಕೆಳದಿ ರಾಜ ಮನೆತನ ಲಿಂಗಾಯಿತ ವೀರಶೈವರಾಗಿದ್ದದ್ದು ಅಂತ್ಯದಲ್ಲಿ ರಾಮಕ್ಷತ್ರಿಯರಾಗುತ್ತದೆ ಇದು ಇನ್ನೊಂದು ಪುಸ್ತಕ ಬರೆಯುವಷ್ಟು ಇದೆ.  ಅವರ ವಸ್ತು ನಿಷ್ಟ ವಿಮಷೆ೯ ನಿಮಗಾಗಿ #ಶಿವಮೊಗ್ಗ_ಜಿಲ್ಲೆಯ_ಆನಂದಪುರಂನ_ಕೆ_ಅರುಣಪ್ರಸಾದ್_ಅವರು_ಬರೆದ_ಬೆಸ್ತರರಾಣಿ_ಚಂಪಕಾ ಎನ್ನು

ಬಳ್ಳಿ ಕಾಳ ಬೆಳ್ಳಿ ಕಾದಂಬರಿಯಲ್ಲಿ ಪ್ರಖ್ಯಾತ ಲೇಖಕ ಕೆ.ಎನ್.ಗಣೇಶಯ್ಯ ಕೆಳದಿ ಸಂಶೋದಕ ಗುಂಡಾಜೋಯಿಸ್ ಇಟಲಿ ಮಾಫಿಯಾಗೆ ಮಾಹಿತಿ ನೀಡುವ ವಿಲನ್ ಎಂಬುದಾಗಿ ಚಿತ್ರಿಸಿದ್ದಾರೆ ಇದು ವಯೋವೃದ್ದ ಕೆಳದಿ ಇತಿಹಾಸ ಸಂಶೋದಕರಾದ ಕೆಳದಿ ಗುಂಡಾಜೋಯಿಸರ ತೇಜೋವದೆ ಮಾಡಿದಂತೆ.

#ಕೆ_ಎನ್_ಗಣೇಶಯ್ಯರ_ಬಳ್ಳಿಕಾಳ_ಬೆಳ್ಳಿ  ಪುಸ್ತಕದಲ್ಲಿ ಖಳನಾಯಕನ ಹೆಸರು ಕೆಳದಿ ಗುಂಡಾಜೋಯಿಸ್ ಅಂತ ಬರೆದದ್ದು ಸರಿ ಅಲ್ಲ.   ಗಣೇಶಯ್ಯರ ಕಥೆಗಳೆಂದರೆ ಥ್ರಿಲ್ಲಿ೦ಗ್, ಸಸ್ಪೆನ್ಸ್,ಹಿಡಿದ ಪುಸ್ತಕ ಮುಗಿಯುವವರೆಗೆ ಕೈ ಬಿಡಲಾಗುವುದಿಲ್ಲ ನಾನು ಅವರ ಅಭಿಮಾನಿಯೇ.   ಇವರು 2017ರಲ್ಲಿ ಪ್ರಕಟಿಸಿರುವ #ಬಳ್ಳಿಕಾಳ_ಬೆಳ್ಳಿ ಕಾದಂಬರಿ ನಮ್ಮ ಜಿಲ್ಲೆಯ ಮತ್ತು ಉ.ಕ.ಜಿಲ್ಲೆಯನ್ನ ಕೇಂದ್ರವಾಗಿ ಆಡಳಿತ ನಡೆಸಿದ ಕಾಳು ಮೆಣಸಿನ ರಾಣಿ ಚೆನ್ನಾ ಬೈರಾದೇವಿಯ ನಿದಿ ಶೋದನೆಗೆ ಬರುವ ಇಟಲಿಯ ಮಾಫಿಯಾದ ಪ್ರಯತ್ನ ಭಾರತ ಸಕಾ೯ರ ವಿಫಲಗೊಳಿಸುವ ಕಥೆ.   ಇದರಲ್ಲಿ ಇಟಲಿ ಮಾಫಿಯಾಗೆ ಸಹಾಯ ಮಾಡುವ ಖಳನಾಯಕನ ಹೆಸರು #ಗುಂಡಾ_ಜೋಯಿಸ್ ಮತ್ತು "ಈತ ಕೆಳದಿಯ ಬಗ್ಗೆ ಕೆಲವು ಉತ್ಪ್ರೇಕ್ಷೆಯಿ೦ದ ತುಂಬಿದ ಲೇಖನಗಳನ್ನು ಬರೆದಿದ್ದನಾದ್ದರಿಂದ ಅವನನ್ನ ಮಾಫಿಯಾದವರು ತಮ್ಮ ವ್ಯಕ್ತಿ ಮಾಕೊ೯ಸ್ ಗೆ ಪರಿಚಯಿಸುತ್ತಾರೆ" (ಪುಟ ಸಂಖ್ಯೆ 239) ಎಂಬ ವಿಶ್ಲೇಷಣೆ ಇದರಲ್ಲಿದೆ ಅಂದರೆ ಈ ಪಾತ್ರ ಕೆಳದಿ ಗುಂಡಾ ಜೋಯಿಸರೇ ಎಂದು ಒಪ್ಪುವಂತ ವಿಶ್ಲೇಷಣೆ ಇದಾಗಿದೆ ?!   ಇದು ಸಾಗರ ತಾಲ್ಲೂಕಿನ ವಯೋವೃದ್ದ ಸಂಶೋದಕರಾದ ಕೆಳದಿ ಗುಂಡಾಜೋಯಿಸರನ್ನೆ ಇವರು ವಿಲನ್ ಮಾಡಿದ್ದಾರಾ? ಎಂಬ ಅನುಮಾನ ಈ ಪುಸ್ತಕ ಓದಿದವರಿಗೆ ಅನ್ನಿಸದೇ ಇರಲಾರದು.    ಇದು ಕೆಳದಿ ಗುಂಡಾ ಜೋಯಿಸರ ಅಭಿಮಾನಿಗಳಾದ ನಮಗೇ ನೋವುಂಟು ಮಾಡುತ್ತಿದೆ

