ಒ0ದು ಕಾಲದಲ್ಲಿ ಸೀತಾಫಲಕ್ಕೆ ವಾಣಿಜ್ಯ ಬೇಡಿಕೆ ಇರಲಿಲ್ಲ ಇತ್ತೀಚಿಗೆ ಇದು ಕ್ಯಾನ್ಸರ್ ಕಾಯಿಲೆಗೆ ರಾಮಬಾಣ ಎಂಬಂತ ವರದಿಗಳಿಂದ ಪಶ್ಚಿಮ ಘಟ್ಟ ಪ್ರದೇಶದಲ್ಲಿನ ಹಣ್ಣಿನ ಅಂಗಡಿಗಳಲ್ಲಿ ಕೆಜಿಗೆ 100 ರಿಂದ 150 ಇದೆ.
ಅಮೇಜಾನ್ ನಲ್ಲಿ ಮತ್ತು ಕೆಲ ಬಾರತದ ನಗರಗಳಲ್ಲಿ ಇದರ ಬೆಲೆ 450 ರಿಂದ ಸಾವಿರ ಇದೆ, ಎರೆಡು ವರ್ಷದ ಹಿಂದೆ 2000 ತಲುಪಿತ್ತು ಅಂತಾರೆ.
ರಾಮಾಯಣ ಕಾಲದ ರಾಮ ಸೀತೆಯರ ವನವಾಸದಲ್ಲಿ ಸೀತೆ ರಾಮನಿಗೆ ಈ ಹಣ್ಣು ನೀಡಿದ್ದರಿಂದ ಸೀತಾ ಫಲ ಅಂತ ಹೆಸರು ಬಂತು ಅಂತ ಮತ್ತು ಇದೇ ಹಣ್ಣಿನ ತಳಿಯಲ್ಲಿನ ರಾಮಫಲ ಮತ್ತು ಲಕ್ಷ್ಮಣ ಫಲ ಅಂತ ಬಿನ್ನ ತಳಿಯೂ ಇದೆ.
ವೈಜ್ಞಾನಿಕವಾಗಿ ಇದು ಅಮೇರಿಕಾ ಮತ್ತು ವೆಸ್ಟ್ ಇಂಡಿಸ್ ಇದರ ಮೂಲ ಮತ್ತು ಸ್ಪೈನ್ ವ್ಯಾಪಾರಿಗಳಿಂದ ಭಾರತಕ್ಕೆ ಬಂತು ಅನ್ನುವ ವಿವರವೂ ಇದೆ.
ಅದೇನೇ ಆಗಲಿ ಈ ಹಣ್ಣು ರುಚಿಕರ ಮತ್ತು ಆಹ್ಲಾದಕರ ಪರಿಮಳ ಇದ್ದು ಜಾಷದಿ ಅಂಶಗಳಿಂದ ಕೂಡಿದೆ.
ವರ್ಷಕ್ಕೊಮ್ಮೆ ಆದರೂ ತಿನ್ನುವುದು ಆರೋಗ್ಯವರ್ಧಕವಾದ್ದರಿಂದ ಈಗ ಹೆಚ್ಚು ಬೇಡಿಕೆಯ ಹಣ್ಣಾಗಿದೆ.
Comments
Post a Comment