ಶಿವಾನಂದ ಕಳವೆ ಅದುನಿಕ ಭಗಿರಥ ಎಂಬಂತೆ ರಾಜ್ಯದ ಅನೇಕ ಜಲ ಮೂಲಗಳ ಪುನಶ್ಚೇತನ ಮಾಡಿದವರು ಇವರ ಅನೇಕ ಇಂತಹ ಕಾಯ೯ಕ್ರಮಕ್ಕೆ ಚಲನಚಿತ್ರ ನಟರಾದ ಯಶ್, ಪ್ರಕಾಶ್ ರೈ ಕೂಡ ಕೈ ಜೋಡಿಸಿದ್ದನ್ನ ನಾವೆಲ್ಲ ಪತ್ರಿಕೆ ಮತ್ತು ಟೀವಿಗಳಲ್ಲಿ ನೋಡಿದ್ದೇವೆ.
ನಮ್ಮ ಊರಿನಲ್ಲಿರುವ ಕೆಳದಿ ರಾಜ ವೆಂಕಟಪ್ಪ ನಾಯಕರು ರಾಣಿ ಚಂಪಕಾಳ ಸ್ಮರಣೆಗಾಗಿ ನಿಮಿ೯ಸಿರುವ #ಚಂಪಕ_ಸರಸ್ಸು ಈಗ ಶಿಥಿಲ ಆಗುತ್ತಿದೆ ಸುಮಾರು 395 ವಷ೯ದ ಹಿಂದೆ ನಿಮಾ೯ಣ ಆಗಿರುವ ಸುಂದರ ಕೊಳ ಇಲ್ಲಿದೆ ಇದನ್ನು 2018ರ ಆಗಸ್ಟ್ ತಿಂಗಳಲ್ಲಿ ಅಂದರೆ ಎರೆಡು ವರ್ಷದ ಹಿಂದೆ ಜಲತಜ್ಞರಾದ ಶಿವಾನಂದ ಕಳವೆಯವರು ಚಂಪಕ ಸರಸ್ಸು ಸಂದಶಿ೯ಸಿದ್ದರು ಇವರನ್ನ ನೀಚಡಿಯ ಪತ್ರಕತ೯ ಮಿತ್ರರಾದ ವಸಂತ್ ನೀಚಡಿ ಕರೆತಂದಿದ್ದರು.
ಇದೆಲ್ಲ ನೆನಪಾದದ್ದು ಕಳವೆಯವರು ಬರೆದಿರುವ ಪರಿಸರ ಸಂಬಂದಿ ಪುಸ್ತಕ #ಮಧ್ಯ_ಘಟ್ಟ ಪುಸ್ತಕ ಪ್ರಕಟವಾಗಿ ಒಂದು ತಿಂಗಳಲ್ಲಿ ಎರಡನೇ ಮುದ್ರಣದಲ್ಲಿರುವ ಶುಭ ಸುದ್ದಿಯಿಂದ.
ಇದೇ ಸಂದಭ೯ದಲ್ಲಿ #ಚಂಪಕ_ಸರಸ್ಸು ಎಂಬ ಸ್ಮಾರಕ ನಿಮಾ೯ಣಕ್ಕೆ ಕಾರಣವಾದ ಕೆಳದಿ ಅರಸರಾದ ರಾಜ ವೆಂಕಟಪ್ಪ ನಾಯಕ ಮತ್ತು ರಾಣಿ ಚಂಪಕಾರ ದುರಂತ ಪ್ರೇಮ ಕಥೆಯನ್ನಾದರಿಸಿದ ನನ್ನ ಕಾದಂಬರಿ "ಕೆಳದಿ ಸಾಮ್ರಾಜ್ಯ ಇತಿಹಾಸ ಮರೆತ " #ಬೆಸ್ತರರಾಣಿ_ಚಂಪಕಾ ಬಿಡುಗಡೆ ಆಗಿ ಅದನ್ನು ಅವರಿಗೆ ಅಂಚೆ ಮೂಲಕ ಕಳಿಸಿದ್ದೇನೆ.
2024ರಲ್ಲಿ ಈ ಸ್ಮಾರಕಕ್ಕೆ 400 ವಷ೯ ಆಗುತ್ತೆ ಅಷ್ಟರಲ್ಲಿ ಇದು ನವೀಕರಣಗೊಂಡರೆ ಮತ್ತು ಇದರ ನೇತೃತ್ವ ಶಿವಾನಂದ ಕಳವೇ ಅವರೇ ವಹಿಸಿಕೊಂಡರೆ ಎಂಬ ಆಶಾಭಾವನೆ ನನ್ನದು.
ದೇವರ ಕೃಪೆ ಮತ್ತು ಯೋಗಾಯೋಗದಿಂದ ಯಾಕಾಗ ಬಾರದು? ಸಾಗರದ ಶಾಸಕರಾದ ಹರತಾಳು ಹಾಲಪ್ಪ, ಜಿಲ್ಲಾ ಮಂತ್ರಿ ಈಶ್ವರಪ್ಪ ಮತ್ತು ಸಂಸದ ರಾಘವೇಂದ್ರರೂ ಈ ಬಗ್ಗೆ ಸಹಕರಿಸಿದರೆ ಇನ್ನೂ ಶೀಘ್ರದಲ್ಲಿ ಚಂಪಕ ಸರಸ್ಸು ಒಂದು ಪ್ರವಾಸಿ ಕೇಂದ್ರ ಆಗಲಿದೆ.
Comments
Post a Comment