ಕುಮಾರ್ ಕುಂಠಿ ಕಾನ್ ಮಠ ಲಂಡನ್ ವಾಸಿ ಅನಿವಾಸಿ ಭಾರತೀಯರು ಇವರು ನನ್ನ ಕಾದಂಬರಿ ಬೆಸ್ತರ ರಾಣಿ ಚಂಪಕಾ ವಿಮಷೆ೯ - 9 ಮಾಡಿದ್ದಾರೆ

    ಲಂಡನ್ ಕನ್ನಡ ಸಮ್ಮೇಳನ ಮತ್ತು ಲಂಡನ್ ಯಕ್ಷಗಾನ ಸ್ಪದೆ೯ ಹೀಗೆ ದೂರದ ಯುರೋಪಿನಲ್ಲಿ ಕನ್ನಡದ ಕಂಪು ಹರಡುತ್ತಿರುವ ಅನಿವಾಸಿ ಭಾರತೀಯ ಕುಮಾರ್ ಕುಂಟಿಕಾನ್ ಮಠ ನನ್ನ ಕಾದಂಬರಿ ಬೆಸ್ತರ ರಾಣಿ ಚಂಪಕಾ ಓದಿ ವಿಮಷೆ೯ ಮಾಡಿದ್ದಾರೆ.    ಕೇರಳ ಕಾಸರಗೋಡು ಸಮೀಪದ ಇವರು ನನ್ನ ಕಾದಂಬರಿಯಲ್ಲಿ ಕುಂಬಳೆಯ ಅನಂದ ಪುರದ ಉಲ್ಲೇಖ ನೋಡಿ ಪ್ರತಿಕ್ರಿಯಿಸಿದ್ದಾರೆ.    ಇವರ ಕನ್ನಡ ಬಾಷಾ ಪ್ರೇಮ ನನ್ನ 30 ಕಾದಂಬರಿ ಖರೀದಿಸಿ ಲಂಡನ್ ನ ಕನ್ನಡ ಪ್ರೇಮಿಗಳಿಗೆ ತಲುಪಿಸಿದ್ದಾರೆ.   ತಮ್ಮ ಬಿಡುವಿಲ್ಲದ ಕಾಯ೯ ಬಾರದಲ್ಲಿ ಇಡೀ ಕಾದಂಬರಿ ಓದಿ ಕೈ ಬರಹದಲ್ಲಿ ವಿಮಷೆ೯ ಬರೆದಿರುವುದು ನನಗೆ ಖುಷಿ ಆಗಿದೆ.   

