2004 ರಲ್ಲಿ ನಡೆದ ವಿದಾನ ಸಭಾ ಚುನಾವಣೆಯಲ್ಲಿ ನಾನು ವಿಜಯ ಮಲ್ಯರ ಜನತಾ ಪಕ್ಷದ ಅಭ್ಯಥಿ೯, ಲೋಕಸಭಾ ಅಭ್ಯಥಿ೯ ಆಗಿ ಚಲನ ಚಿತ್ರ ನಟ ದೊಡ್ಡಣ್ಣ.
ಸಾಗರ ತಾಲ್ಲೂಕಿಗೆ ವಿಜಯ್ ಮಲ್ಯರು ಟಿಪ್ಪು ಸುಲ್ತಾನರ ಖಡ್ಗದೊಂದಿಗೆ ಬಂದಿದ್ದರು ಅವರ ಎರೆಡು ಹೆಲಿಕಾಪ್ಟ್ ರ್ ಇಂದಿರಾ ಗಾಂಧಿ ಮಹಿಳಾ ಪದವಿ ಕಾಲೇಜ್ ಅವರಣದಲ್ಲಿ ಲ್ಯಾಂಡಿಂಗ್ ವ್ಯವಸ್ಥೆ ಮಾಡಿತ್ತು ಅಲ್ಲಿಂದ ಮುಖ್ಯ ರಸ್ತೆಯಲ್ಲಿ ಮೆರವಣಿಗೆಯಲ್ಲಿ ಸಾಗಿ ಬಂದು ಗಣಪತಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಜಾಮಿಯಾ ಮಸೀದಿಯಲ್ಲಿ ಪ್ರಾಥ೯ನೆ ಸಲ್ಲಿಸಿ ಸಾಗರದ ಗಾಂಧೀ ಮೈದಾನದಲ್ಲಿ ಸಭೆ ನಡೆಸಿದ ಪೋಟೋ FB ನೆನಪಿಸಿದೆ.
ಸಭೆ ನಂತರ ಅವರನ್ನ ಉಳ್ಳೂರು ಸಮೀಪದ ಚಿತ್ರಟ್ಟೆ ಮಠದ ಲಿಂಗರಾಜರ ಸಹೋದರರ ಕಾರಿನಲ್ಲಿ ಹೆಲಿಕಾಪ್ಟ್ ರ್ ಇಳಿದ ಜಾಗಕ್ಕೆ ಮರಳಿದ್ದು ನೆನಪು.
ಆಗ ಸಾಗರ ತಾಲ್ಲೂಕ್ ಜನತಾ ಪಕ್ಷದ ಅಧ್ಯಕ್ಷರಾಗಿದ್ದ ಖ್ಯಾತ ವಕೀಲ ಎಂ.ಎಸ್.ಗೌಡರು ಮತ್ತು ಜಿಲ್ಲಾ ಮುಖಂಡರಾಗಿದ್ದ ಯುವ ವಕೀಲ ಬೋಜ್ ರಾಜ್ ಚುನಾವಣಾ ಪ್ರಚಾರದಲ್ಲಿ ಮುಂಚೂಣಿಯಲ್ಲಿದ್ದರು.
ಈ ಚುನಾವಣೆಯಲ್ಲಿ ಕಾಂಗ್ರೇಸ್ ನಿಂದ ಕಾಗೋಡು, ಬಿಜೆಪಿಯ ಗೋಪಾಲಕೃಷ್ಣರಿಂದ ಪರಾಭವಗೊಂಡಿದ್ದು ಇತಿಹಾಸ
Comments
Post a Comment