ಶಿವಮೊಗ್ಗದ ಮೊದಲ ಬಿಜೆಪಿ ಶಾಸಕರಾಗಿದ್ದ ಆನಂದರಾವ್ ಪುತ್ರ ಶಿವಮೊಗ್ಗದ ಮಾಜಿ ನಗರಸಭಾ ಅಧ್ಯಕ್ಷರಾಗಿದ್ದ ಶಂಕರ್ ಮಾಲೂರರ ಬೆಸ್ತರರಾಣಿ ಚಂಪಕಾ ವಿಮಷೆ೯ - 8

#ಶಂಕರ್_ಮಾಲೂರು_ಅವರ_ವಿಮಷೆ೯    ಎಲ್ಲಾ ಪಕ್ಷದವರೊಡನೆ ಸಂವನ ಶಕ್ತಿ ಇರುವ ಶಿವಮೊಗ್ಗದ ಭಾರತೀಯ ಜನತಾ ಪಕ್ಷದ ಶಂಕರ್ ಮಾಲೂರು ಅಗ್ರ ಪಂಕ್ತಿಯಲ್ಲಿದ್ದಾರೆ.   ಓದುವ ಹವ್ಯಾಸ ಮತ್ತು ಸಾಮಾಜಿಕ ಜಾಲತಾಣದಲ್ಲಿ ಯಾವಾಗಲೂ ಸಕ್ರಿಯರಾಗಿರುತ್ತಾರೆ.   ಎಂ.ಆನಂದ್ ರಾವ್ ಟ್ರಸ್ಟ್, ಹೊಯ್ಸಳ ಹೆಲ್ತ್ ಕೇರ್ ಮುಂತಾದ ಸೇವಾ ಚಟುವಟಿಕೆ ಕೂಡ ನಡೆಸಿದ್ದಾರೆ.   ಇವರ ಹೊಯ್ಸಳ ಹೆಲ್ತ್ ಕೇರ್ ಡಯಾಲಿಸಿಸ್ ಯಂತ್ರಗಳನ್ನು ಅಳವಡಿಸಿ ಅತಿ ಕಡಿಮೆ ವೆಚ್ಚದಲ್ಲಿ ಮದುಮೇಹಿಗಳಿಗೆ ಡಯಾಲಿಸಿಸ್ ಸೌಲಭ್ಯ ನೀಡುತ್ತದೆ.   ಇವರ ತಂದೆ ಆನಂದರಾವ್ ಶಿವಮೊಗ್ಗ ಜಿಲ್ಲೆಯ ಮೊದಲ ಬಿಜೆಪಿ ಶಾಸಕರು ಅವರ ಮನೆ ಮೇಲೆ ಬಾಂಬ್ ದಾಳಿ ಆಗಿತ್ತು ಎನ್ನುವುದು ಇತಿಹಾಸ, ಶಿವಮೊಗ್ಗ ನಗರ ಸಭೆ ಅಧ್ಯಕ್ಷರಾಗಿದ್ದರೂ ಸರಳವಾಗಿ ಸ್ಕೂಟರ್ ಮೇಲೆ ಸಂಚರಿಸುತ್ತ ಜನ ಸಾಮಾನ್ಯರ ಅದ್ಯಕ್ಷರಾಗಿದ್ದ ಶಂಕರ್ ನನ್ನ ಕಾದಂಬರಿ #ಬೆಸ್ತರರಾಣಿ_ಚಂಪಕಾ ಓದಿ ವಿಮಷೆ೯ ಮಾಡಿದ್ದು ನನಗೆ ಸಂತೋಷ ಉಂಟು ಮಾಡಿದೆ

ಮಳೆಗಾಲ ಮುಕ್ತಾಯ ಮತ್ತು ಚಳಿಗಾಲ ಪ್ರಾರಂಭದ ದಿನಗಳು ಮುಳ್ಳು ಸೌತೆಯ ಸುಗ್ಗಿ ಕಾಲ

#ಇದು_ಮುಳ್ಳುಸೌತೆಯ_ಕಾಲ   ಈ ತಿಂಗಳು ಮತ್ತು ಮುಂದಿನ ತಿಂಗಳು ಮುಳ್ಳುಸೌತೆಯ ಸವಿಯಲು ಸಕಾಲ, ರೈತರು ಬೆಳೆದು ಅವರ ಎಲ್ಲಾ ಉಪಯೋಗ ಬಳಸಿ ಈಗ ಮಾರುಕಟ್ಟೆಯಲ್ಲಿ ಭರಪೂರವಾಗಿ ಬರುತ್ತಿದೆ ಹಾಗೆ ಬಂದ ಕೆಲವೇ ಕ್ಷಣದಲ್ಲಿ ಖಾಲಿ.   ಮುಳ್ಳುಸೌತೆಯ೦ತದೇ ಒ0ದು ಹೈಬ್ರೀಡ್ ತಳಿ ಇದೆ ಆದರೆ ಮುಳ್ಳುಸೌತೆಯ ರುಚಿ ಆರೋಮ ಅದರಲ್ಲಿಲ್ಲ.   ಇದರಲ್ಲಿ ಅನೇಕ ವಿದದ ವ್ಯಂಜನ, ಸಿಹಿ ತಿಂಡಿ ಮತ್ತು ದೋಸೆ ಮಾಡುತ್ತಾರೆ ಆದರೆ ಎಳೆಯ ಮುಳ್ಳು ಸೌತೆ ತುಂಡರಿಸಿ ಜೀರಿಗೆ ಮೆಣಸು, ಉಪ್ಪು ಮತ್ತು ವಾಟೆ ಹುಳಿ ಮಿಶ್ರಣದ ಜೊತೆಗೆ ತಿಂದರೆ ಅದರ ರುಚಿಯೇ ಬೇರೆ.   ಸೌತೆಯ ಮೂಲ ನಮ್ಮ ಬಾರತವೇ ಆದರೂ 9 ಶತಮಾನದಲ್ಲಿ ಪ್ರಾನ್ಸ್, 14 ನೇ ಶತಮಾನದಲ್ಲಿ ಇಂಗ್ಲೇಂಡ್ ಮತ್ತು 16 ನೇ ಶತಮಾನದಲ್ಲಿ ಮದ್ಯ ಅಮೇರಿಕಾದಲ್ಲಿ ಇದು ಪರಿಚಯ ಆಯಿತು.    ರೋಮ್ ಚಕ್ರಾಧಿಪತಿಯ ನಿತ್ಯ ಊಟದ ಟೇಬಲ್ ನಲ್ಲಿ ಸೌತೆ ಇರಲೇ ಬೇಕಾದ್ದರಿಂದ ವರ್ಷ ಪೂತಿ೯ ಪಸಲಿಗಾಗಿ ಇದನ್ನು ಕೃತಕ ವ್ಯವಸ್ಥ ಯಲ್ಲಿ ಬೆಳೆಸುತ್ತಿದ್ದರಂತೆ.   ದಿನ ಒಂದು ಕೆಜಿ ಮುಳ್ಳು ಸೌತೆ ತಿನ್ನುತ್ತಿದ್ದೇನೆ.

ಬೆಸ್ತರ ರಾಣಿ ಚಂಪಕಾ ವಿಮಷೆ೯-8

ಮ. ರಾ. ಹೆಗ್ಗಡೆ ಸಂಪಾ ಎಂಬ ತಕ೯ದ ಕಾವ್ಯ ರಚನಾಕಾರರು ಬೆಸ್ತರ ರಾಣಿ ಚಂಪಕಾ ಓದಿ ಬರೆದ ಅಭಿಪ್ರಾಯಗಳು ಓದುಗರಿಗಾಗಿ.   ಮ.ರಾ. ಹೆಗ್ಗಡೆ ಮೂಲ ಸಾಗರ ತಾಲ್ಲೂಕಿನ ಅರಲುಗೋಡಿನವರು ಈಗ ಶಿರಾಳಕೊಪ್ಪದಲ್ಲಿ ನೆಲೆಸಿದ್ದಾರೆ, ಪ್ರಖ್ಯಾತ M N ಪಿಕಲ್ಸ್ ಸಂಸ್ಥೆಯಲ್ಲಿ ವ್ಯವಸ್ಥಾಪಕರಾಗಿದ್ದರು ಈಗ ಸ್ವಯ೦ ಉದ್ಯೋಗ ಮತ್ತು ಕೃಷಿ ಸಂಬಂದಿತ ಪಾರಂ ನಡೆಸುತ್ತಿದ್ದಾರೆ. ಸಾಗರ ತಾಲ್ಲೂಕು ಆನಂದಪುರದಲ್ಲಿ ನೆಲೆಸಿರುವ  ಉತ್ಸಾಹೀ ಉದ್ಯಮಿ ಹಾಗೂ ಶಿವಮೊಗ್ಗ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ   ಮಾನ್ಯಶ್ರೀ|| ಅರುಣ್ ಪ್ರಸಾದ ರವರು ಹತ್ತುವರ್ಷಗಳ ಹಿಂದೆಯೇ ಬರೆದು,  ಮೊನ್ನೆ ಮೊನ್ನೆಯಷ್ಟೇ ಮುದ್ರಿಸಿ ಪ್ರಕಾಶಿಸಿದ 'ಕಾಲ್ಪನಿಕ ಕಥಾಹಂದರ'ವೆಂಬ ಚೌಕಟ್ಟಿನ #ಬೆಸ್ತರ_ರಾಣಿ_ಚಂಪಕಾ ಹೆಸರಿನ ಐತಿಹಾಸಿಕ ಕಾದಂಬರಿ ಪುಸ್ತಕವನ್ನು   'ಗೌರವ ಪ್ರತಿ' ರೂಪದಲ್ಲಿ ಸ್ವೀಕರಿಸಿ ಓದಿದೆ. ಕೆಳದಿ ಸಾಮ್ರಾಜ್ಯದ ರಾಜಾ ವೆಂಕಟಪ್ಪ ನಾಯಕನ  ಸ್ವಚ್ಛ, ಜನಪರ, ನ್ಯಾಯಪರ, ಸುದೀರ್ಘ ಆಳ್ವಿಕೆಯ ಕಾಲದಲ್ಲಿ ಆಗಿಹೋಗಿರುವ  ಅತ್ಯವಶ್ಯಕವಾಗಿ ದಾಖಲಾಗಲೇಬೇಕಾದ ಐತಿಹಾಸಿಕ ಸತ್ಯವೊಂದು, ಕೇವಲ ಹುಟ್ಟು ಮತ್ತು ಆಹಾರಪದ್ಧತಿಯ ಕಾರಣದಿಂದ,  ಇತಿಹಾಸಕಾರರ  ಅವಗಣನೆಗೆ ಸಿಲುಕಿ,  ಸುಮಕೋಮಲ_ಮುಗ್ಧ ಮನಸ್ಸಿನ ನಿಷ್ಕಲ್ಮಶ ಹೃದಯದ ಹೆಣ್ಣೊಬ್ಬಳ 'ತ್ಯಾಗಸದೃಶ ಜೀವನ'ವು ಇತಿಹಾಸದ ಪುಟಗಳಲ್ಲಿ  ಉಲ್ಲೇಖಿತವಾಗದಿರುವ  'ಅಚ್ಚರ

ಬೆಸ್ತರ ರಾಣಿ ಚಂಪಕಾ ವಿಮಷೆ೯-7

      ಅಶೋಕ ಹೆಗ್ಗಡೆ ಮಾವಿನಗುಂಡಿ ಜೋಗ ಜಲಪಾತದ ಸೆರಗಿನ ಮಾವಿನಗುಂಡಿಯಲ್ಲಿದ್ದಾರೆ, ಇವರು ಐನಕೈ ಅಂತ ತಾಜಾ ಹಣ್ಣಿನ ರಸ ಮತ್ತು ಜಾಮ್ ಒ0ದು ಕಾಲದಲ್ಲಿ ಅತ್ಯಂತ ಪ್ರಸಿದ್ಧ.     ಈಗಲು ಎಲ್ಲಾ ವಿಚಾರವನ್ನು ವಸ್ತು  ನಿಷ್ಟವಾಗಿ ವೈಜ್ಞಾನಿಕವಾದ ತಳಹದಿಯಲ್ಲೇ ವ್ಯಾಖ್ಯಾನಿಸುವ ಇವರ ಸಂಪಕ೯ ಅಗಾದ .    ನನ್ನ ಕಾದಂಬರಿ ಬಗ್ಗೆ ಓದಿ ಇಲ್ಲಿ ಅವರು ವಿಮಷೆ೯ ಮಾಡಿದ್ದಾರೆ. ನಮ್ಮಲ್ಲಿಂದ ಸುಮಾರು 60 ಕಿ. ಮೀ ದೂರದ ಆನಂದಪುರ ಪಟ್ಟಣದ ನಿವಾಸಿ ಬರಹಗಾರ ಸಾಮಾಜಿಕ ಕಾಳಜಿ, ಕ್ರಿಯಾಶೀಲ ವ್ಯಕ್ತಿತ್ವದ ಶ್ರೀ ಅರುಣ ಪ್ರಸಾದ ರ ಪರಿಚಯ ಆತ್ಮೀಯತೆಯಾಗಿ ಬೆಳೆದಿದೆ. ಅಂತೆಯೇ ಅವರು ತೀವ್ರವಾಗಿ ತೊಡಗಿಸಿ ಕೊಂಡು ಬರೆದ ಪುಸ್ತಕ 'ಬೆಸ್ತರರಾಣಿ ಚಂಪಕಾ' ದರ ಕುರಿತು ಅನಿಸಿಕೆ ಹಂಚಿಕೊಳ್ಳುವುದು ನನ್ನ ಆದ್ಯ ಕರ್ತವ್ಯ. ಶ್ರೀ ಅರುಣ್ ಪ್ರಸಾದ್ ರ ಜನ್ಮ, ಕರ್ಮಸ್ಥಾನವಾದ ಆನಂದಪುರದ ಸ್ಥಳ ಇತಿಹಾಸದ ಮಹತ್ವದ ಆಧ್ಯಾಯ ರಾಜಾ ವೆಂಕಟಪ್ಪ ನಾಯಕರ ಆಳ್ವಿಕೆ, ರಾಜಕುಟುಂಬದ ಚರಿತ್ರೆ. ಇತಿಹಾಸವನ್ನು ಆಧರಿಸಿ ಬರೆದ 'ಕಾಲ್ಪನಿಕ ಕಾದಂಬರಿ' ಎಂದು ಹೇಳಿಕೊಂಡಿರುವದು ಬರೆದ ವಿಶಯಗಳು ಐತಿಹಾಸಿಕ ಸತ್ಯಗಳಲ್ಲ ಎಂಬ ಆಕ್ಷೇಪ, ವಿವಾದಗಳಿಂದ ದೂರವಿರುವದಕ್ಕಾಗಿ ಮಾತ್ರ. ಸಾಧ್ಯವಾದಷ್ಟು ವಸ್ತು, ವಿಶಯನಿಷ್ಠ ಬರವಣಿಗೆ. ಅತ್ಯಂತ ಸುಲಲಿತವಾಗಿ ಓದಿಸಿಕೊಂಡು ಹೋಗುವ ಶೈಲಿ, ಗತಕಾಲದ ಬಳಕೆಯ ಶಬ್ದಗಳು, ದುರಂತ ಪ್ರೇಮಕಥೆಯ ಸಾ

ಬೆಸ್ತರ ರಾಣಿ ಚಂಪಕಾ ವಿಮಷೆ೯-6

#ರಾಣಿ_ಚಂಪಕಾಳ_ಆತ್ಮ_ಇನ್ನೂ_ಅಲ್ಲೇ_ಇದೆಯಾ    ಅಂತ ನನಗೆ ಅನ್ನಿಸುತ್ತದೆ ರಾಣಿ ಚಂಪಕಳ ಸ್ಮಾರಕ ನಿಮಾ೯ಣವಾಗಿ 2024ಕ್ಕೆ 400 ವರ್ಷ ಆಗಲಿದೆ, ಇದು ಸತ್ಯ ಘಟನೆ ಆಧರಿಸಿ 10 ವರ್ಷದ ಹಿಂದೆ ಬರೆದದ್ದು ಇದನ್ನು ಮೊದಲು ಓದಿದವರು ಕೆಂಗಲ್ ಹನುಮಂತಯ್ಯ, ಹುಚ್ಚು ಮಾಸ್ತಿ ಗೌಡ, ದೇವರಾಜ ಅರಸ್ಸು, ದೇವೇಗೌಡರು, ಜೆ.ಹೆಚ್.ಪಟೇಲ ಮತ್ತು ಕಾಗೋಡು ಹೋರಾಟದ ರೂವಾರಿ ಗಣಪತಿಯಪ್ಪರ ಆತ್ಮಚರಿತ್ರೆ ಬರೆದ ಕೋಣಂದೂರು ವೆಂಕಪ್ಪ ಗೌಡರು.     ನಾನು ಬರೆದದ್ದು ಅನೇಕ ಸಣ್ಣ ಕಥೆ ಅದರ ನಂತರ ಈ ಕಾದ೦ಬರಿ ಪ್ರಕಟಿಸುವ ಅಪೇಕ್ಷೆ ಮಿತ್ರರಾದ ಶೃಂಗೇಶ್ ರಿಂದ ಬದಲಾಗಿ ಕಾದಂಬರಿ ಮೊದಲಾಯಿತು.     ಈ ಕಾದಂಬರಿ ಬಗ್ಗೆ ಅನೇಕರು ಬರೆಯುತ್ತಿರುವ ವಿಮಷೆ೯ ಮತ್ತು ಪುಸ್ತಕದ ಬೇಡಿಕೆ ನೋಡಿದರೆ ಇನ್ನೋಂದು ಮುದ್ರಣ ಆಗಲಿದೆ ಅನ್ನಿಸುತ್ತೆ.    ಇದೆಲ್ಲ ಏನನ್ನಿಸುತ್ತದೆಂದರೆ ಕೆಳದಿ ಸಾಮ್ರಾಜ್ಯದ ದುರಂತ ರಾಣಿ ಚಂಪಕಾ ಆತ್ಮ 400 ನೇ ವಷ೯ದ ವಷಾ೯ಚರಣೆಗೆ ಕಾದಿದೆಯಾ ಅನ್ನಿಸುತ್ತೆ.    ಈಗಷ್ಟೆ ಕಾನಲೆಯ ಕಿರಿಯ ಗೆಳೆಯ ಆದರೆ ಓದು ಬರಹ ಮತ್ತು ಕ್ರಿಯಾಶೀಲತೆಯಲ್ಲಿ ನಮಗಿಂತ ಹಿರಿಯರೆನ್ನಿಸುವ ಕಾನಲೆ ಗುರುಪ್ರಸಾದ್ ತಮ್ಮ ಬಿಡುವಿಲ್ಲದ ಚಟುವಟಿಕೆಯ ಮಧ್ಯ ಓದಿ ವಸ್ತು ನಿಷ್ಠ ವಿಮಷೆ೯ ಮಾಡಿದ್ದಾರೆ. #ಓದಿ_ಓದಿಸಿ ( ಪುಸ್ತಕ ಪರಿಚಯ 17 ) ( ಬೆಸ್ತರರಾಣಿ ಚಂಪಕಾ-ಕಾದಂಬರಿ – ಕೆ.ಅರುಣ್ ಪ್ರಸಾದ್ ) ಛೆ...! ಏನಾಗಿಹೋಯಿತು..!! ಎಂಬ ಭಾವವೊಂದು ಮನಸ್ಸನ್ನು ಆವರಿಸಿತು. ಶ್ರೀ